ಇತ್ತೀಚೆಗೆ ಅಳಿದ ಜಗತ್ತಿನ 10 ದೊಡ್ಡ ತಂತ್ರಜ್ಞಾನಗಳು ಯಾವುವು ಗೊತ್ತಾ..!

By GizBot Bureau

  ಬೇರೆ ಬೇರೆ ಎಲ್ಲಾ ಕ್ಷೇತ್ರದಂತೆ, ಡಿಜಿಟಲ್ ಕ್ಷೇತ್ರದಲ್ಲೂ ಕೂಡ ಕೆಲವು ಗೆಜೆಟ್ ಗಳು ಮತ್ತು ಟೆಕ್ನಾಲಜಿಗಳು ಬರುತ್ತಿರುತ್ತೆ ಮತ್ತು ಹೋಗುತ್ತಿರುತ್ತೆ. ಸತ್ತು ಹೋದವು ಅಂದರೆ, ಅಸ್ತಿತ್ವ ಕಳೆದುಕೊಂಡವು ಎಂದಷ್ಟೇ ಅರ್ಥ. ಇತ್ತೀಚಿನ ಕೆಲವು ತಿಂಗಳುಗಳಲ್ಲೂ ಹಾಗೆಯೇ ಆಗಿದೆ. ಇವು ನಮಗೆ ತೀರಾ ಅಗತ್ಯವೆನಿಸಿದ ಟೆಕ್ನಾಲಜಿಗಳಾಗಿದ್ದವು ಆದರೆ ಈಗ ಮೂಲೆಗೆ ಸರಿದು ಬಿಟ್ಟಿವೆ.

  ಇತ್ತೀಚೆಗೆ ಅಳಿದ ಜಗತ್ತಿನ 10 ದೊಡ್ಡ ತಂತ್ರಜ್ಞಾನಗಳು ಯಾವುವು ಗೊತ್ತಾ..!

  ಹಾಗಾದ್ರೆ ಅದ್ಯಾವುದು ಎಂಬ ಪ್ರಮುಖ 10 ಗೆಜೆಟ್ಸ್ ಮತ್ತು ತಂತ್ರಜ್ಞಾನಗಳ ಪಟ್ಟಿ ಇಲ್ಲಿದೆ ನೋಡಿ..

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  1. ವಿಂಡೋಸ್ ಫೋನ್

  ಮೈಕ್ರೋಸಾಫ್ಟ್ ಈ ವರ್ಷ ಅಂತಿಮವಾಗಿ ಹೇಳಿಬಿಟ್ಟಿದೆ, ವಿಂಡೋಸ್ ಫೋನ್ ಗಳು ಇನ್ನು ಮುಂದೆ ಇಲ್ಲ ಎಂದು.. ಸರಣಿ ಟ್ವೀಟ್ ನಲ್ಲಿ, ಕಂಪೆನಿಯ ಸೀನಿಯರ್ ಎಕ್ಸಿಕ್ಯೂಟಿವ್ ಆಗಿರುವ ಜೋ ಬೆಲ್ಫೋರ್ ಬರೆದಿರುವಂತೆ" ವಿಂಡೋಸ್ ಮೊಬೈಲ್ ಗೆ ಸಂಬಂಧಿಸಿದಂತೆ ಯಾವುದೇ ಹಾರ್ಡ್ ವೇರ್ ಅಥವಾ ವೈಶಿಷ್ಟ್ಯಗಳನ್ನು ಮೈಕ್ರೋಸಾಫ್ಟ್ ಇನ್ನು ಮುಂದೆ ತಯಾರು ಮಾಡುವುದಿಲ್ಲ". ಅಷ್ಟೇ ಸದ್ಯ ಬಳಸುತ್ತಿರುವ ಗ್ರಾಹಕರಿಗೆ ಬಗ್ ಫಿಕ್ಸ್ ಮತ್ತು ಸೆಕ್ಯುರಿಟಿ ಅಪ್ ಡೇಟ್ ಇತ್ಯಾದಿಗಳಿಗಾಗಿ ಬೆಂಬಲ ಸಿಂಗಲಿದೆ ಎಂಬುದನ್ನೂ ಕೂಡ ಅವರು ಖಾತ್ರಿ ಪಡಿಸಿದ್ದಾರೆ.

  2. ಮೈಕ್ರೋಸಾಫ್ಟ್ Kinect

  ಇದು ಕೂಡ ಮೈಕ್ರೋಸಾಫ್ಟ್ ನಿಂದಲೇ ...2010 ರಲ್ಲಿ ಈ ಡಿವೈಸ್ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆದಿತ್ತು. ಮತ್ತು 2011 ರಲ್ಲಿ Kinect , Xbox 360 ಗಾಗಿ ಅತೀ ಹೆಚ್ಚು ಗ್ರಾಹಕರು ಖರೀದಿಸಿದ ಡಿವೈಸ್ ಆಗಿತ್ತು. ಅಷ್ಟೇ ಅಲ್ಲ, ಗಿನ್ನಿಸ್ ವರ್ಡ್ ರೆಕಾರ್ಡ್ ಪುಸ್ತಕಕ್ಕೂ ಸೇರ್ಪಡೆಯಾಯಿತು.ಸ್ಟ್ಯಾಂಡ್ ಅಲೋನ್ ಡಿವೈಸ್ ಆಗಿದ್ದರಿಂದ Kinect ಸದ್ಯ ಮಾರ್ಕೆಟ್ ಟ್ರೆಂಡ್ ಉಳಿಸಿಕೊಂಡಿಲ್ಲವಾದರೂ ಕೂಡ ಇದರ ಕೋರ್ ಸಂವೇದಕ ಇನ್ನೂ ಕಂಪನಿಯ AR ಹೊಲೊಲೆನ್ಸ್ನಲ್ಲಿ ಅಧಿಕಾರವನ್ನು ಹೊಂದಿದೆ.

  3. 3ಡಿ ಟಿವಿಗಳು

  ಕಳೆದ ಕೆಲವು ವರ್ಷಗಳ ಹಿಂದೆ 3ಡಿ ಟಿವಿಗಳು ಹಾಟೆಸ್ಟ್ ಟೆಕ್ನಾಲಜಿಗಳಾಗಿ ಗುರುತಿಸಿಕೊಂಡಿದ್ದವು. 2017 ರಲ್ಲಿ, ದೊಡ್ಡ ದೊಡ್ಡ ಟಿವಿ ಬ್ರ್ಯಾಂಡ್ ಗಳಾದ ಎಜಿ ಮತ್ತು ಸೋನಿ ಕಂಪೆನಿಗಳು 3ಡಿ ತಂತ್ರಜ್ಞಾನವನ್ನು ತಮ್ಮ ಟಿವಿಯಲ್ಲಿ ನಿಲ್ಲಿಸಿದವು. 2016 ರಲ್ಲೇ ಸ್ಯಾಮ್ ಸಂಗ್ ಕೂಡ ನಿಲ್ಲಿಸಿತ್ತು. ಟಿಸಿಎಲ್ ಮತ್ತು ಶಾರ್ಪ್ ಟಿವಿಗಳೂ ಕೂಡ ಸಿಇಎಸ್ 2017 ಅಂದರೆ ವಿಶ್ವದ ದೊಡ್ಡ ಎಲೆಕ್ಟ್ರಾನಿಕ್ ಟ್ರೇಡ್ ಶೋ ದಲ್ಲಿ 3ಡಿ ಟಿವಿಯನ್ನು ನಿಲ್ಲಿಸುವ ಬಗ್ಗೆ ಹೇಳಿಕೆ ನೀಡಿದವು.

  4. ಆಪಲ್ ಐಪಾಡ್ Shuffle ಮತ್ತು ಐಪ್ಯಾಡ್ ನ್ಯಾನೋ

  ಬಹಳ ಜನಪ್ರೀಯತೆ ಗಳಿಸಿದ್ದು ಆಪಲ್ ಐಪಾಡ್ Shuffle ಮತ್ತು ಐಪ್ಯಾಡ್ ನ್ಯಾನೋ ವನ್ನು ನಿಲ್ಲಿಸುವ ಬಗ್ಗೆ ಆಪಲ್ ಪ್ರಕಟಣೆ ನೀಡಿದೆ.ಆಪಲ್ ನಲ್ಲಿ ಬೇರೆಬೇರೆ ಭಿನ್ನತೆ ಇರುವ ಐಪ್ಯಾಡ್ ಗಳ ಸೃಷ್ಟಿಯಾಗಿರುವಾಗ ಇದು ಹಳತಾಗಿದೆ. ಕಳೆದ ಎರಡು ವರ್ಷದಿಂದ ಇವೆರಡು ಕೂಡ ಅಪ್ ಡೇಟ್ ಆಗಿಲ್ಲ.

  5. ಎಐಎಮ್, ದಿ ಇನ್ಸ್ಟೆಂಟ್ ಮೆಸೇಜಿಂಗ್ ಪ್ರವರ್ತಕ

  AOL's ಇನ್ಸ್ಟೆಂಟ್ ಮೆಸೇಜಿಂಗ್ ಸೇವೆ AIM ಕೂಡ ಕಳೆದ ತಿಂಗಳ ಹೊತ್ತಿಗೆ ಸಂಪೂರ್ಣ ನಿಂತಿದೆ.. ಕೆಲವು ವರ್ಷಗಳ ಹಿಂದಿನ ಪ್ರಸಿದ್ದ ಮೆಸೇಜಿಂಗ್ ಆಪ್ 20 ವರ್ಷ ಚಲಿಸಿದ ನಂತರ ಡಿಸೆಂಬರ್ 15 ಕ್ಕೆ ತನ್ನ ಅಸ್ತಿತ್ವವನ್ನು ಪೂರ್ಣಗೊಳಿಸಿದೆ. "ಡಿಸೆಂಬರ್ 15, 2017 ರಿಂದ , AOL's ಇನ್ಸ್ಟೆಂಟ್ ಮೆಸೇಜಿಂಗ್ ಪ್ರೊಡಕ್ಟ್ ಮತ್ತು ಸರ್ವೀಸ್ ಗಳು ಅಂತ್ಯಗೊಳ್ಳುತ್ತಿದ್ದು, ಲಭ್ಯವಿರುವುದಿಲ್ಲ" ಇದು ಕಂಪೆನಿಯ ಹೇಳಿಕೆಯಾಗಿದೆ.

  6. ಗೂಗಲ್ ಟ್ಯಾಂಗೋ

  ಈ ವರ್ಷದ ಆರಂಭದಲ್ಲಿ, ಗೂಗಲ್ ಸರ್ಚ್ ಗೈಂಟ್ ಟ್ಯಾಂಗೋ ಶಟ್ ಡೌನ್ ಆಗುವ ಬಗ್ಗೆ ಬಹಿರಂಗ ಪಡಿಸಿತ್ತು. ಸ್ಮಾರ್ಟ್ಫೋನ್ ಕ್ಯಾಮೆರಾಗಳನ್ನು ಮರುಶೋಧಿಸುವ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಗೂಗಲ್ ಟ್ಯಾಂಗೋ, ಅಭಿವರ್ಧಕರು ಆಂಡ್ರಾಯ್ಡ್ ಫೋನ್ಗಳಿಗಾಗಿ ವರ್ಧಿತ-ರಿಯಾಲಿಟಿ ಆಧಾರಿತ ಅಪ್ಲಿಕೇಶನ್ ಗಳನ್ನು ಅಭಿವೃದ್ಧಿಪಡಿಸಲು ಅನುಮತಿ ನೀಡುತ್ತಿತ್ತು. ಮಾರ್ಚ್ 2018 ರಲ್ಲಿ ಗೂಗಲ್ ಟ್ಯಾಂಗೋ ಇನ್ನು ಮುಂದೆ ಇರುವುದಿಲ್ಲ ಎಂಬುದನ್ನು ತಿಳಿಸಿತ್ತು.

  7. ಗೂಗಲ್ ಕ್ರೋಮ್ ಆಪ್ಸ್

  ಕಳೆದ ವರ್ಷದ ಡಿಸೆಂಬರ್ ನಲ್ಲಿ ಗೂಗಲ್ "app" ಸೆಕ್ಷನ್ ನ್ನು ಕ್ರೋಮ್ ವೆಬ್ ಸ್ಟೋರ್ ನ ವಿಂಡೋಸ್, ಮ್ಯಾಕ್ ಲಿನಕ್ಸ್ ವರ್ಷನ್ ಗಳಿಂದದ ತೆಗೆದು ಹಾಕಿತು.(ಆದರೆ ಕ್ರೋಮ್ ಓಎಸ್ ನಿಂದ ಅಲ್ಲ) ಕ್ರೋಮ್ ಆಪ್ ಡೆವಲಪರ್ ಗಳಿಗೆ, ಈಗಾಗಲೇ ಇನ್ಸ್ಟಾಲ್ ಮಾಡಿರುವ ಆಪ್ ಗಳು ಕೆಲಸ ಮಾಡುತ್ತದೆ ಆದರೆ, ಆಪ್ ಫಂಕ್ಷನಾಲಿಟಿಯನ್ನು 2018 ರ ಮೊದಲ ತಿಂಗಳಲ್ಲಿ ತೆಗೆಯಲಾಗುತ್ತೆ ಎಂಬ ಈ-ಮೇಲ್ ನ್ನು ಕಳುಹಿಸಿ ಮಾಹಿತಿ ನೀಡಲಾಯಿತು.ಅಂತೆಯೇ ಅದು ಈಗ ಇಲ್ಲವಾಗಿದೆ.

  8. ಜಿಟಾಕ್

  ಜಿಟಾಕ್ ಮತ್ತು ಜಿ ಟಾಕ್ ಗಳ ಅಂತ್ಯವೂ ಈ ವರ್ಷ ಆಗಿದೆ. 2005 ರಲ್ಲಿ ಈ ಮೇಸೆಜಿಂಗ್ ಪ್ಲಾಟ್ ಫಾರ್ಮ್ ಗಳು ದೊಡ್ಡ ಚರ್ಚೆ ಹುಟ್ಟು ಹಾಕಿದ್ದವು. ಜಿ ಟಾಕ್ ಗೂಗಲ್ ಹ್ಯಾಂಗ್ಸ್ ಔಟ್ ಆಗಿ ರಿಪ್ಲೇಸ್ ಆಗಿದೆ. ಗೂಗಲ್ ನ ಸೈಡ್ ಬಾರ್ ನಲ್ಲಿ 2013 ರಲ್ಲಿ ಗೂಗಲ್ ಹ್ಯಾಂಗ್ಸ್ ಔಟ್ ನ್ನು ಬಿಡುಗಡೆಗೊಳಿಸಿದೆ.

  9. ಮೈಕ್ರೋಸಾಫ್ಟ್ ಗ್ರೂವ್ ಮ್ಯೂಜಿಕ್ 

  ಮೈಕ್ರೋಸಾಫ್ಟ್ ಪಟ್ಟಿಯ ಮೂರನೆಯದು ಇದು. " ಡಿಸೆಂಬರ್ 31, 2017 ರಿಂದ ಗ್ರೂವ್ ಮ್ಯೂಸಿಕ್ ಸ್ಟ್ರೀಮೀಂಗ್ ಸೇವೆಯು ಲಭ್ಯವಿರುವುದಿಲ್ಲ"ಎಂಬ ಹೇಳಿಕೆಯನ್ನು ಕಂಪೆನಿಯೇ ನೀಡಿತ್ತು. ಬಿಲ್ಟ್ ಇನ್ ಗ್ರೂವ್ ಮ್ಯೂಸಿಕ್ ಆಪ್ ಮುಂದುವರಿಯುತ್ತದೆ, ಈಗಾಗಲೇ ಖರೀದಿಸಿರುವ ಮತ್ತು ಡೌನ್ ಲೋಡ್ ಆಗಿರುವ ಅಥವಾ ಒನ್ ಡ್ರೈವ್ ಗೆ ಅಪ್ ಲೋಡ್ ಆಗಿರುವ ಮ್ಯೂಸಿಕ್ ಗಳನ್ನು ಆಲಿಸಬಹುದು. ಆದರೆ ಸ್ಟ್ರೀಮ್ ಮಾಡಲು ಹೊಸದಾದ ಮ್ಯೂಸಿಕ್ ಪ್ಲೇ ಮಾಡಲು ಅವಕಾಶವಿರುವುದಿಲ್ಲ.

  10. ನಿಂಟೆಂಡೊ ಎಂಟರ್ಟೈನ್ಮೆಂಟ್ ಸಿಸ್ಟಮ್ (NES Classic Edition)

  2017 ರಲ್ಲಿ ಅಂತ್ಯಕಂಡ ಮತ್ತೊಂದು ದೊಡ್ಡ ಗೆಜೆಟ್ ಅಂದರೆ ಅದು ನಿಂಟೆಂಡೊ ಎಂಟರ್ಟೈನ್ಮೆಂಟ್ ಸಿಸ್ಟಮ್ (NES Classic Edition). ಐಎನ್ಜಿ, ಅಮೆರಿಕಾ ಪ್ರತಿನಿಧಿ ನಿಂಟೆಂಡೋ ಹೇಳುವಂತೆ, "ಎನ್ಒಎ ಪ್ರಾಂತ್ಯಗಳು ಈ ವರ್ಷದ ನಿಂಟೆಂಡೊ ಎಂಟರ್ಟೈನ್ಮೆಂಟ್ ಸಿಸ್ಟಮ್: ಎನ್ಇಎಸ್ಸಿ ಕ್ಲಾಸಿಕ್ ಎಡಿಶನ್ ಸಿಸ್ಟಮ್ಗಳ ಕೊನೆಯ ಸಾಗಣೆಗಳು ಸ್ವೀಕರಿಸುತ್ತವೆ".

  "ಲಭ್ಯತೆಗೆ ಸಂಬಂಧಿಸಿದ ಚಿಲ್ಲರೆ ಮಾರಾಟ ಮಳಿಗೆಗಳನ್ನು ಪರಿಶೀಲಿಸಲು ಈ ವ್ಯವಸ್ಥೆಯನ್ನು ಪಡೆಯುವಲ್ಲಿ ಆಸಕ್ತಿ ಇರುವ ಪ್ರತಿಯೊಬ್ಬರನ್ನು ನಾವು ಪ್ರೋತ್ಸಾಹಿಸುತ್ತೇವೆ. ಅನೇಕ ಗ್ರಾಹಕರು ಸಿಸ್ಟಮ್ ಅನ್ನು ಕಂಡುಕೊಳ್ಳುವುದು ಕಷ್ಟಕರವೆಂದು ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಅದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ. ಗ್ರಾಹಕರ ಪ್ರತಿಕ್ರಿಯೆಯನ್ನು ನಾವು ಗಮನದಲ್ಲಿಟ್ಟುಕೊಂಡಿದ್ದೇವೆ, ಮತ್ತು ಈ ಉತ್ಪನ್ನಕ್ಕೆ ನಂಬಲರ್ಹ ಮಟ್ಟದ ಗ್ರಾಹಕ ಆಸಕ್ತಿ ಮತ್ತು ಬೆಂಬಲವನ್ನು ನಾವು ಬಹಳವಾಗಿ ಪ್ರಶಂಸಿಸುತ್ತೇವೆ." ಎಂಬುದು ಕಂಪೆನಿಯ ಅಂತಿಮ ಹೇಳಿಕೆಯಾಗಿತ್ತು.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  10 biggest technologies that died recently. To know more this kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more