ಐಟಿ ಕಂಪನಿ ಉದ್ಯೋಗಿಗಳ ಗೇಟ್ ಪಾಸ್ ಪಟ್ಟಿ

Posted By: Varun
ಐಟಿ ಕಂಪನಿ ಉದ್ಯೋಗಿಗಳ ಗೇಟ್ ಪಾಸ್ ಪಟ್ಟಿ
ಅಮೆರಿಕಾದ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು ಅದು ವಿಶ್ವದ ಹಲವಾರು ಉದ್ಯಮಗಳಿಗೆ ನೇರ ಹೊಡೆತ ಕೊಡುತ್ತಿದೆ. ಈಗಾಗಲೇ ಬ್ಯಾಂಕಿಂಗ್ ಹಾಗು ಆಟೋಮೊಬೈಲ್ ಕಂಪನಿಗಳು ಇದರ ಪರಿಣಾಮ ಅನುಭವಿಸುತ್ತಿದ್ದು, ಐಟಿ ಕಂಪನಿಗಳಿಗೂ ಇದರ ಬಿಸಿ ತಟ್ಟಿದೆ.

ಇದರಿಂದಾಗಿ ಕೆಲವು ಐಟಿ ಕಂಪನಿಗಳು ಮರುನಿರ್ಮಾಣದ ನೆಪ ಹೇಳಿ ಕೆಲಸಗಾರರ ಕಡಿತ ಮಾಡುತ್ತಿದ್ದರೆ ಇನ್ನೂ ಕೆಲವು ಕಂಪನಿಗಳು ವೆಚ್ಚ ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳುತ್ತಿವೆ.

ಈಗಾಗಲೇ ಸಾಕಷ್ಟು ದಿಗ್ಗಜ ಐಟಿ ಕಂಪನಿಗಳು ಕಡಿತ ಗೊಳಿಸಿದ್ದು 2012ರ ಅಂತ್ಯದ ವೇಳೆಗೆ ಮತ್ತಷ್ಟು ಕಡಿತ ಮಾಡುವುದಾಗಿ ಘೋಷಣೆ ಮಾಡಿವೆ. ಈಗಆ ರೀತಿ ಮಾಡಲಿರುವ ಟಾಪ್ 10 ಕಂಪನಿಗಳ ಪಟ್ಟಿ ಇಲ್ಲಿದೆ:

1) HP - 27,000 ಉದ್ಯೋಗಿಗಳನ್ನು ಕಡಿತಗೊಳಿಸುವ ಯೋಚನೆ ಇದ್ದು ಈಗಾಗಲೇ 9 ಸಾವಿರ ಜನರನ್ನು ತೆಗೆದು ಹಾಕಿದೆ.

2) ನೋಕಿಯಾ - ಈಗಾಗ್ಲೇ 3 ಸಾವಿರ ಮಂದಿಯನ್ನು ತೆಗೆದು ಹಾಕಿದ್ದು ವಿಶ್ವದಾದ್ಯಂತ 14,000 ಜನರನ್ನು ತೆಗೆದು ಹಾಕಲಿದೆ.

3) ಸೋನಿ- ಜಪಾನಿನ ಈ ದೈತ್ಯ ಕಂಪನಿ 10,000 ಜನರನ್ನು ಕಡಿತಗೊಳಿಸಲಿದೆ.

4) Research In Motion- ಬ್ಲ್ಯಾಕ್ ಬೆರಿ ಮೊಬೈಲ್ ನ ಉತ್ಪಾದಕ ಆಗ್ಲೇ 5 ಸಾವಿರ ಉದ್ಯೋಗಿಗಳನ್ನು ತೆಗೆದುಹಾಕಿದ್ದು, 8,000 ಜನರಿಗೆ ಟಿಕೆಟ್ ನೀಡಲಿದೆ.

5) ಶಾರ್ಪ್- ಮತ್ತೊಂದು ಜಪಾನ್ ಕಂಪನಿಯಾದ ಶಾರ್ಪ್ 8,000 ಜನರಿಗೆ ಗೇಟ್ ಪಾಸ್ ಕೊಡುತ್ತಂತೆ.

6) ನೋಕಿಯಾ ಸೀಮೆನ್ಸ್-ತನ್ನ ಕಂಪನಿಯನ್ನು ಮರುನಿರ್ಮಾಣದ ಮಾಡಲು ಯೋಚಿಸಿದ್ದು, ಅದರ ಅಂಗವಾಗಿ 7,030 ಜನರನ್ನು ತೆಗೆದು ಹಾಕಲಿದೆ.

7) ಆಲ್ಕಾಟೆಲ್-ಲೂಸೆಂಟ್ – 5,000 ಜನರನ್ನು ಕಿತ್ತು ಹಾಕಲಿದೆ.

8 ) ಮೋಟೊರೋಲಾ- ಗೂಗಲ್ ತೆಕ್ಕೆಗೆ ಬಂದಮೇಲೆ 4,000 ಮಂದಿಯನ್ನು ಹೊರಗೆ ಕಳುಹಿಸಲು ಇದು ಯೋಚಿಸಿದೆ.

9) ಸಿಸ್ಕೋ- ವ್ಯಾಪಾರ ಕಡಿಮೆ ಇದ್ದು,ಸ್ಪರ್ಧೆ ಜಾಸ್ತಿ ಇರೋದ್ರಿಂದ 1,300 ಜನಾನ ತೆಗೆದು ಹಾಕಲು ಸ್ಕೆಚ್ ಹಾಕಿದೆ.

10) IBM- ಇರೋದರಲ್ಲಿ ಈ ಕಂಪನಿ ಪರವಾಗಿಲ್ಲ. ಬರಿ 1,202 ಉದ್ಯೋಗಿಗಳನ್ನ ತೆಗೆದು ಹಾಕಲಿದೆ.

 

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot