ವಿಶ್ವದ ಟಾಪ್ 10 ದುಬಾರಿ ಫೋನ್‌ಗಳು

Written By:

ಇಂದಿನ ಆಧುನಿಕ ಯುಗದಲ್ಲಿ ಸ್ಮಾರ್ಟ್‌ಫೋನ್ ಹೆಚ್ಚು ಅತ್ಯವಶ್ಯಕ ಪರಿಕರ ಎಂದೆನಿಸಿದೆ. ಇದೀಗ ಮಾರುಕಟ್ಟೆಯಲ್ಲಿ ಅತಿ ಕಡಿಮೆ ಫೋನ್‌ಗಳಿಂದ ಹಿಡಿದು ದುಬಾರಿ ಹ್ಯಾಂಡ್‌ಸೆಟ್‌ಗಳವರೆಗೆ ದೊರೆಯುತ್ತಿದ್ದು ಹೆಚ್ಚು ದುಬಾರಿ ಫೋನ್‌ಗಳ ಆಕರ್ಷಕ ವಿನ್ಯಾಸಗಳು ನಿಜಕ್ಕೂ ನೋಡುಗರ ನೋಟವನ್ನು ತಣಿಸುವುದು ಖಂಡಿತ

ಅದಾಗ್ಯೂ ಈ ಫೋನ್‌ಗಳಲ್ಲಿ ಇಂತಹ ವಿಶೇಷತೆಗಳು ಏನಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನಿಮ್ಮದಾಗಿದೆ ಎಂದಾದಲ್ಲಿ ಆ ರಹಸ್ಯಗಳನ್ನು ನಾವಿಲ್ಲಿ ಬಿಚ್ಚಿಡಲು ಸಿದ್ಧರಾಗಿದ್ದೇವೆ. ಹಾಗಿದ್ದರೆ ಕೆಳಗಿನ ಸ್ಲೈಡರ್‌ಗಳಲ್ಲಿ ಈ ಹೆಚ್ಚು ಶ್ರೀಮಂತ ಫೋನ್‌ಗಳ ಕುರಿತಾದ ಮಾಹಿತಿಯನ್ನು ಪಡೆದುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವರ್ಚ್ಯು ಸಿಗ್ನೇಚರ್ ಡೈಮಂಡ್

ವರ್ಚ್ಯು ಸಿಗ್ನೇಚರ್ ಡೈಮಂಡ್

#1

ವರ್ಚ್ಯು ಬಿಡುಗಡೆ ಮಾಡಿರುವ ದುಬಾರಿ ಫೋನ್ ಇದಾಗಿದೆ. ವಿಶ್ವದ ಟಾಪ್ 10 ಮೊಬೈಲ್ ಫೋನ್‌ಗಳ ಪಟ್ಟಿಯಲ್ಲಿ ಈ ಫೋನ್ ಕೂಡ ಸೇರಿದೆ. ಪ್ಲಾಟಿನಮ್‌ನಿಂದ ತಯಾರಿಸಲಾದ ಈ ಫೋನ್ ಬರಿಯ ಕೈಗಳಿಂದಲೇ ನಿರ್ಮಿಸಲ್ಪಟ್ಟಿದೆ.

ಐಫೋನ್ ಪ್ರಿನ್ಸಸ್ ಪ್ಲಸ್

ಐಫೋನ್ ಪ್ರಿನ್ಸಸ್ ಪ್ಲಸ್

#2

ಇತರ ಆಪಲ್ ಐಫೋನ್ ಮೊಬೈಲ್‌ಗಿಂತಲೂ ಭಿನ್ನವಾಗಿರದ ಐಫೋನ್ ಪ್ರಿನ್ಸಸ್ ಪ್ಲಸ್ ವಿಶ್ವದಲ್ಲೇ ಅತಿ ದುಬಾರಿ ಫೋನ್‌ಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಳ್ಳುವಂತೆ ಮಾಡಿದೆ. ಖ್ಯಾತ ವಿನ್ಯಾಸಕಾರರಾದ ಆಸ್ಟ್ರಿಯಾ, ಪೀಟರ್ ಅಲೊಯ್‌ಸನ್ ಈ ಐಫೋನ್ ಅನ್ನು ಸಿದ್ಧಪಡಿಸಿದ್ದು, 138 ಪ್ರಿನ್ಸಸ್ ಕಟ್ ಮತ್ತು 180 ಬ್ರಿಲಿಯಂಟ್ ಕಟ್ ಡೈಮೆಂಡ್ಸ್ ಅನ್ನು ಇದು ಹೊಂದಿದೆ.

ಬ್ಲ್ಯಾಕ್ ಡೈಮಂಡ್ VIPN ಸ್ಮಾರ್ಟ್‌ಫೋನ್

ಬ್ಲ್ಯಾಕ್ ಡೈಮಂಡ್ VIPN ಸ್ಮಾರ್ಟ್‌ಫೋನ್

#3

ವಿಶ್ವದ ಶ್ರೀಮಂತ ಫೋನ್‌ಗಳ ಪಟ್ಟಿಯಲ್ಲಿ ಸೋನಿ ಎರಿಕ್‌ಸನ್‌ನ ಬ್ಲ್ಯಾಕ್ ಡೈಮಂಡ್ ಕೂಡ ಸ್ಥಾನ ಪಡೆದುಕೊಂಡಿದೆ. ಎರಡು ವಜ್ರಗಳನ್ನು ಬಳಸಿ ಇದನ್ನು ಅಲಂಕರಿಸಲಾಗಿದೆ. ನ್ಯಾವಿಗೇಶನ್ ಬಟನ್ ಮತ್ತು ಫೋನ್‌ನ ಹಿಂಭಾಗದಲ್ಲಿ ಇದನ್ನು ಕಾಣಬಹುದಾಗಿದೆ.

ವರ್ಚ್ಯು ಸಿಗ್ನೇಚರ್ ಕೋಬ್ರಾ

ವರ್ಚ್ಯು ಸಿಗ್ನೇಚರ್ ಕೋಬ್ರಾ

#4

ವಿಶ್ವದ ದುಬಾರಿ ಫೋನ್‌ಗಳ ಪಟ್ಟಿಯಲ್ಲಿ ಏಳನೇ ಸ್ಥಾನವನ್ನು ವರ್ಚ್ಯು ಸಿಗ್ನೇಚರ್ ಕೋಬ್ರಾ ಪಡೆದುಕೊಂಡಿದೆ. ಫ್ರೆಂಚ್ ಜ್ಯುವೆಲ್ಲರ್ ಬೌಶೆರನ್ ಈ ಫೋನ್ ಅನ್ನು ಸಿದ್ಧಪಡಿಸಿದ್ದು, ಪಿಯರ್ ಕಟ್ ಡೈಮಂಡ್ ಅನ್ನು ಇದರಲ್ಲಿ ಬಳಸಲಾಗಿದೆ.

ಗ್ರೇಸೊ ಲಕ್ಸರ್ ಲಾಸ್ ವೇಗಸ್ ಜಾಕ್‌ಪ್ಯಾಟ್

ಗ್ರೇಸೊ ಲಕ್ಸರ್ ಲಾಸ್ ವೇಗಸ್ ಜಾಕ್‌ಪ್ಯಾಟ್

#5

ಗ್ರೆಸೊ ಹೆಸರಿನ ಫೋನ್ ಅನ್ನು ಕರೆಯುವುದು ಗ್ರೇಸೊ ಲಕ್ಸರ್ ಲಾಸ್ ವೇಗಸ್ ಜಾಕ್‌ಪ್ಯಾಟ್ ಎಂಬ ಹೆಸರಿನಿಂದಾಗಿದೆ. 2005 ರಲ್ಲಿ ಈ ಫೋನ್ ಅನ್ನು ಸ್ವಿಡ್ಜರ್‌ಲ್ಯಾಂಡ್‌ನಲ್ಲಿ ಸ್ಥಾಪಿಸಲಾಯಿತು. 180 ಗ್ರಾಮ್‌ಗಳ ಚಿನ್ನದಿಂದ ಈ ಫೋನ್ ಅನ್ನು ತಯಾರಿಸಲಾಗಿದೆ.

ಡೈಮಂಡ್ ಕ್ರಿಪ್ಟೊ ಸ್ಮಾರ್ಟ್‌ಫೋನ್

ಡೈಮಂಡ್ ಕ್ರಿಪ್ಟೊ ಸ್ಮಾರ್ಟ್‌ಫೋನ್

#6

ವಿಂಡೋಸ್ ಸಿಇ ಆಧಾರಿತ ಈ ಸ್ಮಾರ್ಟ್ ಫೋನ್ ಪೀಟರ್ ಅಲಿಸನ್‌ನಿಂದ ವಿನ್ಯಾಸಗೊಳಿಸಲಾಗಿದೆ. 50 ವಜ್ರದ ಹರಳುಗಳನ್ನು ಈ ಫೋನ್‌ನಲ್ಲಿ ಬಳಸಲಾಗಿದೆ.

ಗೋಲ್ಡ್ ವಿಶ್ ಲಿ ಮಿಲನ್

ಗೋಲ್ಡ್ ವಿಶ್ ಲಿ ಮಿಲನ್

#7

ಇಮ್ಯಾನುವಲ್ ಗುಯೆಟ್ ಈ ಫೋನ್ ಅನ್ನು ವಿನ್ಯಾಸಪಡಿಸಿದ್ದು, ಸ್ವಿಡ್ಜರ್‌ಲ್ಯಾಂಡ್‌ನಲ್ಲಿ ಸ್ಥಾಪನೆಯಾಯಿತು. ವಿಶ್ವದ ಗಿನ್ನೇಸ್ ವರ್ಲ್ಡ್ ದಾಖಲೆಯನ್ನು ಈ ಫೋನ್ ಪಡೆದುಕೊಂಡಿದೆ.

ಐಫೋನ್ 3 ಜಿ ಕಿಂಗ್ಸ್ ಬಟನ್

ಐಫೋನ್ 3 ಜಿ ಕಿಂಗ್ಸ್ ಬಟನ್

#8

ವಿಶ್ವದ ಹೆಚ್ಚು ದುಬಾರಿ ಫೋನ್ ಆಗಿ ಖ್ಯಾತಿವೆತ್ತಿರುವ ಐಫೋನ್ 3 ಜಿ ಕಿಂಗ್ಸ್ ಬಟನ್, 138 ವಜ್ರಗಳನ್ನು ಇದರಲ್ಲಿ ಅಳವಡಿಸಲಾಗಿದೆ.

ಸುಪ್ರೀಮ್ ಗೋಲ್ಡ್ ಸ್ಟ್ರೈಕರ್ ಐಫೋನ್ 3ಜಿ 32 ಜಿಬಿ

ಸುಪ್ರೀಮ್ ಗೋಲ್ಡ್ ಸ್ಟ್ರೈಕರ್ ಐಫೋನ್ 3ಜಿ 32 ಜಿಬಿ

#9

ವಿಶ್ವದಲ್ಲೇ ಎರಡನೆಯ ಅತಿ ದೊಡ್ಡ ದುಬಾರಿ ಫೋನ್ ಆಗಿ ಸುಪ್ರೀಮ್ ಗೋಲ್ಡ್ ಸ್ಟ್ರೈಕರ್ ಐಫೋನ್ ಖ್ಯಾತಿವೆತ್ತಿದೆ. 271 ಗ್ರಾಮ್ಸ್ 22 ಕೆ ಸೋಲಿಡ್ ಚಿನ್ನದಿಂದ ಇದನ್ನು ತಯಾರಿಸಲಾಗಿದೆ.

ಡೈಮಂಡ್ ರೋಸ್ ಐಫೋನ್ 4 32 ಜಿಬಿ

ಡೈಮಂಡ್ ರೋಸ್ ಐಫೋನ್ 4 32 ಜಿಬಿ

#10

ವಿಶ್ವದ ಹೆಚ್ಚು ದುಬಾರಿ ಐಫೋನ್ 32 ಜಿಬಿ ಆವೃತ್ತಿಯ ಐಫೋನ್ 4 100 ಕ್ಯಾರೇಟ್ ಚಿನ್ನದಿಂದ ನಿರ್ಮಿಸಲಾಗಿದೆ. ಮುಂಭಾಗದ ನ್ಯಾವಿಗೇಶನ್ ಬಟನ್ ಪ್ಲಾಟಿನಮ್‌ನಿಂದ ತಯಾರಿಸಲಾಗಿದ್ದು 8 ಕ್ಯಾರೇಟ್ ಡೈಮೆಂಡ್ಸ್ ಅನ್ನು ಇದು ಒಳಗೊಂಡಿದೆ.

ಭೇಟಿ ನೀಡಿ

ಭೇಟಿ ನೀಡಿ

ಫೇಸ್‌ಬುಕ್ ಪುಟ

ನಮ್ಮ ಕನ್ನಡ.ಗಿಜ್‌ಬಾಟ್ ಪುಟಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
If you’re in the market for a phone that will do nearly everything, then you should expect to pay a lot of money. Here is a list of world’s top 10 most expensive mobile phones.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot