ಆನ್ ಲೈನ್ ನಲ್ಲಿ ಶಾಪ್ ಮಾಡಲು ಕ್ರೆಡಿಟ್/ಡೆಬಿಟ್ ಕಾರ್ಡ್ ಬಳಸುತ್ತಿದ್ದೀರಾ? ಹಾಗಾದ್ರೆ ಈ 10 ವಿಚಾರಗಳನ್ನು ಎಂದಿಗೂ ಮಾಡಬೇಡಿ!
ಆನ್ ಲೈನ್ ಶಾಪಿಂಗ್ ಗೆ ನೀವು ಕ್ರೆಡಿಟ್/ ಡೆಬಿಟ್ ಕಾರ್ಡ್ ಗಳನ್ನು ಬಳಸುತ್ತೀರಾ? ಅಥವಾ ಬಿಲ್ ಪಾವತಿ ಮಾಡಲು ಇಲ್ಲವೇ ಯಾವುದೋ ಬ್ಯಾಂಕಿಂಗ್ ವ್ಯವಹಾರಕ್ಕಾಗಿ ನೆಟ್ ಬ್ಯಾಂಕಿಂಗ್ ಬಳಸುತ್ತೀರಾ? ಹೀಗೆ ಯಾವುದೇ ರೀತಿಯ ಹಣಕಾಸು ವ್ಯವಹಾರವನ್ನು ಮಾಡುವುದರಿಂದಾಗಿ ನಮ್ಮ ಕೆಲಸಗಳು ಸುಲಭವಾಗುತ್ತದೆ ಮತ್ತು ಸಮಯದ ಉಳಿತಾಯವಾಗುತ್ತದೆ ಎಂಬುದೇನೋ ನಿಜ. ಆದರೆ ಈ ಸಂದರ್ಬದಲ್ಲಿ ಹಣಕಾಸು ಮೋಸದ ಬಗ್ಗೆಯೂ ಕೂಡ ಸ್ವಲ್ಪ ಜಾಗೃತೆ ವಹಿಸಬೇಕು.

ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಕಳ್ಳರು ಹೆಚ್ಚಾಗುತ್ತಿದ್ದಾರೆ ಮತ್ತು ಆ ಸುದ್ದಿಗಳನ್ನು ನಾವು ಕೇಳುತ್ತಲೇ ಇದ್ದೇವೆ. ಇತ್ತೀಚೆಗೆ ಒಬ್ಬ ವ್ಯಕ್ತಿ ತನ್ನ ಜಿಮೇಲ್ ಹ್ಯಾಕ್ ಆಗಿದ್ದರಿಂದ 1 ಲಕ್ಷ ರುಪಾಯಿಯನ್ನು ಕಳೆದುಕೊಂಡಿದ್ದಾನೆ. ಆದರೆ ಕೆಲವು ಸಾಮಾನ್ಯ ನಿಯಮಗಳನ್ನು ಪಾಲಿಸುವುದರಿಂದಾಗಿ ಈ ಸಮಸ್ಯೆ ಆಗದಂತೆ ತಡೆಯಬಹುದು. ನೀವು ಆನ್ ಲೈನ್ ವ್ಯವಹಾರ ನಡೆಸುವಾಗ ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗಿರುವ 10 ಸಂಗತಿಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ.

ಪಬ್ಲಿಕ್ ಕಂಪ್ಯೂಟರ್ ಗಳಲ್ಲಿ ಆನ್ ಲೈನ್ ಟ್ರಾನ್ಸ್ಯಾಕ್ಷನ್ ಗಳನ್ನು ಮಾಡುವುದನ್ನು ತಡೆಯಿರಿ
ನಿಮ್ಮ ಪರ್ಸನಲ್ ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ಗಳಿಂದ ಮಾತ್ರವೇ ಆನ್ ಲೈನ್ ಟ್ರಾನ್ಸ್ಯಾಕ್ಷನ್ ಮಾಡಿ. ಪಬ್ಲಿಕ್ ಅಥವಾ ಶೇರ್ಡ್ ಪಿಸಿ/ ಲ್ಯಾಪ್ ಟಾಪ್ ನಲ್ಲಿ ಆನ್ ಲೈನ್ ಟ್ರಾನ್ಸ್ಯಾಕ್ಷನ್ ಮಾಡಬೇಡಿ.

ಇಂಟರ್ನೆಟ್ ಸೆಟ್ಟಿಂಗ್ಸ್ ನಲ್ಲಿ ಆಟೋ-ಫಿಲ್ಲಿಂಗ್ ಡಾಟಾ ಅನೇಬಲ್ ಆಗಿಲ್ಲದಂತೆ ನೋಡಿಕೊಳ್ಳಿ
ಖಂಡಿತವಾಗಲೂ ಆಟೋ ಫಿಲ್ಲಿಂಗ್ ಡಾಟಾ ಸೆಟ್ಟಿಂಗ್ಸ್ ಅನೇಬಲ್ ಆಗಿರುವುದು ಎಷ್ಟೋ ಸಂದರ್ಬದಲ್ಲಿ ಸುಲಭವಾಗುತ್ತದೆ ನಿಜ. ಆನ್ ಲೈನ್ ಟಾಸ್ಕ್ ಗಳಲ್ಲಿ ಸಮಯವನ್ನು ಉಳಿಸುತ್ತದೆ ಎಂಬುದೇನೋ ನಿಜವೇ. ಆದರೆ ಯಾವತ್ತೂ ಇದನ್ನು ಅನೇಬಲ್ ಮಾಡಬೇಡಿ. ಇದರ ಅರ್ಥ ಇಷ್ಟೇ ನೀವು ನಿಮ್ಮ ಹಣಕಾಸಿಗೆ ಸಂಬಂಧಪಟ್ಟ ಡಾಟಾಗಳನ್ನು ಸೇವ್ ಮಾಡುತ್ತಿದ್ದೀರಿ ಎಂದರ್ಥ.

ಆದಷ್ಟು ಫಿಸಿಕಲ್ ಕಿಬೋರ್ಡ್ ಗಳಿಗಿಂತ ವರ್ಚುವಲ್ ಕೀಬೋರ್ಡ್ ಗಳನ್ನು ಬಳಸಿ
ಹೆಚ್ಚಿನ ಬ್ಯಾಂಕ್ ಗಳು ಇದೀಗ ವರ್ಚುವಲ್ ಕೀಬೋರ್ಡ್ ಗಳನ್ನು ಪಾಸ್ ವರ್ಡ್ ಎಂಟರ್ ಮಾಡಲು ಆಫರ್ ಮಾಡುತ್ತದೆ. ಹಾಗಾಗಿ ಆದಷ್ಟು ವರ್ಚುವಲ್ ಕೀರ್ಬೋಡ್ ಗಳನ್ನೇ ಬಳಸುವುದು ಉತ್ತಮ. ಕೀಲಾಗರ್ಸ್ ಗಳಿಂದ ರಕ್ಷಣೆ ಪಡೆಯಲು ನೀವು ಆದಷ್ಟು ಫಿಸಿಕಲ್ ಕೀಬೋರ್ಡ್ ಗಳನ್ನು ಬಳಸದೇ ಇರುವುದು ಸೂಕ್ತವಾದದ್ದು.

ನೀವು ಕ್ರೆಡಿಟ್/ ಡೆಬಿಟ್ ಕಾರ್ಡ್ ಬಳಸುತ್ತಿರುವ ವೆಬ್ ಸೈಟ್ 'HTTPS' ಆಗಿದೆ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ
ಇದೊಂದು ಸಾಮಾನ್ಯ ವಿಚಾರ. ಯಾವಾಗಲೂ 'https' ಯುಆರ್ ಎಲ್ ನ್ನು ನೀವು ಯಾವುದೇ ಹಣಕಾಸಿನ ವ್ಯವಹಾರ ನಡೆಸುವಾಗ ಗಮನಿಸಬೇಕು.

ವಿದೇಶಕ್ಕೆ ತೆರಳದ ಸಂದರ್ಬದಲ್ಲಿ ಅಂತರಾಷ್ಟ್ರೀಯ ಟ್ರಾನ್ಸ್ಯಾಕ್ಷನ್ ಗಳನ್ನು ಡಿಸೇಬಲ್ ಮಾಡಿ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2-ಫ್ಯಾಕರ್ ಟ್ರಾನ್ಸ್ಯಾಕ್ಷನ್ ನ್ನು ಡೊಮೆಸ್ಟಿಕ್ ಕ್ರೆಡಿಟ್ ಕಾರ್ಡ್ ಟ್ರಾನ್ಸ್ಯಾಕ್ಷನ್ ಗೆ ಕಡ್ಡಾಯಗೊಳಿಸಿದೆ. ಆದರೆ ಇದು ಅಂತರಾಷ್ಟ್ರೀಯ ಟ್ರಾನ್ಸ್ಯಾಕ್ಷನ್ ಗೆ ಕಡ್ಡಾಯವಲ್ಲ. ಪಿಓಎಸ್ ಸಂದರ್ಬದಲ್ಲಿನ ಡೊಮೆಸ್ಟಿಕ್ ಟ್ರಾನ್ಸ್ಯಾಕ್ಷನ್ ಗೆ ಪಿನ್ 2FA ಆಗಿ ಆನ್ ಲೈನ್ ಟ್ರಾನ್ಸ್ಯಾಕ್ಷನ್ ನಲ್ಲಿ ಕೆಲಸ ಮಾಡುತ್ತದೆ. ಓಟಿಪಿ ಎರಡನೇ ಸೆಕ್ಯುರಿಟಿ ಲೇಯರ್ ಆಗಿರುತ್ತದೆ.
ಆದರೆ ಅಂತರಾಷ್ಟ್ರೀಯ ಟ್ರಾನ್ಸ್ಯಾಕ್ಷನ್ ನಲ್ಲಿ ಸೆಕೆಂಡ್ ಫ್ಯಾಕ್ಟರ್ ಅಥೆಂಟಿಕೇಷನ್ ಬೇಕಾಗುವುದಿಲ್ಲ. ನೀವು ಗಮನಿಸಬೇಕಾಗಿರುವ ಅಂಶವೇನೆಂದರೆ ಒಂದು ವೇಳೆ ನೀವು ಅಂತರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ಹೋಲ್ಡರ್ ಆಗಿದ್ದಲ್ಲಿ, ಅಂತರಾಷ್ಟ್ರೀಯ ಬಳಕೆಯನ್ನು ಡಿಫಾಲ್ಟ್ ಆಗಿ ಅನೇಬಲ್ ಮಾಡಲಾಗಿರುತ್ತದೆ.ಹಾಗಾಗಿ ಸುರಕ್ಷತಾ ದೃಷ್ಟಿಯಿಂದ ಒಂದು ವೇಳೆ ನೀವು ವಿದೇಶಕ್ಕೆ ಸಂಚರಿಸುವ ಪ್ಲಾನ್ ಇಲ್ಲದೇ ಇರುವ ಸಂದರ್ಬದಲ್ಲಿ ನೀವು ಈ ಅಂತರಾಷ್ಟ್ರೀಯ ಟ್ರಾನ್ಸ್ಯಾಕ್ಷನ್ ನ್ನು ಡಿಸೇಬಲ್ ಮಾಡಿ ಇಟ್ಟುಕೊಳ್ಳಬಹುದು.

ಕ್ರೆಡಿಟ್ / ಡೆಬಿಟ್ ಕಾರ್ಡ್ ನಲ್ಲಿ ಸಿವಿವಿ ನಂಬರ್ ನ್ನು ಸ್ಕ್ರ್ಯಾಚ್ ಮಾಡಿ ಅಥವಾ ಅಳಿಸಿ ಬಿಡಿ
ನಿಮ್ಮ ಕಾರ್ಡಿನ ಹಿಂಭಾಗದಲ್ಲಿರುವ ಕಾರ್ಡಿನ ಸಿವಿವಿ ನಂಬರ್ ನ್ನು ಅಳಿಸಿ ಬಿಡಬಹುದು. ಆದರೆ ಖಂಡಿತವಾಗಲೂ ಇದನ್ನು ಮಾಡುವುದಕ್ಕಿಂತ ಮುನ್ನ ಆ ನಂಬರ್ ನ್ನು ನೀವು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಹೀಗೆ ಮಾಡುವುದರಿಂದಾಗಿ ನಿಮ್ಮ ಕಾರ್ಡ್ ನ್ನು ಅನಧಿಕೃತ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಹಣಕಾಸು ವ್ಯವಹಾರಕ್ಕೆ ಬಳಸಲು ಸಾಧ್ಯವಾಗುವುದಿಲ್ಲ.

ಇ-ಮೇಲ್ ಅಥವಾ ಫೋನ್ ನಲ್ಲಿ ಯಾವುದೇ ಕಾರಣಕ್ಕೂ ನಿಮ್ಮ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ.
ಇತ್ತೀಚೆಗೆ ಕಳ್ಳರು ಮುಗ್ಧ ಕಾರ್ಡ್ ಮಾಲೀಕರನ್ನು ಟಾರ್ಗೆಟ್ ಮಾಡಿದ್ದು ತಮ್ಮ ಕಾರ್ಡ್ ವಿವರಗಳನ್ನು ಆನ್ ಲೈನ್ ನಲ್ಲಿ ತಿಳಿಸುವಂತೆ ಹೇಳುತ್ತಿದ್ದಾರೆ.ಯಾವುದೇ ಕಾರಣಕ್ಕೂ ಆನ್ ಲೈನ್ ನಲ್ಲಿ ನಿಮ್ಮ ಕಾರ್ಡಿನ ವಿವರಗಳನ್ನು ಫೋನ್ ಅಥವಾ ಇಮೇಲ್ ಮೂಲಕ ಯಾರೊಂದಿಗೂ ಕೂಡ ಹಂಚಿಕೊಳ್ಳಬೇಡಿ.

ಇಮೇಲ್ ಅಥವಾ ಎಸ್ಎಂಎಸ್ ಮೂಲಕ ನಿಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದ ವೆಬ್ ಸೈಟ್ ಲಿಂಕ್ ಬಂದಿದ್ದಲ್ಲಿ ಅದನ್ನು ಕ್ಲಿಕ್ಕಿಸಬೇಡಿ.
ಇಮೇಲ್ ಅಥವಾ ಎಸ್ಎಂಎಸ್ ಗಳಲ್ಲಿರುವ ನಿಮ್ಮ ಬ್ಯಾಂಕ್ ಗೆ ಆಕ್ಸಿಸ್ ಅಥವಾ ಇತರೆ ಯಾವುದೇ ಆನೈನ್ ಡೆಸ್ಟಿನೇಷನ್ ಗಳನ್ನು ಕ್ಲಿಕ್ಕಿಸಬೇಡಿ.ಯಾವಾಗಲೂ ಬ್ರೌಸರ್ ತೆರೆದು ವೆಬ್ ಸೈಟ್ ಅಡ್ರೆಸ್ ಟೈಪ್ ಮಾಡಿ ಮತ್ತು ಯುಆರ್ ಎಲ್ ಸ್ವತಃ ನೀವೇ ಟೈಪ್ ಮಾಡಿ ನಂತರವೇ ತೆರೆಯಿರಿ.

ಅಧಿಕೃತ ಸ್ಟೋರ್ ಗಳಿಂದ ಮಾತ್ರವೇ ಬ್ಯಾಂಕಿಂಗ್ ಅಥವಾ ಇತರೆ ಫೈನಾನ್ಶಿಯಲ್ ಆಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಿ.
ಪ್ರತಿ ಕೆಲವು ದಿನಗಳಿಗೊಮ್ಮೆ ಫೇಕ್ ಬ್ಯಾಂಕಿಂಗ್ ಆಪ್ ಗಳ ಬಗ್ಗೆ ಅಲರ್ಟ್ ನ್ನು ನೀಡಲಾಗುತ್ತದೆ. ಕಳೆದ ತಿಂಗಳು ಸೆಕ್ಯುರಿಟಿ ಫರ್ಮ್ ಆಗಿರುವ ಶಾಫೋಸ್ ಲ್ಯಾಬ್ ಎಸ್ ಬಿಐ, ಐಸಿಐಸಿಐ, ಆಕ್ಸಿಸ್ ಬ್ಯಾಂಕ್, ಸಿಟಿ ಮತ್ತು ಇತರೆ ಪ್ರಮುಖ ಬ್ಯಾಂಕ್ ಗಳ ಫೇಕ್ ಆಪ್ ಗಳು ಗೂಗಲ್ ಪ್ಲೇ ನಲ್ಲಿ ಲಭ್ಯವಿರುವ ಬಗ್ಗೆ ಎಚ್ಚರಿಕೆಯನ್ನು ನೀಡಿತ್ತು. ಈ ಆಪ್ ಗಳು ಗ್ರಾಹಕರ 1,000 ಕ್ಕೂ ಅಧಿಕ ಡಾಟಾಗಳನ್ನು ಕದಿಯಲು ಸಿದ್ಧಪಡಿಸಿರುವ ಆಪ್ ಆಗಿದೆ.


Click it and Unblock the Notifications








