ರಕ್ಷಣಾ ಸಂಶೋಧನೆ ಸಂಸ್ಥೆಯ ವೆಬ್‌ಸೈಟ್‌ ಹ್ಯಾಕ್ ಮಾಡಿದ ಪಾಕಿಸ್ತಾನಿ ಹ್ಯಾಕರ್ಸ್!!

Written By:

ಭಾರತೀಯ ರಕ್ಷಣಾ ಇಲಾಖೆ, ಪರಮಾಣು ಸಂಶೋಧನೆಗೆ ಸಂಬಂದಪಟ್ಟಿರುವ ಹಾಗೂ ವಿಶ್ವವಿಧ್ಯಾಲಯಗಳ 10 ವೆಬ್‌ಸೈಟ್‌ಗಳಿಗೆ ಹ್ಯಾಕರ್‌ಗಳು ದಾಳಿಮಾಡಿದ್ದು, ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆಯನ್ನು ಪ್ರದರ್ಶಿಸಿ ಉಧ್ದಟತನ ಮೆರೆದಿದ್ದಾರೆ. ಪಾಕಿಸ್ತಾನ ಹ್ಯಾಕ್ಸರ್ಸ್ ಕ್ರೂ ಎಂದು ಹೇಳಿಕೊಂಡಿರುವ ಹ್ಯಾಕರ್‌ಗಳ ಗುಂಪು ಈ ದಾಳಿಮಾಡಿದ್ದಾಗಿ ಹೇಳಿಕೊಂಡಿದೆ.!!

ವೆಬ್‌ಸೈಟ್ ಹ್ಯಾಕ್ ಮಾಡಿರುವ ಕ್ರಿಮಿನಲ್‌ಗಳು, ಭಾರತ ಸರ್ಕಾರ ಮತ್ತು ಭಾರತದ ಪ್ರಜೆಗಳಿಗೆ ಶುಭಾಶಯಗಳು. ನಿಮ್ಮ ಸೈನಿಕರು ಕಾಶ್ಮೀರದಲ್ಲಿ ಏನು ಮಾಡುತ್ತಿದ್ದಾರೆ ಗೊತ್ತಿದೆಯೇ? ಕಾಶ್ಮೀರದ ಮುಗ್ಧ ಜನರನ್ನು ಅವರು ಕೊಲ್ಲುತ್ತಿದ್ದಾರೆ ಎಂಬ ಸಂದೇಶಗಳನ್ನು ವೆಬ್‌ಸೈಟ್‌ಗಳಲ್ಲಿ ಹಾಕಿದ್ದಾರೆ.!

ರಕ್ಷಣಾ ಸಂಶೋಧನೆ ಸಂಸ್ಥೆಯ ವೆಬ್‌ಸೈಟ್‌ ಹ್ಯಾಕ್ ಮಾಡಿದ ಪಾಕಿಸ್ತಾನಿ ಹ್ಯಾಕರ್ಸ್!!

ಯಾರಾದರೂ ನಿಮ್ಮ ತಾಯಿ ಅಥವಾ ಸಹೋದರಿ ಮೇಲೆ ಅತ್ಯಾಚಾರ ಮಾಡಿದರೆ ಹೇಗನಿಸಬಹುದು? ನಿಮ್ಮ ಸಹೋದರ, ಸಹೋದರಿ, ಅಪ್ಪ ಮತ್ತು ಅಮ್ಮಂದಿರನ್ನು ಕೊಂದರೆ ನಿಮಗೆ ಹೇಗನ್ನಿಸುತ್ತದೆ? ಈಗಲೂ ಕಾಶ್ಮೀರದಲ್ಲಿ ಈಗಲೂ ಅವರು ಅತ್ಯಾಚಾರ ಮಾಡುತ್ತಿದ್ದಾರೆ ಎಂಬುದು ತಿಳಿದಿದೆಯೇ? ಎಂದು ಹ್ಯಾಕರ್‌ಗಳು ಹೇಳಿದ್ದಾರೆ.

ರಕ್ಷಣಾ ಸಂಶೋಧನೆ ಸಂಸ್ಥೆಯ ವೆಬ್‌ಸೈಟ್‌ ಹ್ಯಾಕ್ ಮಾಡಿದ ಪಾಕಿಸ್ತಾನಿ ಹ್ಯಾಕರ್ಸ್!!

ಸೇನೆಯು ಜನರ ಮೇಲೆ ಕ್ರೌರ್ಯ ನಡೆಸುತ್ತಿದೆ ಎಂದಿರುವ ವಿಡಿಯೋಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದ್ದು, ಈ ಎರಡು ವಿಡಿಯೊಗಳಿಗೆ ಪಾಕಿಸ್ತಾನ ಜಿಂದಾಬಾದ್ ಎಂಬ ಹೆಸರನ್ನು ನಿಡಲಾಗಿದೆ. ಭಾರತೀಯರಿಗೆ ನಮ್ಮ ಸಂದೇಶವನ್ನು ರವಾನಿಸಲು ವೆಬ್‌ಸೈಟ್ ಹ್ಯಾಕ್ ಮಾಡಿದ್ದೇವೆ. ಬೇರೆ ಯಾವ ಮಾಹಿತಿಯನ್ನು ಕದ್ದಿಲ್ಲ ಎಂದು ಹೇಳಿಕೊಂಡಿದ್ದಾರೆ.

English summary
Just here to deliver my message to the government and the people of India. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot