10 ದಿನ ಕಳೆದರೂ ಬಿಜೆಪಿಯ ಅಧಿಕೃತ ವೆಬ್ ಸೈಟ್ ಡೌನ್
ಮಾರ್ಚ್ 5 ನೇ ತಾರೀಕು ಬೆಳಿಗ್ಗೆ ಭಾರತೀಯ ಜನತಾ ಪಾರ್ಟಿಯ ಅಧಿಕೃತ ವೆಬ್ ಸೈಟ್ ಹ್ಯಾಕ್ ಆಗಿತ್ತು.ಹ್ಯಾಕ್ ಆದ ನಂತರದ ಕೆಲವೇ ಕ್ಷಣಗಳಲ್ಲಿ ಈ ಕೆಳಗಿನ ಮೆಸೇಜ್ ನ್ನು ಪೋಸ್ಟ್ ಮಾಡಲಾಗಿತ್ತು.

ವೆಬ್ ಸೈಟ್ ಮಾಹಿತಿ:
"ನಾವು ಆದಷ್ಟು ಬೇಗ ವಾಪಾಸ್ ಬರುತ್ತೇವೆ. ಅಡಚಣೆಗಾಗಿ ವಿಷಾದಿಸುತ್ತೇವೆ ಆದರೆ ನಾವು ಕೆಲವು ನಿರ್ವಹಣಾ ಕೆಲಸಗಳನ್ನು ಮಾಡುತ್ತಿದ್ದೇವೆ. ನಾವು ಆದಷ್ಟು ಬೇಗ ಆನ್ ಲೈನ್ ಗೆ ಬರುತ್ತೇವೆ!" ಎಂದು ಬರೆಯಲಾಗಿತ್ತು. ಇದನ್ನು ಬರೆದು ಈಗಾಗಲೇ 10 ದಿನಗಳು ಕಳೆದಿದೆ ಮತ್ತು ಸೈಟ್ ನಲ್ಲಿ ಇದೇ ಮೆಸೇಜ್ ಈಗಲೂ ಕಾಣಿಸುತ್ತಿದೆ. ಕುತೂಹಲಕಾರಿ ವಿಚಾರವೇನೆಂದರೆ, ಈ ವಿಚಾರದ ಬಗ್ಗೆ ಆಡಳಿತ ಪಕ್ಷದಿಂದ ವಿಭಿನ್ನ ಹೇಳಿಕೆಗಳು ನಡೆದಿದೆ.

ಬಿಜೆಪಿ ಹೇಳಿಕೆ:
ಬಿಜೆಪಿಯ ಐಟಿ ಸೆಲ್ ನ ಮುಖ್ಯಸ್ಥರಾಗಿರುವ ಅಮಿತ್ ಮಾಲ್ವಿಯಾ ಕಳೆದ ವಾರ ಬಿಜೆಪಿ ಸೈಟ್ ಹ್ಯಾಕ್ ಆಗಿಲ್ಲ ಇದು ಕೇವಲ ಟೆಕ್ನಿಕಲ್ ಗ್ಲಿಚ್ ಅಷ್ಟೇ ಎಂದು ಹೇಳಿದ್ದರು.ಆದರೆ ಐಟಿ ಮಿನಿಸ್ಟರ್ ರವಿ ಶಂಕರ್ ಪ್ರಸಾದ್ ಈ ವೆಬ್ ಸೈಟ್ ಹ್ಯಾಕ್ ಆಗಿದೆ ಎಂಬುದನ್ನು ಒಪ್ಪಿಕೊಂಡಿದ್ದರು.
ಪ್ರಸಾದ್ ತಿಳಿಸಿರುವಂತೆ ವೆಬ್ ಸೈಟ್ ಕೆಲವು ನಿಮಿಷಗಳಿಗೆ ಹ್ಯಾಕ್ ಆಗಿತ್ತು ಆದರೆ ಪಾರ್ಟಿಯು ಆದಷ್ಟು ಬೇಗನೆ ಅದರ ಕಂಟ್ರೋಲ್ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಯಿತು. ಇಂತಹ ದಾಳಿಯಲ್ಲಿ ಸಮಾಜದ ಕೆಲವು ದುಷ್ಟಶಕ್ತಿಗಳ ಕೈವಾಡವಿದೆ ಎಂದು ಕೂಡ ತಿಳಿಸಿದ್ದರು.

ಪ್ರಾರಂಭಿಕ ಮೆಮೊ:
ಪ್ರಾರಂಭದಲ್ಲಿ ಸೈಟ್ ಹ್ಯಾಕ್ ಆಗಿದ್ದಾಗ ಕೆಲವು ಮೆಮೊಗಳು ಅಧಿಕೃತ ವೆಬ್ ಸೈಟ್ ನಲ್ಲಿ ಕಾಣಿಸಿದ್ದವು. ಮೆಮೊಗಳಲ್ಲಿ ಪ್ರಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಜರ್ಮನ್ ಚಾನ್ಸಲರ್ ಏಂಜೆಲಾ ಮಾರ್ಕೆಲ್ ಅವರ ಚಿತ್ರಪಟಗಳು ಕಾಣಿಸಿದ್ದವು.

ಚುನಾವಣೆ ಘೋಷಣೆ:
ಪುನಃ ಸೈಟ್ ಯಾವಾಗ ಕಾರ್ಯಾರಂಭ ಮಾಡುತ್ತದೆ ಎಂಬ ಬಗ್ಗೆ ಇದುವರೆಗೂ ಯಾವುದೇ ಮಾಹಿತಿಯನ್ನೂ ನೀಡಲಾಗಿಲ್ಲ. ವೆಬ್ ಸೈಟ್ ಹ್ಯಾಕ್ ಆದಾಗಿನಿಂದ ಮತ್ತು ಅದು ಡೌನ್ ಇರುವ ಕ್ಷಣದಿಂದ ಚುನಾವಣಾ ಆಯೋಗವು 2019 ರ ಭಾರತದ ಲೋಕಸಭೆ ಚುನಾವಣೆಯ ದಿನಾಂಕವನ್ನು ಪ್ರಕಟ ಪಡಿಸಿದೆ. ದೇಶಾದ್ಯಂತ ಏಳು ಹಂತಗಳಲ್ಲಿ ಎಲೆಕ್ಷನ್ ನಡೆಯಲಿದೆ. ಎಪ್ರಿಲ್ 11 ರಿಂದ ಚುನಾವಣೆ ಆರಂಭವಾಗುತ್ತದೆ. ಮೇ 19 ಕ್ಕೆ ಕೊನೆಯ ಹಂತದ ಎಲೆಕ್ಷನ್ ನಡೆಯಲಿದೆ.

ಹೊಸ ಅವತಾರ:
ಸಾಮಾಜಿಕ ಮಾಧ್ಯಮವು ರಾಜಕೀಯ ಪಕ್ಷಗಳ ಕ್ಯಾಂಪೇನ್ ನ ಪ್ರಮುಖ ಭಾಗವಾಗಿದ್ದು ಯಾವಾಗ ಬಿಜೆಪಿ ಪಕ್ಷದ ಅಧಿಕೃತ ವೆಬ್ ಸೈಟ್ ಪುನಃ ಕಾರ್ಯಾರಂಭಗೊಳ್ಳುತ್ತದೆ ಎಂಬ ಕುತೂಹಲ ಗರಿಗೆದರಿದೆ. ಹೊಸ ಅವತಾರದಲ್ಲಿ ಬಿಜೆಪಿ ವೆಬ್ ಸೈಟ್ ಪುನಃ ಕಾರ್ಯ ನಿರ್ವಹಿಸುವ ಲಕ್ಷಣಗಳು ಕಾಣಿಸುತ್ತಿದೆ.


Click it and Unblock the Notifications








