Just In
Don't Miss
- News
ಅತ್ಯಾಚಾರ ಸಂತ್ರಸ್ತೆ ಸ್ಥಿತಿ ಗಂಭೀರ: ಆ ಪಾಪಿಗಳು ನೇಣಿಗೇರುವುದನ್ನು ನೋಡಬೇಕು ಎಂದ ಯುವತಿ
- Sports
ಭಾರತ vs ವೆಸ್ಟ್ ಇಂಡೀಸ್ ಟಿ20: ರೋಚಕ ಕಾದಾಟದಲ್ಲಿ ಭರ್ಜರಿಯಾಗಿ ಗೆದ್ದ ಟೀಂ ಇಂಡಿಯಾ
- Finance
ಭಾರತದಲ್ಲಿ ಸತತ 3ನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ
- Automobiles
ಮತ್ತೊಮ್ಮೆ ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಬಿಎಸ್-6 ರಾಯಲ್ ಎನ್ಫೀಲ್ಡ್ ಥಂಡರ್ಬರ್ಡ್
- Education
JEE Main Admit Card 2020: ಜೆಇಇ ಜನವರಿ ಪ್ರಮುಖ ಪರೀಕ್ಷೆಯ ಪ್ರವೇಶ ಪತ್ರ ಇಂದು ಪ್ರಕಟ
- Movies
Alidu Ulidavaru review: ಥ್ರಿಲ್ಲಿಂಗ್ ಜೊತೆಗೆ ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ ಸಿನಿಮಾ
- Lifestyle
ಯಾವ ಸೆಲೆಬ್ರೆಟಿಯೂ ಈ 5 ಬ್ಯೂಟಿ ಸೀಕ್ರೆಟ್ ನಿಮಗೆ ಹೇಳುವುದೇ ಇಲ್ಲ!
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಡೆಬಿಟ್/ಕ್ರೆಡಿಟ್ ಕಾರ್ಡ್‌ನಿಂದ ಕ್ರಿಮಿನಲ್‌ಗಳು ಈ 10 ಮಾರ್ಗದಲ್ಲಿ ಹಣ ಕದಿಯುತ್ತಾರೆ: ಎಚ್ಚರ!
ತಂತ್ರಜ್ಞಾನ ಅಭಿವೃದ್ದಿಗೊಂಡಂತೆಲ್ಲಾ ಹಲವು ಬಗೆಯ ಕೆಲಸಗಳು ಹೆಚ್ಚು ಸುಲಭವಾಗುತ್ತಿವೆ. ಅದಕ್ಕೆ ಉದಾಹರಣೆಯಾಗಿ ಕ್ಯಾಶ್‌ಲೆಸ್ ಹಣ ವ್ಯವಹಾರ ಮಾಡಲು ಹೊರಟಿರುವುದು ಸಾಕ್ಷಿ ಎನ್ನಬಹುದು. ದೊಡ್ಡ ದೊಡ್ಡ ನಗರಗಳಲ್ಲಿ ಅಂತೂ ಈಗಾಗಲೇ ಆನ್‌ಲೈನ್ ಪೇಮೆಂಟ್ ಸಿಸ್ಟಮ್ ಹೆಚ್ಚು ಬೆಳವಣಿಗೆಗೊಂಡಿದೆ. ಆದ್ರೆ ಕ್ರಿಮಿನಲ್‌ಗಳು ಈ ಕ್ಷೇತ್ರದಲ್ಲಿಯೂ ವಂಚಿಸುವ ಘಟನೆಗಳು ಇತ್ತೀಚೆಗೆ ಬೆಳಕಿಗೆ ಬರುತ್ತಿವೆ.
ಆನ್‌ಲೈನ್ ಪೇಮೆಂಟ್ ಮತ್ತು ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿಸುವಲ್ಲಿಯೂ ಇಂದು ಕ್ರಿಮಿನಲ್‌ಗಳು ಹಲವು ವಿಧಾನಗಳಿಂದ ಹಣ ಕದಿಯುತ್ತಿದ್ದಾರೆ. ಅಲ್ಲದೇ ಈ ಕಾರ್ಡ್‌ಗಳ ಇತರೆ ಮಾಹಿತಿಯನ್ನು ಹ್ಯಾಕ್ ಮಾಡುತ್ತಿದ್ದಾರೆ. ಆದರೆ ಈ ರೀತಿಯ ಚಟುವಟಿಕೆಗಳು ಡೆಬಿಟ್/ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ತಿಳಿಯದೇ ನಡೆಯುತ್ತಿವೆ. ಹಾಗಿದ್ರೆ ಕ್ರಿಮಿನಲ್‌ಗಳು ಡೆಬಿಟ್/ಕ್ರೆಡಿಟ್ ಕಾರ್ಡ್ ಮೂಲಕ ಹಣ ಕದಿಯುವುದಾದರೂ ಹೇಗೆ? ಎಂಬ ಪ್ರಶ್ನೆಗೆ ಉತ್ತರವನ್ನು ಈ ಕೆಳಗೆ ಓದಿ ತಿಳಿಯಿರಿ.
ಕ್ರಿಮಿನಲ್‌ಗಳು ಈ ಕೆಳಗಿನ 10 ಮಾರ್ಗಗಳಲ್ಲಿ ಡೆಬಿಟ್/ಕ್ರೆಡಿಟ್ ಕಾರ್ಡ್‌ನಿಂದ ಹಣ ಕದಿಯಬಲ್ಲರು. ಅವುಗಳು ಯಾವುವು ಎಂದು ಲೇಖನದಲ್ಲಿ ಓದಿರಿ.

ಸ್ಕಿಮ್ಮಿಂಗ್
" ಕೆಲವರು ಕಾರ್ಡ್ ರೀಡರ್ ಸ್ಲಾಟ್‌ನಲ್ಲಿ ಡೇಟಾ ಸ್ಕಿಮ್ಮಿಂಗ್ ಡಿವೈಸ್ ಅನ್ನು ಅಟಾಚ್ ಮಾಡಿರುತ್ತಾರೆ, ಇದು ಮ್ಯಾಗ್ನೆಟಿಕ್ ಸ್ಟ್ರಿಪ್ ಮೂಲಕ ಡೇಟಾವನ್ನು ಕಾರ್ಡ್ ಸ್ವೈಪ್ ಮಾಡಿದಾಗ ಕಾಪಿ ಮಾಡಿಕೊಳ್ಳುತ್ತದೆ" ಎಂದು ಎಕ್ಸೇಪಿರಿಯನ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ಮೋಹನ್ ಜಯರಾಮ್ ಹೇಳಿದ್ದಾರೆ.
ಅಲ್ಲದೇ ಕ್ರಿಮಿನಲ್‌ಗಳು ಹಣ ಕದಿಯಲು ಮಷಿನ್ ಹತ್ತಿರ ಕ್ಯಾಮೆರಾ ಅಳವಡಿಸಿ ಪಿನ್ ಪಡೆಯುತ್ತಾರೆ ಎಂದು ಹೇಳಿದ್ದಾರೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾರ್ಡ್ ಟ್ರ್ಯಾಪಿಂಗ್
ಕೆಲವು ಮಷಿನ್‌ಗಳಲ್ಲಿ ಕಾರ್ಡ್ ಟ್ರ್ಯಾಪ್ ಮಾಡಲು 'ಬಾರ್ಬ್' ತಂತ್ರಗಾರಿಕೆ ಅಳವಡಿಸಲಾಗಿರುತ್ತದೆಯಂತೆ. ಒಮ್ಮೆ ನೀವು ಕಾರ್ಡ್ ಸ್ವೈಪ್ ಮಾಡಿದರೆ, ಸ್ವಲ್ಪ ಸಮಯಗಳ ನಂತರ, ಅಂದರೆ ನೀವು ಹೋದ ತದನಂತರದಲ್ಲಿ ಹಣವನ್ನು ಪುನಃ ಪಡೆದುಕೊಳ್ಳಲು ಸಹಾಯಕವಾಗುವ ತಂತ್ರಗಾರಿಕೆ ಇದು.

ಸೋಲ್ಡರ್ ಸರ್ಫಿಂಗ್
ಡೆಬಿಟ್ ಕಾರ್ಡ್ ಮೂಲಕ ಹಣ ಪಡೆಯಲು ಎಟಿಎಂ ರೂಮ್‌ಗೆ ಹೋದಾಗ, ಕಾರ್ಡ್ ಸ್ಟಕ್ ಆದಲ್ಲಿ ಕೆಲವರು ಅಲ್ಲೇ ಇದ್ದು, ನಿಮ್ಮ ಸಹಾಯಕ್ಕೆ ಬಂದರೆ, ಎಚ್ಚರ ವಹಿಸಬೇಕಾಗಿದೆ. ಕಾರಣ ಅವರು ಪಿನ್ ಅನ್ನು ಮತ್ತೊಮ್ಮೆ ಹೇಳಿ ಎಂದು ಕೇಳುತ್ತಾರೆ. ನಂತರದಲ್ಲಿ ಹಣ ಕದಿಯಲು ಉಪಯೋಗಿಸುತ್ತಾರೆ.

ಡೆಬಿಟ್ ಕಾರ್ಡ್ ಮತ್ತು ಪಿನ್
ಕೆಲವರು ಹಲವು ಬ್ಯಾಂಕ್ ಖಾತೆಗಳ ಡೆಬಿಟ್ ಕಾರ್ಡ್‌ಗಳನ್ನು ಬಳಸುತ್ತಾರೆ. ಆದ್ದರಿಂದ ಎಲ್ಲಾ ಡೆಬಿಟ್ ಕಾರ್ಡ್‌ಗಳ ಪಿನ್ ನಂಬರ್ ನೆನಪಿಟ್ಟುಕೊಳ್ಳಲು ಸಮಸ್ಯೆ ಎಂದು ಡೆಬಿಟ್ ಕಾರ್ಡ್ ಮೇಲೆಯೇ ಪಿನ್ ಬರೆಯುವುದು ಉಂಟು. ಅಂತಹ ಕಾರ್ಡ್‌ಗಳನ್ನು ಎಟಿಎಂ ಮಷಿನ್ ರೂಮ್‌ನಲ್ಲಿಯೇ ಬಿಟ್ಟು ಬಂದಲ್ಲಿ ಹಣ ಕದಿಯಲು ಸುಲಭ ಮಾಡಿಕೊಟ್ಟಂತೆ.

ಆನ್‌ಲೈನ್ ಹಣ ವರ್ಗಾವಣೆ
ಇ-ಶಾಪಿಂಗ್ ಮತ್ತು ಆನ್‌ಲೈನ್ ಶಾಪಿಂಗ್ ಇತ್ತಿಚೆಗೆ ಹೆಚ್ಚಾಗಿದೆ. ಈ ಆನ್‌ಲೈನ್ ಶಾಪಿಂಗ್ ಮಾಡಲು ಬಳಸುವ ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್ ಅನ್ನು ಕಳ್ಳರು ತೆಗೆದುಕೊಂಡು ಹೋದರೆ, ಅವರು ಸರಾಗವಾಗಿ ನಿಮ್ಮ ಕಾರ್ಡ್ ಮಾಹಿತಿ ಪಡೆದು ಹಣ ಕದಿಯಬಹುದಾದ ಅವಕಾಶ ಉಂಟು. ಆದ್ದರಿಂದ ಎಚ್ಚರವಹಿಸಲೇಬೇಕು.
ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಫಾರ್ಮಿಂಗ್
ಈ ತಂತ್ರದಲ್ಲಿ, ವಂಚಕರು ಜನರನ್ನು ಫೇಕ್ ವೈಬ್‌ಸೈಟ್‌ಗಳಿಗೆ ನೇರವಾಗಿ ಕಳಿಸಿ, ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿಸುವಂತೆ ಮಾಡುತ್ತಾರೆ. ಅಥವಾ ಕಾರ್ಡ್ ಮಾಹಿತಿ ಪಡೆದು, ಪಾಸ್‌ವರ್ಡ್ ಅನ್ನು ಪಡೆಯುವ ಸಂಭವ ಹೆಚ್ಚು.

ಕೀಸ್ಟ್ರೋಕ್ ಲಾಗಿಂಗ್
ಕೆಲವೊಂದು ಸಾಫ್ಟ್‌ವೇರ್‌ಗಳನ್ನು ಯಾವುದೇ ಉದ್ದೇಶವಿಲ್ಲದೇ ಡೌನ್‌ಲೋಡ್ ಮಾಡಬಹುದು. ಆದರೆ ಅಂತಹ ಸಾಫ್ಟ್‌ವೇರ್‌ಗಳು ತದನಂತರ ವಂಚಕರು ಕೀ ಸ್ಟ್ರೋಕ್ ಮೂಲಕ ಪಾಸ್‌ವರ್ಡ್ ಕದಿಯಲು ಅಥವಾ ಕ್ರೆಡಿಟ್ ಕಾರ್ಡ್ ಮತ್ತು ನೆಟ್ ಬ್ಯಾಂಕಿಂಗ್ ವಿವರ ಪಡೆಯಲು ಅವಕಾಶ ನೀಡುತ್ತವೆ.

ಸಾರ್ವಜನಿಕ ವೈಫೈ
ಹಣವನ್ನು ಇತರರಿಗೆ ಆನ್‌ಲೈನ್‌ನಲ್ಲಿ ವರ್ಗಾಯಿಸಲು, ಅಥವಾ ಆನ್‌ಲೈನ್ ಖರೀದಿಗೆ ಸಾರ್ವಜನಿಕ ವೈಫೈ ಸೇವೆ ಬಳಸುವವರು ಇದ್ದಾರೆ. ಆದರೆ ಈ ಚಟುವಟಿಕೆಗಳಿಗೆ ಸಾರ್ವಜನಿಕ ವೈಫೈ ಸೇವೆ ಅಪಾಯಕಾರಿ ಆಗಿದ್ದು, ವಂಚಕರು ಪಾಸ್‌ವರ್ಡ್ ಮತ್ತು ಕಾರ್ಡ್ ಮಾಹಿತಿ ಪಡೆಯುವ ಅವಕಾಶ ಹೆಚ್ಚು.

ಮಾಲ್‌ವೇರ್.
ಮಾಲ್‌ವೇರ್ ಸಾಫ್ಟ್‌ವೇರ್‌ಗಳು ಕಂಪ್ಯೂಟರ್‌ಗಳನ್ನು ಎಟಿಎಂಗಳಲ್ಲಿ ಮತ್ತು ಬ್ಯಾಂಕ್ ಸರ್ವರ್‌ಗಳಲ್ಲಿ ಹಾನಿಯುಂಟು ಮಾಡಿ, ವಂಚಕರಿಗೆ ಗೌಪ್ಯ ಕಾರ್ಡ್ ಮಾಹಿತಿಗಳನ್ನು ಆಕ್ಸೆಸ್ ಮಾಡಲು ಅವಕಾಶ ನೀಡುತ್ತವೆ.

ವ್ಯಾಪಾರಿಗಳು ಅಥವಾ ಪಾಯಿಂಟ್ ಆಫ್ ಸೇಲ್ ಕಳ್ಳತನ
ಇದೊಂದು ರೀತಿಯ ಪರಿಣಾಮಕಾರಿ ಮಾರ್ಗವಾಗಿದೆ. ಸೇಲ್ಸ್‌ಮ್ಯಾನ್‌ಗಳಿಗೆ ಕಾರ್ಡ್ ಅನ್ನು ಸ್ವೈಪ್ ಮಾಡಲು ನೀಡಿದಾಗ ನಂತರದಲ್ಲಿ ಮ್ಯಾಗ್ನೆಟಿಕ್ ಸ್ಟ್ರಿಪ್ ಮೂಲಕ ಕಾನೂನು ಬಾಹಿರವಾಗಿ ಅವರು ಪುನಃ ಅದೇ ಮಾಹಿತಿ ಬಳಸಿಕೊಂಡು ಹಣ ಕದಿಯುವ ಸಂಭವವಿರುತ್ತದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090