ಮೊಬೈಲ್‌ಗಳ ಹೆಚ್ಚು ಬಳಕೆ ರೋಗಗಳಿಗೆ ಆಹ್ವಾನ

By Shwetha
|

ಇಂದಿನ ಆಧುನಿಕ ಯುಗದಲ್ಲಿ ಸ್ಮಾರ್ಟ್‌ಫೋನ್‌ಗಳ ಬಳಕೆಯನ್ನು ಮಾಡದವರು ಯಾರೂ ಇಲ್ಲ. ಸಂದೇಶ ರಚನೆ ಮಾಡುವುದರಿಂದ ಹಿಡಿದು, ಕರೆ ಮಾಡುವಿಕೆ, ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡುವುದು, ಹಾಡು ಕೇಳುವುದು ಹೀಗೆ ಹತ್ತು ಹಲವು ಕಾರ್ಯಗಳನ್ನು ನಾವು ಈ ಸಣ್ಣ ಇಲೆಕ್ಟ್ರಿಕ್ ಉಪಕರಣದಿಂದ ಮಾಡುತ್ತೇವೆ. ಕಂಪ್ಯೂಟರ್ ಮಾಡುವಂತಹ ಕೆಲಸವನ್ನೇ ಇಂದು ಸಣ್ಣ ಮೊಬೈಲ್ ಮಾಡುವಷ್ಟು ಸಾಮರ್ಥ್ಯವನ್ನು ಹೊಂದಿದೆ.

ಓದಿರಿ: ಸ್ಮಾರ್ಟ್‌ಫೋನ್ ಬಳಸಿ ಈ ತಪ್ಪುಗಳನ್ನು ನೀವು ಮಾಡದಿರಿ

ಆದರೆ ಮೊಬೈಲ್ ಬಳಕೆಗೆ ನಾವೆಷ್ಟು ಸಮೀಪವಾಗುತ್ತಿದ್ದೇವೆಯೋ ಅಷ್ಟೇ ರೋಗಗಳಿಗೂ ಸನಿಹವಾಗುತ್ತಿದ್ದೇವೆ ಎಂಬ ಅಂಶವನ್ನು ನೀವು ಗಮನಿಸಿದ್ದೀರಾ? ಹೆಚ್ಚು ಮೊಬೈಲ್‌ಗಳ ಬಳಕೆ ದೇಹದ ಆರೋಗ್ಯದ ಮೇಲೂ ಪರಿಣಾಮವನ್ನು ಬೀರಲಿದೆ. ಇದರಿಂದ ಬರುವ ಕಾಯಿಲೆಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ನೋಡಲಿದ್ದೇವೆ.

ಕ್ಯಾನ್ಸರ್

ಕ್ಯಾನ್ಸರ್

ವರ್ಲ್ಡ್ ಹೆಲ್ತ್ ಆರ್ಗನೈಜೇಶನ್ ವರದಿ ಮಾಡಿರುವ ಪ್ರಕಾರ ಅಧಿಕ ಫೋನ್ ಬಳಕೆ ಕ್ಯಾನ್ಸರ್ ರೋಗಕ್ಕೆ ಕಾರಣವಾಗಲಿದೆ. ಹಠಾತ್ತಾಗಿ ಕ್ಯಾನ್ಸರ್‌ಗೆ ಕಾರಣವಾಗದೇ ಇದ್ದರೂ ನಿಧಾನಕ್ಕೆ ಈ ರೋಗಕ್ಕೆ ನೀವು ತುತ್ತಾಗಬಹುದು.

ನಿದ್ರಾಹೀನತೆ

ನಿದ್ರಾಹೀನತೆ

ಮಧ್ಯರಾತ್ರಿಯಲ್ಲಿ ಮೊಬೈಲ್ ರಿಂಗ್ಸ್ ಮತ್ತು ವೈಬ್ರೇಶನ್ ಅಂತೆಯೇ ತಡರಾತ್ರಿಯವರೆಗೆ ಮೊಬೈಲ್ ಬಳಕೆ ನಿಮ್ಮ ನಿದ್ದೆಗೆ ಭಂಗವನ್ನುಂಟು ಮಾಡಬಹುದಾಗಿದೆ.

ಅಪಘಾತಗಳು

ಅಪಘಾತಗಳು

ಇನ್ನು ವಾಹನ ಚಾಲನೆಯಲ್ಲಿರುವಾಗ ಮೊಬೈಲ್ ಕರೆ ಸ್ವೀಕರಿಸುವುದು ಇಲ್ಲವೇ ಚಾಟಿಂಗ್ ಮಾಡುವುದರಿಂದ ಚಾಲನೆಯ ಕ್ರಮ ತಪ್ಪಿ ಅಪಘಾತವುಂಟಾಗಲು ಕಾರಣವಾಗುತ್ತದೆ.

ಹೃದಯದ ಸಮಸ್ಯೆಗಳು

ಹೃದಯದ ಸಮಸ್ಯೆಗಳು

ಕೋರ್ಡ್‌ಲೆಸ್ ಫೋನ್‌ಗಳು ಹೊರಬಿಡುವ ರೇಡಿಯೇಶನ್ ನಿಮ್ಮ ಹೃದಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ.

ಬಂಜೆತನ

ಬಂಜೆತನ

ಮೊಬೈಲ್ ಫೋನ್‌ಗಳು ಹೊರಸೂಸುವ ರೇಡಿಯೇಶನ್‌ಗಳು ಬಂಜೆತನಕ್ಕೆ ಕಾರಣವಾಗಲಿದೆ.

ಶ್ರವಣ ಸಮಸ್ಯೆಗಳು

ಶ್ರವಣ ಸಮಸ್ಯೆಗಳು

ಇನ್ನು ಫೋನ್‌ಗಳಲ್ಲಿ ಇಯರ್ ಫೋನ್‌ಗಳ ಬಳಕೆ ನಿಮ್ಮ ಕಿವಿಯಲ್ಲಿ ಸಮಸ್ಯೆಯನ್ನುಂಟು ಮಾಡಿ ಶ್ರವಣ ಸಮಸ್ಯೆಗೆ ಕಾರಣವಾಗಲಿದೆ. ಇನ್ನು 2 ಗಂಟೆಗಳಿಗಿಂತ ಹೆಚ್ಚು ಕಾಲ ಮೊಬೈಲ್ ಫೋನ್‌ಗಳಲ್ಲಿ ಮಾತನಾಡುವವರು ಶ್ರವಣ ಸಮಸ್ಯೆಗೆ ಹೆಚ್ಚು ಬಲಿಯಾಗಲಿದ್ದಾರೆ ಎಂಬುದು ಸಂಶೋಧನೆಗಳಿಂದ ತಿಳಿದು ಬಂದಿದೆ.

ಕಣ್ಣಿನ ಸಮಸ್ಯೆಗಳು

ಕಣ್ಣಿನ ಸಮಸ್ಯೆಗಳು

ಇ ಬುಕ್ಸ್, ವೆಬ್ ಸರ್ಫಿಂಗ್ ಹೀಗೆ ಮೊದಲಾದ ಹಲವು ಕಾರ್ಯಗಳಿಗಾಗಿ ಹೆಚ್ಚಿನ ಜನರು ತಮ್ಮ ಮೊಬೈಲ್‌ಗಳನ್ನು ಬಳಸುತ್ತಿದ್ದಾರೆ. ನೀವು ಹೀಗೆ ಮಾಡಿದಾಗ ಸ್ಕ್ರಿನ್‌ನ ಮೇಲೆ ನೀವು ಇಡುವಂತಹ ನೆಟ್ಟ ನೋಟ, ಸಣ್ಣ ಫಾಂಟ್ ಗಾತ್ರ ನಿಮ್ಮ ಕಣ್ಣುಗಳಿಗೆ ಆಯಾಸವನ್ನುಂಟು ಮಾಡುತ್ತದೆ. ಇದರಿಂದ ಕಣ್ಣಿನ ಸಮಸ್ಯೆ ನಿಮಗುಂಟಾಗುವುದು ಖಂಡಿತ.

ಚರ್ಮ ತೊಂದರೆಗಳು

ಚರ್ಮ ತೊಂದರೆಗಳು

ಮೊಬೈಲ್‌ಗಳು ಮೆಟಾಲಿಕ್ ಶೀನ್ ಅನ್ನು ಹೊಂದಿದ್ದು ಇದು ತ್ವಚೆಯನ್ನು ಆಕರ್ಷಿಸುವ ಶಕ್ತಿಯನ್ನು ಪಡೆದುಕೊಂಡಿದೆ. ಇದು ನಿಮ್ಮ ಚರ್ಮಕ್ಕೆ ಸಮಸ್ಯೆಯನ್ನುಂಟು ಮಾಡುವುದು ಖಂಡಿತ.

ಸೋಂಕುಗಳು

ಸೋಂಕುಗಳು

ಮೊಬೈಲ್ ಫೋನ್‌ಗಳು ನಿಮಗೆ ಮಾಹಿತಿಯನ್ನು ಹೊತ್ತುತರುವುದರ ಜೊತೆಗೆ ಹಲವಾರು ಸೋಂಕುಗಳಿಗೂ ಕಾರಣವಾಗಲಿದೆ.

ಒತ್ತಡ

ಒತ್ತಡ

ಇನ್ನು 24 ಗಂಟೆಗಳ ಕಾಲವೂ ಮೊಬೈಲ್‌ನ ಸಂಪರ್ಕದಲ್ಲಿರುವುದು ಹೆಚ್ಚಿನ ಒತ್ತಡಕ್ಕೆ ಕಾರಣವಾಗಲಿದೆ.

Most Read Articles
Best Mobiles in India

English summary
While most people think that mobile phones could cause cancer, this isn’t the only health hazard that has been reported. We all are probably so addicted to our phones that we are unknowingly destroying our health. Here are some health risks of mobile phones you should be aware of.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more