ನೀವು ತಿಳಿದುಕೊಳ್ಳಲೇಬೇಕಾದ ಬಿಲ್ ಗೇಟ್ಸ್‌ ಕುರಿತ 10 ಅದ್ಭುತ ವಿಷಯಗಳು..!

By GizBot Bureau
|

ಬಿಲ್ ಗೇಟ್ಸ್ ಬಗ್ಗೆ ಪರಿಚಯ ನೀಡುವ ಅಗತ್ಯವಿಲ್ಲ. ವಿಶ್ವದ ನಂಬರ್ 1 ಸಾಫ್ಟವೇರ್ ಕಂಪೆನಿ ಮೈಕ್ರೋಸಾಫ್ಟ್ ನ ಸಹಸಂಸ್ಥಾಪಕ ಬಿಲ್ ಗೇಟ್ಸ್ ವಿಶ್ವದ ಶ್ರೀಮಂತ ವ್ಯಕ್ತಿ ಎಂಬ ಪಟ್ಟವನ್ನು ಕಳೆದ ಹಲವಾರು ವರ್ಷಗಳಿಂದ ಹೊತ್ತುಕೊಂಡಿದ್ದಾರೆ, ಕಳೆದ ವಾರವಷ್ಟೇ ಅಮೇಜಾನ್ ಸಿಇಓ ಇವರನ್ನು ಮೀರಿಸಿದರು.

ನೀವು ತಿಳಿದುಕೊಳ್ಳಲೇಬೇಕಾದ ಬಿಲ್ ಗೇಟ್ಸ್‌ ಕುರಿತ 10 ಅದ್ಭುತ ವಿಷಯಗಳು..!

10 ಕೂತೂಹಲಕಾರಿ ಮತ್ತು ಅಧ್ಬುತ ವಿಷಯಗಳನ್ನು ಬಿಲ್ ಗೇಟ್ಸ್ ಹೊಂದಿದ್ದಾರೆ. 60 ಮಿಲಿಯನ್ ನ ಮಹಲನ್ನು ಹೊರತು ಪಡಿಸಿ ಮತ್ತೇನೆಲ್ಲ ಇದೆ ಅವರ ಬಳಿ ಇಲ್ಲಿ ತಿಳಿಯಿರಿ.

1. 123 ಡಾಲರ್ ಮಿಲಿಯನ್ ಮೌಲ್ಯದ ಮನೆ

1. 123 ಡಾಲರ್ ಮಿಲಿಯನ್ ಮೌಲ್ಯದ ಮನೆ

ಮಾಹಿತಿಯ ಪ್ರಕಾರ ಬಿಲ್ ಗೇಟ್ಸ್ 7 ವರ್ಷ ಮತ್ತು 63 ಮಿಲಿಯನ್ ಡಾಲರ್ ನ್ನು ಅವರ ಮನೆ ನಿರ್ಮಿಸಲು ಬಿಲ್ ಗೇಟ್ಸ್ ಖರ್ಚು ಮಾಡಿದ್ದಾರೆ. ಈ ಟೆಕ್ ಉದ್ಯಮಿ ಪ್ರತಿ ವರ್ಷ 1 ಮಿಲಿಯನ್ ಡಾಲರ್ ಆಸ್ತಿ ತೆರಿಗೆಯನ್ನು ಅವರು ಪಾವತಿಸುತ್ತಾರೆ. 2014 ರಲ್ಲಿ ಈ ಮನೆಯ ಮೌಲ್ಯ 123.54 ಡಾಲರ್ ಎಂದು ಹೇಳಲಾಗಿತ್ತು.

2. ಕಲಾಕೃತಿಗಳನ್ನು ಬದಲಾಯಿಸುವ ಗೋಡೆ

2. ಕಲಾಕೃತಿಗಳನ್ನು ಬದಲಾಯಿಸುವ ಗೋಡೆ

ಬಿಲ್ ಗೇಟ್ಸ್ ಮನೆಯಲ್ಲಿರುವ ಗೋಡೆಯಲ್ಲಿರುವ ಕಲಾಕೃತಿಗಳನ್ನ ಕೇವಲ ಒಂದು ಬಟನ್ ಒತ್ತುವ ಮೂಲಕ ಬದಲಾಯಿಸಬಹುದಂತೆ. ಯಾರದ್ದಾದರೂ ವರ್ಣಚಿತ್ರಗಳು ಮತ್ತು ಪೋಟೋಗ್ರಾಫನ್ನು ಅದರಲ್ಲಿ ಸಂಗ್ರಹಿಸಿ ಇಡಲಾಗುತ್ತೆ ಮತ್ತು ಗೋಡೆಯಲ್ಲಿ ಪ್ರದರ್ಶಿಸಲಾಗುತ್ತಂತೆ.

3. 60 ಅಡಿ ಈಜುಕೊಳ

3. 60 ಅಡಿ ಈಜುಕೊಳ

ಬಿಲ್ ಗೇಟ್ಸ್ ಮನೆಯಲ್ಲಿ 60 ಅಡಿಯ ಈಜುಕೊಳವಿದ್ದು, ಅದು ಅವರ 3,900 ಸ್ಕ್ವೇರ್ ಫೀಟಿನ ಕಟ್ಟಡದಲ್ಲೇ ಇದೆ. ಈ ಈಜುಕೊಳಕ್ಕೆ ತನ್ನದೇ ಆದ ಮ್ಯೂಸಿಕ್ ಸಿಸ್ಟಮ್ ಕೂಡ ಇದೆ.

4. ಬೃಹತ್ ಟ್ರ್ಯಾಂಪೋಲೈನ್

4. ಬೃಹತ್ ಟ್ರ್ಯಾಂಪೋಲೈನ್

ಮೈಕ್ರೋಸಾಫ್ಟ್ ನ ಸಹಸಂಸ್ಥಾಪಕ ತಮ್ಮ ಮನೆಯಲ್ಲಿ ಬೃಹತ್ ಟ್ರ್ಯಾಂಪೋಲೈನ್ ನ್ನು ಕೂಡ ಇಟ್ಟುಕೊಂಡಿದ್ದಾರೆ. ಟ್ರ್ಯಾಂಪೊಲೈನ್ ಇರಿಸಲ್ಪಟ್ಟಿರುವ ಕೊಠಡಿಯು 20 ಅಡಿ ಎತ್ತರದ ಸೀಲಿಂಗ್ ಅನ್ನು ಹೊಂದಿದೆ. ಟ್ರ್ಯಾಂಪೊಲೈನ್ ಎಷ್ಟು ದೊಡ್ಡದಾಗಿದೆ ಎಂಬುದು ಅಷ್ಟು ತಿಳಿದಿಲ್ಲ.

5.ಅಪಾರ ಗ್ರಂಥಾಲಯ

5.ಅಪಾರ ಗ್ರಂಥಾಲಯ

ಬಿಲ್ ಗೇಟ್ಸ್ 2100 ಸ್ಕ್ವೇರ್ ಫೀಟಿನ ಗ್ರಂಥಾಲಯವನ್ನೂ ಹೊಂದಿದ್ದು, ಗುಮ್ಮಟಾಕಾರದ ಛಾವಣಿ ಮತ್ತು ರಹಸ್ಯ ಬುಕ್ ಕೇಸ್ ಗಳನ್ನೂ ಹೊಂದಿದೆ.ಅಪಾರ ಗ್ರಂಥಾಲಯವು ಕೋಡೆಕ್ಸ್ ಲೀಸೆಸ್ಟರ್ ಅನ್ನು ಹೊಂದಿದೆ. 16 ನೇ ಶತಮಾನದ ಲಿಯೊನಾರ್ಡೊ ಡಾ ವಿನ್ಸಿ ಹಸ್ತಪ್ರತಿಯನ್ನು 1994 ರಲ್ಲಿ ಹರಾಜಿನಲ್ಲಿ 30.8 ಮಿಲಿಯನ್ ಡಾಲರ್ ಗೆ ಬಿಲ್ ಗೇಟ್ಸ್ ಖರೀದಿಸಿದ್ದರು.

6. ಹೋಮ್ ಥಿಯೇಟರ್

6. ಹೋಮ್ ಥಿಯೇಟರ್

ಹೌದು ಬಿಲ್ ಗೇಟ್ಸ್ ಮನೆಯಲ್ಲಿ ದೊಡ್ಡ ಹೋಮ್ ಥಿಯೇಟರ್ ಇದೆ. ಆಸಕ್ತಿದಾಯಕವಾಗಿರುವ ವಿಷಯವೇನೆಂದರೆ ಇದು ಆರ್ಟ್ ಡೆಕೊ ಶೈಲಿ ಮತ್ತು ಪಾಪ್ಕಾರ್ನ್ ಯಂತ್ರವನ್ನು ಹೊಂದಿದೆ. 20 ಜನ ಅತಿಥಿಗಳನ್ನು ಇಲ್ಲಿ ಅಹ್ವಾನಿಸಿಕೊಳ್ಳಬಹುದಾಗಿದೆ.

7. ಒಂದು ಕೃತಕ ಸ್ಟ್ರೀಮ್ ಮತ್ತು ಬೀಚ್ಬಿ

7. ಒಂದು ಕೃತಕ ಸ್ಟ್ರೀಮ್ ಮತ್ತು ಬೀಚ್ಬಿ

ಲ್ ಗೇಟ್ಸ್ ಕೃತಕ ಸ್ಟ್ರೀಮ್ ಮತ್ತು ಬೀಚ್ ನ ಒಡೆಯರಾಗಿದ್ದಾರೆ..ಸ್ಟ್ರೀಮ್ ಮತ್ತು ಆರ್ದ್ರಭೂಮಿಯ ನದೀಮುಖವನ್ನು ಸಾಲ್ಮನ್ ಮತ್ತು ಸಮುದ್ರ-ರನ್ ಕಟ್ತ್ರೋಟ್ ಟ್ರೌಟ್ನೊಂದಿಗೆ ಸಂಗ್ರಹಿಸಲಾಗುತ್ತದೆ. ಬೀಚ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಮರಳೂ ಇದೆ, ಅದನ್ನು ಸೇಂಟ್ ಲೂಸಿಯಾದಿಂದ ದೊಡ್ಡ ಪ್ರಮಾಣದಲ್ಲಿ ಪ್ರತಿ ವರ್ಷ ದೋಣಿಗಳಲ್ಲಿ ತರಿಸಲಾಗುತ್ತಂತೆ.

8. ಕಲಾಕೃತಿಗಳ ಸಂಗ್ರಹ

8. ಕಲಾಕೃತಿಗಳ ಸಂಗ್ರಹ

ಬಿಲ್ ಗೇಟ್ಸ್ ಆರ್ಟ್ಸ್ ಲವ್ವರ್ ಎಂದೇ ಪ್ರಖ್ಯಾತರು ಮತ್ತು ಅವರ ಬಳಿ ಸಾಕಷ್ಟು ಕಲಾಕೃತಿಗಳ ಖಾಸಗಿ ಸಂಗ್ರಹವಿದ್ದು ಅದು ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಗೇಟ್ಸ್ ಸಂಗ್ರಹಾಲಯದಲ್ಲಿ ಆಯಿಲ್ ಪೇಯಿಂಟಿಂಗ್ ಇದೆ. ವಿಂನ್ಸ್ ಲೋ ಹಾಮರ್ ರ Lost on the Grand Banks' ನ್ನು ಅವರು 36 ಮಿಲಿಯನ್ ಕೊಟ್ಟು ಖರೀದಿಸಿದ್ದರು. ಜಾರ್ಚ್ ಬೆಲ್ಲೋ ಅವರ ಪೋಲೋ ಕ್ರೌಡ್ ಕಲಾಕೃತಿಯನ್ನು ಅವರು 28 ಮಿಲಿಯನ್ ಗೆ ಖರೀದಿಸಿದ್ದರು.

9.ಖಾಸಗಿ ಜೆಟ್

9.ಖಾಸಗಿ ಜೆಟ್

ಬಿಲ್ ಗೇಟ್ಸ್ ಬಳಿ ಪ್ರೈವೇಟ್ ಜೆಟ್ ಕೂಡ ಇದೆ.. ಬೋಂಬಾರ್ಡಿಯರ್ BD-700 ಬೋಯಿಂಗ್ 737 ಬಿಬಿಜೆ, ಗಲ್ಫ್ಸ್ಟ್ರೀಮ್ ವಿ ಮತ್ತು ಏರ್ಬಸ್ ಎಸಿಜೆ 319 ನಂತಹ ಉನ್ನತ-ಮಟ್ಟದ ಕಾರ್ಪೊರೇಟ್ ಜೆಟ್ಗಳ ವಿರುದ್ಧ ಇದು ಸ್ಪರ್ಧಿಸುವ ತಾಕತ್ತನ್ನು ಹೊಂದಿದೆ.

10. ಕಾರುಗಳ ಸಂಗ್ರಹ

10. ಕಾರುಗಳ ಸಂಗ್ರಹ

ತಮ್ಮ ಕಾರುಗಳ ಪ್ರೇಮದಿಂದಾಗಿ ಕೂಡ ಮೈಕ್ರೋಸಾಫ್ಟ್ ನ ಸಹ ಸಂಸ್ಥಾಪಕ ಪ್ರಸಿದ್ಧರಾಗಿದ್ದಾರೆ. ಅವರು ಮಾರ್ಡ್ನ್ ಮತ್ತು ಹಳೆಯ ಕಾರುಗಳ ಸರಣಿಯನ್ನೇ ಹೊಂದಿದ್ದಾರೆ. ಗೇಟ್ ಬಳಿ 1988 Porsche 959 Coupe, Porsche 911 Carrera ಮತ್ತು Porsche 930 ಕಾರುಗಳಿವೆ.

Best Mobiles in India

English summary
10 exciting things Microsoft co-founder Bill Gates owns. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X