ನಿಮ್ಮ ಭವಿಷ್ಯವನ್ನೇ ಬದಲಾಯಿಸಬಲ್ಲ 10 ಗ್ಯಾಜೆಟ್‌ಗಳು

Written By:

ಕೆಲವು ವರ್ಷಗಳಿಂದೀಚೆಗೆ, ಜನರು ತಮ್ಮ ಮನೆಯಲ್ಲೇ ತಂತ್ರಜ್ಞಾನ ಬರಬೇಕೆಂಬ ಯೋಚನೆಗೆ ಬಿದ್ದವರು. ಸಿನಿಮಾ ಥಿಯೇಟರ್‌ಗಳಲ್ಲಿ ಕಾಣುವಂತಹ ದೃಶ್ಯ ವೈಭವವನ್ನು ಮನೆಯಲ್ಲೂ ಕಾಣಬೇಕೆಂಬ ತುಡಿತದಲ್ಲಿ ದೊಡ್ಡ ಪರದೆಯುಳ್ಳ ಎಲ್‌ಸಿಡಿ ಟಿವಿಗಳು ನಿವಾಸವನ್ನು ಪ್ರವೇಶಿಸಿದವು. ಹೀಗೆ ತಂತ್ರಜ್ಞಾನದ ಪ್ರಗತಿ ಹಂತ ಹಂತದಲ್ಲಿ ಬದಲಾವಣೆಯನ್ನು ಕಾಣುತ್ತಾ ಕಾಣುತ್ತಾ ಒಂದು ವಿಸ್ಮಯ ಲೋಕವನ್ನೇ ನಮ್ಮ ಮುಂದಿಡುತ್ತಿದೆ.

ಇದನ್ನೂ ಓದಿ: ಹೆಚ್ಚು ಸಂಗ್ರಹ ಸಾಮರ್ಥ್ಯವುಳ್ಳ ಆಂಡ್ರಾಯ್ಡ್ ಕಿಟ್‌ಕ್ಯಾಟ್ ಫೋನ್ಸ್ ರೂ 6,000 ಕ್ಕೆ

ಇಂದಿನ ಲೇಖನದಲ್ಲಿ ಜೀವನ ಶೈಲಿಯನ್ನು ಇನ್ನಷ್ಟು ಸರಳಗೊಳಿಸುವ ಟಾಪ್ 10 ಗ್ಯಾಜೆಟ್‌ಗಳೊಂದಿಗೆ ನಾವು ಬಂದಿದ್ದು ಭವಿಷ್ಯ ಹೇಗೆ ಬದಲಾಯಿತು ಎಂಬುದನ್ನು ಈ ಗ್ಯಾಜೆಟ್‌ಗಳು ತಿಳಿಸಿಕೊಡಲಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೋಲೋಲೆನ್ಸ್

ಮೈಕ್ರೋಸಾಫ್ಟ್ ಹೋಲೋಲೆನ್ಸ್

ಹೋಲೋಲೆನ್ಸ್ ಗ್ಲಾಸ್ ಅನ್ನು ಧರಿಸುವುದರ ಮೂಲಕ ಬಳಕೆದಾರರು ವೈಯಕ್ತಿಕವಾಗಿ ನಿರ್ಮಿಸಿದ ಅಥವಾ ಡಿಜಿಟಲ್ ಪ್ರಾಜೆಕ್ಟ್ ಮಾಡಿರುವ ಹೋಲೋಗ್ರಾಮ್ಸ್‌ಗಳೊಂದಿಗೆ ಸಂಪರ್ಕವನ್ನು ಸಾಧಿಸಬಹುದು ಅಂತೆಯೇ ಇಷ್ಟಬಂದದ್ದನ್ನು ರಚಿಸಬಹುದು.

ರಿಂಗ್

ಲಾಗ್‌ಬಾರ್ ರಿಂಗ್

ನಿಮ್ಮ ಕ್ಯಾಮೆರಾ, ಮ್ಯೂಸಿಕ್ ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿಭಾಯಿಸಬಹುದಾದ ಲಾಗ್‌ಬಾರ್ ರಿಂಗ್ ಬ್ಲ್ಯೂಟೂತ್ ಮೂಲಕ ಕಾರ್ಯನಿರ್ವಹಿಸುತ್ತದೆ.

ಟ್ರ್ಯಾಕರ್ಸ್

ಸ್ವರೋಸ್ಕಿ ಮತ್ತು ಮಿಸ್‌ಫಿಟ್ ಆಕ್ಟಿವಿಟಿ ಟ್ರ್ಯಾಕರ್ಸ್

ಇದು ಆಭರಣಗಳ ಮೂಲಕ ಬಳಕೆದಾರರನ್ನು ತಲುಪುವ ಫಿಟ್‌ನೆಸ್ ಟ್ರ್ಯಾಕ್ ಆಗಿದ್ದು ಆರೋಗ್ಯದ ಮಾಹಿತಿಯನ್ನು ಈ ಆಭರಣಗಳನ್ನು ಧರಿಸಿದಾಗ ಬಳಕೆದಾರರಿಗೆ ದೊರೆಯಲಿದೆ.

ಜ್ಕ್ಯಾನ್ +

ಸ್ಕ್ಯಾನರ್ ಮೌಸ್

ಕ್ಯಾಮೆರಾ ಮತ್ತು ವೈಯಕ್ತಿಕ ಸಹಕಾರಿ ಕ್ರೀಡರ್ ಫೋನ್‌ಗಳೊಂದಿಗೆ ಬಂದಿರುವ ಈ ಗ್ಯಾಜೆಟ್ ಸ್ಕ್ಯಾನರ್‌ನಂತೆ ಕೂಡ ಕಾರ್ಯನಿರ್ವಹಿಸಬಲ್ಲುದು. ಇದೊಂದು ಸ್ಕ್ಯಾನರ್ ಮೌಸ್ ಆಗಿದೆ ಎಂಬುದು ಇನ್ನೂ ಕುತೂಹಲಕರವಾಗಿದೆ.

ಮಿಂಟ್

ಬ್ರೀತೋಮೀಟರ್

ಬ್ರೀತೋಮೀಟರ್ ಹೊರತಂದಿರುವ ಉಸಿರಾಟ ವಿಶ್ಲೇಷಕ ಟೂಲ್ ಆಗಿದ್ದು ನೀವು ಸೇವಿಸಿರುವ ಮದ್ಯಪಾನದ ಅಳತೆಯನ್ನು ಇದು ಪತ್ತೆಹಚ್ಚುತ್ತದೆ. ಉಸಿರಾಟವನ್ನೂ ಇದು ಅಳತೆ ಮಾಡುತ್ತದೆ.

ಸೆನ್ಸ್

ಸ್ಮಾರ್ಟ್ ಅಲರಾಮ್

ನಿಮ್ಮ ನಿದ್ದೆಯ ಸಮಯದಲ್ಲೇ ನಿಮ್ಮನ್ನು ಎಬ್ಬಿಸುವ ಸ್ಮಾರ್ಟ್ ಅಲರಾಮ್ ಆಗಿದೆ ಸೆನ್ಸ್. ಇದನ್ನು ನಿಮ್ಮ ದಿಂಬಿನ ಅಡಿಭಾಗದಲ್ಲಿ ಇರಿಸಿದರೆ ಸಾಕು ನಿಮ್ಮನ್ನು ಮುಂಜಾನೆ ಎಬ್ಬಿಸುವ ಕೆಲಸವನ್ನು ಇದು ಮಾಡುತ್ತದೆ.

ಚೆಫ್ ಜೆಟ್ ಮತ್ತು ಚೆಫ್ ಜೆಟ್ ಪ್ರೊ

3 ಡಿ ಪ್ರಿಂಟರ್

ಈ 3 ಡಿ ಪ್ರಿಂಟರ್‌ಗಳು ನಿಜಕ್ಕೂ ಕಣ್ಣಿಗೆ ಹಬ್ಬವನ್ನುಂಟು ಮಾಡುವ ಖಾದ್ಯಗಳನ್ನು ತಯಾರಿಸಿಕೊಡಲಿವೆ. ಅಸಲಿಗೆ ಇದು 3 ಡಿ ಚಿತ್ರಗಳಂತೆ ಕಂಡುಬರುತ್ತದೆ ಆದರೆ ಇದು ತಿನಿಸಾಗಿದೆ.

ರೊಬೋಟ್

ವೈಯಕ್ತಿಕ ರೊಬೋಟ್

ಆಪಲ್‌ನ ಸಿರಿ, ಮೈಕ್ರೋಸಾಫ್ಟ್‌ನ ಕೋರ್ಟಾನಾದಂತೆಯೇ, ಅಮೆಜಾನ್‌ನ ಅಲೆಕ್ಸಾ ಮತ್ತು ರೊಬೋಟ್ ಬೇಸ್ ವೈಯಕ್ತಿಕ ರೊಬೋಟ್ ಅನ್ನು ತಯಾರಿಸುವ ತಯಾರಿಯಲ್ಲಿದೆ.

ವೀಲ್

ಕೋಪನ್‌ಹೇಗನ್ ವೀಲ್

ಸೈಕಲ್ ಸವಾರರ ಸೈಕಲ್ ಹಿಂಭಾಗದ ಚಕ್ರವನ್ನು ತೆಗೆದಿಸಿ ಈ ವೀಲ್ ಜೋಡಣೆಯನ್ನು ಮಾಡಬೇಕು. ಈ ವೀಲ್‌ಗಳು ಮೋಟಾರ್, ಬ್ಯಾಟರಿಗಳು, ಸೆನ್ಸಾರ್‌ಗಳು, ವೈರ್‌ಲೆಸ್ ಕನೆಕ್ಟಿವಿಟಿಯನ್ನು ಬಳಸಿ ಸವಾರರ ಪೆಡಲಿಂಗ್ ಶಕ್ತಿಯನ್ನು ಗರಿಷ್ಟಗೊಳಿಸಿ ಅವರ ಸವಾರಿಯನ್ನ ಟ್ರ್ಯಾಕ್ ಮಾಡುತ್ತದೆ.

 ಪ್ಯಾರಟ್ ಫ್ಲವರ್ ಪವರ್

ವೇರಿಯೇಬಲ್‌

ಜನರಂತೆಯೇ ಸಸ್ಯಗಳು ಕೂಡ ತಮ್ಮದೇ ಆವೃತ್ತಿಯ ವೇರಿಯೇಬಲ್‌ಗಳನ್ನು ಹೊಂದಿವೆ. ಪ್ಯಾರಟ್ ಫ್ಲವರ್ ಪವರ್ ಒಂದು ಸೆನ್ಸಾರ್ ಆಗಿದ್ದು ಸಸ್ಯದ ಮೇಲೆ ಬೀಳುವ ಸೂರ್ಯನ ಶಾಖ, ತಾಪಮಾನ, ರಾಸಾಯನಿಕ ಮತ್ತು ತೇವಾಂಶವನ್ನು ಪರಿಶೀಲಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about 10 futuristic gadgets for the early adopter.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot