Subscribe to Gizbot

ಆಂಡ್ರಾಯ್ಡ್‌ಗಿಂತ ವಿಂಡೋಸ್ ಫೋನ್ ಉತ್ತಮ ಏಕೆ?

Posted By:

ಮಾರುಕಟ್ಟೆಯಲ್ಲಿ ತನ್ನ ಅಧಿಪತ್ಯವನ್ನು ಸ್ಥಾಪಿಸುತ್ತಿರುವ ಆಂಡ್ರಾಯ್ಡ್ ಫೋನ್‌ಗೆ ಭರ್ಜರಿ ಪೈಪೋಟಿಯನ್ನು ವಿಂಡೋಸ್ ಫೋನ್‌ಗಳು ಇದೀಗ ನೀಡುತ್ತಿದೆ. ವಿಂಡೋಸ್ ಫೋನ್‌ಗಳು ಹೇಗೆ ವೇಗವಾಗಿ ಕೆಲಸಮಾಡುತ್ತದೆ ಮತ್ತು ಆಂಡ್ರಾಯ್ಡ್‌ಗೆ ಹೇಗೆ ಪೈಪೋಟಿಯನ್ನು ನೀಡುತ್ತದೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಿದುಕೊಳ್ಳೋಣ.

ಇದನ್ನೂ ಓದಿ: ಎಚ್‌ಟಿಸಿ ಫೋನ್‌ಗಳ ಧಮಾಕಾಧಾರ್ ಆಫರ್‌ಗಳು

ವಿಂಡೋಸ್ ಫೋನ್‌ನ ಟಾಪ್ 10 ವಿಶೇಷತೆಗಳು

ಆಂಡ್ರಾಯ್ಡ್ ಫೋನ್‌ಗಿಂತಲೂ ವಿಂಡೋಸ್ ಫೋನ್‌ಗಳು ಹೇಗೆ ಅದ್ಭುತ ಪರಿಣಾಮಕಾರಿ ಎಂಬುದನ್ನು ಇಂದಿನ ಲೇಖನದಲ್ಲಿ ಅರಿತುಕೊಳ್ಳೋಣ.

ವಿಂಡೋಸ್ ಫೋನ್‌ನ ಟಾಪ್ 10 ವಿಶೇಷತೆಗಳು

ಗುಣಮಟ್ಟ
ವಿಂಡೋಸ್ ಫೋನ್‌ಗಳು ನೋಕಿಯಾದ ಪಾಲುದಾರಿಕೆ ಅಡಿಯಲ್ಲಿ ಗರಿಗೆದರಿದಂತಹವು. ಈ ಫೋನ್‌ಗಳ ಪರದೆ "4'' ರಿಂದ ''6'' ಇದ್ದು ಹೆಚ್ಚು ಸ್ಟೈಲಿಶ್ ಅಂತೆಯೇ ಮನಸ್ಸನ್ನು ಆಕರ್ಷಿಸುವ ಫೋನ್‌ಗಳತ್ತ ನೋಕಿಯಾ ಮುಖ ಮಾಡಿದ್ದು ಗ್ರಾಹಕರಿಗೆ ಬೇಕಾದಷ್ಟು ಆಯ್ಕೆ ಇಲ್ಲಿ ದೊರೆಯಲಿದೆ.

ವಿಂಡೋಸ್ ಫೋನ್‌ನ ಟಾಪ್ 10 ವಿಶೇಷತೆಗಳು

ಅದ್ಭುತ ಅಪ್ಲಿಕೇಶನ್‌ಗಳು
ವಿಂಡೋಸ್ ಫೋನ್‌ಗಳು ಅದ್ಭುತ ಅಪ್ಲಿಕೇಶನ್‌ಗಳೊಂದಿಗೆ ಬಂದಿದ್ದು ಅಂತೆಯೇ ಮನವನ್ನು ಆಕರ್ಷಿಸುವ ಹತ್ತು ಹಲವು ಗೇಮ್‌ಗಳು ಇದರಲ್ಲಿದೆ. ಆಂಡ್ರಾಯ್ಡ್ ಒದಗಿಸುವುದಕ್ಕಿಂತಲೂ ಅತ್ಯುತ್ತಮ ಅಪ್ಲಿಕೇಶನ್‌ಗಳನ್ನು ವಿಂಡೋಸ್‌ನಲ್ಲಿ ನಿಮಗೆ ಕಾಣಬಹುದು.

ವಿಂಡೋಸ್ ಫೋನ್‌ನ ಟಾಪ್ 10 ವಿಶೇಷತೆಗಳು

ಇಮೇಲ್ ಮತ್ತು ಸಾಮಾಜಿಕ ತಾಣಗಳು
ವಿಂಡೋಸ್ ಫೋನ್ ತನ್ನ ಬಳಕೆದಾರರಿಗೆ ಬಲವಾದ ಸಾಮಾಜಿಕ ತಾಣ ಮತ್ತು ಸುದೃಡವಾದ ಇಮೇಲ್ ಬಳಕೆಯ ಸೌಲಭ್ಯವನ್ನು ತನ್ನ ಫೋನ್ ಮೂಲಕ ನೀಡಿದೆ. ನಿಜಕ್ಕೂ ಇದನ್ನು ಬಳಸುವುದು ಅಪ್ಯಾಯಮಾನವಾಗಿದ್ದು ಫೋನ್ ಬಳಕೆಯಲ್ಲಿ ಈ ತಾಣಗಳ ಬಳಕೆ ಆಹ್ಲಾದಕಾರಿಯಾಗಿದೆ.

ವಿಂಡೋಸ್ ಫೋನ್‌ನ ಟಾಪ್ 10 ವಿಶೇಷತೆಗಳು

ಮೈಕ್ರೋಸಾಫ್ಟ್ ಬೆಂಬಲ
ವಿಂಡೋಸ್ ಫೋನ್‌ಗಳಿಗೆ ಮೈಕ್ರೋಸಾಫ್ಟ್ ನೀಡುವ ಬೆಂಬಲ ಮಾತ್ರ ಉನ್ನತವಾಗಿದ್ದು ಒನ್ ಡ್ರೈವ್ ಸ್ಕ್ರೈಪ್, ಎಕ್ಸ್‌ಬಾಕ್ಸ್, ಮತ್ತು ಒನ್ ನೋಟ್ ಅನ್ನು ಫೋನ್‌ನಲ್ಲಿ ಬಳಸಬಹುದಾಗಿದೆ.

ವಿಂಡೋಸ್ ಫೋನ್‌ನ ಟಾಪ್ 10 ವಿಶೇಷತೆಗಳು

ಎಲ್ಲಾ ಡಿವೈಸ್‌ಗಳಲ್ಲೂ ಸ್ಥಿರತೆ
ಆಂಡ್ರಾಯ್ಡ್ ಹೆಚ್ಚಿನ ಆಕಾರ ಮತ್ತು ಗಾತ್ರಗಳಲ್ಲಿ ಬರುತ್ತವೆ, ಆದರೆ ಗುಣಮಟ್ಟ ಯಾವಾಗಲೂ ಪ್ರಶ್ನೆಯಾಗಿ ಉಳಿಯುತ್ತದೆ. ಆದರೆ ವಿಂಡೋಸ್ ಫೋನ್ ಎಲ್ಲಾ ಹಂತದ ಡಿವೈಸ್‌ಗಳಲ್ಲೂ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ. ಉತ್ತಮ ರಚನಾ ಸಾಮರ್ಥ್ಯವನ್ನು ಡಿವೈಸ್ ಪಡೆದುಕೊಂಡಿದೆ.

ವಿಂಡೋಸ್ ಫೋನ್‌ನ ಟಾಪ್ 10 ವಿಶೇಷತೆಗಳು

ಲಾಕ್ ಸ್ಕ್ರೀನ್ ಮ್ಯಾಜಿಕ್
ನಿಮ್ಮ ಲಾಕ್ ಸ್ಕ್ರೀನ್‌ನಿಂದ ನಿಮ್ಮ ಅಧಿಸೂಚನೆಗಳನ್ನು ಪರಿಶೀಲಿಸಲು ವಿಂಡೋಸ್ ಫೋನ್ ನಿಮ್ಮನ್ನು ಅನುಮತಿಸುತ್ತದೆ. ಲಾಕ್ ಸ್ಕ್ರೀನ್ ಸೆಟ್ಟಿಂಗ್‌ಗಳಲ್ಲಿ ಹಿನ್ನಲೆ ಚಿತ್ರಗಳನ್ನು ಮಾತ್ರ ನೀವು ಬದಲಾಯಿಸದೇ ಲೈವ್ ಅಪ್ಲಿಕೇಶನ್‌ಗಳನ್ನು ಇಂಟಿಗ್ರೇಶನ್ ಮಾಡಬಹುದು.

ವಿಂಡೋಸ್ ಫೋನ್‌ನ ಟಾಪ್ 10 ವಿಶೇಷತೆಗಳು

ವಿಂಡೋಸ್ ಫೋನ್‌ನಲ್ಲಿ ಎಕ್ಸ್ ಬಾಕ್ ಗೇಮ್ಸ್ ಆಟ
ಎಕ್ಸ್ ಬಾಕ್ಸ್ ಅನ್ನು ನೀವು ಹೊಂದಿದ್ದೀರಿ ಎಂದಾದಲ್ಲಿ, ವಿಂಡೋಸ್ ಫೋನ್ ಸೂಕ್ತವಾದ ಎಕ್ಸ್ ಬಾಕ್ಸ್ ಇಂಟಿಗ್ರೇಶನ್ ಅನ್ನು ಹೊಂದಿದ್ದು ನಿಮ್ಮ ಆಟದ ಮಜವನ್ನು ಇನ್ನಷ್ಟು ಖುಷಿಯಾಗಿಸಲು ಇದು ಸಹಕಾರಿಯಾಗಿದೆ.

ವಿಂಡೋಸ್ ಫೋನ್‌ನ ಟಾಪ್ 10 ವಿಶೇಷತೆಗಳು

ಲೈವ್ ಟೈಲ್ ಮೋಡಿ
ಗ್ರಾಹಕರ ಇಚ್ಛೆಯಂತೆ ವಿಂಡೋಸ್ ಫೋನ್ ಸೆಟ್ಟಿಂಗ್ ಅನ್ನು ಅಳವಡಿಸಿದೆ. ವಿಡ್ಜೆಟ್‌ಗಳ ಬದಲಿಗೆ ನಿಮ್ಮ ಮುಖ್ಯ ಪರದೆಯಲ್ಲಿರುವ ಪ್ರತೀ ಅಪ್ಲಿಕೇಶನ್ ಲೈವ್ ಟೈಲ್‌ನಂತೆ ಕೆಲಸ ಮಾಡುತ್ತದೆ.

ವಿಂಡೋಸ್ ಫೋನ್‌ನ ಟಾಪ್ 10 ವಿಶೇಷತೆಗಳು

ಆಫ್‌ಲೈನ್ ಮ್ಯಾಪ್ಸ್ ಇಂಟಿಗ್ರೇಶನ್
ವಿಂಡೋಸ್ ಫೋನ್ ಹಿಯರ್ ಮ್ಯಾಪ್ಸ್ ಮತ್ತು ಹಿಯರ್ ಡ್ರೈವ್ ಅನ್ನು ತನ್ನ ಲ್ಯೂಮಿಯಾ ಶ್ರೇಣಿಯಲ್ಲಿ ಪಡೆದುಕೊಂಡಿದೆ. ಇದು ಆಫ್‌ಲೈನ್‌ನಲ್ಲೂ ಕಾರ್ಯನಿರ್ವಹಿಸುವ ತಾಕತ್ತನ್ನು ಪಡೆದುಕೊಂಡಿದ್ದು ಇದು ಅತಿ ವಿಶೇಷ ಎಂದೆನಿಸಿದೆ.

ವಿಂಡೋಸ್ ಫೋನ್‌ನ ಟಾಪ್ 10 ವಿಶೇಷತೆಗಳು

ವಿಸ್ತರಿಸಬಹುದಾದ ಸಂಗ್ರಹ
ಹೆಚ್ಚಿನ ವಿಂಡೋಸ್ ಫೋನ್‌ಗಳು, 8ಜಿಬಿ ಆಂತರಿಕ ಸಂಗ್ರಹವನ್ನು ಪಡೆದುಕೊಂಡಿದ್ದು ಇದನ್ನು ಎಸ್‌ಡಿ ಕಾರ್ಡ್ ಬಳಸಿಕೊಂಡು 64 ಜಿಬಿಗೆ ವಿಸ್ತರಿಸಬಹುದು.

English summary
This article tells about Here, the Windows Phone’s fast and user-friendly OS plus its integration with Microsoft-linked products has given many users, particularly who work a lot with Windows products, a reason to consider the integrated mobile platform.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot