TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಇದು ಸತ್ಯ: ಫೇಸ್‌ಬುಕ್‌ನಿಂದಲೇ ನಡೆದ ಹತ್ತು ಕೊಲೆಗಳು
ಸಾಮಾಜಿಕ ಮಾಧ್ಯಮದಲ್ಲಿ ನಾವು ಹೆಚ್ಚಿನ ಸಮಯ ಕಳೆಯುತ್ತೇವೆ. ಮನರಂಜನಾ ಮೂಲವಾಗಿರುವ ಈ ಮಾಧ್ಯಮ ಬಹಳಷ್ಟು ವಿವರಗಳನ್ನು ನಮಗೆ ತಿಳಿಸುವಲ್ಲಿ ಎತ್ತಿದ ಕೈ ಎಂದೆನಿಸಿದೆ. ಆದರೆ ಇದೇ ಮಾಧ್ಯಮವನ್ನು ಪ್ರಾಣವನ್ನೇ ತೆಗೆಯು ಆಯುಧವನ್ನಾಗಿರಿಸಿರುವ ನಿರ್ಶನಗಳು ಇಲ್ಲದಿಲ್ಲ ಅದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ.
ಸಾಮಾಜಿಕ ಮಾಧ್ಯಮದಿಂದ ಉಂಟಾಗಿರುವ ಹತ್ತು ಸಾವುಗಳನ್ನೇ ಇಂದು ತಿಳಿಸಲಿದ್ದು ಇದು ಎಷ್ಟು ಭಯಾನಕವಾಗಿದೆ ಎಂಬುದನ್ನು ನೀವೇ ಅರಿತುಕೊಳ್ಳಿ.
#1
ಜನರನ್ನು ಕೊಲ್ಲುವುದು ಮತ್ತು ತುಂಡರಿಸುವುದು ಎಂಬುದಾಗಿ ತನ್ನ ಫೇಸ್‌ಬುಕ್ ಪ್ರೊಫೈಲ್ ಅಡಿಯಲ್ಲಿ ಬರೆದುಕೊಂಡಿದ್ದಾಳೆ. ಆದರೆ ಈ ಹುಡುಗಿ ಬೇರೆಯವರ ಗಮನ ಸೆಳೆಯಲು ಹೀಗೆ ಬರೆಯದೇ ನಿಜವಾಗಿಯೂ ಜನರನ್ನು ಕೊಲ್ಲುತ್ತಿದ್ದಳು ಎನ್ನಲಾಗಿದೆ.
#2
ಹದಿಹರೆಯದ ತಂಡವೊಂದು ಫೇಸ್‌ಬುಕ್ ಚಾಟ್‌ನಲ್ಲಿ ಹತ್ಯೆಯ ಸಂಚನ್ನು ರೂಪಿಸಿದ್ದರು. ಇವರು ಚಾಟ್‌ನಲ್ಲಿ ಕೊಲೆಯ ಯೋಜನೆಯನ್ನು ಸಿದ್ಧಪಡಿಸಿಕೊಂಡು ಅಂತೆಯೇ ಜನರನ್ನು ಕೊಲೆ ಮಾಡುತ್ತಿದ್ದರು.
#3
ಒಬ್ಬ ಮಹಿಳೆಗಾಗಿ ಇಬ್ಬರೂ ಟ್ವೀಟರ್‌ನಲ್ಲೇ ಜಗಳವಾಡಿ ಅದರಲ್ಲೊಬ್ಬ ಸ್ನೇಹಿತನನ್ನೇ ಕೊಂದು ಆ ಮಹಿಳೆಯ ಗಮನ ಸೆಳೆಯಲು ಅದನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾನೆ.
#4
ಇದೊಂದು ಹಾಟ್ ಸೋಶಿಯಲ್ ಮೀಡಿಯಾ ಆಗಿದ್ದು ಗೆಳತಿಯ ಹಳೆಯ ಗೆಳೆಯನೊಡನೆ ಹೊರಹೋಗಿ ಅವರಿಬ್ಬರ ಫೋಟೋಗಳನ್ನು ಮೈಸ್ಪೇಸ್‌ನಲ್ಲಿ ಪೋಸ್ಟ್ ಮಾಡುತ್ತಿದ್ದಳು. ಇದು ಗೆಳತಿಯ ಕೊಲೆ ಮಾಡಲೇ ಆಕೆಯನ್ನು ಪ್ರೇರೇಪಿಸಿತು.
#5
ಫೇಸ್‌ಬುಕ್‌ನಲ್ಲೇ ಜಗಳವಾಡಿ ನಿಜಜೀವನದಲ್ಲೂ ಈ ಜಗಳವನ್ನು ನಡೆಸುವ ತೀರ್ಮಾನಕ್ಕೆ ಇವರಿಬ್ಬರೂ ಬಂದರು. ಇದು ಕಾರು ಚೇಸ್‌ವರೆಗೆ ಹೋಗಿ ಮರಣಕ್ಕೆ ಕಾರಣವಾಯಿತು.
#6
ಈತ ತಾನು ಮಾಡಿದ ಕೊಲೆ ಮತ್ತು ರೇಪ್‌ಗಳನ್ನು ಮೈಸ್ಪೇಸ್‌ನಲ್ಲಿ ಅಪ್‌ಡೇಟ್ ಮಾಡುತ್ತಿದ್ದ ಅಂದರೆ ಈತನ ಭಂಡ ಧೈರ್ಯ ನೋಡಿ. ಇಂತಹ ಕೆಲಸಗಳಿಗೂ ಸಾಂಆಜಿಕ ಮಾಧ್ಯಮವನ್ನು ಬಳಸಿ ಅದನ್ನು ನಾಶ ಮಾಡುವ ಹಂತದಲ್ಲಿ ಈ ಕಿಡಿಗೇಡಿಗಳು ಇದ್ದಾರೆ.
#7
ತನ್ನ ತಂದೆ ಮೈಸ್ಪೇಸ್ ಅನ್ನು ತೆರೆಯಲು ಬಿಡಲಿಲ್ಲ ಎಂಬ ಕಾರಣಕ್ಕೆ ಹಗ್‌ಸ್ಟನ್ ಶಿಕರ್ ತನ್ನ ತಂದೆಯನ್ನೇ ಇರಿದ. ಈಗ 20 ವರ್ಷದ ಜೈಲುಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ.
#8
ಸಾರಾ ರಿಚರ್ಡ್‌ಸನ್ ತನ್ನ ಗಂಡನಿಂದ ದೂರಾಗಲು ತೀರ್ಮಾನಿಸಿ ಫೇಸ್‌ಬುಕ್‌ನಲ್ಲಿ ಸಿಂಗಲ್ ಎಂಬುದಾಗಿ ಸ್ಟೇಟಸ್ ಅನ್ನು ಬದಲಾಯಿಸಿದ್ದಳು. ಆದರೆ ಇದನ್ನು ನೋಡಿದ ಆಕೆಯ ಗಂಡ ಆಕೆಯ ಜೀವವನ್ನೇ ತೆಗೆದುಬಿಟ್ಟ
#9
ಸ್ಕಾಟ್ ಹಮ್ರಿಯ ಗೆಳತಿಯನ್ನು ರಿಚರ್ಡ್ ರೊವೊಟ್ಟೊ ಪೋಕ್ ಮಾಡಿದ ಇದರಿಂದ ಕುಪಿತಗೊಂಡ ಹಮ್ರಿ ರಿಚರ್ಡ್ ಅನ್ನು ಹೊಡೆದಿದ್ದು ಇದರಿಂದ ಆತ ಮರಣವನ್ನಪ್ಪಿದ್ದಾನೆ. ಫೇಸ್‌ಬುಕ್ ಪೋಕ್ ರಿಚರ್ಡ್ ಸಾವಿಗೆ ಕಾರಣವಾಯಿತು.
#10
ತನ್ನ ಹೆಂಡತಿ ಮಗುವನ್ನು ನೋಡಿಕೊಳ್ಳಲು ಹಣವನ್ನು ಆಗಾಗ್ಗೆ ಫೇಸ್‌ಬುಕ್‌ನಲ್ಲಿ ಕೇಳುತ್ತಿದ್ದಳು ಎಂಬ ಕಾರಣಕ್ಕೆ ಆಡಮ್ ತನ್ನ ಹೆಂಡತಿಯನ್ನು ಹ್ಯಾಮರ್‌ನಿಂದ ಬಡಿದು ಕೊಂದಿದ್ದಾನೆ.