ಹಿಡನ್ ಕ್ಯಾಮೆರಾ ಪತ್ತೆಹಚ್ಚಲು ಸೂಪರ್ ಟ್ರಿಕ್ಸ್

By Shwetha
|

ಒಂದು ಕೊಠಡಿಯನ್ನು ಪ್ರವೇಶಿಸಿದಾಗ ಅಲ್ಲಿರುವ ಸ್ಪೈ ಕ್ಯಾಮೆರಾವನ್ನು ನೀವು ನೋಡಿದ್ದೀರಾ? ನೀವು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದೀರಿ ಆಗ ನಿಮ್ಮನ್ನು ಯಾರೋ ವೀಕ್ಷಿಸುತ್ತಿದ್ದಾರೆ ಎಂಬುದು ನಿಮ್ಮ ಅರಿವಿಗೆ ಬರುತ್ತದೆ. ಈ ರೀತಿ ನಿಮಗೆ ಅನಿಸುವುದು ಸಹಜವಾಗಿದೆ. ಏಕೆಂದರೆ ಈಗೀಗ ಸ್ಪೈ ಕ್ಯಾಮೆರಾ ತನ್ನ ಕಬಂಧ ಬಾಹುವನ್ನು ಎಲ್ಲೆಡೆ ಚಾಚಿದೆ. ಸ್ಪೈ ಕ್ಯಾಮೆರಾವನ್ನು ತಪ್ಪಿಸಿ ನಮಗೆ ಯಾವ ಕೆಲಸವನ್ನು ಮಾಡಲಾಗುವುದಿಲ್ಲ.

ಹೋಟೆಲ್, ಬಟ್ಟೆ ಅಂಗಡಿ, ಕಚೇರಿ, ಶಾಲಾ ಕಾಲೇಜು, ಪ್ರಾರ್ಥನಾ ಮಂದಿರಗಳು ಹೀಗೆ ಹಿಡನ್ ಕ್ಯಾಮೆರಾ ಇಲ್ಲದ ಸ್ಥಳವನ್ನು ಊಹಿಸಲು ಅಸಾಧ್ಯವಾಗಿದೆ. ಹಿಡನ್ ಕ್ಯಾಮೆರಾಗಳು ಒಮ್ಮೊಮ್ಮೆ ನಮಗೆ ಸಹಕಾರಿಯಾಗಿದ್ದರೆ ಒಮ್ಮೊಮ್ಮೆ ಇವುಗಳಿಂದ ಆಪತ್ತೂ ಇದೆ. ಹೋಟೆಲ್ ಕೊಠಡಿ, ಬಟ್ಟೆಯಂಗಡಿಗಳಲ್ಲಿ ಟ್ರೈಯಲ್ ರೂಮ್ ಮುಂತಾದ ಕಡೆಗಳಲ್ಲಿ ಸ್ಪೈ ಕ್ಯಾಮೆರಾಗಳನ್ನು ಇರಿಸುವುದು ನಮಗೆ ಆಪತ್ತನ್ನು ತಂದೊಡ್ಡುತ್ತದೆ. ಹಾಗಿದ್ದರೆ ಈ ಹಿಡನ್ ಕ್ಯಾಮೆರಾಗಳನ್ನು ಎಲ್ಲಿ ಇರಿಸಲಾಗಿದೆ ಎಂಬುದನ್ನು ಹುಡುಕುವುದು ಹೇಗೆ? ಅದನ್ನು ಕುರಿತ ಕೆಲವೊಂದು ಟಿಪ್ಸ್‌ಗಳನ್ನು ಇಂದಿನ ಲೇಖನದಲ್ಲಿ ನಾವು ನೀಡಿರುವೆವು.

ಕ್ಯಾಮರಾ ಹಿಂದಿನ ಕಾಣದ ಕಣ್ಣನ್ನು ನೋಡುವುದು ಹೇಗೆ? ವೈಯಕ್ತಿಕ ಸ್ಥಳಗಳಲ್ಲಿ ಅಂದರೆ ರೆಸಿಡೆನ್ಸ್ ಇಲ್ಲವೇ ವ್ಯವಹಾರ ಪ್ರದೇಶಗಳಲ್ಲಿ ಹಿಡನ್ ಕ್ಯಾಮೆರಾಗಳನ್ನು ಇರಿಸುವುದು ಸಾಮಾನ್ಯವಾಗಿದೆ. ಮಲಗುವ ಕೋಣೆ, ಲಿವಿಂಗ್ ರೂಮ್ ಮತ್ತು ಮೌಲ್ಯಯುತ ಐಟಮ್‌ಗಳನ್ನು ನಿಮ್ಮ ಕೊಠಡಿ ಹೊಂದಿದೆ ಎಂದಾದಲ್ಲಿ ಇಲ್ಲಿ ಹಿಡನ್ ಕ್ಯಾಮೆರಾಗಳು ಸಾಮಾನ್ಯವಾಗಿರುತ್ತವೆ.

ಕ್ಯಾಮರಾ ಹಿಂದಿನ ಕಾಣದ ಕಣ್ಣನ್ನು ನೋಡುವುದು ಹೇಗೆ?

ಕ್ಯಾಮರಾ ಹಿಂದಿನ ಕಾಣದ ಕಣ್ಣನ್ನು ನೋಡುವುದು ಹೇಗೆ?

ವೈಯಕ್ತಿಕ ಸ್ಥಳಗಳಲ್ಲಿ ಅಂದರೆ ರೆಸಿಡೆನ್ಸ್ ಇಲ್ಲವೇ ವ್ಯವಹಾರ ಪ್ರದೇಶಗಳಲ್ಲಿ ಹಿಡನ್ ಕ್ಯಾಮೆರಾಗಳನ್ನು ಇರಿಸುವುದು ಸಾಮಾನ್ಯವಾಗಿದೆ. ಮಲಗುವ ಕೋಣೆ, ಲಿವಿಂಗ್ ರೂಮ್ ಮತ್ತು ಮೌಲ್ಯಯುತ ಐಟಮ್‌ಗಳನ್ನು ನಿಮ್ಮ ಕೊಠಡಿ ಹೊಂದಿದೆ ಎಂದಾದಲ್ಲಿ ಇಲ್ಲಿ ಹಿಡನ್ ಕ್ಯಾಮೆರಾಗಳು ಸಾಮಾನ್ಯವಾಗಿರುತ್ತವೆ.

ಟಿಶ್ಯೂ ಬಾಕ್ಸ್‌

ಟಿಶ್ಯೂ ಬಾಕ್ಸ್‌

ಪುಸ್ತಕಗಳು, ಹೊಗೆ ಪರಿಶೋಧಕಗಳು, ಡೆಸ್ಕ್‌ ಕೆಳಗೆ, ಟಿಶ್ಯೂ ಬಾಕ್ಸ್‌ಗಳಲ್ಲಿ ಹಿಡನ್ ಕ್ಯಾಮೆರಾಗಳನ್ನು ನಿಮಗೆ ಕಾಣಬಹುದಾಗಿದೆ. ಇಂತಹ ಸ್ಥಳದಲ್ಲಿ ಹಿಡನ್ ಕ್ಯಾಮೆರಾಗಳನ್ನು ಸಾಮಾನ್ಯವಾಗಿ ಇರಿಸಲಾಗುತ್ತದೆ.

ಜಿಮ್‌ಬ್ಯಾಗ್

ಜಿಮ್‌ಬ್ಯಾಗ್

ಜಿಮ್‌ಬ್ಯಾಗ್, ಪರ್ಸ್, ಡಿವಿಡಿ ಕೇಸ್, ಕನ್ನಡಕ ಮುಂತಾದ ವಸ್ತುಗಳಲ್ಲಿ ಕೂಡ ನಿಮಗೆ ಹಿಡನ್ ಕ್ಯಾಮರಾಗಳು ಕಂಡುಬರಬಹುದು.

ಡಿವಿಡಿ ಕೇಸ್

ಡಿವಿಡಿ ಕೇಸ್

ಜಿಮ್‌ಬ್ಯಾಗ್, ಪರ್ಸ್, ಡಿವಿಡಿ ಕೇಸ್, ಕನ್ನಡಕ ಮುಂತಾದ ವಸ್ತುಗಳಲ್ಲಿ ಕೂಡ ನಿಮಗೆ ಹಿಡನ್ ಕ್ಯಾಮರಾಗಳು ಕಂಡುಬರಬಹುದು.

ಎತ್ತರದ ಕಟ್ಟಡ

ಎತ್ತರದ ಕಟ್ಟಡ

ಎತ್ತರದ ಕಟ್ಟಡಗಳಲ್ಲಿ ಕೂಡ ಹಿಡನ್ ಕ್ಯಾಮರಾಗಳನ್ನು ಇರಿಸಿರುತ್ತಾರೆ. ತೆರೆದ ಮೇಲ್ಛಾವಣಿಯಲ್ಲಿ ಹಿಡನ್ ಕ್ಯಾಮರಾಗಳನ್ನು ನಿಮಗೆ ಕಾಣಬಹುದು.

ಸರಿಯಾಗಿ ಪರಿಶೀಲಿಸಿ

ಸರಿಯಾಗಿ ಪರಿಶೀಲಿಸಿ

ನೀವು ಇರುವ ಕೊಠಡಿಯನ್ನು ಸರಿಯಾಗಿ ಪರಿಶೀಲಿಸಿ. ಅಂದರೆ ಫ್ಲವರ್ ವಾಜ್, ಗೋಡೆಯ ಮೇಲಿರುವ ಪೇಂಟಿಂಗ್, ನಿಮ್ಮ ಕಣ್ಣಿಗೆ ಭಿನ್ನವಾಗಿ ಕಾಣುವ ವಸ್ತುಗಳನ್ನು ಸರಿಯಾಗಿ ಪರಿಶೀಲಿಸಿ.

ಕ್ಯಾಮರಾ ರೋಲ್ ಆಗುವ ಧ್ವನಿ

ಕ್ಯಾಮರಾ ರೋಲ್ ಆಗುವ ಧ್ವನಿ

ಸಣ್ಣ ಚಲನೆ, ಅಥವಾ ಕ್ಯಾಮರಾ ರೋಲ್ ಆಗುವ ಧ್ವನಿ ನಿಮಗೆ ಕೇಳಿಸುತ್ತದೆಯೇ ಎಂಬುದನ್ನು ಪರಿಶೀಲಿಸಿ.

ಎಲ್ಲಾ ಲೈಟ್‌ ಆಫ್ ಮಾಡಿ

ಎಲ್ಲಾ ಲೈಟ್‌ ಆಫ್ ಮಾಡಿ

ಕೊಠಡಿಯಲ್ಲಿರುವ ಎಲ್ಲಾ ಲೈಟ್‌ಗಳನ್ನು ಆಫ್ ಮಾಡಿ ಮತ್ತು ಹಸಿರು, ಕೆಂಪು ಬೆಳಕಿಗಾಗಿ ಹುಡುಕಾಡಿ.

ಕತ್ತಲೆಯಲ್ಲಿ ಕ್ಯಾಮೆರಾದ ಬೆಳಕು

ಕತ್ತಲೆಯಲ್ಲಿ ಕ್ಯಾಮೆರಾದ ಬೆಳಕು

ಕೊಠಡಿಯ ಎಲ್ಲಾ ಲೈಟ್ ಅನ್ನು ಆಫ್ ಮಾಡಿ ಮತ್ತು ಟಾರ್ಚ್ ಅನ್ನು ಬಳಸಿ ಕೊಠಡಿಯಲ್ಲಿ ಕಾಣುವ ನೀಲಿ, ಕೆಂಪು ಬೆಳಕಿಗಾಗಿ ಹುಡುಕಿ. ಕತ್ತಲೆಯಲ್ಲಿ ಕ್ಯಾಮೆರಾದ ಬೆಳಕು ಕಾಣುತ್ತಿದೆಯೇ ಎಂಬುದನ್ನು ಅವಲೋಕಿಸಿ.

ಪಿನ್ ಹೋಲ್ ಕ್ಯಾಮೆರಾ

ಪಿನ್ ಹೋಲ್ ಕ್ಯಾಮೆರಾ

ಪಿನ್ ಹೋಲ್ ಕ್ಯಾಮೆರಾದಲ್ಲಿ ಸಿಸಿಡಿಯನ್ನು ನಿಮಗೆ ಕಾಣಬಹುದು. ಪೇಪರ್ ಟಿಶ್ಯೂವನ್ನು ಬಳಸಿಕೊಂಡು ಅದನ್ನು ರೋಲ್‌ನಂತೆ ಸುತ್ತಿ. ಮತ್ತು ಪಿನ್ ಹೋಲ್ ಕ್ಯಾಮೆರಾಗಳಿಗಾಗಿ ಹುಡುಕಿ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಫೋನ್‌ನಲ್ಲಿ ಸಂಪರ್ಕಗಳನ್ನು ಬ್ಯಾಕಪ್ ಮಾಡಲು ಟಿಪ್ಸ್ </a><br /><a href=ಎಚ್ಚರ !! ಸಾಮಾಜಿಕ ಜಾಲತಾಣ ಬಳಕೆ ನಿದ್ರೆಗೆ ಕಂಟಕ
ಫೋನ್‌ನಲ್ಲಿ ಫೋಟೋ ತೆಗೆಯುವಾಗ ಪಾಲಿಸಬೇಕಾದ ಸಲಹೆಗಳು
ವಾಟ್ಸಾಪ್ ಗ್ರೂಪ್‌ನಿಂದ ಉದ್ಯೋಗಕ್ಕೆ ನೇಮಕ " title="ಫೋನ್‌ನಲ್ಲಿ ಸಂಪರ್ಕಗಳನ್ನು ಬ್ಯಾಕಪ್ ಮಾಡಲು ಟಿಪ್ಸ್
ಎಚ್ಚರ !! ಸಾಮಾಜಿಕ ಜಾಲತಾಣ ಬಳಕೆ ನಿದ್ರೆಗೆ ಕಂಟಕ
ಫೋನ್‌ನಲ್ಲಿ ಫೋಟೋ ತೆಗೆಯುವಾಗ ಪಾಲಿಸಬೇಕಾದ ಸಲಹೆಗಳು
ವಾಟ್ಸಾಪ್ ಗ್ರೂಪ್‌ನಿಂದ ಉದ್ಯೋಗಕ್ಕೆ ನೇಮಕ " loading="lazy" width="100" height="56" />ಫೋನ್‌ನಲ್ಲಿ ಸಂಪರ್ಕಗಳನ್ನು ಬ್ಯಾಕಪ್ ಮಾಡಲು ಟಿಪ್ಸ್
ಎಚ್ಚರ !! ಸಾಮಾಜಿಕ ಜಾಲತಾಣ ಬಳಕೆ ನಿದ್ರೆಗೆ ಕಂಟಕ
ಫೋನ್‌ನಲ್ಲಿ ಫೋಟೋ ತೆಗೆಯುವಾಗ ಪಾಲಿಸಬೇಕಾದ ಸಲಹೆಗಳು
ವಾಟ್ಸಾಪ್ ಗ್ರೂಪ್‌ನಿಂದ ಉದ್ಯೋಗಕ್ಕೆ ನೇಮಕ

Best Mobiles in India

English summary
In this article we are laid down some easy steps on how to find out hidden cameras which well there in Dress changing rooms, Hotels and office areas.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X