ಸ್ಮಾರ್ಟ್‌ಫೋನ್ ಕಡಿಮೆ ಬಳಸಿ ಕ್ಯಾನ್ಸರ್ ತಪ್ಪಿಸಿ

By Shwetha
|

ಟೆಕ್ ಜಗತ್ತು ನಮ್ಮ ಉಪಯೋಗಕ್ಕಾಗಿ ಹಲವಾರು ಅನುಕೂಲತೆಗಳನ್ನು ಮಾಡಿಕೊಟ್ಟಿದೆ ಆದರೆ ಈ ಅನುಕೂಲಗಳ ಬಳಕೆ ಹೆಚ್ಚಿದಂತೆ ಅದು ಬೀರುವ ಪರಿಣಾಮ ಕೂಡ ಭಯಂಕರವಾಗಿರುತ್ತದೆ ಎಂಬುದನ್ನು ನೀವು ಅಂದಾಜಿಸಬಲ್ಲಿರಾ? ಹೌದು ನಿತ್ಯ ಜೀವನದಲ್ಲಿ ಹೆಚ್ಚು ಬಳಕೆ ಮಾಡುವ ಸ್ಮಾರ್ಟ್‌ಫೋನ್ ಯಾವ ರೀತಿಯಲ್ಲಿ ನಿಮ್ಮ ಪ್ರಾಣಕ್ಕೆ ಅಪಾಯವನ್ನುಂಟು ಮಾಡುತ್ತದೆ ಅಂತೆಯೇ ಇದನ್ನು ತಟೆಗಟ್ಟುವುದು ಹೇಗೆ ಎಂಬುದೇ ಇಂದಿನ ನಮ್ಮ ಲೇಖನದಲ್ಲಿ ಮುಖ್ಯ ಅಂಶವಾಗಿದೆ.

ಓದಿರಿ: ಸ್ಮಾರ್ಟ್‌ಫೋನ್ ಬಳಸಿ ಈ ತಪ್ಪುಗಳನ್ನು ನೀವು ಮಾಡದಿರಿ

ಇಂದಿನ ಲೇಖನದಲ್ಲಿ ಸ್ಮಾರ್ಟ್‌ಫೋನ್ ಬಳಕೆಯಿಂದ ನಿಮಗುಂಟಾಗುವ ಅಪಾಯವನ್ನು ಯಾವ ರೀತಿಯಲ್ಲಿ ತಡೆಗಟ್ಟಬಹುದು ಎಂಬುದನ್ನು ಅರಿತುಕೊಳ್ಳೋಣ.

ಮಕ್ಕಳು ಫೋನ್ ಬಳಸುವಾಗ ಎಚ್ಚರಿಕೆ ಇರಲಿ

ಮಕ್ಕಳು ಫೋನ್ ಬಳಸುವಾಗ ಎಚ್ಚರಿಕೆ ಇರಲಿ

ಮಕ್ಕಳ ತಲೆಬುರಡೆ ದೊಡ್ಡವರಿಗಿಂತಲೂ ಹೆಚ್ಚು ತೆಳುವಾಗಿರುತ್ತದೆ. ಇನ್ನೂ ಬೆಳವಣಿಗೆಯ ಹಂತದಲ್ಲಿರುತ್ತದೆ. ಸೆಲ್‌ಫೋನ್‌ಗಳಲ್ಲಿರುವ ರೇಡಿಯೇಶನ್ ಮೆದುಳಿಗೆ ಹೆಚ್ಚಿನ ಹಾನಿಯನ್ನುಂಟು ಮಾಡುತ್ತದೆ.

ನಿಮ್ಮ ದೇಹದಿಂದ ಫೋನ್ ಅನ್ನು ಆದಷ್ಟು ದೂರವಿರಿಸಿ

ನಿಮ್ಮ ದೇಹದಿಂದ ಫೋನ್ ಅನ್ನು ಆದಷ್ಟು ದೂರವಿರಿಸಿ

ನೀವು ಫೋನ್‌ನಲ್ಲಿ ಮಾತನಾಡುವಾಗ ಸೆಲ್ ಫೋನ್ ಅನ್ನು ಆದಷ್ಟು ದೂರವಿರಿಸಿ. ಎರಡು ಇಂಚುಗಳ ಅಂತರ ಇರುವಂತೆ ನೋಡಿಕೊಳ್ಳಿ.

ಸಿಗ್ನಲ್ ವೀಕ್

ಸಿಗ್ನಲ್ ವೀಕ್

ಇನ್ನು ಸಿಗ್ನಲ್ ದುರ್ಬಲವಿದ್ದಾಗ ಫೋನ್ ಬಳಕೆಯನ್ನು ಮಾಡದಿರಿ. ಇದು ಸ್ವಯಂಚಾಲಿತವಾಗಿ ತನ್ನ ಶಕ್ತಿಯನ್ನು ಗರಿಷ್ಟ ಮಟ್ಟಕ್ಕೆ ಏರಿಸಿಕೊಳ್ಳುತ್ತದೆ.

ಯಾವಾಗಲೂ ನಿಮ್ಮೊಂದಿಗೆ ಒಯ್ಯದಿರಿ

ಯಾವಾಗಲೂ ನಿಮ್ಮೊಂದಿಗೆ ಒಯ್ಯದಿರಿ

ನಿಮ್ಮ ಫೋನ್ ಅನ್ನು ಆದಷ್ಟು ನಿಮ್ಮ ಪ್ಯಾಂಟ್ ಅಥವಾ ಶರ್ಟ್ ಜೇಬಿನಲ್ಲಿ ಹೊತ್ತೊಯ್ಯುವುದನ್ನು ಕಡಿಮೆ ಮಾಡಿಕೊಳ್ಳಿ. ನಿಮ್ಮ ದೇಹದ ಸಮೀಪ ಫೋನ್ ಅನ್ನು ಎಂದಿಗೂ ಇರಿಸಿಕೊಳ್ಳಬೇಡಿ. ನಿಮ್ಮ ಸಮೀಪ ಇರುವಾಗ ಫೋನ್ ಅನ್ನು ಫ್ಲೈಟ್ ಮೋಡ್ ಅಥವಾ ಆಫ್‌ಲೈನ್ ಮೋಡ್‌ನಲ್ಲಿರಿಸಿಕೊಳ್ಳಿ.

ಫೋನ್ ಕೀಬೋರ್ಡ್ ನಿಮ್ಮೆಡೆಗೆ ಇರಲಿ

ಫೋನ್ ಕೀಬೋರ್ಡ್ ನಿಮ್ಮೆಡೆಗೆ ಇರಲಿ

ನಿಮ್ಮ ಫೋನ್ ಅನ್ನು ನಿಮ್ಮೊಂದಿಗೆ ಕೊಂಡೊಯ್ಯುವಾಗ ನಿಮ್ಮ ದೇಹಕ್ಕೆ ಎದುರಾಗಿ ಕೀಪ್ಯಾಡ್ ಇರಲಿ ಮತ್ತು ಇದರಿಂದ ಫೋನ್‌ನ ಹೊರಭಾಗದಿಂದ ನಿಮ್ಮ ದೇಹಕ್ಕೆ ಉಂಟಾಗುವ ಹಾನಿಯನ್ನು ತಪ್ಪಿಸಿಕೊಳ್ಳಬಹುದು.

ಫೋನ್ ಸಂವಾದ ಕಡಿಮೆ

ಫೋನ್ ಸಂವಾದ ಕಡಿಮೆ

ಆದಷ್ಟು ಫೋನ್‌ನಲ್ಲಿ ನಿಮ್ಮ ಸಂವಾದವನ್ನು ಕಡಿಮೆ ಮಾಡಿ. ಇನ್ನು ದೀರ್ಘ ಸಮಯದ ಸಂಭಾಷಣೆಗಾಗಿ ಕೋರ್ಡೆಡ್ ಫೋನ್, ಲ್ಯಾಂಡ್‌ಲೈನ್ ಅನ್ನು ಬಳಸಿ.

ಎರಡೂ ಬದಿಯ ಸಂವಾದ ಇರಲಿ

ಎರಡೂ ಬದಿಯ ಸಂವಾದ ಇರಲಿ

ನೀವು ಫೋನ್‌ನಲ್ಲಿ ಮಾತನಾಡುವಾಗ ಆ ಬದಿಯೂ ಸಂವಾದ ನಡೆಯುತ್ತಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಕರೆಯ ಬದಲು ಸಂದೇಶ ಕಳುಹಿಸಿ

ಕರೆಯ ಬದಲು ಸಂದೇಶ ಕಳುಹಿಸಿ

ಆದಷ್ಟು ಕರೆ ಮಾಡುವ ಬದಲಿಗೆ ಪಠ್ಯ ಸಂದೇಶದ ಮೂಲಕ ಸಂವಾದವನ್ನು ನಡೆಸಿ.

ಬಸ್‌ನಲ್ಲಿ ಫೋನ್ ಬಳಕೆ ಬೇಡ

ಬಸ್‌ನಲ್ಲಿ ಫೋನ್ ಬಳಕೆ ಬೇಡ

ಫೋನ್‌ನ ಇಲೆಕ್ಟ್ರೋ ಮ್ಯಾಗ್ನಟಿಕ್ ಫೀಲ್ಡ್ ಇತರರಿಗೆ ಹಾನಿಯನ್ನುಂಟು ಮಾಡಬಹುದು.

ಕಡಿಮೆ SAR ಇರುವ ಡಿವೈಸ್ ಖರೀದಿಸಿ

ಕಡಿಮೆ SAR ಇರುವ ಡಿವೈಸ್ ಖರೀದಿಸಿ

ನಿರ್ದಿಷ್ಟ ಹೀರುವಿಕೆ ದರ ಅಂದರೆ SAR ಕಡಿಮೆ ಇರುವ ಡಿವೈಸ್‌ಗಳನ್ನು ಖರೀದಿಸಿ ಅದನ್ನು ಬಳಸಿ

Best Mobiles in India

English summary
In this article we can find some health related information while using smartphones...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X