ವಿಶ್ವಭೂಮಿ ದಿನ: ಪ್ರಕೃತಿಯಲ್ಲಿ ಚಿಗುರೊಡೆದ ಗ್ಯಾಜೆಟ್‌ಗಳು

  By Shwetha
  |

  ತಂತ್ರಜ್ಞಾನದಲ್ಲಿ ಹೆಚ್ಚು ಪ್ರಗತಿ ಆಗುತ್ತಿರುವಂತೆಯೇ ನಾವು ಆಧುನಿಕವಾಗಿ ಪ್ರಗತಿಯನ್ನು ಕಾಣುತ್ತಿರುವುದು ಸಂತಸಕರವಾದ ಸುದ್ದಿಯಾಗಿದೆ. ಆದರೆ ಈ ಆಧೂನೀಕತೆ ಪರಿಸರದ ಮೇಲೆ ಹೇಗೆ ಪ್ರಭಾವವನ್ನು ಬೀರುತ್ತಿದೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ನೋಡಲಿರುವೆವು. ಹೌದು ಇಂದು ವಿಶ್ವ ಭೂಮಿ ದಿನವಾಗಿದ್ದು ತಂತ್ರಜ್ಞಾನ ಹೇಗೆ ಭೂಮಿಯ ವ್ಯವಸ್ಥೆಗಳ ಮೇಲೆ ಪರಿಣಾಮವನ್ನು ಬೀರುತ್ತಿದೆ ಎಂಬುದನ್ನು ನಾವು ಅರಿತುಕೊಳ್ಳಲೇಬೇಕು.

  ಓದಿರಿ: ಚೀನಾ ಆಪಲ್ ಶ್ಯೋಮಿ ಎಮ್ಐ 4 ಕುರಿತ 10 ಗುಟ್ಟುಗಳು

  ಸ್ಮಾರ್ಟ್‌ಫೋನ್‌ಗಳು, ಕಂಪ್ಯೂಟರ್‌ಗಳು, ಲ್ಯಾಪ್‌ಟಾಪ್‌ಗಳ ತಯಾರಿಯಲ್ಲಿ ರಾಸಾಯನಿಕಗಳ ಬಳಕೆಯನ್ನು ನಾವು ಮಾಡುತ್ತಿದ್ದು ಇದು ಪರಿಸರದ ಮೇಲೆ ಉಂಟುಮಾಡುತ್ತಿರುವ ಹಾನಿಯನ್ನು ಲೆಕ್ಕಹಾಕಲು ಸಾಧ್ಯವಿಲ್ಲ. ಅದಾಗ್ಯೂ ಪರಿಸರಕ್ಕೆ ಹಾನಿಯನ್ನುಂಟು ಮಾಡುವ ಕೆಲವೊಂದು ಉತ್ಪನ್ನಗಳನ್ನು ನಾವು ಪರಿಸರ ಪ್ರೇಮಿಯನ್ನಾಗಿ ಬದಲಾಯಿಸಿದರೆ ಎಷ್ಟೊಂದು ಲಾಭಕರವಾಗಿರಬಹುದು ಅಲ್ಲವೇ. ಕೆಳಗಿನ ಸ್ಲೈಡರ್‌ಗಳಲ್ಲಿ ಇದನ್ನು ಕುರಿತು ಅರಿತುಕೊಳ್ಳಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಅಸೂಸ್

  ಇತರ ಕಂಪ್ಯೂಟರ್ ತಯಾರಿಕಾ ಸಂಸ್ಥೆಗಳಂತೆಯೇ ಅಸೂಸ್ ಕೂಡ ಭೂಮಿ ದಿನವನ್ನು ವಿಭಿನ್ನವಾಗಿ ಆಚರಿಸುತ್ತಿದೆ. ಬಿದಿರಿನ ಬಳಕೆಯನ್ನು ಲ್ಯಾಪ್‌ಟಾಪ್‌ಗಳ ತಯಾರಿಯಲ್ಲಿ ಈ ಸಂಸ್ಥೆ ಮಾಡಿದ್ದು, ಇದು ಹಗುರ ಅಂತೆಯೇ ಪರಿಸರ ಪ್ರೇಮಿಯಾಗಿದೆ.

  ಈಟನ್

  ಈಟನ್‌ನ ಇಂಟಲಿಜೆಂಟ್ ಪವರ್ ಸಾಫ್ಟ್‌ವೇರ್ ಅಡೆತಡೆ ಇಲ್ಲದ ಪವರ್ ಪೂರೈಕೆಯನ್ನು ಮಾಡುತ್ತದೆ. ವಿದ್ಯುತ್ ಬಳಕೆ, ಲೋಡ್ ಹಂತಗಳು ಮತ್ತು ವಿದ್ಯುತ್ ಬಳಕೆಯ ಪರಿಣಾಮವನ್ನು ಅವಲೋಕಿಸುತ್ತದೆ.

  ಬೆಡೋಲ್

  ಇತರ ಅಲರಾಮ್ ಕ್ಲಾಕ್‌ಗಳಂತೆಯೇ, ಈ ಅಲರಾಮ್ ಕ್ಲಾಕ್ ಕೂಡ ಇದ್ದು ಬ್ಯಾಟರಿಯ ಬದಲಿಗೆ ಇದು ನೀರನ್ನು ಬಳಸುತ್ತದೆ. ಇದರಲ್ಲಿರುವ ಮೆಮೊರಿ ಚಿಪ್ ಸಮಯವನ್ನು ತೋರಿಸುತ್ತದೆ ಆರು ತಿಂಗಳಿಗೊಮ್ಮೆ ಈ ಗಡೆಯಾರದಲ್ಲಿ ನೀರನ್ನು ಬದಲಾಯಿಸುತ್ತಿರಬೇಕು.

  ಎಮ್‌ಡಿ

  ಎಮ್‌ಡಿ ಚಿಪ್‌ಗಳು ಸರ್ವರ್‌ಗಳಲ್ಲಿ ಕಾಣಸಿಗುತ್ತವೆ. ಡೇಟಾ ಕೇಂದ್ರಗಳಿಗಾಗಿ ಇದನ್ನು ವಿಶೇಷವಾಗಿ ವಿನ್ಯಾಸಪಡಿಸಿದ್ದು, ಹೆಚ್ಚಿನ ವಿದ್ಯುತ್ ಬಳಕೆಯನ್ನು ಮಾಡದೆಯೇ ಕಾರ್ಯನಿರ್ವಹಣೆಯನ್ನು ಮಾಡುತ್ತದೆ.

  ಸ್ಯಾಮ್‌ಸಂಗ್

  ಜನವರಿಯಲ್ಲಿ ನಡೆದ ಸಿಎಸ್‌ಎನ್‌ನಲ್ಲಿ ಸ್ಯಾಮ್‌ಸಂಗ್ ಪಾರದರ್ಶಕ ಅರ್ಧಪಿಸಿ ಮತ್ತು ಅರ್ಧ ವಿಂಡೊ ಪ್ರೊಟೊಟೈಪ್ ಗ್ಯಾಜೆಟ್ ಅನ್ನು ಬಿಡುಗಡೆಗೊಳಿಸಿತು. ಇದು ನಿಮ್ಮ ಲಿವಿಂಗ್ ರೂಮ್‌ನ ಹೆಚ್ಚು ಜಾಗವನ್ನು ನುಂಗದೆಯೇ ಗೋಡೆಯನ್ನು ಅಲಂಕರಿಸುತ್ತದೆ. ದಿನದಲ್ಲಿ ಹೊರಗಿನ ಬೆಳಕನ್ನು ಬಳಸಿ ಇದು ಚಾಲನೆಯಾಗುತ್ತದೆ.

  ಎಚ್‌ಪಿ

  ಎಚ್‌ಪಿಯ ಫೋಟೋಸ್ಮಾರ್ಟ್ ಇ ಸ್ಟೇಶನ್ ಹಸಿರು ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಸ್ವಯಂಚಾಲಿತ ಎರಡು ಬಗೆಯಲ್ಲಿ ಮುದ್ರಣಕ್ಕೆ ಪೂರಕವಾಗಿದ್ದು ಕಡಿಮೆ ವಿದ್ಯುತ್ ಅನ್ನು ಇದು ಬಳಸುತ್ತದೆ.

  ಸೋನಿ

  ಸೋನಿ VAIO SA ಲ್ಯಾಪ್‌ಟಾಪ್ 3.3 ಇಂಚಿನ ಸ್ಕ್ರೀನ್ ಅಂತೆಯೇ 12 ಗಂಟೆಗಳ ಬ್ಯಾಟರಿ ಶಕ್ತಿಯನ್ನು ಒದಗಿಸುತ್ತದೆ. ಕಡಿಮೆ ವಿದ್ಯುತ್ ಬಳಕೆಗೆ ಪೂರಕವಾಗಿರುವಂತೆ ಈ ಲ್ಯಾಪ್‌ಟಾಪ್ ಅನ್ನು ತಯಾರಿಸಿಲಾಗಿದೆ.

  ಲೆನೊವೊ

  ಇದು ವೇಗವಾದ ಮೆಮೊರಿಯನ್ನು ಒದಗಿಸುವುದು ಮಾತ್ರವಲ್ಲದೆ ತನ್ನ ಹಳೆಯ ಆವೃತ್ತಿಗಳಿಗಿಂತ ವೇಗವಾಗಿ ಕೆಲಸವನ್ನು ಮಾಡಬಲ್ಲುದು. ಕಡಿಮೆ ವಿದ್ಯುತ್ ಬಳಕೆ ಇದರ ಮೂಲ ಅಡಿಪಾಯವಾಗಿದೆ.

  ಒನ್ ಲ್ಯಾಪ್‌ಟಾಪ್

  ಒನ್ ಲ್ಯಾಪ್‌ಟಾಪ್ ಸಂಸ್ಥೆ ಮಕ್ಕಳಿಗಾಗಿ ಹೆಚ್ಚು ದುಬಾರಿಯಲ್ಲದ ಲ್ಯಾಪ್‌ಟಾಪ್ ಅನ್ನು ತಯಾರಿಸಿದ್ದು ಆಧುನಿಕ ತಂತ್ರಜ್ಞಾನ ತಿಳುವಳಿಕೆಯನ್ನು ಮಕ್ಕಳಲ್ಲಿ ಉಂಟುಮಾಡಲು ಸಹಕಾರಿಯಾಗಿದೆ. ಸೂರ್ಯನ ಶಕ್ತಿಯನ್ನು ಬಳಸಿ ಇದು ಕಾರ್ಯನಿರ್ವಹಿಸುತ್ತದೆ.

  ಕಿಂಡಲ್ ಕವರ್

  ಇದು ಸೋಲಾರ್ ಆಧಾರಿತ ಕಿಂಡಲ್ ಕವರ್ ಆಗಿದ್ದು ಸೂರ್ಯನ ಬೆಳಕನ್ನು ಬಳಸಿ ಕಿಂಡಲ್‌ನಲ್ಲಿರುವ ಬ್ಯಾಟರಿಯನ್ನು ಚಾರ್ಜ್ ಮಾಡುತ್ತದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  With all its power cords, batteries, and massive manufacturing lines, the tech industry is rarely viewed as an icon for sustainability. In honor of Earth Day 2015, here are 10 tech products that get the job done -- while still showing some love for planet Earth.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more