ಫೇಸ್‌ಬುಕ್‌ನಲ್ಲಿ ನಿಪುಣರಾಗಲು ಟಾಪ್ ಟ್ರಿಕ್ಸ್
ಸಾಮಾಜಿಕ ಜಾಲತಾಣವಾಗಿ ಫೇಸ್‌ಬುಕ್ ಇಂದು ಜನಪ್ರಿಯತೆಯ ತುತ್ತತುದಿಗೇರಿದೆ. ಹಿರಿಕಿರಿಯರೆನ್ನದೆ ಎಲ್ಲರೂ ಈ ತಾಣದ ಬಳಕೆಯನ್ನು ಹೆಚ್ಚು ಪ್ರಮಾಣದಲ್ಲಿ ಮಾಡುತ್ತಿದ್ದಾರೆ. ಬರಿಯ ಮನರಂಜನೆಯನ್ನು ಮಾತ್ರ ನಡೆಸದೆಯೇ ಇಂದು ಫೇಸ್‌ಬುಕ್ ಉದ್ಯೋಗವನ್ನು ನೀಡುವಲ್ಲೂ ಮುಂದಾಗಿದೆ. ತಮ್ಮ ಕ್ರಿಯಾತ್ಮಕತೆಯನ್ನು ಬಳಸಿಕೊಂಡು ಇಂದು ಹೆಚ್ಚಿನ ಜನರು ಫೇಸ್‌ಬುಕ್‌ನಲ್ಲಿ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸುತ್ತಿದ್ದಾರೆ.
ಇಂದಿನ ಲೇಖನದಲ್ಲಿ ಫೇಸ್‌ಬುಕ್ ಕುರಿತಾದ ಕೆಲವೊಂದು ಉಪಯುಕ್ತ ಸಲಹೆಗಳನ್ನು ನೀಡುತ್ತಿದ್ದು ನಿಮ್ಮ ನಿತ್ಯ ಜೀವನದಲ್ಲಿ ಈ ಅಂಶಗಳು ಹೆಚ್ಚು ಪ್ರಯೋಜನಕಾರಿಯಾಗಿ ನಿಮಗೆ ಪರಿಣಮಿಸಲಿದೆ. ಬನ್ನಿ ಅದೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡೋಣ.

ಫೀಡ್‌ನಿಂದ ವಿಷಯ ನಿವಾರಣೆ
ನಿಮಗೆ ಇಷ್ಟವಾಗದ ರೀತಿಯಲ್ಲಿ ನಿಮ್ಮ ಫೇಸ್‌ಬುಕ್ ಗೆಳಯ ಪೋಸ್ಟ್‌ಗಳನ್ನು ಹಾಕುತ್ತಿದ್ದಾನೆ ಎಂದಾದಲ್ಲಿ ಚಿತ್ರದಲ್ಲಿ ನೀಡಿರುವ ಮಾಹಿತಿಯಂತೆ ನೀವು ಇದನ್ನು ನಡೆಸಬಹುದಾಗಿದೆ.

ಲೊಕೇಶನ್ ಡಿಲೀಟ್
ಆಕ್ಟಿವಿಟಿ ಲೋಗೋದಲ್ಲಿ ಈ ಆಪ್ಶನ್‌ಗೆ ಹೋಗುವುದರ ಮೂಲಕ ನೀವು ಭೇಟಿ ನೀಡಿದ ಸ್ಥಳ ಮಾಹಿತಿಯನ್ನು ಅಳಿಸಬಹುದಾಗಿದೆ.

ವೀಡಿಯೊ ಉಳಿಸುವುದು
ನಿಮಗೆ ಇಷ್ಟವಾಗುವ ವೀಡಿಯೊಗಳನ್ನು ಸೇವ್ ಮಾಡುವ ಸೌಲಭ್ಯವನ್ನು ಫೇಸ್‌ಬುಕ್ ನಿಮಗೆ ನೀಡಿದ್ದು ಎಡಭಾಗದ ನ್ಯಾವಿಗೇಶನ್ ಬಾರ್‌ನಲ್ಲಿ ಉಳಿಸಿರುವ ವಿಷಯವನ್ನು ಪ್ರವೇಶಿಸಬಹುದಾಗಿದೆ.

ಲಾಸ್ಟ್ ಸೀನ್
ಕ್ರೋಮ್ ಅಪ್ಲಿಕೇಶನ್ ಫೇಸ್‌ಬುಕ್ ಅನ್‌ಸೀನ್ ಸೌಲಭ್ಯಕ್ಕೆ ನಿಮಗೆ ನೆರವು ನೀಡಲಿದೆ.

ಸರ್ಚ್ ಇಂಜಿನ್‌ಗಳಲ್ಲಿ ಗೋಚರಿಸುವುದು
ಗೂಗಲ್‌ನಂತಹ ಸರ್ಚ್ ಇಂಜಿನ್‌ಗಳು ಫೇಸ್‌ಬುಕ್ ಪೋಸ್ಟ್‌ಗಳನ್ನು ಟ್ರ್ಯಾಕ್ ಮಾಡುತ್ತಿರುತ್ತದೆ. ಸರ್ಚ್ ಇಂಜಿನ್‌ಗಳಲ್ಲಿ ಫೇಸ್‌ಬುಕ್ ಫೋಟೋಗಳು ಪ್ರೊಫೈಲ್ ಚಿತ್ರಗಳು ಬರಬಾರದು ಎಂಬುದಾಗಿದ್ದಲ್ಲಿ "ಅನೇಬಲ್ ಪಬ್ಲಿಕ್ ಸರ್ಚ್" ಅನ್ನು ಅನ್‌ಟಿಕ್ ಮಾಡಿ.

ಅನ್‌ಫ್ರೆಂಡೆಡ್
ನಿಮ್ಮ ಟ್ಯಾಬ್ ಪುಟದ "ಲಾಸ್ಟ್ ಫ್ರೆಂಡ್ಸ್" ನಲ್ಲಿ ಕ್ಲಿಕ್ ಮಾಡಿ.

ಡೌನ್‌ಲೋಡ್
ನಿಮ್ಮ ಫೇಸ್‌ಬುಕ್ ಡೇಟಾವನ್ನು ಡೌನ್‌ಲೋಡ್ ಮಾಡಲು, ಸೆಟ್ಟಿಂಗ್ಸ್ > ಜನರಲ್ ಮತ್ತು "ಡೌನ್‌ಲೋಡ್ ಏ ಕಾಪಿ" ಇಲ್ಲಿ ನಿಮಗೆ ಫೇಸ್‌ಬುಕ್ ಡೇಟಾದ ಜಿಪ್ ಫೈಲ್ ದೊರಕುತ್ತದೆ.

ವೀಕ್ಷಣೆ
ನಿಮ್ಮ ಫೇಸ್‌ಬುಕ್ ಪ್ರೊಫೈಲ್‌ಗೆ ಹೋಗಿ ಇಲ್ಲಿ ನಿಮ್ಮ ಕವರ್ ಫೋಟೋ ದೊರೆಯುತ್ತದೆ. ಮೂರು ಡಾಟ್‌ಗಳ ಮೇಲೆ ಕ್ಲಿಕ್ ಮಾಡಿ, "ವ್ಯೂ ಏಸ್" ಆಯ್ಕೆಮಾಡಿ

ಅಪ್ಲಿಕೇಶನ್ ಆಮಂತ್ರಣ
ನಿಮ್ಮ ಸ್ನೇಹಿತರ ಪಟ್ಟಿಯಿಂದ ನೀವು ಹೆಚ್ಚು ಅಪ್ಲಿಕೇಶನ್ ಆಮಂತ್ರಣಗಳನ್ನು ಸ್ವೀಕರಿಸುತ್ತಿದ್ದೀರಾ. ನಿಮಗೆ ಅಪ್ಲಿಕೇಶನ್ ಆಹ್ವಾನಗಳನ್ನು ಕಳುಹಿಸುತ್ತಿರುವ ಸ್ನೇಹಿತರನ್ನು ಅನ್‌ಫ್ರೆಂಡ್ ಮಾಡದೆಯೇ ಇದನ್ನು ಬ್ಲಾಕ್ ಮಾಡಬಹುದು.

ಫೇಸ್‌ಬುಕ್ ಕಲರ್ ಬದಲಾವಣೆ
ಅದೇ ನೀಲಿ ಬಣ್ಣದ ಫೇಸ್‌ಬುಕ್‌ನಿಂದ ಬೇಜಾರುಗೊಂಡಿದ್ದೀರಾ. ಕ್ರೋಮ್ ಎಕ್ಸ್‌ಟೆನ್ಶನ್ ಫೇಸ್‌ಬುಕ್ ಕಲರ್ ಆಯ್ಕೆಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ.



Click it and Unblock the Notifications








