ಕಂಪ್ಯೂಟರ್‌ನಲ್ಲಿ ಆಗದ, ಮೊಬೈಲ್‌ನಲ್ಲೇ ಮಾಡಬಹುದಾದ 10 ಚಟುವಟಿಕೆಗಳು

Written By:

ಹಲೋ ಅಂದಹಾಗೆ ನಿಮಗೆ ಮೊಬೈಲ್‌ ಇಂಪಾರ್ಟೆಂಟೋ ಅಥವಾ ಕಂಪ್ಯೂಟರ್‌ ಇಂಪಾರ್ಟೆಂಟೊ ಅಂತ ಯಾರನ್ನ ಕೇಳಿದ್ರು ಸಹ 'ನಮಗೆ ಮೊಬೈಲ್ ಫಸ್ಟ್‌ ಕಂಪ್ಯೂಟರ್‌ ನೆಕ್ಸ್ಟ್‌ ಅಂತಾರೆ' ಖಂಡಿತ ಹೀಗೆ ಹೇಳುವವರ ಸಂಖ್ಯೆಯೇ ಜಾಸ್ತಿ.

ವಾಸ್ತವ ಏನಪ್ಪಾ ಅಂದ್ರೆ ಇಂದು ಮೊಬೈಲ್‌ಗಳು ಹಲವಾರು ಉದ್ದೇಶಗಳಿಗೆ, ಹಲವಾರು ಚಟುವಟಿಕೆಗಳಿಗೆ ಬಳಕೆಯಾಗುತ್ತದೆ. ಕಂಪ್ಯೂಟರ್‌ನಲ್ಲಿ ನಿರ್ವಹಿಸುವ ಹಲವು ಚಟುವಟಿಕೆಗಳನ್ನು ಮೊಬೈಲ್‌ನಲ್ಲಿ ನಿರ್ವಹಿಸಬಹುದು. ಆದರೆ ಕಂಪ್ಯೂಟರ್‌ನಲ್ಲಿ ಮೊಬೈಲ್‌ನಲ್ಲಿನ ಹಲವು ಫೀಚರ್‌ಗಳನ್ನು ಹೊಂದಲಾಗುವುದಿಲ್ಲಾ. ಅಂದಹಾಗೆ ಕಂಪ್ಯೂಟರ್‌ ಮತ್ತು ಲ್ಯಾಪ್‌ಟಾಪ್‌ಗಳನ್ನಾ ಹೋದಲೆಲ್ಲಾ ಯಾರ್‌ ತಾನೆ ಹೊತ್ತುಕೊಂಡು ಹೋಗ್ತಾರೆ ಹೇಳಿ. ಮೊಬೈಲ್‌ನಲ್ಲಿ ನಿರ್ವಹಿಸಲಾಗುವ 10 ಅತ್ಯುಪಯುಕ್ತ ಫೀಚರ್‌ಗಳನ್ನು ಕಂಪ್ಯೂಟರ್‌ನಲ್ಲಿ ನಿರ್ವಹಿಸಲು ಆಗುವುದಿಲ್ಲಾ. ಅಂತಹ ಉಪಯುಕ್ತ ಫೀಚರ್‌ಗಳನ್ನು ಟೆಕ್‌ ಪ್ರಿಯರಿಗಾಗಿ ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊಬೈಲ್‌ ಅಪ್ಲಿಕೇಶನ್‌

ಮೊಬೈಲ್‌ ಅಪ್ಲಿಕೇಶನ್‌

#1

ವಿಂಡೋಸ್‌ 8 ಆಪರೇಟಿಂಗ್‌ ಸಿಸ್ಟಮ್‌ಗಳಿಗೆ ಹೋಲಿಸಿದರೆ ಅದಕ್ಕಿಂತ ಹೆಚ್ಚು ಅಪ್ಲಿಕೇಶನ್‌ಗಳನ್ನು ಆಂಡ್ರಾಯ್ಡ್‌ ಮತ್ತು ಐಓಎಸ್ ಮೊಬೈಲ್‌ಗಳಿಗೆ ಸುಲಭವಾಗಿ ಡೌನ್‌ಲೋಡ್‌ ಮಾಡಿಕೊಂಡು ಉಪಯೋಗಿಸಬಹುದು.

ಸುರಕ್ಷತೆ

ಸುರಕ್ಷತೆ

#2

ಆಂಡ್ರಾಯ್ಡ್‌ ಮತ್ತು ಐಓಎಸ್‌ಗಳು ಸುರಕ್ಷತೆಗೆ ಇನ್ನೊಂದು ಹೆಸರು. ಕಾರಣ ಲ್ಯಾಪ್‌ಟಾಪ್‌ ಮತ್ತು ಕಂಪ್ಯೂಟರ್‌ಗಳು ವೈರಸ್‌ ಎದುರಿಸುವಲ್ಲಿ ದುರ್ಬಲವಾಗಿವೆ.

ಕರೆಗಳು

ಕರೆಗಳು

#3

ಕಂಪ್ಯೂಟರ್‌ನಲ್ಲಿ ಕರೆ ಮಾಡಲು ಅವಕಾಶವಿಲ್ಲ. ಆದರೆ ಮೊಬೈಲ್‌ಗಳನ್ನು ಅಭಿವೃದ್ದಿ ಪಡಿಸಿದ್ದೇ ಕರೆಯ ಮೂಲ ಉದ್ದೇಶದಿಂದ.

ವೈಯಕ್ತಿಕ

ವೈಯಕ್ತಿಕ

#4

ವೈಯಕ್ತಿಕ ಒಂದೇ ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಹಲವಾರು ಜನರು ಬಳಕೆ ಮಾಡಬಹುದು. ಆದರೆ ಮೊಬೈಲ್‌ಗಳು ವೈಯಕ್ತಿಕತೆಗೆ ಹೆಚ್ಚು ಪ್ರಖ್ಯಾತ.

ಮೊಬೈಲ್‌ ವ್ಯಾಲೆಟ್ಸ್

ಮೊಬೈಲ್‌ ವ್ಯಾಲೆಟ್ಸ್

#5

ಮೊಬೈಲ್‌ ವ್ಯಾಲೆಟ್ಸ್ಅನ್ನು ಡೆಸ್ಕ್‌ಟಾಪ್‌ನಲ್ಲೂ ಸಹ ಬಳಸಬಹುದು. ಮೊಬೈಲ್‌ ವಾಲೆಟ್ಸ್‌ ಅನ್ನು ಮೊಬೈಲ್‌ ರಿಚಾರ್ಜ್‌ ಮಾಡಲು, ಯುಟಿಲಿಟಿ ಬಿಲ್‌ ಪಾವತಿ ಮಾಡಲು ಬಳಸಬಹುದು.

 ರಿಮೋಟ್‌ ಕಂಟ್ರೋಲ್‌

ರಿಮೋಟ್‌ ಕಂಟ್ರೋಲ್‌

#6

ಮೊಬೈಲ್‌ಗಳಲ್ಲಿ ಕೆಲವು ಅಪ್ಲಿಕೇಶನ್‌ ಬಳಸಿ ಹಲವು ಡಿವೈಸ್‌ಗಳನ್ನು ನಿಯಂತ್ರಿಸಬಹುದು. ಉದಾಹರಣೆಗೆ ಟಿವಿ ರಿಮೋಟ್‌ ಆಗಿ ಉಪಯೋಗಿಸಬಹುದು.

ಸೆಲ್ಫಿ

ಸೆಲ್ಫಿ

#7

ಒಮ್ಮೆ ಕಂಪ್ಯೂಟರ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುವುದನ್ನು ಕಲ್ಪಿಸಿಕೊಳ್ಳಿ. ಆಗಲ್ಲ ಅಲ್ವಾ. ಆದರೆ ಮೊಬೈಲ್‌ನಲ್ಲಿ ಎಲ್ಲಿ ಬೇಕಾದರು ಸಹ ಸೆಲ್ಫಿ ತೆಗೆದುಕೊಳ್ಳಬಹುದು.

ಪೋರ್ಟೇಬಲ್‌ ಡಿವೈಸ್‌

ಪೋರ್ಟೇಬಲ್‌ ಡಿವೈಸ್‌

#8

ಮೊಬೈಲ್‌ಗಳು, 'ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ಗಿಂತಲು ಸಹ ಉನ್ನತ ಪೋರ್ಟೇಬಲ್‌ ಡಿವೈಸ್‌ ಆಗಿವೆ.

 ಆಪರೇಟಿಂಗ್ ಸಿಸ್ಟಮ್‌

ಆಪರೇಟಿಂಗ್ ಸಿಸ್ಟಮ್‌

#9

ಸ್ಮಾರ್ಟ್‌ಫೋನ್‌ಗಳೂ ಆಂಡ್ರಾಯ್ಡ್‌ ಮತ್ತು ಐಓಎಸ್‌ ಓಎಸ್‌ಗಳಿಂದ ಲೋಡ್‌ ಆಗಿರುತ್ತವೆ. ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ಗಳಿಗೆ ಇನ್‌ಸ್ಟಾಲ್‌ ಮಾಡುವಂತೆ ಯಾವುದೇ ಓಎಸ್‌ ಇನ್‌ಸ್ಟಾಲ್‌ ಮಾಡುವ ಅಗತ್ಯವಿಲ್ಲ.

ಎಲ್ಲವೂ ಒಂದು ಮೊಬೈಲ್‌ನಲ್ಲಿ

ಎಲ್ಲವೂ ಒಂದು ಮೊಬೈಲ್‌ನಲ್ಲಿ

#10

ಇಂದು ಮೊಬೈಲ್‌ ಹಲವು ಸೇವೆಗಳಿಗಾಗಿ ಬಳಕೆಯಾಗುತ್ತಿದೆ. ಮೆಸೇಜ್‌, ಕರೆ, ಇಮೇಲ್, ನೆಟ್‌ ಬ್ಯಾಂಕಿಂಗ್, ಮನರಂಜನೆ ಮತ್ತು ಇತರೆ ಹಲವು ಉದ್ದೇಶಗಳಿಗಾಗಿ ಎಲ್ಲವೂ ಒಂದರಲ್ಲೇ ಎಂಬಂತೆ ಉಪಯೋಗವಾಗುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
10 things your smartphone can do that your PC can't! Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot