ಅತಿ ಹೆಚ್ಚು ಸಂಬಳ ನೀಡುವ ಟೆಕ್ ಉದ್ಯೋಗಗಳು

By GizBot Bureau
|

ಪ್ರತಿಯೊಬ್ಬರೂ ಕೂಡ ಅತೀ ಹೆಚ್ಚು ಸಂಬಳ ನೀಡುವ ಕೆಲಸ ಬೇಕು ಎಂದೇ ಬಯಸುತ್ತಾರೆ. ಆ ನಿಟ್ಟಿನಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚು ವಿಫುಲ ಅವಕಾಶಗಳು ಲಭ್ಯವಿದೆ. ಅಲ್ಲಿ ಹಲವು ರೀತಿಯ ಕೆಲಸದ ಹುದ್ದೆಗಳಿದ್ದು ಅವುಗಳಲ್ಲಿ ಕೆಲವು ಉತ್ತಮ ಪ್ಯಾಕೇಜ್ ನ್ನು ಒದಗಿಸುತ್ತದೆ.

ಅತಿ ಹೆಚ್ಚು ಸಂಬಳ ನೀಡುವ ಟೆಕ್ ಉದ್ಯೋಗಗಳು

ಜಾಬ್ ಹುಟುಕಾಟಕ್ಕೆ ನೆರವು ನೀಡುವ ವೆಬ್ ಸೈಟ್ ಆಗಿರುವ ಗ್ಲಾಸ್ ಡೋರ್ 10 ಅತೀ ಹೆಚ್ಚು ಸಂಬಳ ನೀಡುವ ತಂತ್ರಜ್ಞಾನ ಕ್ಷೇತ್ರದ ಹುದ್ದೆಗಳ ಬಗ್ಗೆ ವಿವರಣೆ ನೀಡಿದೆ. ಹಾಗಾದ್ರೆ 10 ಹುದ್ದೆಗಳು ಯಾವುದು ಎಂಬುದರ ಬಗ್ಗೆ ಒಂದು ಸಣ್ಣ ವಿವರಣ ಇಲ್ಲಿದೆ ನೋಡಿ.

ಸಾಫ್ಟ್ ವೇರ್ ಇಂಜಿನಿಯರಿಂಗ್ ಮ್ಯಾನೇಜರ್ 

ಸಾಫ್ಟ್ ವೇರ್ ಇಂಜಿನಿಯರಿಂಗ್ ಮ್ಯಾನೇಜರ್ 

ಈ ಪಟ್ಟಿಯಲ್ಲಿರುವ ಮೊದಲ ಹುದ್ದೆ ಎಂದರೆ ಅದು ಸಾಫ್ಟ್ ವೇರ್ ಇಂಜಿನಿಯರಿಂಗ್ ಮ್ಯಾನೇಜರ್. ವಾರ್ಷಿಕ ಅಂದಾಜು $163,500 ಸಂಬಳವನ್ನು ಈ ಹುದ್ದೆಯನ್ನು ಅಲಂಕರಿಸುವವರು ಪಡೆಯಬಹುದು . ಇವರ ಕೆಲಸವೇನೆಂದರೆ ಒಂದು ಕಂಪೆನಿಗಾಗಿ ಸಾಫ್ಟ್ ವೇರ್ ಗಳನ್ನು ಡೆವಲಪ್ ಮಾಡುವುದು, ರೀಸರ್ಚ್ ಮಾಡುವುದು ಮತ್ತು ಟೆಸ್ಟ್ ಮಾಡುವುದಾಗಿರುತ್ತದೆ.

ಡಾಟಾ ವೇರ್ ಹೌಸ್ ಆರ್ಕಿಟೆಕ್ಟ್ 

ಡಾಟಾ ವೇರ್ ಹೌಸ್ ಆರ್ಕಿಟೆಕ್ಟ್ 

ಎರಡನೇ ಹುದ್ದೆಯೆಂದರೆ ಅದು ಡಾಟಾ ವೇರ್ ಹೌಸ್ ಆರ್ಕಿಟೆಕ್ಟ್. ಈ ಹುದ್ದೆಯಲ್ಲಿರುವವರು ವಾರ್ಷಿಕ ಅಂದಾಜು $154,800 ಸಂಬಳವನ್ನು ನಿರೀಕ್ಷೆ ಮಾಡಬಹುದು. ಮುಂದಿನ ಅನಾಲಿಸಿಸ್ ಗೆ ಬೇಕಾಗುವ ಎಲ್ಲಾ ಡಾಟಾಗಳನ್ನು ಮೈಂಟೇನ್ ಮಾಡುವ ಕೆಲಸ ಇವರದ್ದಾಗಿರುತ್ತದೆ.

ಸಾಫ್ಟ್ ವೇರ್ ಡೆವಲಪ್ ಮೆಂಟ್ ಮ್ಯಾನೇಜರ್ 

ಸಾಫ್ಟ್ ವೇರ್ ಡೆವಲಪ್ ಮೆಂಟ್ ಮ್ಯಾನೇಜರ್ 

ಸಾಫ್ಟ್ ವೇರ್ ಡೆವಲಪ್ ಮೆಂಟ್ ಮ್ಯಾನೇಜರ್ ಹುದ್ದೆಯಲ್ಲಿರುವವರು ಹೆಚ್ಚು ಕಡಿಮೆ ವಾರ್ಷಿಕ ಅಂದಾಜು $153,300 ಸಂಬಳ ಪಡೆಯಬಹುದು ಮತ್ತು ಇವರ ಜವಾಬ್ದಾರಿ ಏನೆಂದರೆ ಕಂಪೆನಿಯ ಸಿಸ್ಟಮ್ ನ ಅಪ್ಲಿಕೇಷನ್ ನ ಹೊಣೆ ಹೊತ್ತು ಕೊಳ್ಳುವುದು ಮತ್ತು ಡೆವಲಪ್ ಮೆಂಟ್, ಟೆಸ್ಟಿಂಗ್ ಕೆಲಸ ಇವರದ್ದಾಗಿರುತ್ತದೆ.

ಇನ್‌ಪ್ರಾಸ್ಟ್ರಕ್ಚರ್ ಆರ್ಕಿಟೆಕ್ಟ್ 

ಇನ್‌ಪ್ರಾಸ್ಟ್ರಕ್ಚರ್ ಆರ್ಕಿಟೆಕ್ಟ್ 

ಕಂಪೆನಿಯ ಐಟಿ ಸಿಸ್ಟಮ್ ನ ಜವಾಬ್ದಾರಿಯುತವಾಗಿ ನೋಡಿಕೊಳ್ಳುವುದು ಇವರ ಕೆಲಸವಾಗಿರುತ್ತದೆ. ಇವರ ಕೆಲಸ ಡಾಟಾ ಸೆಂಟರ್, ಸರ್ವರ್ ಮತ್ತು ಕ್ಲೌಡ್ ಕಂಪ್ಯೂಟಿಂಗ್ ಇತ್ಯಾದಿ ಕೆಲಸಗಳ ನಿರ್ವಹಣೆ ಮಾಡುವುದಾಗಿರುತ್ತದೆ. ಈ ಹುದ್ದೆಗೆ ಸಿಗುವ ವಾರ್ಷಿಕ ಸಂಬಳ ಅಂದಾಜು $153,000 ಆಗಿರುತ್ತದೆ.

ಅಪ್ಲಿಕೇಷನ್ಸ್ ಆರ್ಕಿಟೆಕ್ಟ್ 

ಅಪ್ಲಿಕೇಷನ್ಸ್ ಆರ್ಕಿಟೆಕ್ಟ್ 

ವಾರ್ಷಿಕ ಅಂದಾಜು $149,000 ಸಂಬಳವನ್ನು ಅಪ್ಲಿಕೇಷನ್ ಆರ್ಕಿಟೆಕ್ಟ್ ನಿರೀಕ್ಷೆ ಮಾಡಬಹುದು. ಕಂಪೆನಿಗೆ ಸಂಬಂಧಿಸಿದ ಅಪ್ಲಿಕೇಷನ್ ಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿ ಇವರದ್ದಾಗಿರುತ್ತದೆ. ಹೊಸ ಆಪ್ ಗಳನ್ನು ಅಭಿವೃದ್ಧಿಗೊಳಿಸುವುದು ಹೇಗೆ? ಸದ್ಯ ಲಭ್ಯವಿರುವ ಟೂಲ್ಸ್ ಗಳನ್ನು ಬಳಸಿಕೊಳ್ಳುವುದು ಹೇಗೆ ಮತ್ತು ಅಪ್ಲಿಕೇಷನ್ ಗಳ ಡೆವಲಪ್ ಮೆಂಟ್ ಹೇಗೆ ಆಗಬೇಕು ಎಂಬ ಬಗ್ಗೆ ಪ್ಲಾನ್ ಮಾಡುವ ಹೊಣೆಗಾರಿಕೆ ಇವರದ್ದಾಗಿರುತ್ತದೆ.

ಸಾಫ್ಟವೇರ್ ಆರ್ಕಿಟೆಕ್ಟ್ 

ಸಾಫ್ಟವೇರ್ ಆರ್ಕಿಟೆಕ್ಟ್ 

ಈ ಪಟ್ಟಿಯಲ್ಲಿನ ಆರನೇ ಸ್ಥಾನ ಸಾಫ್ಟ್ ವೇರ್ ಆರ್ಕಿಟೆಕ್ಟ್ ಹುದ್ದೆ ಅಲಂಕರಿಸುವವರದ್ದಾಗಿದೆ ಮತ್ತು ಇವರು ವಾರ್ಷಿಕ ಅಂದಾಜು $145,400 ಸಂಬಳವನ್ನು ಪಡೆಯಬಹುದು. ಸಾಫ್ಟ್ ವೇರ್ ನ ಒಟ್ಟಾರೆ ಅಭಿವೃದ್ಧಿಯ ಹೊಣೆಗಾರಿಕೆಯನ್ನು ಇವರು ನಿರ್ವಹಿಸುತ್ತಾರೆ.

ಟೆಕ್ನಿಕಲ್ ಪ್ರೋಗ್ರಾಮ್ ಮ್ಯಾನೇಜರ್ 

ಟೆಕ್ನಿಕಲ್ ಪ್ರೋಗ್ರಾಮ್ ಮ್ಯಾನೇಜರ್ 

ಮತ್ತೊಂಜು ಅತೀ ಹೆಚ್ಚು ಸಂಬಳ ನೀಡುವ ಕೆಲಸವೆಂದರೆ ಅದು ಟೆಕ್ನಿಕಲ್ ಪ್ರೋಗ್ರಾಮ್ ಮ್ಯಾನೇಜರ್. ಹೆಚ್ಚು ಕಡಿಮೆ ಇವರು ಅಂದಾಜು ವಾರ್ಷಿಕವಾಗಿ $145,000 ಸಂಬಳವನ್ನು ಪಡೆಯಬಹುದು. ಕಂಪೆನಿಯ ಎಲ್ಲಾ ಪ್ರೊಜೆಕ್ಟ್ ಗಳ ಬಗೆಗಿನ ವಿವರಣೆಯನ್ನು ಇವರು ಪಡೆಯಬೇಕಾಗುತ್ತದೆ ಮತ್ತು ಅದನ್ನು ಟ್ರ್ಯಾಕ್ ಮಾಡಬೇಕಾಗುತ್ತದೆ. ಟೆಸ್ಟ್ ಕೋಡ್ ಗಳನ್ನು ರ ನ್ ಮಾಡಿ ಡೆವಲಪ್ ನ ಹಂತಗಳನ್ನ ಪರೀಕ್ಷೆ ಮಾಡಬೇಕಾಗುತ್ತದೆ.

ಎಂಟರ್‌ಪ್ರೈಸ್  ಆರ್ಕಿಟೆಕ್ಟ್

ಎಂಟರ್‌ಪ್ರೈಸ್ ಆರ್ಕಿಟೆಕ್ಟ್

ಎಂಟರ್ ಪ್ರೈಸ್ ಆರ್ಕೆಟೆಕ್ಟ್ ಕಂಪೆನಿಯ ಡೆವಲಪ್ ಮೆಂಟ್ ಮತ್ತು ಸರ್ವರ್ ನ ನಿರ್ವಹಣೆಯ ಜವಾಬ್ದಾರಿ, ಸಾಫ್ಟ್ ವೇರ್ ಮತ್ತು ಇತರೆ ಐಟಿ ಎಸೆಟ್ ಗಳ ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಇವರಿಗೆ ವಾರ್ಷಿಕವಾಗಿ ಅಂದಾಜು $144,400 ಸಂಬಳ ಸಿಗುತ್ತದೆ.

ಡೆವಲಪ್‌ಮೆಂಟ್‌ ಮತ್ತು ಆಪರೇಷನ್ ಇಂಜಿನಿಯರ್

ಡೆವಲಪ್‌ಮೆಂಟ್‌ ಮತ್ತು ಆಪರೇಷನ್ ಇಂಜಿನಿಯರ್

ಡೆವಲಪ್ಮೆಂಟ್ ಮತ್ತು ಆಪರೇಷನ್ ಇಂಜಿನಿಯರ್ ವಾರ್ಷಿಕ ಅಂದಾಜು $137,400 ಸಂಬಳ ಸಿಗುತ್ತದೆ ಮತ್ತು ಸಾಫ್ಟ್ ವೇರ್ ನ ಕೋಡಿಂಗ್ ಜವಾಬ್ದಾರಿಯು ಇವರ ಹೆಗಲ ಮೇಲೆ ಇರುತ್ತದೆ.

ಇನ್ಪರ್‌ಮೆಷನ್ ಸೆಕ್ಯುರಿಟಿ ಇಂಜಿನಿಯರ್

ಇನ್ಪರ್‌ಮೆಷನ್ ಸೆಕ್ಯುರಿಟಿ ಇಂಜಿನಿಯರ್

ಈ ಪಟ್ಟಿಯ ಕೊನೆಯ ಜಾಬ್ ಎಂದರೆ ಅದು ಇನ್ಫರ್ಮೇಷನ್ ಸೆಕ್ಯುರಿಟಿ ಇಂಜಿನಿಯರ್ ಹುದ್ದೆಯಾಗಿದೆ. ಇವರಿಗೆ ವಾರ್ಷಿಕ ಅಂದಾಜು $131,300 ಸಂಬಳ ಸಿಗುತ್ತದೆ. ಕಂಪೆನಿಯ ಡಾಟಾಗಳ ರಕ್ಷಣೆ, ಎನ್ಕ್ರಿಪ್ಶನ್ ಮಾಡಿ ಡಾಟಾಗಳನ್ನು ಭದ್ರವಾಗಿರಿಸುವುದು ಇತ್ಯಾದಿ ಜವಾಬ್ದಾರಿಗಳನ್ನು ನೀಡಲಾಗುತ್ತದೆ.

Best Mobiles in India

English summary
10 highest-paying tech jobs in US. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X