ಆನ್‌ಲೈನ್‌ನಲ್ಲಿ ಮಾರಾಟವಾಗುವ ಉತ್ಪನ್ನಗಳೆಲ್ಲ ಅಸಲಿಯಲ್ಲ..!

|

ಭಾರತದಲ್ಲಿ ಹಬ್ಬದ ಸೀಸನ್‌ ಪ್ರಾರಂಭವಾಗಿ ಈಗಾಗಲೇ ಮುಕ್ತಾಯದ ಹಂತಕ್ಕೆ ಬಂದಿದೆ. ಈ ಹಬ್ಬದ ಸಂಭ್ರಮವನ್ನು ಇ-ಕಾಮರ್ಸ್‌ ಕಂಪನಿಗಳು ಬಹಳ ದೊಡ್ಡದಾಗಿಯೇ ಸಂಭ್ರಮಿಸಿವೆ. ಫ್ಲಿಪ್‌ಕಾರ್ಟ್‌, ಅಮೆಜಾನ್‌, ಪೇಟಿಎಂ, ಸ್ನಾಪ್‌ಡೀಲ್‌ನಂತಹ ಇ-ಕಾಮರ್ಸ್‌ ತಾಣಗಳು ಭಾರೀ ಆಫರ್‌ಗಳ ಜತೆ ಬಿಗ್‌ ಬಿಲಿಯನ್‌ ಡೇ ಸೇಲ್‌, ಗ್ರೇಟ್‌ ಇಂಡಿಯನ್‌ ಫೆಸ್ಟಿವ್‌ ಸೀಸನ್‌, ಮಹಾ ಕ್ಯಾಶ್‌ಬ್ಯಾಕ್‌ ಸೇಲ್‌ಗಳನ್ನು ಆಯೋಜಿಸಿ ಭರ್ಜರಿ ಲಾಭ ಮಾಡಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತಿದೆ.

ಆನ್‌ಲೈನ್‌ನಲ್ಲಿ ಮಾರಾಟವಾಗುವ ಉತ್ಪನ್ನಗಳೆಲ್ಲ ಅಸಲಿಯಲ್ಲ..!

ಆದರೆ, ಈಗ ಅಧ್ಯಯನದ ವರದಿಯೊಂದು ಶಾಕಿಂಗ್‌ ಸತ್ಯವನ್ನು ಬಿಚ್ಚಿಟ್ಟಿದ್ದು, ಆನ್‌ಲೈನ್‌ನಲ್ಲಿ ಮಾರಾಟವಾಗುವ ಉತ್ಪನ್ನಗಳೆಲ್ಲಾ ಅಸಲಿಯಲ್ಲವೆಂದು ಹೇಳಿದೆ. ಹೌದು, ಸ್ನಾಪ್‌ಡೀಲ್‌, ಪೇಟಿಎಂ ಮಾಲ್‌, ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ನಂತಹ ತಾಣಗಳಲ್ಲಿ ಕಳೆದ 6 ತಿಂಗಳಲ್ಲಿ ಮಾರಾಟವಾದ ಶೇ.20 ರಿಂದ ಶೇ.22ರಷ್ಟು ಉತ್ಪನ್ನಗಳು ನಕಲಿಯೆಂದು ವರದಿ ಹೇಳಿದೆ. ಪ್ರಮುಖ ಇ-ಕಾಮರ್ಸ್‌ ಕಂಪನಿಗಳ ಕಥೆಯೆ ಹೀಗಾದರೆ, ಸಣ್ಣ ಸಣ್ಣ ಸ್ಟಾರ್ಟ್‌ಅಪ್‌ ಕಥೆಗಳು ಹೇಗೋ ಗೊತ್ತಿಲ್ಲ. ಹಾಗಾದ್ರೇ ಆ ಅಧ್ಯಯನದಲ್ಲಿನ ಶಾಕಿಂಗ್‌ ಅಂಶಗಳು ಯಾವುವು ಎಂಬುದನ್ನು ನೋಡ್ಕೊಂಡು ಬನ್ನಿ.

ಪ್ರತಿ 5 ಉತ್ಪನ್ನಗಳಲ್ಲಿ 1 ನಕಲಿ

ಪ್ರತಿ 5 ಉತ್ಪನ್ನಗಳಲ್ಲಿ 1 ನಕಲಿ

ಆನ್‌ಲೈನ್‌ನಲ್ಲಿ ಮಾರಾಟವಾಗುವ ಶೇ.20 ರಿಂದ ಶೇ.22ರಷ್ಟು ಉತ್ಪನ್ನಗಳು ನಕಲಿ ಎಂದು ಸಮೀಕ್ಷೆ ಹೇಳಿದೆ. ಅಂದರೆ, ಪ್ರತಿ 5 ಉತ್ಪನ್ನಗಳಲ್ಲಿ ಒಂದು ಉತ್ಪನ್ನ ನಕಲಿ ಎಂಬುದನ್ನು ಜನ ಹೇಳಿದ್ದಾರೆ. ಈ ಸಮೀಕ್ಷೆಗೆ ತೆಗೆದುಕೊಂಡಿರುವ ನಮೂನೆಯ ಪ್ರಮಾಣ ಬರೋಬ್ಬರಿ 30,000 ಜನ.

ಸ್ನಾಪ್‌ಡೀಲ್‌ ನಕಲಿ ಉತ್ಪನ್ನಗಳ ಆಗರ

ಸ್ನಾಪ್‌ಡೀಲ್‌ ನಕಲಿ ಉತ್ಪನ್ನಗಳ ಆಗರ

ಸಮೀಕ್ಷೆಯಲ್ಲಿ ಸ್ನಾಪ್‌ಡೀಲ್‌ ನಕಲಿ ಉತ್ಪನ್ನಗಳ ಆಗರವಾಗಿ ಹೊರಹೊಮ್ಮಿದೆ. ಪ್ರತಿಕ್ರಿಯೆ ನೀಡಿದ ಜನರಲ್ಲಿ ಶೇ.37ರಷ್ಟು ಮಂದಿ ಸ್ನಾಪ್‌ಡೀಲ್‌ನಲ್ಲಿ ಹೆಚ್ಚು ಉತ್ಪನ್ನಗಳು ನಕಲಿ ಎಂದು ಹೇಳಿದ್ದಾರೆ. ಎರಡನೇ ಸ್ಥಾನಲದಲಿ ಫ್ಲಿಪ್‌ಕಾರ್ಟ್‌ ಇದೆ, ಅಂದರೆ ಶೇ.22ರಷ್ಟು ಜನ ಫ್ಲಿಪ್‌ಕಾರ್ಟ್‌ನಲ್ಲಿ ನಕಲಿ ಉತ್ಪನ್ನಗಳು ಮಾರಾಟವಾಗುತ್ತಿವೆ ಎಂದಿದ್ದಾರೆ.

ಅಮೆಜಾನ್‌ ಪರವಾಗಿಲ್ಲ

ಅಮೆಜಾನ್‌ ಪರವಾಗಿಲ್ಲ

ಸಮೀಕ್ಷೆಯ ಪ್ರಕಾರ ಅಮೆಜಾನ್‌ನಲ್ಲಿ ನಕಲಿ ಉತ್ಪನ್ನಗಳು ಮಾರಾಟವಾಗುವುದು ಕಡಿಮೆ ಎಂದು ಜನ ಹೇಳಿದ್ದಾರೆ. ಆದರೆ, ಅದೇನು ತೀರಾ ಕಡಿಮೆಯಿಲ್ಲ. ಶೇ.20ರಷ್ಟು ಜನ ಮಾತ್ರ ಅಮೆಜಾನ್‌ನಲ್ಲಿ ನಕಲಿ ಉತ್ಪನ್ನಗಳು ಮಾರಾಟವಾಗುತ್ತವೆ ಎಂದು ಹೇಳಿದ್ದಾರೆ. ಇನ್ನು ಪೇಟಿಎಂ ಮಾಲ್‌ನ್ನು ನೋಡಿದಾಗ ಶೇ.21ರಷ್ಟು ಜನ ನಕಲಿ ಉತ್ಪನ್ನಗಳು ಮಾರಾಟವಾಗುತ್ತವೆ ಎಂದಿದ್ದಾರೆ.

ಸೌಂಧರ್ಯವರ್ಧಕಗಳಲ್ಲಿಯೇ ಜಾಸ್ತಿ ನಕಲಿ

ಸೌಂಧರ್ಯವರ್ಧಕಗಳಲ್ಲಿಯೇ ಜಾಸ್ತಿ ನಕಲಿ

ನಕಲಿ ಉತ್ಪನ್ನಗಳು ಯಾವುದರಲ್ಲಿ ಹೆಚ್ಚೆಂದರೆ ಸೌಂಧರ್ಯವರ್ಧಕ ಹಾಗೂ ಸುಗಂಧ ದ್ರವ್ಯಗಳಲ್ಲಿ ಹೆಚ್ಚೆಂದು ಸಮೀಕ್ಷೆ ಹೇಳಿದೆ. ಶೇ.35ರಷ್ಟು ಜನ ಸುಗಂಧ ದ್ರವ್ಯಗಳು ಮತ್ತು ಸೌಂಧರ್ಯವರ್ಧಕಗಳು ಹೆಚ್ಚು ನಕಲಿಯೆಂದು ಹೇಳಿದ್ದಾರೆ. ಆದ್ದರಿಂದ ಸೌಂಧರ್ಯವರ್ಧಕಗಳನ್ನು ಜಾಸ್ತಿ ಆನ್‌ಲೈನ್‌ನಲ್ಲಿ ಖರೀದಿಸುವವವರು ಎಚ್ಚರದಿಂದ ಇದ್ದರೆ ಉತ್ತಮ.

ಕ್ರೀಡಾ ಸಾಮಗ್ರಿಗಳು ನಕಲಿ

ಕ್ರೀಡಾ ಸಾಮಗ್ರಿಗಳು ನಕಲಿ

ಸೌಂಧರ್ಯವರ್ಧಕ ಹಾಗೂ ಸುಗಂಧ ದ್ರವ್ಯಗಳ ನಂತರ ಹೆಚ್ಚು ನಕಲಿ ಉತ್ಪನ್ನಗಳು ಕ್ರೀಡಾ ಸಾಮಗ್ರಿಗಳಾಗಿವೆ. ಅಂದರೆ ಶೇ.22ರಷ್ಟು ಜನ ಕ್ರೀಡಾ ಸಾಮಗ್ರಿಗಳು ನಕಲಿ ಎಂದು ಹೇಳಿದ್ದಾರೆ. ಇನ್ನು ಬ್ಯಾಗ್‌ಗಳು, ಲ್ಯಾಪ್‌ಟಾಪ್‌ ಬ್ಯಾಕ್‌ಪ್ಯಾಕ್‌ಗಳು ನಕಲಿಯೆಂದು ಶೇ.8ರಷ್ಟು ಜನ ಹೇಳಿದ್ದು, ಆನ್‌ಲೈನ್‌ ಗ್ರಾಹಕರಿಗೆ ಎಚ್ಚರಿಕೆಯಾಗಿದೆ.

ಭಾರತದಲ್ಲಷ್ಟೇ ನಕಲಿ ಕಥೆಯಿಲ್ಲ

ಭಾರತದಲ್ಲಷ್ಟೇ ನಕಲಿ ಕಥೆಯಿಲ್ಲ

ನಕಲಿ ಉತ್ಪನ್ನಗಳ ಮಾರಾಟ ಕೇವಲ ಭಾರತಕ್ಕಷ್ಟೇ ಸಮಸ್ಯೆಯಾಗುತ್ತಿಲ್ಲ. ಇದು ಜಾಗತಿಕವಾಗಿಯೂ ಆನ್‌ಲೈನ್‌ ಕಾಮರ್ಸ್‌ ಕಂಪನಿಗಳ ನಿದ್ದೆಗೆಡಿಸಿದೆ. ಹೀಗಾಗಲೇ ಚೀನಾದ ಅಲಿಬಾಬಾ ಕಂಪನಿ ನಕಲಿ ಉತ್ಪನ್ನಗಳ ಎದುರು ಸಮರ ಸಾರಿದ್ದು, ಅಮೆಜಾನ್‌ ಕೂಡ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರಿಂದ ಜನರಿಗೆ ಉತ್ತಮ ಸೇವೆ ನೀಡಲು ಮುಂದಾಗುತ್ತಿವೆ.

ಭಾರೀ ಸೇಲ್‌ಗಳಲ್ಲಿ ನಕಲಿಯದ್ದೇ ಆಟ

ಭಾರೀ ಸೇಲ್‌ಗಳಲ್ಲಿ ನಕಲಿಯದ್ದೇ ಆಟ

ಹಬ್ಬಗಳಿಗೆ ಹಾಗೂ ವಿಶೇಷ ಸಂದರ್ಭಗಳಿಗಾಗಿ ಆಯೋಜಿಸುವ ಸೇಲ್‌ಗಳಲ್ಲಿ ನಕಲಿ ಉತ್ಪನ್ನಗಳು ಹೆಚ್ಚು ಮಾರಾಟವಾಗುತ್ತದೆ ಎಂದು ಸಮೀಕ್ಷೆ ಹೇಳಿದೆ. ಏಕೆಂದರೆ, ಆ ಸಂದರ್ಭದಲ್ಲಿ ಕಡಿಮೆ ಬೆಲೆಗೆ ಉತ್ಪನ್ನಗಳು ದೊರೆಯುವದರಿಂದ ಬೇಡಿಕೆ ಹೆಚ್ಚಿರುತ್ತದೆ. ಈ ಕಾರಣದಿಂದ ವೇಗದ ಡೆಲಿವರಿ ಹಾಗೂ ಹೆಚ್ಚಿನ ಲಾಭಕ್ಕಾಗಿ ರಿಟೇಲರ್‌ಗಳು ನಕಲಿ ಉತ್ಪನ್ನಗಳನ್ನು ಮಾರಾಟ ಮಾಡಲು ಮುಂದಾಗುತ್ತಾರೆ.

ಜಾಗೋ ಗ್ರಾಹಕ್‌ ಜಾಗೋ

ಜಾಗೋ ಗ್ರಾಹಕ್‌ ಜಾಗೋ

ಆನ್‌ಲೈನ್‌ನಲ್ಲಿ ಉತ್ಪನ್ನಗಳನ್ನು ಖರೀದಿಸುವ ಮುನ್ನ ಗ್ರಾಹಕರು ಎಚ್ಚರವಾಗಿದ್ದರೆ ಉತ್ತಮ. ಉತ್ಪನ್ನದ ಖರೀದಿಗೂ ಮುನ್ನ ರಿವ್ಯೂವ್‌, ಮಾರಾಟ ಮಾಡುವ ಕಂಪನಿಯ ವಿಶ್ವಾಸಾರ್ಹತೆಯನ್ನು ಗಮನಿಸಿ. ಇನ್ನು ರಿವ್ಯೂವ್‌ಗಳಲ್ಲಿ ಪೇಡ್‌ ರಿವ್ಯೂವ್‌ಗಳು ಕೂಡ ಇರುವುದರಿಂದ ಎಚ್ಚರದಿಂದ ಗಮನಿಸಿ ಉತ್ಪನ್ನ ಖರೀದಿಸಿದರೆ ಉತ್ತಮ.

Best Mobiles in India

English summary
1 in 5 products sold online are fake claims study. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X