ಭಾರತದಲ್ಲಿ 6,999ರೂ.ಗೆ ರಿಲೀಸ್ ಆಯ್ತು '10.or D2' ಸ್ಮಾರ್ಟ್‌ಪೋನ್!!
ಕಳೆದ ವರ್ಷ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿದ್ದ ಅಮೆಜಾನ್ ಬ್ರ್ಯಾಂಡ್ ಸ್ಮಾರ್ಟ್‌ಪೋನ್ ಸರಣಿಯ ಮತ್ತೊಂದು ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಗೆ ಇಂದು ಬಿಡುಗಡೆಯಾಗಿದೆ. ಕಳೆದ ಸಪ್ಟೆಂಬರ್‌ನಲ್ಲಷ್ಟೆ ಭಾರತಕ್ಕೆ ಕಾಲಿಟ್ಟಿದ್ದ ಅಮೆಜಾನ್ ಬ್ರ್ಯಾಂಡ್‌ನ ನಾಲ್ಕನೇ ಸ್ಮಾರ್ಟ್‌ಫೋನ್ 10.or D2 ಹೆಸರಿನಲ್ಲಿ ಇಂದು ಮಾರುಕಟ್ಟೆಗೆ ಎಂಟ್ರಿ ನೀಡಿದೆ.
ಅಮೆಜಾನ್ ಬ್ರ್ಯಾಂಡ್‌ನ 10.or G, 10.or E ಮತ್ತು 10.or D ಸ್ಮಾರ್ಟ್‌ಫೋನ್‌ಗಳ ನಂತರ 10.or D2 ಹೆಸರಿನ ಸ್ಮಾರ್ಟ್‌ಪೋನ್ ಎರಡು ವೆರಿಯಂಟ್‌ಗಳಲ್ಲಿ ಬಿಡುಗಡೆಗೊಂಡಿದೆ. ಭಾರತದ ಮಧ್ಯಮ ವರ್ಗದವರಿಗೆ ಹೇಳಿ ಮಾಡಿಸಿದಂತೆ ತಯಾರಾಗಿರುವ 10.or D2 ಸ್ಮಾರ್ಟ್‌ಫೋನ್ ಬೆಲೆ 6,999 ಮತ್ತು 7,999 ರೂ.ಗಳಾಗಿರುವುದು ಮೊಬೈಲ್ ಪ್ರಿಯರಿಗೆ ಸಂತಸ ತಂದಿದೆ.

5.45 ಇಂಚಿನ ಡಿಸ್‌ಪ್ಲೇ, ಸ್ನ್ಯಾಪ್‌ಡ್ರಾಗನ್ 425 ಎಸ್‌ಒಸಿ ಪ್ರೊಸೆಸರ್ ಮತ್ತು 13 ಮೆಗಾಪಿಕ್ಸೆಲ್ ಸಾಮರ್ಥ್ಯದ ರಿಯರ್ ಕ್ಯಾಮೆರಾವನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಇದೇ ಆಗಸ್ಟ್ 27 ರಿಂದ ಮಾರಟಕ್ಕೆ ಬರುತ್ತಿದೆ, ಹಾಗಾದರೆ, ಅಮೆಜಾನ್ ಬ್ರ್ಯಾಂಡ್‌ನ ಬಜೆಟ್ ಸ್ಮಾರ್ಟ್‌ಫೋನ್ 10.or D2 ಹೊಂದಿರುವ ಫೀಚರ್ಸ್ ಮತ್ತು ಆಫರ್ಸ್ ಅನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

10.or D2 ಡಿಸ್‌ಪ್ಲೇ ಮತ್ತು ವಿನ್ಯಾಸ!
ಮೊದಲೇ ಹೇಳಿದಂತೆ 10.or D2 ಸ್ಮಾರ್ಟ್‌ಫೋನ್ 5.45 ಇಂಚಿನ ಡಿಸ್‌ಪ್ಲೇ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. 720x1440 ಪಿಕ್ಸೆಲ್ ಸಾಮರ್ಥ್ಯದ ಎಲ್‌ಟಿಪಿಎಸ್ ಡಿಸ್‌ಪ್ಲೇ 18:9 ಅನುಪಾತದಲ್ಲಿದೆ. ಹಿಂಬಾಗದಲ್ಲಿ ಕ್ಯಾಮೆರಾ ಹಾಗೂ ಫ್ಲಾಶ್‌ಲೈಟ್ ಅನ್ನು ಹೊಂದಿರುವ ಸ್ಮಾರ್ಟ್‌ಪೋನ್ IPX2 ನೀರು ರಕ್ಷಣೆ ರೇಟಿಂಗ್ ಅನ್ನು ಹೊಂದಿರುವುದು ವಿಶೇಷತೆಯಾಗಿದೆ.

ಪ್ರೊಸೆಸರ್ ಮತ್ತು RAM!
10.or D2 ಸ್ಮಾರ್ಟ್‌ಫೋನಿನಲ್ಲಿ ಸ್ನ್ಯಾಪ್‌ಡ್ರಾಗನ್ 425 ಎಸ್‌ಒಸಿ ಪ್ರೊಸೆಸರ್ ಅನ್ನು ನೀಡಲಾಗಿದೆ. ಆದರೆ, RAM ವಿಷಯದಲ್ಲಿ ಹಿಂದುಳಿದಿರುವ ಪೋನ್ ಈಗಲೂ 2GB of RAM/ 16GB ಮತ್ತು 3GB RAM/ 32GB ವೆರಿಯಂಟ್‌ಗಳಲ್ಲಿ ಮಾರುಕಟ್ಟೆಗೆ ಕಾಲಿಟ್ಟಿದೆ.ಇನ್ನು ಎಸ್‌ಡಿ ಕಾರ್ಡ್ ಮೂಲಕ ಮೆಮೊರಿಯನ್ನು 128GB ವರೆಗೂ ಹೆಚ್ಚಿಸಿಕೊಳ್ಳಬಹುದಾದ ಆಯ್ಕೆ ಲಭ್ಯವಿದೆ.

ಕ್ಯಾಮೆರಾ ಸಾಮರ್ಥ್ಯ?
ಎಫ್/2.0 ಅಪಾರ್ಚರ್ ನೊಂದಿಗೆ 13-ಮೆಗಾಪಿಕ್ಸೆಲ್ ಸೋನಿ IMX258 ರಿಯರ್ ಕ್ಯಾಮೆರಾವನ್ನು 10.or D2 ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಲಾಗಿದೆ. ಬೆಳಕಿನ ವರ್ಧನೆ, ಪನಾರೊಮಾ ವೈಶಿಷ್ಟ್ಯಗಳ ಕ್ಯಾಮೆರಾ ತಂತ್ರಜ್ಞಾನವಿದೆ. ಇನ್ನು ಮುಂಭಾಗದಲ್ಲಿ, f/2.0 ಅಪಾರ್ಚರ್ ನೊಂದಿಗೆ 5-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಇದೆ. ಇದು ಸೆಲ್ಫಿ ಕೌಂಟ್ಡೌನ್, ಬ್ಯೂಟಿಟಿಫೈ, ಮತ್ತು ಫೇಸ್ ಡಿಟೆಕ್ಷನ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಇತರೆ ಏನೆಲ್ಲಾ ಫೀಚರ್ಸ್?
10.or D2 ಸ್ಮಾರ್ಟ್‌ಫೋನ್ 3200mAh ಶಕ್ತಿಯ ಬ್ಯಾಟರಿಯನ್ನು ಹೊಂದಿದ್ದು, 19 ಗಂಟೆಗಳ ಟಾಕ್ ಟೈಮ್, 8 ಗಂಟೆಗಳ 4G ಇಂಟರ್ನೆಟ್ ಮತ್ತು 10 ಗಂಟೆಗಳ Wi-Fi ಬಳಕೆ ಸಾಮರ್ಥ್ಯವನ್ನು ಹೊಂದಿದೆ. ಇನ್ನುಳಿದಂತೆ 4 ಜಿ ವೋಲ್ಟ್, ವೈ-ಫೈ 802.11 ಬೌ / ಗ್ರಾಂ / ಎನ್, ಜಿಪಿಎಸ್ / ಎಜಿಪಿಎಸ್, ಗ್ಲೋನಾಸ್ ಮತ್ತು ಬ್ಲೂಟೂತ್ 4.2 ಫೀಚರ್ಸ್‌ಗಳು ಫೋನಿನಲ್ಲಿ ಲಭ್ಯವಿವೆ.

ಬೆಲೆ ಮತ್ತು ಲಭ್ಯತೆ?
2GB of RAM/ 16GB ಮತ್ತು 3GB RAM/ 32GB ವೆರಿಯಂಟ್‌ಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ನಿಡಿರುವ 10.or D2 ಸ್ಮಾರ್ಟ್‌ಫೋನ್ ಬೆಲೆ ಕ್ರಮವಾಗಿ 6,999 ಮತ್ತು 7,999 ರೂಪಾಯಿಗಳಾಗಿವೆ. ಆಗಸ್ಟ್ 27 ರಿಂದ ಖರೀದಿಸಲು ಲಭ್ಯವಿರುವ ಈ ಸ್ಮಾರ್ಟ್‌ಪೋನ್ ಮೇಲೆ ಜಿಯೋ 2200 ರೂಪಾಯಿಗಳ ಕ್ಯಾಶ್‌ಬ್ಯಾಕ್ ಅನ್ನು ನೀಡಿದೆ.


Click it and Unblock the Notifications








