ಫಿಂಗರ್ ಪ್ರಿಂಟ್ ಸೆನ್ಸಾರ್ ಉಳ್ಳ ಟಾಪ್ ಫೋನ್ಸ್

By Shwetha
|

ನೀವು ಖರೀದಿಸುವ ಸ್ಮಾರ್ಟ್‌ಫೋನ್ ಪಟ್ಟಿಯಲ್ಲಿ ಗೌಪ್ಯತೆ ಮತ್ತು ಭದ್ರತೆ ಹೆಚ್ಚಿನ ಆದ್ಯತೆ ಎಂದಾದಲ್ಲಿ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದುವುದು ಅಗತ್ಯವಾಗಿದೆ.

ಹೆಚ್ಚಿನ ಪ್ರೀಮಿಯಮ್ ಫೋನ್‌ಗಳಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಕಂಡುಬರುತ್ತದೆ, ಆದರೆ ಚೀನಾ ಮೂಲದ ಸ್ಮಾರ್ಟ್‌ಫೋನ್‌ಗಳು ತಮ್ಮ ಹ್ಯಾಂಡ್‌ಸೆಟ್‌ಗಳಲ್ಲಿ ಫಿಂಗರ್ ಪ್ರಿಂಟ್ ತಂತ್ರಜ್ಞಾನವನ್ನು ಆರಂಭಿಸಿದವು. ಮತ್ತು ಬಜೆಟ್ ಬೆಲೆಯಲ್ಲಿ ಈ ಸೆಟ್‌ಗಳು ಲಭ್ಯವಿವೆ ಕೂಡ.

ಇನ್ನೂ ಆಸಕ್ತಿಕರವಾಗಿ ಇಂದು ಕೆಲವೊಂದು ಫೋನ್‌ಗಳು ಫಿಂಗರ್ ಪ್ರಿಂಟ್ ಟೆಕ್ನಾಲಜಿಯೊಂದಿಗೆ ಬಂದಿದ್ದು ಅದೂ ಸೂಕ್ತ ಬೆಲೆಯಲ್ಲಿ ನಿಮಗೆ ಲಭ್ಯವಾಗಲಿದೆ. ಇಂದಿನ ಲೇಖನದಲ್ಲಿ ಈ ತಂತ್ರಜ್ಞಾನವನ್ನು ಒಳಗೊಂಡಿರುವ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ನಿಮ್ಮ ಮುಂದಿಡುತ್ತಿದ್ದು ಕೆಳಗಿನ ಸ್ಲೈಡರ್‌ಗಳಲ್ಲಿ ಇದನ್ನು ಕುರಿತು ಮಾಹಿತಿ ಪಡೆದುಕೊಳ್ಳಿ.

ಹುವಾವೆ ಹೋನರ್ 7

ಹುವಾವೆ ಹೋನರ್ 7

ಹೋನರ್ 7 ನೈಜ ಪ್ಯಾನಲ್‌ನಲ್ಲಿ ಫಿಂಗರ್ ಪ್ರಿಂಟ್ ಸೆನ್ಸಾರ್ ಅನ್ನು ಬೂಸ್ಟ್ ಮಾಡುತ್ತದೆ. 5.2 ಇಂಚಿನ ಡಿಸ್‌ಪ್ಲೇಯೊಂದಿಗೆ ಇದು ಬಂದಿದ್ದು 1920x1080 ಪಿಕ್ಸೆಲ್‌ಗಳನ್ನು ಇದು ಒಳಗೊಂಡಿದೆ. ಓಕ್ಟಾ ಕೋರ್ ಹುವಾವೆ ಕಿರಿನ್ 935 ಪ್ರೊಸೆಸರ್ ಇದರಲ್ಲಿದೆ. 3 ಜಿಬಿ RAM ಅನ್ನು ಡಿವೈಸ್ ಒಳಗೊಂಡಿದ್ದು ಆಂಡ್ರಾಯ್ಡ್ 5.0 ಲಾಲಿಪಪ್ ಇದರಲ್ಲಿ ಚಾಲನೆಯಾಗುತ್ತಿದೆ. ಡಿವೈಸ್ ರಿಯರ್ ಕ್ಯಾಮೆರಾ 20 ಎಮ್‌ಪಿಯಾಗಿದ್ದು ಮುಂಭಾಗ ಕ್ಯಾಮೆರಾ 8 ಎಮ್‌ಪಿಯಾಗಿದೆ.

ಸೋನಿ ಎಕ್ಸ್‌ಪೀರಿಯಾ ಜೆಡ್5 ಕಾಂಪ್ಯಾಕ್ಟ್

ಸೋನಿ ಎಕ್ಸ್‌ಪೀರಿಯಾ ಜೆಡ್5 ಕಾಂಪ್ಯಾಕ್ಟ್

ಎಕ್ಸ್‌ಪೀರಿಯಾ ಜೆಡ್5 ಫ್ಲ್ಯಾಗ್‌ಶಿಪ್‌ಗೆ ಅಳವಡಿಸಲಾದ ಅದೇ ಹಾರ್ಡ್‌ವೇರ್ ಅನ್ನು ಎಕ್ಸ್‌ಪೀರಿಯಾ ಜೆಡ್5 ಕಾಂಪ್ಯಾಕ್ಟ್‌ಗೂ ಸೋನಿ ನೀಡಿದೆ. ಅದೇ ಪ್ರೊಸೆಸರ್, ಅದೇ ಕ್ಯಾಮೆರಾ ಮತ್ತು ಫಿಂಗರ್ ಪ್ರಿಂಟ್ ಸೆನ್ಸಾರ್ ಅನ್ನು ಕಂಪೆನಿ ಬಳಸುತ್ತಿದೆ. ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 810 ಪ್ರೊಸೆಸರ್ ಇದರಲ್ಲಿದ್ದು, ಓಕ್ಟಾ ಕೋರ್ ಸಿಪಿಯು, 64 ಬಿಟ್ ಸಾಮರ್ಥ್ಯಗಳು ಮತ್ತು ಅಲ್ಟ್ರಾ ಫಾಸ್ಟ್ 4ಜಿ ಎಲ್‌ಟಿಇ ವೇಗವನ್ನು ಇದು ಒಳಗೊಂಡಿದೆ.

ಒನ್ ಪ್ಲಸ್ 2

ಒನ್ ಪ್ಲಸ್ 2

ಒನ್ ಪ್ಲಸ್ 2, 5.5 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇಯನ್ನು ಒಳಗೊಂಡಿದ್ದು 1080x1920 ಪಿಕ್ಸೆಲ್ ರೆಸಲ್ಯೂಶನ್ ಇದರಲ್ಲಿದೆ. ಅಡ್ರೆನೊ 330 ಜಿಪಿಯುನೊಂದಿಗೆ ಸ್ನ್ಯಾಪ್‌ಡ್ರಾಗನ್ 810 ಚಿಪ್‌ಸೆಟ್ ಇದರಲ್ಲಿದೆ. 4ಜಿಬಿ RAM ಅನ್ನು ಡಿವೈಸ್ ಒಳಗೊಂಡಿದ್ದು ಫೋನ್ ಮುಂಭಾಗ ಕ್ಯಾಮೆರಾ 5 ಮೆಗಾಪಿಕ್ಸೆಲ್ ಆಗಿದೆ. 3300mAh ಬ್ಯಾಟರಿಯನ್ನು ಡಿವೈಸ್ ಹೊಂದಿದ್ದು ಫಿಂಗರ್ ಪ್ರಿಂಟ್ ಸೆನ್ಸಾರ್ ಅನ್ನು ಫೋನ್ ಹೊಂದಿದೆ.

ಮೀಜು ಎಮ್ಎಕ್ಸ್5

ಮೀಜು ಎಮ್ಎಕ್ಸ್5

ಮೀಜು ಎಮ್ಎಕ್ಸ್5 ಮೆಟಲ್ ದೇಹ ವಿನ್ಯಾಸವನ್ನು ಹೊಂದಿದ್ದು ಹೋಮ್ ಬಟನ್‌ನಲ್ಲಿಯೇ ಫಿಂಗರ್ ಪ್ರಿಂಟ್ ಸೆನ್ಸಾರ್ ಅನ್ನು ಇದು ಹೊಂದಿದೆ. ಫೋನ್ 5.5 ಇಂಚಿನ ಸೂಪರ್ ಅಮೋಲೆಡ್ ಪೂರ್ಣ ಎಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು ರೆಸಲ್ಯುಶನ್ 1080x1920 ಪಿಕ್ಸೆಲ್‌ಗಳಾಗಿದೆ. ಮೀಡಿಯಾ ಟೆಕ್ ಓಕ್ಟಾ ಕೋರ್ ಪ್ರೊಸೆಸರ್ ಅನ್ನು ಫೋನ್ ಹೊಂದಿದ್ದು 3ಜಿಬಿ RAM ಅನ್ನು ಡಿವೈಸ್ ಒಳಗೊಂಡಿದೆ. ಫೋನ್ ರಿಯರ್ ಕ್ಯಾಮೆರಾ 20.7 ಮೆಗಾಪಿಕ್ಸೆಲ್ ಆಗಿದ್ದು ಮುಂಭಾಗ ಕ್ಯಾಮೆರಾ 5 ಮೆಗಾಪಿಕ್ಸೆಲ್ ಆಗಿದೆ. ಇದು 1080ಪಿ ರೆಕಾರ್ಡಿಂಗ್ ಅನ್ನು ಮಾಡಲಿದೆ.

ಒಪ್ಪೊ ಆರ್7 ಪ್ಲಸ್

ಒಪ್ಪೊ ಆರ್7 ಪ್ಲಸ್

ಒಪ್ಪೊ ಆರ್7 ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಎಂದೆನಿಸಿದ್ದು ಮೆಟಲ್ ಕ್ಲಾಸಿಕ್ ಮತ್ತು ಆಕರ್ಷಣೀಯ ವಿಶೇಷತೆಗಳನ್ನೊಳಗೊಂಡು ನಿಮ್ಮೆದುರು ಬರಲಿದೆ. ಇದು ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಪಡೆದುಕೊಂಡಿದೆ. ಇನ್ನು ಹೆಸರೇ ಹೇಳುವಂತೆ ಒಪ್ಪೊ ಆರ್7 ಪ್ಲಸ್ ದೊಡ್ಡದಾದ ಆರು ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇಯೊಂದಿಗೆ ಬಂದಿದ್ದು 1920x1080 ಪಿಕ್ಸೆಲ್‌ಗಳನ್ನು ಇದು ಹೊಂದಿದೆ. ಸ್ನ್ಯಾಪ್‌ಡ್ರಾಗನ್ 615 ಓಕ್ಟಾ ಕೋರ್ 64 ಬಿಟ್ ಚಿಪ್‌ಸೆಟ್ ಇದರಲ್ಲಿದ್ದು 3ಜಿಬಿ RAM ಅನ್ನು ಡಿವೈಸ್ ಒಳಗೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ8

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ8

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ8, 5.7 ಇಂಚಿನ ಪೂರ್ಣ ಎಚ್‌ಡಿ ಸೂಪರ್ ಅಮೋಲೆಡ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು ರೆಸಲ್ಯೂಶನ್ 1920x1080 ಪಿಕ್ಸೆಲ್‌ಗಳಾಗಿದೆ. ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಡಿವೈಸ್ ಹೊಂದಿದೆ. ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 615 ಸಾಕ್ ಇದರಲ್ಲಿದ್ದು, 2ಜಿಬಿ RAM ಅನ್ನು ಡಿವೈಸ್ ಒಳಗೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಆಲ್ಫಾ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಆಲ್ಫಾ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಆಲ್ಫಾ, 4.7 ಇಂಚಿನ ಸೂಪರ್ ಅಮೋಲೆಡ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು ರೆಸಲ್ಯೂಶನ್ 1280x720 ಪಿಕ್ಸೆಲ್‌ಗಳನ್ನು ಒಳಗೊಂಡಿದೆ. ಓಕ್ಟಾ ಕೋರ್ ಎಕ್ಸೋನಸ್ ಪ್ರೊಸೆಸರ್ ಇದರಲ್ಲಿದ್ದು 2ಜಿಬಿ RAM ಅನ್ನು ಡಿವೈಸ್ ಪಡೆದುಕೊಂಡಿದೆ. ಆಂಡ್ರಾಯ್ಡ್ 4.4.4 ಡಿವೈಸ್‌ನಲ್ಲಿದೆ. ಫೋನ್ ರಿಯರ್ ಕ್ಯಾಮೆರಾ 12 ಮೆಗಾಪಿಕ್ಸೆಲ್ ಆಗಿದ್ದು ಮುಂಭಾಗ ಕ್ಯಾಮೆರಾ 2.1 ಮೆಗಾಪಿಕ್ಸೆಲ್ ಆಗಿದೆ. ಆಂತರಿಕ ಸಾಮರ್ಥ್ಯ 32ಜಿಬಿ ಆಗಿದ್ದು ಎಸ್‌ಡಿ ಕಾರ್ಡ್ ಸ್ಲಾಟ್ ಇದರಲ್ಲಿಲ್ಲ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5

ಫ್ಯಾಬ್ಲೆಟ್ ಟಚ್ ಪ್ರಕಾರದ ಫಿಂಗರ್ ಪ್ರಿಂಟ್ ರೀಡರ್ ಬಿಲ್ಟ್ ಇನ್ನು ವ್ಯವಸ್ಥೆಯೊಂದಿಗೆ ಇದು ಬಂದಿದೆ. ಗ್ಯಾಲಕ್ಸಿ ನೋಟ್ 5, 5.7 ಇಂಚಿನ ಕ್ಯುಎಚ್‌ಡಿ ಸೂಪರ್ ಅಮೋಲೆಡ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು 2560x1440 ಪಿಕ್ಸೆಲ್ ರೆಸಲ್ಯೂಶನ್‌ಗಳನ್ನು ಒಳಗೊಂಡಿದೆ. ನೋಟ್ 4 ನಲ್ಲಿರುವ ಅದೇ ವಿಶೇಷತೆ ಇದರಲ್ಲಿದೆ. 14nm ಓಕ್ಟಾ ಕೋರ್ ಎಕ್ಸೋನಸ್ 7420 ಪ್ರೊಸೆಸರ್‌ನೊಂದಿಗೆ ಇದು ಬಂದಿದ್ದು, 4 ಜಿಬಿ RAM ಅನ್ನು ಡಿವೈಸ್ ಒಳಗೊಂಡಿದೆ. ಆಂಡ್ರಾಯ್ಡ್ 5.1.1 ಲಾಲಿಪಪ್ ಆಧಾರಿತ TouchWiz UI ಮೇಲ್ಭಾಗದಲ್ಲಿದೆ. ಇನ್ನು ಫೋನ್ ಕ್ಯಾಮೆರಾ 16 ಮೆಗಾಪಿಕ್ಸೆಲ್ ಆಗಿದ್ದು ಮುಂಭಾಗ ಕ್ಯಾಮೆರಾ 5 ಎಮ್‌ಪಿ ಆಗಿದೆ.

ಎಚ್‌ಟಿಸಿ ಎಮ್9 ಪ್ಲಸ್

ಎಚ್‌ಟಿಸಿ ಎಮ್9 ಪ್ಲಸ್

ಎಚ್‌ಟಿಸಿ ಎಮ್9 ಒಂದೇ ರೀತಿಯ ಯೂನಿಬೋಡಿ ಮೆಟಲ್ ಬಿಲ್ಡ್ ಅನ್ನು ಒಳಗೊಂಡಿದ್ದು ಡಿಸ್‌ಪ್ಲೇ ಅಡಿಯಲ್ಲಿ ಸುಭದ್ರ ಲಾಕ್ ಅನ್ನು ಒಳಗೊಂಡಿದೆ. ಫೋನ್ 5.2 ಇಂಚಿನ ಕ್ವಾಡ್ ಎಚ್‌ಡಿ ಡಿಸ್‌ಪ್ಲೇಯನ್ನು ಪಡೆದುಕೊಂಡಿದ್ದು 1440x2560 ಪಿಕ್ಸೆಲ್ ರೆಸಲ್ಯೂಶನ್ ಇದರಲ್ಲಿದೆ. ಫೋನ್ 2GHz ಮೀಡಿಯಾ ಟೆಕ್ Helio X10 ಓಕ್ಟಾ ಕೋರ್ ಪ್ರೊಸೆಸರ್ ಇದರಲ್ಲಿದ್ದು PowerVR G6200 GPU ಡಿವೈಸ್‌ನಲ್ಲಿದೆ. ಫೋನ್ 3 ಜಿಬಿ RAM ಅನ್ನು ಪಡೆದುಕೊಂಡಿದ್ದು ಆಂಡ್ರಾಯ್ಡ್ ಲಾಲಿಪಪ್ ಎಚ್‌ಟಿಸಿ Sense 7 UI ಮೇಲ್ಭಾಗದಲ್ಲಿದೆ. ಫೋನ್‌ನ ರಿಯರ್ ಕ್ಯಾಮೆರಾ 20.7 ಮೆಗಾಪಿಕ್ಸೆಲ್ ಎಂದಾಗಿದ್ದು ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್ ಇದರಲ್ಲಿದೆ.

ಸೋನಿ ಎಕ್ಸ್‌ಪೀರಿಯಾ ಜೆಡ್ 5 ಪ್ರೀಮಿಯಮ್

ಸೋನಿ ಎಕ್ಸ್‌ಪೀರಿಯಾ ಜೆಡ್ 5 ಪ್ರೀಮಿಯಮ್

ಸೋನಿ ಎಕ್ಸ್‌ಪೀರಿಯಾ ಜೆಡ್ 5 ಪ್ರೀಮಿಯಮ್ ಅನ್ನು ವಿಶ್ವದ ಪ್ರಥಮ 4K ರೆಸಲ್ಯೂಶನ್ ಉಳ್ಳ ಸ್ಮಾರ್ಟ್‌ಫೋನ್ ಎಂಬುದಾಗಿ ಕರೆಯಲಾಗಿದೆ. 5.5 ಇಂಚಿನ ಡಿಸ್‌ಪ್ಲೇಯೊಂದಿಗೆ ಇದು ಬಂದಿದ್ದು 4K TRILUMINOUS ಟೆಕ್ನಾಲಜಿಯೊಂದಿಗೆ ಇದು ಬಂದಿದೆ. 3840x2160 ಪಿಕ್ಸೆಲ್ ರೆಸಲ್ಯೂಶನ್ ಡಿವೈಸ್‌ನಲ್ಲಿದ್ದು ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಪವರ್ ಬಟನ್‌ನಲ್ಲಿ ಬದಿಯಲ್ಲಿ ಒಳಗೊಂಡಿದೆ.

Best Mobiles in India

English summary
Interestingly there are some smartphone that come with fingerprint scanner at a great price. We have jotted down top smartphones that are equipped with a fingerprint scanner on the device. Take a look at the slider below to know more.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X