ಗೂಗಲ್ ಮ್ಯಾಪ್ಸ್‌ಗೆ 10 ಹೊಸ ಫೀಚರ್ಸ್ ಬಿಡುಗಡೆ: ನೋಡಿ ಶಾಕ್ ಆಗ್ತೀರಾ!
ಟೆಕ್ ದೈತ್ಯ ಗೂಗಲ್ ತನ್ನ ಗುರುವಾರದಂದು ತನ್ನ ಜನಪ್ರಿಯ ನ್ಯಾವಿಗೇಶನ್ ಆ್ಯಪ್ ಗೂಗಲ್ ಮ್ಯಾಪ್ಸ್‌ಗೆ ಭಾರತದಲ್ಲಿ 10 ಹೊಸ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಿದೆ. ಈ ಹೊಸ ಅಪ್‌ಡೇಟ್‌ಗಳು ಭಾರತೀಯ ಪ್ರಯಾಣಿಕರಿಗೆ ಹೆಚ್ಚು ಸ್ಮಾರ್ಟ್, ಸುರಕ್ಷಿತ ಮತ್ತು ಅತ್ಯುತ್ತಮ ಪ್ರಯಾಣ ಅನುಭವ ನೀಡುವ ಗುರಿಯನ್ನು ಹೊಂದಿದ್ದು, ಈ ವೈಶಿಷ್ಟ್ಯಗಳಲ್ಲಿ ಕೆಲವು ಭಾರತಕ್ಕೆ ಮಾತ್ರ ಮೀಸಲಾಗಿದ್ದರೆ, ಕೆಲವು ಅಮೆರಿಕಾದ ನಂತರ ಮೊದಲ ಬಾರಿಗೆ ವಿಸ್ತರಿಸಲ್ಪಟ್ಟಿವೆ. ಹಾಗಾದರೆ, ಗೂಗಲ್ ಮ್ಯಾಪ್ಸ್‌ಗೆ ಅಪ್‌ಡೇಟ್ ಆಗಿರುವ 10 ಹೊಸ ವೈಶಿಷ್ಟ್ಯಗಳು ಯಾವುವು?, ಉಪಯೋಗಗಳೇನು ಎಂಬುದನ್ನು ನೋಡೋಣ ಬನ್ನಿ
1. ಹ್ಯಾಂಡ್ಸ್-ಫ್ರೀ ಸಂಭಾಷಣಾತ್ಮಕ ಡ್ರೈವಿಂಗ್ (Gemini AI Integration)
ಗೂಗಲ್ ಮ್ಯಾಪ್ಸ್‌ಇದೀಗ ಹ್ಯಾಂಡ್ಸ್-ಫ್ರೀ ಸಂಭಾಷಣಾತ್ಮಕ ಡ್ರೈವಿಂಗ್ ಅನುಭವವನ್ನು ಒದಗಿಸಲಿದೆ. ಈ ಫೀಚರ್ ಚಾಲಕರಿಗೆ ಯಾವುದೇ ಬಟನ್ ಒತ್ತದೇ, ಕೇವಲ ಮಾತಿನ ಮೂಲಕ ಮ್ಯಾಪ್ಸ್‌ನಿಂದ ಸಹಾಯ ಪಡೆಯಲು ಅನುಮತಿಸುತ್ತದೆ. ಉದಾಹರಣೆಗೆ - "ನನ್ನ ಮಾರ್ಗದಲ್ಲಿ ಉತ್ತಮ ನಾನ್‌ವೆಜ್ ಆಹಾರ ದೊರೆಯಯು ಹೋಟೆಲ್ ಇದೆಯಾ?" ಅಥವಾ "ಅಲ್ಲಿ ಪಾರ್ಕಿಂಗ್ ಸೌಲಭ್ಯವಿದೆಯಾ?" ಎಂದು ಕೇಳಿದರೆ, Gemini ತಕ್ಷಣ ಉತ್ತರ ನೀಡುತ್ತದೆ. ಕ್ಯಾಲೆಂಡರ್ ಈವೆಂಟ್ ಸೇರಿಸುವುದಕ್ಕೂ ಸಹ ಸಹಾಯ ಮಾಡುತ್ತದೆ.
2. ಪ್ರೊ ಆಕ್ಟಿವ್ ಲೋಕಲ್ ಟಿಪ್ಸ್ (Proactive Local Tips)
ಈ ಹೊಸ ವೈಶಿಷ್ಟ್ಯವು ಪ್ರಯಾಣದ ಮಾರ್ಗದಲ್ಲಿನ ಆಸಕ್ತಿದಾಯಕ ಸ್ಥಳಗಳು, ವ್ಯಾಪಾರಗಳು ಮತ್ತು ಪ್ರವಾಸಿ ಸ್ಥಳಗಳ ಬಗ್ಗೆ ಸಲಹೆ ನೀಡುತ್ತದೆ. ಇದು ಹಿಂದಿನ 'Inspirations' ಫೀಚರ್‌ನ ಸುಧಾರಿತ ಆವೃತ್ತಿಯಾಗಿದೆ.
3. ಸ್ಥಳಗಳ ಬಗ್ಗೆ ನೇರ ಪ್ರಶ್ನೆ (Ask About Places)
ಗೂಗಲ್ ಮ್ಯಾಪ್ಸ್‌ನಲ್ಲಿ ಈಗ ನೀವು ಸ್ಥಳಗಳ ಬಗ್ಗೆ ನೇರವಾಗಿ ಕೇಳಬಹುದು. ಆ ಸ್ಥಳಗಳ ರಿವ್ಯೂಗಳು, ಫೋಟೋಗಳು ಮತ್ತು ಡೇಟಾ ಆಧಾರಿತ ಉತ್ತರಗಳನ್ನು ತಕ್ಷಣ ಪಡೆಯಬಹುದು. ಇದಕ್ಕಾಗಿ ಈಗ ಬೇರೆ ಆ್ಯಪ್ ತೆರೆಯುವ ಅಗತ್ಯವಿಲ್ಲ.
4. ಟ್ರಾಫಿಕ್ ಅಲರ್ಟ್‌ಗಳು (Proactive Traffic Alerts)
ಈ ಹೊಸ ಫೀಚರ್ ಟ್ರಾಫಿಕ್ ಸೂಚನೆಗಳು, ರಸ್ತೆ ಬಂದ್‌ಗಳು ಮತ್ತು ಟ್ರಾಫಿಕ್ ಜಾಮ್‌ಗಳ ಬಗ್ಗೆ ಮುಂಚಿತ ಎಚ್ಚರಿಕೆ ನೀಡುತ್ತವೆ. ಮೊದಲ ಹಂತದಲ್ಲಿ ಇದು ಬೆಂಗಳೂರು, ದೆಹಲಿ ಮತ್ತು ಮುಂಬೈ ನಗರಗಳಲ್ಲಿ ಲಭ್ಯವಾಗಲಿದೆ.
5. ಅಪಘಾತ ಪ್ರದೇಶ ಎಚ್ಚರಿಕೆಗಳು (Accident-Prone Area Alerts)
ಈ ಹೊಸ ಪೀಚರ್ ಸರ್ಕಾರದ ಡೇಟಾ ಆಧರಿಸಿ ಅಪಘಾತ ಹೆಚ್ಚು ಸಂಭವಿಸುವ ಪ್ರದೇಶಗಳಲ್ಲಿ ಪ್ರಯಾಣಿಸುತ್ತಿದ್ದರೆ, ಮ್ಯಾಪ್ಸ್ ತಕ್ಷಣ ಎಚ್ಚರಿಕೆ ನೀಡುತ್ತದೆ. ಈ ಹೊಸ ವೈಶಿಷ್ಟ್ಯವು ಮೊದಲ ಹಂತದಲ್ಲಿ ಗುರುಗ್ರಾಮ್, ಹೈದರಾಬಾದ್, ಚಂಡೀಗಢ ಮತ್ತು ಫರಿದಾಬಾದ್ ನಗರಗಳಲ್ಲಿ ಲಭ್ಯವಾಗಲಿದೆ.
6. ಅಧಿಕೃತ ವೇಗ ಮಿತಿ ಮಾಹಿತಿ (Authoritative Speed Limits)
ಈ ಹೊಸ ಫೀಚರ್‌ನಲ್ಲಿ ನೀವು ಪ್ರಯಾಣಿಸುತ್ತಿರುವ ರಸ್ತೆಯ ನಿಜವಾದ ಸರ್ಕಾರಿ ಸ್ಪೀಡ್ ಲಿಮಿಟ್ ನೇರವಾಗಿ ಮ್ಯಾಪ್‌ನ ವೇಗಮಾಪಕದ ಪಕ್ಕದಲ್ಲಿ ಕಾಣಬಹುದು. ಪ್ರಾರಂಭದಲ್ಲಿ ಇದು ನೊಯ್ಡಾ, ಗುರುಗ್ರಾಮ್, ಜೈಪುರ್, ಲಖನೌ, ಮುಂಬೈ, ಕೋಲ್ಕತ್ತಾ, ಹೈದರಾಬಾದ್ ಸೇರಿದಂತೆ 9 ನಗರಗಳಲ್ಲಿ ಲಭ್ಯವಿರಲಿದೆ.

7. ಎನ್‌ಎಚ್‌ಎಐ ಸಹಯೋಗದ ರಿಯಲ್-ಟೈಮ್ ರಸ್ತೆ ಮಾಹಿತಿ (NHAI)
ಗೂಗಲ್ ಮ್ಯಾಪ್ಸ್ ಈಗ NHAI (ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ) ಜೊತೆಗೂಡಿ, ರಸ್ತೆ ಮುಚ್ಚುವಿಕೆ ಮತ್ತು ದುರಸ್ತಿ ಕಾರ್ಯಗಳ ನವೀಕೃತ ಮಾಹಿತಿಯನ್ನು ನೇರವಾಗಿ ತೋರಿಸುತ್ತದೆ. ಇದರಿಂದ ನಿಮ್ಮ ಪ್ರಯಾಣ ಯೋಜನೆಯು ಹೆಚ್ಚು ಸುಲಭವಾಗುತ್ತದೆ.
8. ಮೆಟ್ರೋ ಟಿಕೆಟ್ ಬುಕ್ಕಿಂಗ್ (Metro Ticket Booking)
ಹೌದು. ನಿಜ! ಈ ಹೊಸ ವೈಶಿಷ್ಟ್ಯದಿಂದ ಮ್ಯಾಪ್ಸ್‌ನಲ್ಲಿಯೇ ಮೆಟ್ರೋ ಟಿಕೆಟ್‌ಗಳನ್ನು ಖರೀದಿಸಲು ಸಾಧ್ಯ.ಈಗಾಗಲೇ ದೆಹಲಿ, ಬೆಂಗಳೂರು, ಕೊಚ್ಚಿ ಮತ್ತು ಚೆನ್ನೈ ನಗರಗಳಲ್ಲಿ ಲಭ್ಯವಿದ್ದು, ಶೀಘ್ರದಲ್ಲೇ ಮುಂಬೈಯಲ್ಲೂ ಪ್ರಾರಂಭವಾಗಲಿದೆ. ನೀವು ಖರೀದಿಸಿದ ಟಿಕೆಟ್‌ಗಳನ್ನು Google Wallet ನಲ್ಲಿ ಉಳಿಸಬಹುದು.
9. ಫ್ಲೈಓವರ್ ಧ್ವನಿ ಮಾರ್ಗದರ್ಶನ (Flyover Voice Navigation)
ಗೂಗಲ್ ಇತ್ತೀಚೆಗೆ ಸೇರಿಸಿದ ಫ್ಲೈಓವರ್ ನ್ಯಾವಿಗೇಶನ್‌ಗೆ ಈಗ ಧ್ವನಿ ಸಹಾಯ ಕೂಡ ಬಂದಿದೆ. ಗೂಗಲ್ ಮ್ಯಾಪ್ಸ್ ಈಗ ಯಾವ ಫ್ಲೈಓವರ್ ಏರಬೇಕು ಅಥವಾ ಇಳಿಯಬೇಕು ಎಂಬುದನ್ನು ಧ್ವನಿಯ ಮೂಲಕ ಹೇಳುತ್ತದೆ. ಈ ಫೀಚರ್ 9 ಭಾರತೀಯ ಭಾಷೆಗಳಲ್ಲಿ ಲಭ್ಯವಾಗಲಿದೆ.
10. ಕಸ್ಟಮ್ ಟೂ-ವೀಲರ್ ಅವತಾರ್ ಆಯ್ಕೆಗಳು (Custom Two-Wheeler Avatars)
ಭಾರತಕ್ಕೆ ವಿಶೇಷವಾಗಿ ವಿನ್ಯಾಸಗೊಳಿಸಿದ ಈ ವೈಶಿಷ್ಟ್ಯದಲ್ಲಿ, ಬೈಕ್ ಸವಾರರು ತಮ್ಮ ಐಕಾನ್‌ಗಳನ್ನು ವಿವಿಧ ಬಣ್ಣ ಮತ್ತು ವಿನ್ಯಾಸಗಳಲ್ಲಿ ಕಸ್ಟಮೈಸ್ ಮಾಡಿಕೊಳ್ಳಬಹುದು.
ಗೂಗಲ್ ಮ್ಯಾಪ್ಸ್ ಪರಿಚಯಿಸಿರುವ ಈ ಮೇಲಿನ ಎಲ್ಲಾ 10 ಹೊಸ ಫೀಚರ್‌ಗಳು ಭಾರತೀಯ ಪ್ರಯಾಣಿಕರಿಗೆ ಸ್ಮಾರ್ಟ್, ಸ್ಥಳೀಯ ಮತ್ತು ಸುರಕ್ಷಿತ ನ್ಯಾವಿಗೇಶನ್ ಅನುಭವ ನೀಡಲು ವಿನ್ಯಾಸಗೊಂಡಿವೆ. ದೇಶದ ಪ್ರಯಾಣಿಕರು ಈಗ ಇನ್ನಷ್ಟು ಸುಲಭವಾಗಿ ಪ್ರಯಾಣವನ್ನು ಮುಂದುವರೆಸಬಹುದು. Gemini AI ಸಂಯೋಜನೆಯೊಂದಿಗೆ, ಮ್ಯಾಪ್ಸ್ ಈಗ ಕೇವಲ ನ್ಯಾವಿಗೇಶನ್ ಆ್ಯಪ್ ಅಲ್ಲದೆ ನಿಜವಾದ ಡಿಜಿಟಲ್ ಡ್ರೈವಿಂಗ್ ಅಸಿಸ್ಟೆಂಟ್ ಆಗಿ ಕೆಲಸ ಮಾಡಲಿದೆ. ಮುಂದಿನ ವಾರಗಳಲ್ಲಿ ಈ ವೈಶಿಷ್ಟ್ಯಗಳು ಕ್ರಮವಾಗಿ ಎಲ್ಲಾ Android ಮತ್ತು iOS ಬಳಕೆದಾರರಿಗೆ ಲಭ್ಯವಾಗಲಿವೆ.
ಈ ಹೊಸ ವೈಶಿಷ್ಟ್ಯಗಳ ಕುರಿತಂತೆ ನಿಮ್ ಅನಿಸಿಕೆಗಳೇನು? ಈ ವೈಶಿಷ್ಟ್ಯಗಳಲ್ಲಿ ನಿಮ್ಮನ್ನು ಆಕರ್ಷಿಸಿದ ಪ್ರಮುಖ ವೈಶಿಷ್ಟ್ಯವು ಯಾವುದು ಎಂದು ಕಾಮೆಂಟ್ ಮಾಡಿ ತಿಳಿಸಿ. ನನಗೆ ಅನಿಸಿದಂತೆ, ಈ ಎಲ್ಲಾ ವೈಶಿಷ್ಟ್ಯಗಳಲ್ಲಿ ಅತಿ ದೊಡ್ಡ ಬದಲಾವಣೆ ಎಂದರೆ Gemini AI ಸಹಾಯದಿಂದ ದೊರೆಯುತ್ತಿರುವ "ಹ್ಯಾಂಡ್ಸ್-ಫ್ರೀ" ಡ್ರೈವಿಂಗ್ ಅನುಭವ. ಈ ಮೂಲಕ, ಚಾಲಕರು ಮಾತನಾಡುವ ಮೂಲಕಲೇ ಸ್ಥಳ ಹುಡುಕಬಹುದು, ಟ್ರಾಫಿಕ್ ಮಾಹಿತಿ ಪಡೆಯಬಹುದು ಅಥವಾ ಸ್ನೇಹಿತರೊಂದಿಗೆ ತಮ್ಮ ಆಗಮನದ ನಿರೀಕ್ಷಿತ ಸಮಯ ಹಂಚಿಕೊಳ್ಳಬಹುದು.


Click it and Unblock the Notifications








