Home
ಸುದ್ದಿಜಾಲ

ನಿಮ್ಮ ಫೋನ್ ಅನ್ನು ಅತ್ಯುತ್ತಮಗೊಳಿಸುವ ವಿಧಾನಗಳು

By Shwetha

ನಿಮ್ಮ ಸ್ಮಾರ್ಟ್‌ಫೋನ್ ಎಷ್ಟೇ ದುಬಾರಿಯಾಗಿದ್ದರೂ ಉಪಯುಕ್ತ ಅಪ್ಲಿಕೇಶನ್‌ಗಳು ಅದರಲ್ಲಿಲ್ಲ ಎಂದಲ್ಲಿ ಅದು ವೇಸ್ಟ್ ಆದಂತೆಯೇ ಸರಿ. ಹೌದು ಸ್ಮಾರ್ಟ್‌ಫೋನ್‌ನಲ್ಲಿ ಅಪ್ಲಿಕೇಶನ್‌ಗಳು ಹೆಚ್ಚು ಮಹತ್ವಪೂರ್ಣ ಅಂತೆಯೇ ಹೆಚ್ಚು ಅಗತ್ಯವಾಗಿರುವುದರಿಂದ ದಿನನಿತ್ಯದ ಹೆಚ್ಚು ಬಳಕೆಯ ಅಪ್ಲಿಕೇಶನ್‌ಗಳನ್ನು ನಿಮ್ಮ ಫೋನ್‌ನಲ್ಲಿ ನೀವು ಅಳವಡಿಸಲು ಮರೆಯಲೇ ಬಾರದು.

ಓದಿರಿ: ನಿಮ್ಮ ಮೊಬೈಲ್ ಭದ್ರತೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು

ಇಂದಿನ ಲೇಖನದಲ್ಲಿ ನಿಮ್ಮ ಫೋನ್‌ನ ಕಾರ್ಯವೈಖರಿಯನ್ನು ಇನ್ನಷ್ಟು ಉತ್ತಮಗೊಳಿಸುವ ಅಪ್ಲಿಕೇಶನ್‌ಗಳ ಪಟ್ಟಿಯನ್ನು ಇಲ್ಲಿ ನಾವು ನೀಡುತ್ತಿದ್ದು ನಿಮ್ಮ ಫೋನ್ ಅನ್ನು ಇದು ಇನ್ನಷ್ಟು ಚುರುಕುಗೊಳಿಸುವುದು ಖಂಡಿತ. ಬನ್ನಿ ಹಾಗಿದ್ದರೆ ಆ ಅಪ್ಲಿಕೇಶನ್‌ಗಳು ಯಾವುವು ಎಂಬುದನ್ನು ಅರಿತುಕೊಳ್ಳೋಣ.

ಇಮೇಜ್ ಗ್ಯಾಲರಿ

ಇಮೇಜ್ ಗ್ಯಾಲರಿ

ಕ್ವಿಕ್ ಪಿಕ್ ಎಂಬ ಅಪ್ಲಿಕೇಶನ್ ಬಹು ವೀಕ್ಷಣಾ ಆಯ್ಕೆಗಳನ್ನು ನಿಮಗೆ ನೀಡಲಿದ್ದು ಬಣ್ಣ ಥೀಮ್‌ಗಳು, ಕ್ಲೌಡ್ ಸ್ಟೋರೇಜ್ ಬೆಂಬಲ, ವೈಫೈ ಟ್ರಾನ್ಸಫರ್, ಪಾಸ್‌ವರ್ಡ್ ಲಾಕ್ ಮೊದಲಾದ ಸೌಲಭ್ಯಗಳನ್ನು ಇದು ಒಳಗೊಂಡಿದೆ.

ಇಮೇಲ್

ಇಮೇಲ್

ಕ್ಲೌಡ್ ಮ್ಯಾಜಿಕ್ ಅಪ್ಲಿಕೇಶನ್ ನಿಮಗೆ 5 ಖಾತೆಗಳನ್ನು ಸೇರಿಸಲು ಅನುಮತಿಯನ್ನು ನೀಡುತ್ತಿದ್ದು ಎಲ್ಲಾ ಪ್ರಕಾರದ ಇಮೇಲ್ ಪ್ರೊವೈಡರ್ ಅನ್ನು ಬೆಂಬಲಿಸುತ್ತದೆ.

ಕ್ಯಾಲೆಂಡರ್

ಕ್ಯಾಲೆಂಡರ್

ಸೋಲ್‌ಕ್ಯಾಲೆಂಡರ್ ಅತ್ಯುತ್ತಮವಾಗಿರುವ ಕ್ಯಾಲೆಂಡರ್ ಅಪ್ಲಿಕೇಶನ್ ಆಗಿದ್ದು, ನಿಮಗೆ ಸರಳವಾಗಿ ಅರ್ಥವಾಗುವ ಮಾಸಿಕ ವೀಕ್ಷಣೆ, ಹವಾಮಾನ ವರದಿ, ಅಲರಾಮ್ ಸೆಟ್ಟಿಂಗ್‌ಗಳನ್ನು ಮಾಡಬಹುದಾಗಿದೆ.

ಕ್ಯಾಮೆರಾ

ಕ್ಯಾಮೆರಾ

ಗೂಗಲ್ ತನ್ನದೇ ಕ್ಯಾಮೆರಾ ಅಪ್ಲಿಕೇಶನ್ ಅನ್ನು ಪ್ಲೇಸ್ಟೋರ್‌ನಲ್ಲಿ ಒದಗಿಸುತ್ತಿದ್ದು ಇದು ಮೂಲ ಇಂಟರ್ಫೇಸ್ ಅನ್ನು ಹೊಂದಿದೆ. ಫೋಟೋಸ್ಪೈಯರ್, 360 ಡಿಗ್ರಿ ಪನೋರಮಾಸ್ ಮತ್ತು ವೀಡಿಯೊ ರೆಕಾರ್ಡಿಂಗ್ ಮಾಡುತ್ತಿರುವಾಗ ಚಿತ್ರಗಳನ್ನು ಸೆರೆಹಿಡಿಯುವ ಕೌಶಲ್ಯ ಇದರಲ್ಲಿದೆ.

ಟಿಪ್ಪಣಿಗಳು

ಟಿಪ್ಪಣಿಗಳು

ಎವರ್ ನೋಟ್ ಟಿಪ್ಪಣಿಗಳನ್ನು ಸಂಗ್ರಹಿಸಲು ಹೇಳಿ ಮಾಡಿಸಿದ ಅಪ್ಲಿಕೇಶನ್ ಆಗಿದ್ದು ನೋಟ್‌ಬುಕ್‌ಗಳಾಗಿ ನಿಮ್ಮ ಟಿಪ್ಪಣಿಗಳನ್ನು ಮಾರ್ಪಡಿಸಬಹುದಾಗಿದೆ.

ಸಂಪರ್ಕಗಳು

ಸಂಪರ್ಕಗಳು

ಎರಡು ಸಂಪರ್ಕಿತ ಸಂಪರ್ಕ ಅಪ್ಲಿಕೇಶನ್‌ಗಳನ್ನು ನೀವು ಪ್ರಯತ್ನಿಸಬಹುದು ಅದುವೇ 6 ಡಿಗ್ರೀಸ್ ಮತ್ತು ಅಡಾಪ್ಟ್. ಅಡಾಪ್ಟ್ ನಿಮ್ಮ ಸಂಪರ್ಕಗಳನ್ನು ಸಿಂಕ್ ಮಾಡಿದರೆ 6 ಡಿಗ್ರೀಸ್ ಹುಡುಕಾಡಲು ಅನುವು ಮಾಡಿಕೊಡುತ್ತದೆ.

ಡೈಲರ್

ಡೈಲರ್

ಟ್ರು ಡೈಲರ್ ತ್ವರಿತವಾಗಿ ಸಂಪರ್ಕಗಳನ್ನು ಹುಡುಕಲು ನಿಮಗೆ ನೆರವನ್ನೀಯುತ್ತದೆ. ಅಜ್ಞಾತ ಸಂಖ್ಯೆ ನಿಮ್ಮ ಫೋನ್‌ನಲ್ಲಿ ಡಿಸ್‌ಪ್ಲೇ ಆದಾಗ ಇದು ಕೂಡಲೇ ಮಾಹಿತಿ ನೀಡುತ್ತದೆ.

ಕೀಬೋರ್ಡ್ಸ್

ಕೀಬೋರ್ಡ್ಸ್

ಸ್ವಿಫ್ಟ್‌ಕೀ ನಿಮಗೆ 70 ಥೀಮ್‌ಗಳನ್ನು ನೀಡುತ್ತಿದ್ದು, ಇದರ ಗಾತ್ರವನ್ನು ನಿಮಗೆ ಹೊಂದಿಸಬಹುದಾಗಿದೆ. ನಿಮ್ಮ ಡಿವೈಸ್‌ನ ಸ್ಟೈಲ್‌ಗೆ ತಕ್ಕಂತೆ ಈ ಕೀಬೋರ್ಡ್ ಅನ್ನು ನಿಮಗೆ ಬಳಸಬಹುದು.

ಫೈಲ್ ಮ್ಯಾನೇಜರ್

ಫೈಲ್ ಮ್ಯಾನೇಜರ್

ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಮೂಲ ಫೈಲ್ ಎಕ್ಸ್‌ಪ್ಲೋರರ್ ಅನ್ನು ನೀವು ಹೊಂದಿದ್ದೀರಿ ಎಂದಾದಲ್ಲಿ ಇಎಸ್ ಫೈಲ್ ಎಕ್ಸ್‌ಪ್ಲೋರರ್ ನೋಡಲು ಸರಳವಾಗಿದ್ದರೂ ಹಗುರವಾದ ಅಪ್ಲಿಕೇಶನ್ ಆಗಿದೆ.

ಮೆಸೇಜಿಂಗ್

ಮೆಸೇಜಿಂಗ್

ಪ್ರಮಾಣಿತ ಎಸ್‌ಎಮ್‌ಎಸ್ ಅಪ್ಲಿಕೇಶನ್‌ನಿಂದ ನೀವು ಬೋರ್ ಹೊಡೆದಿರುವಿರಿ ಎಂದಾದಲ್ಲಿ, ನಿಮಗೊಂದು ಸರಳ ಟ್ರಿಕ್ಸ್ ಇಲ್ಲಿದೆ. ಎಸ್‌ಎಮ್ಎಸ್ ಬ್ಲಾಕರ್ ಅನ್ನು ಬಳಸಿ ನಿಮ್ಮ ಇನ್‌ಬಾಕ್ಸ್ ಅನ್ನು ಕ್ಲೀನ್ ಮಾಡಬಹುದು. ಡೀಫಾಲ್ಟ್ ಎಸ್‌ಎಮ್‌ಎಸ್ ಅಪ್ಲಿಕೇಶನ್‌ನಂತೆ ಇದನ್ನು ಹೊಂದಿಸಿ ಮತ್ತು ಎಲ್ಲಾ ಸ್ಪ್ಯಾಮ್ ಅನ್ನು ಸ್ವಯಂಚಾಲಿತವಾಗಿ ಇದು ಫಿಲ್ಟರ್ ಮಾಡುತ್ತದೆ.

Best Mobiles in India

English summary
Your Android phone has a lot of features baked in from the start, but what if you want better? There are some amazing (and free) third-party replacements for the stock features of any Android phone. Here are some awesome apps that we recommend to make your Android device even more awesome than it already is.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+