Home
ಸುದ್ದಿಜಾಲ

ಎಂಐ ಪವರ್ ಬ್ಯಾಂಕ್‌ಗಳ ದರದಲ್ಲಿ ಭಾರೀ ಇಳಿಕೆ..!

By Gizbot Bureau

ಅದೆಷ್ಟೋ ಸಂದರ್ಬಗಳಲ್ಲಿ ಪವರ್ ಬ್ಯಾಂಕ್ ಗಳು ನಮ್ಮ ನೆರವಿಗೆ ಬಂದು ಬಿಡುತ್ತದೆ. ಮೊಬೈಲ್ ಜಾರ್ಜ್ ಇಲ್ಲ ಬಸ್ಸಿನಲ್ಲೋ, ರೈಲಿನಲ್ಲೂ ದೂರ ಪ್ರಯಾಣ ಮಾಡುತ್ತಿದ್ದೇವೆ ಎಂದರೆ ಒಂದು ಪವರ್ ಬ್ಯಾಂಕ್ ಎಷ್ಟು ಉಪಕಾರ ಮಾಡುತ್ತದೆ. ಹಾಗಾಗಿ ಹೆಚ್ಚೆಚ್ಚು ಸಾಮರ್ಥ್ಯದ ಪವರ್ ಬ್ಯಾಂಕ್ ಗಳನ್ನು ಖರೀದಿಸಬೇಕು ಎಂದು ಗ್ರಾಹಕರೂ ಕೂಡ ಇಚ್ಛಿಸುತ್ತಾರೆ.

ಅಂತಹ ಒಂದು ಪವರ್ ಬ್ಯಾಂಕ್ ನ ಬೆಲೆಯಲ್ಲಿ ಇಳಿಮುಖವಾಗಿದೆ ಎಂದು ತಿಳಿಸಿದರೆ ನಿಮಗೆ ಖುಷಿಯಾಗುವುದಿಲ್ಲವೇ. ಖಂಡಿತ ಆಗುತ್ತೆ ಅಲ್ಲವೇ? ಹಾಗಾದ್ರೆ ಇಂತಹದ್ದೇ ಒಂದು ಖುಷಿಯ ವಿಚಾರವನ್ನು ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ.

 ಎಂಐ ಪವರ್ ಬ್ಯಾಂಕ್‌ಗಳ ದರದಲ್ಲಿ ಭಾರೀ ಇಳಿಕೆ..!

10000 mAh ಮತ್ತು 20000mAh ಸಾಮರ್ಥ್ಯದ ಎಂಐ ಪವರ್ ಬ್ಯಾಂಕ್ 2ಐ ಕಳೆದ ವರ್ಷದ ನವೆಂಬರ್ ನಲ್ಲಿ ಬಿಡುಗಡೆಗೊಂಡಿತ್ತು. ಈ ವರ್ಷದ ಎಪ್ರಿಲ್ ನಲ್ಲಿ ಇವುಗಳ ಬೆಲೆಯಲ್ಲಿ 100 ರುಪಾಯಿ ಹೆಚ್ಚಳವಾಗಿತ್ತು ಅದಕ್ಕೆ ಕಾರಣ ಭಾರತದ ತೆರಿಗೆ ರೂಪುರೇಷೆ ಬದಲಾದದ್ದು ಅಂದರೆ ಜಿಎಸ್ ಟಿ ಬಂದದ್ದು. ಈಗ ಮತ್ತೆ ಜಿಎಸ್ಟಿ ರೇಟ್ ಇಳಿಮುಖವಾದ ಹಿನ್ನೆಲೆಯಲ್ಲಿ ಚೀನಾ ಕಂಪೆನಿಯು ತನ್ನ ಬೆಲೆಯನ್ನು ಮತ್ತೆ ಬದಲಾಯಿಸಿದ್ದು, ಹಳೆಯ ಬೆಲೆಯನ್ನೇ ಮರು ಪರಿಚಯ ಮಾಡುತ್ತಿದೆ.

ಇವೆರಡರ ಜೊತೆಗೆ 10000mAh ಎಂಐ ಪವರ್ ಬ್ಯಾಂಕ್ ಪ್ರೋ ಎರಡು ವರ್ಷದ ಹಿಂದೆ ಅಕ್ಟೋಬರ್ ನಲ್ಲಿ ಬಿಡುಗಡೆಗೊಂಡಿದ್ದು ಪವರ್ ಬ್ಯಾಂಕ್ ಕೂಡ ಶಾಶ್ವತವಾಗಿ 200 ರುಪಾಯಿ ಬೆಲೆ ಇಳಿಕೆಯನ್ನು ಕಾಣುತ್ತಿದೆ.

10000mAh ಎಂಐ ಪವರ್ ಬ್ಯಾಂಕ್ ಪ್ರೋ ಸದ್ಯ 1,499 ರುಪಾಯಿಗೆ ಮಾರಾಟ ಕಾಣುತ್ತಿತ್ತು. ಆದರೆ ಈಗ ಬದಲಾದ ಬೆಲೆ ಎಂದರೆ ಅದು 1,299 ರುಪಾಯಿ ಆಗಿದೆ. ಇನ್ನು 10000mAh ಎಂಐ ಪವರ್ ಬ್ಯಾಂಕ್ 2ಐ ನ ಭಾರತೀಯ ಮಾರುಕಟ್ಟೆಯ ಬೆಲೆಯು 100 ರುಪಾಯಿ ಇಳಿಮುಖವಾಗಿ 799 ರುಪಾಯಿ ಆಗಿದೆ.

20000mAh ನ ಎಂಐ ಪವರ್ ಬ್ಯಾಂಕ್ 2ಐ ನ ಭಾರತೀಯ ಬೆಲೆಯಲ್ಲೂ ಕೂಡ 100 ರುಪಾಯಿ ಕಡಿಮೆಯಾಗಿದ್ದು ಈಗ 1,499 ರುಪಾಯಿಗೆ ಗ್ರಾಹಕರು ಖರೀದಿ ಮಾಡಬಹುದಾಗಿದೆ. ಈ ಎಲ್ಲಾ ಪವರ್ ಬ್ಯಾಂಕ್ ಗಳು ಈಗಾಗಲೇ ಇಳಿಮುಖವಾದ ಬೆಲೆಯಲ್ಲಿ ಎಂಐ.ಕಾಮ್ ಮತ್ತು ಅಮೇಜಾನ್ ಇಂಡಿಯಾ ವೆಬ್ ಸೈಟ್ ಗಳಲ್ಲಿ ಮಾರಾಟಕ್ಕೆ ಲಭ್ಯವಿದೆ.

ಈಗಾಗಲೇ ತಿಳಿಸಿರುವಂತೆ, ಎಂಐ ಪವರ್ ಬ್ಯಾಂಕ್ ನ ಬೆಲೆಯು ಹೀಗೆ ಬದಲಾವಣೆಯಾಗಲು ಕಾರಣ ಜಿಎಸ್ಟಿ ತೆರಿಗೆ ವಿನಾಯಿತಿ ಆಗಿದೆ. ಈ ಪವರ್ ಬ್ಯಾಂಕ್ ಗಳಲ್ಲಿ ಬಳಕೆ ಮಾಡುವ ಲೀಥಿಯಮ್ ಐಯಾನ್ ಬ್ಯಾಟರಿಗಳ ಮೇಲಿನ ಜಿಎಸ್ಟಿಯು ಶೇಕಡಾ 28 ರಿಂದ 18 ಕ್ಕೆ ಇಳಿಮುಖವಾಗಿದೆ. ಈ ಬದಲಾವಣೆಯು ಇಂದಿನಿಂದಲೇ ಗೋಚರವಾಗುತ್ತದೆ.

ಮತ್ತು ಶಿಯೋಮಿ ಬೆಲೆಯ ವಿಷಯದಲ್ಲಿ ಸಮಯ ವ್ಯರ್ಥ ಮಾಡದೇ ಕೂಡಲೇ ನಿರ್ಧಾರ ತೆಗೆದುಕೊಂಡಿರುವುದು ಸ್ವಾಗತಾರ್ಹ ವಿಚಾರವಾಗಿದೆ. ಅಷ್ಟೇ ಅಲ್ಲ, ಭಾರತೀಯ ಮಾರುಕಟ್ಟೆ ಮತ್ತು ಇಲ್ಲಿನ ಶಿಯೋಮಿ ಅಭಿಮಾನಿಗಳ ಬಗ್ಗೆ ಕಂಪೆನಿ ಎಷ್ಟು ಗಂಭೀರವಾಗಿರುತ್ತದೆ ಎಂಬುದನ್ನು ಇದು ಸೂಚಿಸುತ್ತದೆ.

ಇನ್ನು 18 ಶೇಕಡಾ ಜಿಎಸ್ಟಿಗೆ ಇಳಿದ ಇತರೆ ಪ್ರೊಡಕ್ಟ್ ಗಳು ಎಂದರೆ ಫ್ರಿಡ್ಜ್ ಗಳು, 25 ಇಂಚಿನವರೆಗೆ ಟಿವಿಗಳು, ವ್ಯಾಕ್ಯೂಮ್ ಕ್ಲೀನರ್, ಡೊಮೆಸ್ಟಿಕ್ ಎಲೆಕ್ಟ್ರಿಕಲ್ ವಸ್ತುಗಳು ಉದಾಹರಣೆಗೆ ಫುಡ್ ಗ್ರೈಂಡರ್ ಗಳು, ಮಿಕ್ಸರ್ ಗಳು, ಸ್ಟೋರೇಜ್ ವಾಟರ್ ಹೀಟರ್, ಇಮರ್ಷನ್ ಹೀಟರ್ ಗಳು, ಹೇರ್ ಡ್ರೈಯರ್ ಗಳು, ಹ್ಯಾಂಡ್ ಡ್ರೈಯರ್ಸ್, ಐರನ್ ಬಾಕ್ಸ್ ಮತ್ತು ಇತ್ಯಾದಿ ವಸ್ತುಗಳಾಗಿದೆ.

10000mAh ಮತ್ತು 20000mAh ಎಂಐ ಪವರ್ ಬ್ಯಾಂಕ್ 2ಐ ಗಳು ಮೇಕ್ ಇನ್ ಇಂಡಿಯಾದ ಒಂದು ಭಾಗವೇ ಆಗಿದೆ. ಇದು 2 ಯುಎಸ್ ಬಿ ಔಟ್ ಪುಟ್, ಲೀಥಿಯಮ್ ಪಾಲಿಮರ್ (ಲಿ-ಪೋ) ಬ್ಯಾಟರಿಗಳು ಮತ್ತು ಟೆಕ್ಸಾಸ್ ಇನ್ಸ್ಟ್ರುಮೆಂಟ್ ಗಳ ಸಣ್ಣ ಕಂಟ್ರೋಲ್ ಚಿಪ್ ಗಳಿಂದ ಪವರ್ ಆಗಿದೆ.

10000mAh ಪವರ್ ಬ್ಯಾಂಕ್ ಮೆಟಾಲಿಕ್ ಡಬಲ್ ಏನೋಡೈಸ್ಡ್ ಡಿಸೈನ್ ನ್ನು ಹೊಂದಿದ್ದು ಅದರ ದಪ್ಪ 14.2mm ಮತ್ತು ತೂಕ ಹೆಚ್ಚು ಕಡಿಮೆ 245 ಗ್ರಾಮ್ ನಷ್ಟಿದೆ. ಇನ್ನು 20000mAh ನ ಎಂಐ ಪವರ್ ಬ್ಯಾಂಕ್ 2ಐ ಪಾಲಿಕಾರ್ಬೋನೇಟ್ ಕೇಸ್ ಹೊಂದಿದ್ದು ಸುಮಾರು 358 ಗ್ರಾಂನಷ್ಟು ತೂಕವಿದೆ.

10000mAh ಎಂಐ ಪವರ್ ಬ್ಯಾಂಕ್ ಪ್ರೋ ಅಕ್ಟೋಬರ್ 2016 ರಲ್ಲಿ ಬಿಡುಗಡೆಗೊಂಡಿದ್ದು ಮತ್ತು ಇದು ಯುಎಸ್ ಬಿ ಟೈಪ್ ಸಿ ಚಾರ್ಜಿಂಗ್ ಗೆ ಬೆಂಬಲ ನೀಡುತ್ತದೆ. 3000mAh ಸಾಮರ್ಥ್ಯದ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ನ್ನು ಎರಡುವರೆ ಸಲ ಸಂಪೂರ್ಣ ಚಾರ್ಜ್ ಮಾಡಲು ಇದು ನೆರವು ನೀಡುತ್ತದೆ. ಒಟ್ಟಿನಲ್ಲಿ ಈಗ ಬೆಲೆಯಲ್ಲಿ ಆಗಿರುವ ಬದಲಾವಣೆಯು ಎಂಐ ಗ್ರಾಹಕ ಪ್ರಿಯರಿಗೆ ಸಂತಸದ ಸುದ್ದಿಯೇ ಆಗಿದೆ.

Best Mobiles in India

English summary
10000mAh and 20000mAh Mi Power Bank 2i, 10000mAh Mi Power Bank Pro Receive Price Cuts in India. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+