Home
ಸುದ್ದಿಜಾಲ

ಭಾರತೀಯರಿಗೆ ಆಘಾತ!..13 ಲಕ್ಷ ಜನರ ಡೆಬಿಟ್​ ಹಾಗೂ ಕ್ರೆಡಿಟ್​ ಕಾರ್ಡ್ ಮಾಹಿತಿ ಲೀಕ್!

ಭಾರತೀಯರ ಸುಮಾರು 13 ಲಕ್ಷ ಡೆಬಿಟ್​ ಹಾಗೂ ಕ್ರೆಡಿಟ್​ ಕಾರ್ಡ್​ ಮಾಹಿತಿ ಎಲ್ಲವೂ ಸೈಬರ್​ ಕ್ರಿಮಿನಲ್​​ಗಳ ಕೈಗೆ ಸಿಗುವಂತೆ ಡಾರ್ಕ್​​​ ವೆಬ್ ​(ಒಂದು ರೀತಿಯಲ್ಲಿ ಆನ್​​​ಲೈನ್​ ಕಾಳ ಮಾರುಕಟ್ಟೆ ಎಂದು ಕರೆಯಬಹುದು)ನಲ್ಲಿ ಮಾರಾಟಕ್ಕಿರುವ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಸಿಂಗಾಪುರ ಮೂಲದ ಸೈಬರ್ ಸೆಕ್ಯುರಿಟಿ ಕಂಪನಿಯಾದ ಗ್ರೂಪ್-ಐಬಿ ಸಂಶೋಧಕರು ಜೋಕರ್ ಸ್ಟಾಶ್ ಎಂಬ ಡಾರ್ಕ್ ವೆಬ್‌ಸೈಟ್‌ನಲ್ಲಿ ಭಾರತತೀಯರ 1.3 ಮಿಲಿಯನ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಡೇಟಾ ಇರುವುದನ್ನು ಕಂಡುಕೊಂಡಿದ್ದಾರೆ.

 ಗ್ರೂಪ್-ಐಬಿ ಸಂಶೋಧಕ

ಹೌದು, ಅಕ್ಟೋಬರ್ 28 ರಂದು ಗ್ರೂಪ್-ಐಬಿ ಸಂಶೋಧಕರು ಇಂತಹದೊಂದು ಆಘಾತಕಾರಿ ವಿಷಯವನ್ನು ಕಂಡುಕೊಂಡಿದ್ದು, ಅವರ ಪ್ರಕಾರ ಇದು ಡಾರ್ಕ್ ವೆಬ್‌ನಲ್ಲಿ ಅತಿದೊಡ್ಡ ಮತ್ತು ಅತ್ಯಮೂಲ್ಯವಾದ ಡೇಟಾಬೇಸ್ ಅಪ್‌ಲೋಡ್‌ಗಳಲ್ಲಿ ಒಂದಾಗಿದೆ. ಈ ಡೇಟಾಬೇಸ್ ಮೂಲಕ ಸೈಬರ್ ಖದಿಮರು 130 ಮಿಲಿಯನ್​ ಡಾಲರ್,​ ಅಂದರೆ ಸುಮಾರು ₹920 ಕೋಟಿಗೂ ಹಣ ಗಳಿಸಬಹುದು ಎಂದು ಹೇಳಲಾಗಿದೆ. ZDNet ವರದಿ ಪ್ರಕಾರ, ಈ ಕಾರ್ಡ್​ ಮಾಹಿತಿಗಳು ಜೋಕರ್​ ಸ್ಟ್ಯಾಶ್​​​ನಲ್ಲಿ ಲಭ್ಯವಿದೆ ಎಂದು ತಿಳಿದುಬಂದಿದೆ.

ಡಾರ್ಕ್​​​ ವೆಬ್

ಡಾರ್ಕ್​​​ ವೆಬ್ ಅಂತರ್ಜಾಲದ ಮೂಲಕ ಭಾರತದ ವಿವಿಧ ಬ್ಯಾಂಕ್​ಗಳ ಗ್ರಾಹಕರ ಮಾಹಿತಿಯನ್ನು ತಲಾ 100 ಡಾಲರ್​(ಸರಿಸುಮಾರು ₹7000) ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಜೋಕರ್​ ಸ್ಟ್ಯಾಶ್​ ಈ ಮಾಹಿತಿಯನ್ನು "INDIA-MIX-NEW-01" ಎಂಬ ಶಿರ್ಷಿಕೆ ಅಡಿಯಲ್ಲಿ ಜಾಹಿರಾತು​ ಮಾಡುತ್ತಿದೆ ಎಂದು ಗ್ರೂಪ್-ಐಬಿ ಸಂಶೋಧಕರು ತಿಳಿಸಿದ್ದಾರೆ. ಇನ್ನು ಇದನ್ನು ಇತ್ತೀಚಿನ ವರ್ಷಗಳಲ್ಲಿ ನಡೆದಿರೋ ಅತೀ ದೊಡ್ಡ ಕಾರ್ಡ್​ ಡಂಪ್ ಮಾರಾಟ ಕೂಡ ಎಂದು ಅವರು ಹೇಳಿರುವುದು ಭಾರತೀಯರಿಗೆ ಆಘಾತ ತಂದಿದೆ.

ಭೂಗತ ಮಾರುಕಟ್ಟೆ

ಭೂಗತ ಮಾರುಕಟ್ಟೆಗಳಲ್ಲಿ ಈ ಪ್ರದೇಶದ ಕಾರ್ಡ್‌ಗಳು ಬಹಳ ವಿರಳವಾಗಿದ್ದು, ಕಳೆದ 12 ತಿಂಗಳುಗಳಲ್ಲಿ, ಇದು ಭಾರತೀಯ ಬ್ಯಾಂಕುಗಳಿಗೆ ಸಂಬಂಧಿಸಿದ ಕಾರ್ಡ್ ಡಂಪ್‌ಗಳ ಏಕೈಕ ದೊಡ್ಡ ಮಾರಾಟವಾಗಿದೆ. ಗ್ರೂಪ್-ಐಬಿಯ ಬೆದರಿಕೆ ಗುಪ್ತಚರ ಗ್ರಾಹಕರಿಗೆ ಈ ಡೇಟಾಬೇಸ್ ಮಾರಾಟದ ಬಗ್ಗೆ ಈಗಾಗಲೇ ತಿಳಿಸಲಾಗಿದ್ದು,ಯಾವ ಬ್ಯಾಂಕುಗಳ ಗ್ರಾಹಕರು ಹೆಚ್ಚು ಸಮಸ್ಯೆಗೆ ಸಿಲುಕಿದ್ದಾರೆ ಈ ಸಮಯದಲ್ಲಿ ಸ್ಪಷ್ಟವಾಗಿಲ್ಲ. ಆದಾಗ್ಯೂ, ಗ್ರೂಪ್-ಐಬಿ 18 ಪ್ರತಿಶತದಷ್ಟು ಕಾರ್ಡ್‌ಗಳು ಒಂದೇ ಭಾರತೀಯ ಬ್ಯಾಂಕ್‌ಗೆ ಸಂಬಂಧಿಸಿವೆ ಎಂದು ಹೇಳಲಾಗಿದೆ.

ಜೋಕರ್​ ಸ್ಟ್ಯಾಶ್

ಜೋಕರ್​ ಸ್ಟ್ಯಾಶ್​​ನಲ್ಲಿ ಸಿಗುವ ಈ ಕಾರ್ಡ್​ ಡಂಪ್​ ಖರೀದಿಸುವ ಕ್ರಿಮಿನಲ್​ಗಳು ಈ ಮಾಹಿತಿಯನ್ನು ಬಳಸಿಕೊಂಡು ಎಟಿಎಂಣಲ್ಲಿ ಹಣ ಡ್ರಾ ಮಾಡಿಕೊಳ್ಳುವ ಭಯ ಹೆಚ್ಚಿದೆ. ಹಾಗಾಗಿ, ನೀವು ನಿಮ್ಮ ಡೆಬಿಟ್​ ಹಾಗೂ ಕ್ರೆಡಿಟ್​ ಕಾರ್ಡ್​ ಬಗ್ಗೆ ಎಚ್ಚರವಾಗಿರಿ. ಯಾವುದೇ ಕಾರಣಕ್ಕೂ ನಿಮ್ಮ ಮೊಬೈಲ್‌ಗೆ ಬರುವಂತಹ ಒಟಿಪಿ ಸಂದೇಶವನ್ನು ಯಾರೋಂದಿಗೂ ಹಂಚಿಕೊಳ್ಳಬೇಡಿ. ಯಾರಾದೂ ನಿಮ್ಮೆಲ್ಲಾ ಕಾರ್ಡ್ ಮಾಹಿತಿಯನ್ನು ನೀಡಿ ಬ್ಯಾಂಕ್‌ನವರು ಎಂದು ಹೇಳಿದರೆ, ಶೀಘ್ರವೇ ಪೊಲೀಸ್ ಠಾಣೆಗೆ ದೂರು ದಾಖಲಿಸುವುದನ್ನು ಮರೆಯದಿರಿ.

Best Mobiles in India

English summary
The cards from this region are very rare on underground markets, in the past 12 months, it is the only big sale of card dumps related to Indian banks.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+