Home
ಸುದ್ದಿಜಾಲ

ಜಗತ್ತಿನ ‘ಅತೀ ಹಿರಿಯ ಯೂಟ್ಯೂಬ್ ಸ್ಟಾರ್’ ಭಾರತದ ಅಜ್ಜಿಯ ಆದಾಯ ಎಷ್ಟು ಗೊತ್ತಾ?

By Bhaskar N J

ಪ್ರಖ್ಯಾತ ವಿಡಿಯೋ ಜಾಲತಾಣ 'ಯೂಟ್ಯೂಬ್' ನಲ್ಲಿ ಸಾಮಾನ್ಯರು ತಮ್ಮದೇ ಚಾನಲ್ ಶುರು ಮಾಡಬಹುದು, ಹಣವನ್ನು ಸಂಪಾದನೆ ಮಾಡಬಹುದು, ಯಾರ ಸಹಾಯವೂ ಇಲ್ಲದೇ ಸ್ಟಾರ್ ಆಗಬಹುದು ಎಂದು ಕೇಳಿರುತ್ತೀರಾ. ಆದರೆ, 106 ವರ್ಷ ವಯಸ್ಸಿನ ಭಾರತದ ಅಜ್ಜಿಯೊಂದು ವಿಶ್ವದೆಲ್ಲೆಡೆ ಈಗ ಯೂಟ್ಯೂಬ್ ಸ್ಟಾರ್ ಆಗಿರುವುದು ನಿಮಗೆ ತಿಳಿದಿದೆಯಾ.?

ಹೌದು, ವಿಶ್ವದಲ್ಲಿಯೇ ಹೆಸರುವಾಸಿಯಾದ ಯೂಟ್ಯೂಬ್ ಸ್ಟಾರ್‌ಗಳ ನಡುವೆ , 106 ವರ್ಷ ವಯಸ್ಸಿನ ಭಾರತದ ಅಜ್ಜಿ ಯೂಟ್ಯೂಬ್ ವಿಡಿಯೋಗಳು ಸಖತ್ ಸದ್ದು ಮಾಡುತ್ತಿವೆ. ಆಂಧ್ರ ಪ್ರದೇಶದ ಶತಾಯುಷಿ, 106 ವರ್ಷದ ಅಜ್ಜಿಯೊಬ್ಬರು ಹಳ್ಳಿ ಸ್ಟೈಲ್ ನಾನ್‌ವೆಜ್ ಅಡುಗೆಗಳ ಮೂಲಕ ವಿಶ್ವದೆಲ್ಲೆಡೆ ಇಂಟರ್ನೆಟ್ ಸ್ಟಾರ್ ಆಗಗುವುದಲ್ಲದೆ, ದಾಖಲೆ ಕೂಡ ನಿರ್ಮಿಸಿದ್ದಾರೆ.

ಜಗತ್ತಿನ ‘ಅತೀ ಹಿರಿಯ ಯೂಟ್ಯೂಬ್ ಸ್ಟಾರ್’ ಭಾರತದ ಅಜ್ಜಿಯ ಆದಾಯ ಎಷ್ಟು ಗೊತ್ತಾ?

ಆಂಧ್ರಪ್ರದೇಶದ ಮಸ್ತಾನಮ್ಮ ಎಂಬ ಶತಾಯುಷಿ ಅಜ್ಜಿ ತಮ್ಮ ರುಚಿ ಮತ್ತು ರೆಸಿಪಿಯನ್ನು ಜಾಗತಿಕವಾಗಿ ಯೂಟ್ಯೂಬ್ ಮೂಲಕ ಹಂಚಿಕೊಳ್ಳುವ ಮೂಲಕ ಜಗತ್ತಿನ 'ಅತೀ ಹಿರಿಯ ಯೂಟ್ಯೂಬ್ ಸ್ಟಾರ್' ಎಂಬ ಖ್ಯಾತಿ ಪಡೆದುಕೊಂಡಿದ್ದಾರೆ. ಹಾಗಾದರೆ, ಜಗತ್ತಿನ 'ಅತೀ ಹಿರಿಯ ಯೂಟ್ಯೂಬ್ ಸ್ಟಾರ್' ಅಜ್ಜಿಯ ಯಶಸ್ಸಿನ ಕಥೆಯನ್ನೊಮ್ಮೆ ನಾವೂ ಕೂಡ ತಿಳಿಯೋಣವೆ.?

ಕಂಟ್ರಿ ಫುಡ್ಸ್ (country foods)!

ಕಂಟ್ರಿ ಫುಡ್ಸ್ (country foods)!

ಯೂಟ್ಯೂಬ್‌ನಲ್ಲಿ ಕಂಟ್ರಿ ಫುಡ್ಸ್ (country foods) ಎಂಬ ಯೂಟ್ಯೂಬ್ ಚಾನಲ್ ಅನ್ನು ನೀವು ಬಹುಶಃ ವೀಕ್ಷಿಸಿರಬಹುದು. ಯೂಟ್ಯೂಬ್‍ನಲ್ಲಿ ವಿವಿಧ ಬಗೆಯ ಅಡುಗೆಗಳನ್ನು ಹೇಳಿಕೊಡುವ ಅನೇಕ ಚಾನಲ್‌ಗಳಲ್ಲಿ ಇದು ಒಂದು. ಆದರೆ, ಈ ಚಾನಲ್‌ನ ವಿಶೇಷತೆ ಎಂದರೆ, ಆಂಧ್ರದ ಶತಾಯುಷಿ, 106 ವರ್ಷದ ಅಜ್ಜಿಯೊಬ್ಬರು ಹಳ್ಳಿ ಸ್ಟೈಲ್ ಅಡುಗೆಗಳು.

ಅಜ್ಜಿ ಯೂಟ್ಯೂಬ್‌ಗೆ ಬಂದಿದ್ದೇಗೆ?

ಅಜ್ಜಿ ಯೂಟ್ಯೂಬ್‌ಗೆ ಬಂದಿದ್ದೇಗೆ?

ಲಕ್ಷ್ಮಣ ಎಂಬುವವರು ಕಂಟ್ರಿ ಫುಡ್ಸ್ ಎಂಬ ಹೆಸರಿನಲ್ಲಿ ಅಡುಗೆಯ ಕುರಿತು ಯುಟ್ಯೂಬ್‌ನಲ್ಲಿ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದರು. ಹಳ್ಳಿಯಲ್ಲಿದ್ದ ತನ್ನ ಅಜ್ಜಿಯನ್ನು ನೋಡಲು ಹೋದ ಅವರು, ಅಜ್ಜಿ ಅಡುಗೆ ಮಾಡುವುದನ್ನು ಯುಟ್ಯೂಬ್‌ಗೆ ಅಪ್‌ಲೋಡ್ ಮಾಡಿದರೆ ಚೆನ್ನಾಗಿರುತ್ತದೆ ಎಂದು ಯೂಟ್ಯೂಬ್‌ನಲ್ಲಿ ಅವರ ವಿಡಿಯೋಗಳನ್ನು ಹಾಕಿದರು.

ಸೌದೆ ಒಲೆಯಲ್ಲಿ ನಾನ್‌ವೆಜ್!

ಸೌದೆ ಒಲೆಯಲ್ಲಿ ನಾನ್‌ವೆಜ್!

ಶತಾಯುಷಿ ಅಜ್ಜಿ ಮಸ್ತಾನಮ್ಮ, ಹಳ್ಳಿ ವಾತಾವರಣದಲ್ಲಿ, ಸೌದೆ ಒಲೆಯಲ್ಲಿ ನಾನ್‌ವೆಜ್ ಮಾಡುವುದರ ಮೂಲಕ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡರು. ಚಿಕನ್ ಬಿರಿಯಾನಿ, ಮೀನು ಸಾರು, ಮೊಟ್ಟೆಯ ರೆಸಿಪಿಗಳು, ಬದನೆಕಾಯಿ ಮಸಾಲಾ, ಬೆಂಡೇಕಾಯಿ ಫ್ರೈನಂತಹ ಅಡುಗೆಗಳನ್ನು ಹಳ್ಳಿ ಸ್ಟೈಲ್‌ನಲ್ಲಿ ಮಾಡೋದು ಹೇಗೆ ಅನ್ನೋದನ್ನ ಮಸ್ತಾನಮ್ಮ ಹೇಳಿಕೊಡುತ್ತಿದ್ದರು.

ಅದೆಷ್ಟು ಜನ ನೋಡಿದರೋ!

ಅದೆಷ್ಟು ಜನ ನೋಡಿದರೋ!

ಕಂಟ್ರಿ ಫುಡ್ಸ್ ಚಾನಲ್‌ನಲ್ಲಿ ಶತಾಯುಶಿ ಅಜ್ಜಿಯ ಹಳ್ಳಿ ಕೈರುಚಿಯನ್ನು ಯುಟ್ಯೂಬ್ ಮೂಲಕ ಜಗತ್ತಿನಾದ್ಯಂತ ಅದೆಷ್ಟು ಜನ ನೋಡಿದರೋ ಲೆಕ್ಕಕ್ಕೇ ಸಿಗದು.! ಇವತ್ತು ಇವರ ಫಾಲೋವರ್ಸ್ 10 ಲಕ್ಷಕ್ಕೂ ಹೆಚ್ಚಿದೆ. ಪುರಾತನ ಅಡುಗೆ ಪದ್ಧತಿಯ ಸ್ವಾರಸ್ಯವನ್ನು ಕಲಿಯಲು ಭಾರತೀಯರು ಸೇರಿದಂತೆ, ವಿದೇಶಿಯರು ಕೂಡ ಅಜ್ಜಿಯ ವಿಡಿಯೋಗಳಿಗೆ ಮನಸೋತಿದ್ದಾರೆ.

ಪ್ರತಿ ತಿಂಗಳ ದುಡಿಮೆ ಎಷ್ಟು?

ಪ್ರತಿ ತಿಂಗಳ ದುಡಿಮೆ ಎಷ್ಟು?

ಕಂಟ್ರಿ ಫುಡ್ ಮೂಲಕ ಡಿಸೆಂಬರ್ 2016ರಿಂದ ಆರಂಭಿಸಿ ಈಕೆಯ ಅಡುಗೆಯ ಸುಮಾರು 200ಕ್ಕೂ ಹೆಚ್ಚು ವಿಡಿಯೋಗಳನ್ನು ಬಿಡುಗಡೆ ಮಾಡಲಾಗಿದೆ. ಪ್ರತಿದಿನ 4 ಲಕ್ಷಕ್ಕೂ ಹೆಚ್ಚು ವಿಡಿಯೋ ವೀಕ್ಷಣೆಗಳನ್ನು ಈ ಯೂಟ್ಯೂಬ್ ಚಾನಲ್ ಪಡೆದುಕೊಳ್ಳುತ್ತದೆ. ಅಂದರೆ, ಪ್ರತಿತಿಂಗಳು ಅಂದಾಜು 5 ರಿಂದ 6 ಲಕ್ಷ ರೂಪಾಯಿಗಳನ್ನು ಈ ಯೂಟ್ಯೂಬ್ ಚಾನಲ್ ಪಡೆದುಕೊಳ್ಳುತ್ತದೆ.

ಯುಟ್ಯೂಬ್ ತಾರೆ!

ತನ್ನ ಮೊಮ್ಮಗ ಲಕ್ಷ್ಮಣ ಮತ್ತು ಅವರ ಗೆಳೆಯರ ಸಹಾಯದಿಂದ, ಈಗಲೂ ಈ ಮಸ್ತಾನಮ್ ಅಡುಗೆಯ ವಿಡಿಯೋಗಳನ್ನು ಪ್ರತಿ ವಾರ ಬಿಡುಗಡೆ ಮಾಡುತ್ತಲೇ ಇದ್ದಾಳೆ, ಆ ಮೂಲಕ ಜಗತ್ತಿನ ಅತಿ ಹಿರಿಯ ಯುಟ್ಯೂಬ್ ತಾರೆಯಾಗಿ ಹೊರಹೊಮ್ಮಿದ್ದಾಳೆ. ಈ ಅಜ್ಜಿಯ ರುಚಿಕರ ಅಡುಗೆ ಮಾಡುವ ವಿಧಾನವನ್ನು ಕಂಡು ಜಗತ್ತು ಕೂಡ ಈಗ ಬೆರಗಾಗಿದೆ.

21ನೇ ವಯಸ್ಸಿಗೆ ಕೋಟ್ಯಾಧೀಶ್ವರ; ಸ್ವಂತ ಮನೆ, ಬಿಎಂಡಬ್ಲೂ ಒಡೆಯನಾದ ಬಡ ಯುವಕನ ಯಶೋಗಾಥೆ!!

21ನೇ ವಯಸ್ಸಿಗೆ ಕೋಟ್ಯಾಧೀಶ್ವರ; ಸ್ವಂತ ಮನೆ, ಬಿಎಂಡಬ್ಲೂ ಒಡೆಯನಾದ ಬಡ ಯುವಕನ ಯಶೋಗಾಥೆ!!

ಹತ್ತನೇ ವಯಸ್ಸಿನಲ್ಲಿ ಆತನಿಗೆ ಉಡುಗೊರೆಯಾಗಿ ಸಿಕ್ಕಿದ್ದು ಒಂದು ಕಂಪ್ಯೂಟರ್ ಮಾತ್ರ. ಅಲ್ಲಿಂದ ಆತ ಯಾವತ್ತೂ ಸಹ ಜೀವನವನ್ನು ಹಿಂತಿರುಗಿ ನೋಡಲೇ ಇಲ್ಲ. ಏಕೆಂದರೆ, ಆ ಕಂಪ್ಯೂಟರ್ ಜೊತೆಗಿನ ಅವನ ಒಡನಾಟ ಮತ್ತು ಆತನ ಕಠಿಣ ಪರಿಶ್ರಮ ಇಂದು ಆತನನ್ನು ಕೋಟ್ಯಾಧಿಪತಿಯನ್ನಾಗಿಸಿದೆ. ಆತನ 21ನೇ ವಯಸ್ಸಿನ ವೇಳೆಗೆ ವಾರ್ಷಿಕ ಎರಡು ಕೋಟಿ ರೂಪಾಯಿ ಆದಾಯ ಹೊಂದಿರುವ ಕಂಪೆನಿಯ ಮಾಲಿಕನನ್ನಾಗಿಸಿದೆ ಎಂದರೆ ನೀವು ನಂಬಲೇಬೇಕು.!
ಹೌದು, ಇದು ಕೇರಳ ರಾಜ್ಯದ ಕಣ್ಣೂರಿನ ಹುಡುಗ ಜಾವೇದ್ ಎಂಬ ಯುವಕನ ಯಶಸ್ವಿ ಯುವಕನ ಕಥೆ. ಈ ಉದ್ಯಮಶೀಲ ಯುವಕನ ಯಶೋಗಾಥೆ ಎಲ್ಲರಿಗೂ ಸ್ಪೂರ್ತಿಯ ಚಿಲುಮೆ. ಎಳೆಯ ವಯಸ್ಸಿನಲ್ಲಿಯೇ ಕಠಿಣ ಪರಿಶ್ರಮ ಮತ್ತು ಸಾಮರ್ಥ್ಯದಿಂದ ಅದ್ಬುತ ಯಶಸ್ಸನ್ನು ಸಾಧಿಸಿರುವ ಈತ ಈಗ ಯುವಕರ ಆಶಾಕಿರಣ ಎಂದರೆ ತಪ್ಪಾಗಲಾರದು.! ಏಕೆಂದರೆ, ಈಗ ತನ್ನ 21ನೇ ವಯಸ್ಸಿನ ವೇಳೆಗೆ ಹತ್ತಾರು ಜನರಿಗೆ ಉದ್ಯೋಗ ನೀಡಿರುವ ಈಗ ವಿಶ್ವದಾಧ್ಯಂತ ಗ್ರಾಹಕರನ್ನು ಹೊಂದಿದ್ದಾನೆ.

ಇ-ಕಾಮರ್ಸ್, ವೆಬ್‌ಡಿಸೈನ್ ಮತ್ತು ಮೊಬೈಲ್ ಅಪ್ಲಿಕೇಷನ್ ಅಭಿವೃದ್ದಿಪಡಿಸುವ "ಟಿಎಂಎನ್ ಆನ್‌ಲೈನ್ ಸೊಲ್ಯೂಷನ್'' ಎಂಬ ತನ್ನದೇ ಸ್ವಂತ ಕಂಪೆನಿಯನ್ನು ಹುಟ್ಟಿಹಾಕಿಕೊಂಡಿರುವ ಜಾವೇದ್ ಈಗ ಎಲ್ಲರಿಗೂ ಚಿರಪರಿಚಿತನಾಗಿದ್ದಾನೆ, ಹಾಗಾದರೆ, ಕಣ್ಣೂರಿನ ಹುಡುಗ ಜಾವೇದ್ ಬಾಲ್ಯ ಜೀವನ ಹೇಗಿತ್ತು? ಕಂಪ್ಯೂಟರ್ ಪ್ರಪಂಚದಲ್ಲಿ ಜಾವೇದ್ ಕೋಟಿ ಕೋಟಿ ಹಣವನ್ನು ಗಳೀಸಲು ಸಾಧ್ಯವಾಗಿದ್ದು ಹೇಗೆ? ಕಂಪ್ಯೂಟರ್ ಜೊತೆಗಿನ ಜಾವೆದ್‌ನ ಒಡನಾಟ ಮತ್ತು ಆತನ ಕಠಿಣ ಪರಿಶ್ರಮ ಹೇಗಿತ್ತು ಎಂಬ ಕುತೋಹಲ ಮಾಹಿತಿಯನ್ನು ಮುಂದೆ ತಿಳಿಯಿರಿ.

ಕಂಪ್ಯೂಟರ್ ಮತ್ತು ಇಂಟರ್‌ನೆಟ್!!

ಕಂಪ್ಯೂಟರ್ ಮತ್ತು ಇಂಟರ್‌ನೆಟ್!!

ಈಗ ಯಶಸ್ವಿ ಉದ್ಯಮಿಯಾಗಿರುವ ಜಾವೇದ್ ಅವರ ಮೂಲ ಹೆಸರು ಮೊಹಮ್ಮದ್ ಜಾವೇದ್ ಟಿ ಎನ್ ಎಂದಾಗಿತ್ತು. ಹತ್ತನೇ ವಯಸ್ಸಿನಲ್ಲಿ ಜಾವೇದ್ ಹುಟ್ಟುಹಬ್ಬಕ್ಕೆ ಅವರ ತಂದೆ ಕಂಪ್ಯೂಟರ್ ಮತ್ತುನ ಇಂಟರ್‌ನೆಟ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಇದು ಜಾವೇದ್‌ಗೆ ಬಹಳ ಕುತೋಹಲ ಮೂಡಿಸಿತ್ತು. ನಂತರದ ದಿನಗಳಲ್ಲಿ ಜಾವೇದ್‌ನ ಕಂಪ್ಯೂಟರ್ ಮೇಲಿನ ಕುತೋಹಲ ಅವನನ್ನು ಕಂಪ್ಯೂಟರ್ ಲೋಕಕ್ಕೆ ಇಳಿಸಿಬಿಟ್ಟಿತ್ತು.

ಗೂಗಲ್ ಕೊಟ್ಟಿದ್ದು ಲಕ್ಕಿ ನೇಮ್!!

ಗೂಗಲ್ ಕೊಟ್ಟಿದ್ದು ಲಕ್ಕಿ ನೇಮ್!!

ಅಪ್ಪ ಏನೋ ಕಂಪ್ಯೂಟರ್ ಕೊಡಿಸಿದರು. ಆದರೆ, ಆ ಹಂತದಲ್ಲಿ ಜಾವೇದ್ ಬಳಿಯಲ್ಲಿ ಐಡಿ ಇರಲಿಲ್ಲ. ಹಾಗಾಗಿ, ಜಾವೇದ್ ಹೆಸರಿನಲ್ಲಿ ಐಡಿ ಕ್ರಿಯೇಟ್ ಮಾಡಲು ಮುಂದಾಗಿದ್ದರೆ, ಆ ಹೆಸರಿನಲ್ಲಿ ಐಡಿ ಲಭ್ಯವಿರಲಿಲ್ಲ. ಇದರ ಬದಲಾಗಿ ಟಿಎನ್‌ಎಮ್ ಜಾವೇದ್ ಎಂಬ ಹೆಸರಿನಲ್ಲಿ ಐಡಿ ಸೃಷ್ಟಿಸುವಂತೆ ಗೂಗಲ್‌ನಿಂದ ಸಲಹೆ ಬಂತು. ಆ ಹೆಸರು ಜಾವೇದ್ ಅವರಿಗೆ ಲಕ್ಕಿ ಹೆಸರಾಗಿಯೂ ಕ್ಲಿಕ್ ಆಯಿತು. ಗೂಗಲ್‌ನ ಸದ್ಬಳಕೆಯಿಂದ ಕೋಟಿ, ಕೋಟಿ ಹಣಗಳಿಸುವಂತೆ ಸಹ ಮಾಡಿತು.

ವೆಬ್‌ಸೈಟ್ ಸೃಷ್ಟಿಸುವುದು ಹೇಗೆ?

ವೆಬ್‌ಸೈಟ್ ಸೃಷ್ಟಿಸುವುದು ಹೇಗೆ?

ಬಾಲಕ ಜಾವೇದ್ ಕಂಪ್ಯೂಟರ್ ಜೊತೆಗೆ ಸಮಯ ಕಳೆಯುವ ವೇಳೆ ಆತನಿಗೆ ಯಾವಾಗಲೂ ತಲೆಯಲ್ಲಿ ಪ್ರಶ್ನೆಗಳು ತುಂಬಿರುತ್ತಿದ್ದವಂತೆ.! ವೆಬ್‌ಸೈಟ್ ಸೃಷ್ಟಿಸುವುದು ಹೇಗೆ?, ಅವು ಹೇಗೆ ಕಾರ್ಯನಿರ್ವಹಿಸುತ್ತವೆ? ಇದನ್ನೆಲ್ಲಾ ಮಾಡುವವರು ಯಾರು? ಹೀಗೆ ಪ್ರತಿಯೊಂದನ್ನು ತಿಳಿದುಕೊಳ್ಳುವುದರಲ್ಲಿ ನನಗೆ ಕುತೋಹಲವಿತ್ತು. ಒಂದರ್ಥದಲ್ಲಿ ಆ ಸಮಯದಲ್ಲಿ ನಾನು ಕಂಪ್ಯೂಟರ್ ವ್ಯಸನಿಯಾಗಿದ್ದೆ, ಆದರೆ ಒಳ್ಳೆಯ ಉದ್ದೇಶಕ್ಕಾಗಿ ಎಂದು ಜಾವೇದ್ ಅವರು ನೆನಪಿಸಿಕೊಳ್ಳುತ್ತಾರೆ.

10 ನೇ ತರಗತಿಯಲ್ಲಿ ವೆಬ್‌ಸೈಟ್ ತಯಾರಿಸಿದ!!

10 ನೇ ತರಗತಿಯಲ್ಲಿ ವೆಬ್‌ಸೈಟ್ ತಯಾರಿಸಿದ!!

ಕಂಪ್ಯೂಟರ್ ಜಗತ್ತಿನ ಬಗ್ಗೆ ಜಾವೇದ್‌ಗೆ ತಿಳಿದುಕೊಳ್ಳುವ ಹಂಬಲದಿಂದ ಆ ಕಂಪ್ಯೂಟರ್ ಬಗ್ಗೆ ಹೆಚ್ಚೆಚ್ಚು ತಿಳಿಯಲು ಆರಂಭಿಸಿದ. ಬ್ಲಾಗಿಂಗ್ ಮತ್ತು ವೆಬ್‌ಡಿಸೈನಿಂಗ್ ವಿಷಯಗಳ ಬಗ್ಗೆ ಆನ್‌ಲೈನ್ ಮೂಲಕವೇ ಹೆಚ್ಚು ತಿಳಿದುಕೊಳ್ಳುತ್ತಿದ್ದನಂತೆ. ತನ್ನ ಹತ್ತನೇ ತರಗತಿ ವೇಳೆಗೆ ಹಲವು ಬ್ಲಾಗ್‌ಗಳನ್ನು ಸೃಷ್ಟಿಸಿದ್ದ ಜಾವೇದ್, ನಂತರ ತನ್ನ ಸಹಪಾಠಿ ಸಿರಾಜ್ ಜೊತೆ ಸೇರಿ ಜೆಸ್ರಿ.ಟಿಕೆ ಎಂಬ ವೆಬ್‌ಸೈಟ್ ಕ್ರಿಯೇಟ್ ಮಾಡಿದ್ದರಂತೆ. ಡೊಮೈನ್ ಖರೀದಿಸಲು ಹಣವಲ್ಲದೇ ಉಚಿತ ಡೊಮೈನ್ ಮೂಲಕ ವೆಬ್‌ಸೈಟ್ ಸೃಷ್ಟಿಮಾಡಿದ್ದರಂತೆ.!

"ಟಿಎಂಎನ್ ಆನ್‌ಲೈನ್ ಸೊಲ್ಯೂಷನ್''

ಕಂಪ್ಯೂಟರ್ ಆಸಕ್ತಿಯ ಜೊತೆಗೆ ಅಧ್ಯಯನಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡ ಜಾವೇದ್, ವೆಬ್‌ಸೈಟ್ ಅಭಿವೃದ್ದಿಗೆ ಸಾಕಷ್ಟು ಅವಕಾಶಗಳಿರುವುದನ್ನು ಅಂದೇ ಕಂಡುಕೊಂಡಿದ್ದ. ಆಗಲೇ ತನ್ನ ಮೊಟ್ಟ ಮೊದಲ "ಟಿಎಂಎನ್ ಆನ್‌ಲೈನ್ ಸೊಲ್ಯೂಷನ್'' ಎಂಬ ಡೊಮೈನ್ ನೇಮ್ ಅನ್ನು ನೊಂದಾಯಿಸಿದ. ಅಂದು ಜಾವೇದ್ ನೊಂದಾಯಿಸಿದ ಈ ಡೊಮೈನ್ ನೇಮ್ ಈಗಲೂ ವರ್ಚುವಲ್ ಕಂಪೆನಿಯಾಗಿ ಬೆಳದುನಿಂತಿದೆ. ಆಗಲೇ ಹೇಳಿದಂತೆ ಜಾವೇದ್‌ಗೆ ಇದು ಗೂಗಲ್ ಲಕ್ಕಿ ನೇಮ್.!!

ಸಾವಿರ ರೂಪಾಯಿಗೆ ವೆಬ್‌ಸೈಟ್ ಆಫರ್!!

ಸಾವಿರ ರೂಪಾಯಿಗೆ ವೆಬ್‌ಸೈಟ್ ಆಫರ್!!

ಡೊಮೈನ್ ನೇಮ್ ಖರೀದಿಸಿ ಕಂಪೆನಿಯನ್ನು ಕಟ್ಟಿದ ಜಾವೇದ್, ಸಾವಿರ ರೂಪಾಯಿಗೆ ವೆಬ್‌ಸೈಟ್ ಆಫರ್ ಅನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ. ಆದರೆ, ಹೆಚ್ಚಿನ ತಾಂತ್ರಿಕ ಕೌಶಲ್ಯಗಳಿಲ್ಲದೆ ಅವರ ಕೆಲಸ ವಿಫಲವಾಗಿತ್ತು. ಆದರೆ, ಛಲಬಿಡದ ಜಾವೇದ್ ಕೆಲ ವೆಬ್‌ಸೈಟ್ ಡಿಸೈನ್ ಕಂಪೆನಿಗಳಿಗೆ ಭೇಟಿ ನೀಡಿ ಅಲ್ಲಿ ಹೆಚ್ಚಿನದನ್ನು ತಿಳಿದುಕೊಂಡ. ನಂತರ ಶಿಕ್ಷಕಿಯೋರ್ವರು ಕೇಳಿದಂತೆ ಮೊದಲ ವೆಬ್‌ಸೈಟ್ ತಯಾರಿಸಿ ನೀಡಿ 2500 ರೂ.ಹಣಗಳಿಸಿ ತನ್ನ ತಾಯಿಯ ಕೈಗಿಟ್ಟನಂತೆ ಜಾವೇದ್.!

ಕಂಪೆನಿ ಬಂಡವಾಳಕ್ಕೂ ಕಷ್ಟವಿತ್ತು!!

ಕಂಪೆನಿ ಬಂಡವಾಳಕ್ಕೂ ಕಷ್ಟವಿತ್ತು!!

ಜಾವೇದ್ ಇತ್ತ ವೆಬ್‌ಡಿಸೈನಿಂಗ್ ಕಲಿಯುತ್ತದ್ದ ವೇಳೆಯೇ ಅವನಿಗೆ ಮತ್ತೊಂದು ಕಷ್ಟ ಎದುರಾಗಿತ್ತು. ದುಬೈನಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಜಾವೇದ್ ತಂದೆ ಉದ್ಯೋಗ ತೊತರೆದು ವಾಪಸ್ ಆಗಿದ್ದರು. ಇದರಿಂದ ಜಾವೇದ್ ಅವರ ಮನೆಯ ಪರಿಸ್ಥಿತಿ ಬಹಳ ಕಷ್ಟವಾಗಿತ್ತು. ಈ ಸಮಯದಲ್ಲಿ ಜಾವೇದ್ ಅವರ ತಂದೆಗೆ 1 ಲಕ್ಷ ಹಣ ನೀಡಿದರೆ ಕಂಪೆನಿ ಶುರುಮಾಡುವುದಾಗಿ ಕೇಳಿಕೊಂಡನು. ಕಂಪ್ಯೂಟರ್ ಬಗ್ಗೆ ಜಾವೇದ್‌ಗೆ ಇದ್ದ ಆಸಕ್ತಿ ನೋಡಿ ಆ ಕಷ್ಟದಲ್ಲಿಯೇ ಅವರ ತಂದೆ 1 ಲಕ್ಷ ಹಣವನ್ನು ಹೊಂದಿಸಿ ನೀಡಿದ್ದರಂತೆ.

ಚಿನ್ನದ ಬಳೆಗಳನ್ನು ಇಟ್ಟು ಕಚೇರಿ ನಿರ್ವಹಣೆ

ಚಿನ್ನದ ಬಳೆಗಳನ್ನು ಇಟ್ಟು ಕಚೇರಿ ನಿರ್ವಹಣೆ

1 ಲಕ್ಷ ಹಣ ಹೂಡಿ ಕಂಪೆನಿ ತೆರೆದಿದ್ದ ಜಾವೇದ್‌ನ ಮೊದಲ ದಿನಗಳು ಬಹಳ ಕಷ್ಟದ ದಿನಗಳಾಗಿದ್ದವು. ಆ ಸಮಯದಲ್ಲಿ ಓದು ಮತ್ತು ಕೆಲಸ ಎರಡರಲ್ಲಿಯೂ ಜೀವನದ ಜಂಜಾಟದಲ್ಲಿ ಜಾವೇದ್ ಇದ್ದರು. ಆಫಿಸ್ ಬಾಡಿಗೆ ನಿಡುವಷ್ಟು ಸಹ ಆದಾಯವಿರಲಿಲ್ಲ. ಮನೆ ಪರಿಸ್ಥಿತಿ ಸಹ ಹದಗೆಟ್ಟಿತ್ತು. ಯಾವುದೇ ಪ್ರಾಜೆಕ್ಟ್ ಸಹ ಜಾವೇದ್ ಕೈ ಸೇರಿರಲಿಲ್ಲ. ಇಂತಹ ಸಮಯದಲ್ಲಿ ಜಾವೇದ್ ಧೃತಿಗೆಟ್ಟಿದ್ದರಂತೆ. ತಮ್ಮ ತಾಯಿಯ ಚಿನ್ನದ ಬಳೆಗಳನ್ನು ಇಟ್ಟು ಕಚೇರಿಯನ್ನು ನಿರ್ವಹಣೆ ಮಾಡಿದ್ದರಂತೆ.

ಇಂದು ಸ್ವಂತ ಮನೆ, ಐಶಾರಾಮಿ ಕಾರು!!

ಇಂದು ಸ್ವಂತ ಮನೆ, ಐಶಾರಾಮಿ ಕಾರು!!

ಹಗಲು, ರಾತ್ರಿ ಎನ್ನದೇ ಸಿಕ್ಕಿದ ಕೆಲ ಗ್ರಾಹಕರ ಜೊತೆ ವ್ಯವಹರಿಸಿದ ಜಾವೇದ್ ನಂತರ ಕೇರಳದಲ್ಲಿ 10 ಸಣ್ಣ ಪ್ರಮಾಣದ ಕೆಲಸ ಪಡೆದರಂತೆ. ಆ ಸಮಯದಲ್ಲಿ ಆದಾಯಕ್ಕಿಂತ ಕೆಲಸದಲ್ಲಿ ವೈವಿಧ್ಯ ಮುಖ್ಯ ಎಂಬುದನ್ನು ಅರಿತ ಜಾವೇದ್ ಅವರು ಗ್ರಾಹಕರ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ನಂತರ ಯಶಸ್ವಿ ವೆಬ್‌ಡಿಸೈನ್ ಉದ್ಯಮಿಯಾಗಿ ಜಾವೇದ್ ಬೆಳೆದು ನಿಂತಿದ್ದಾರೆ. ಬಾಡಿಗೆ ಮನೆಯಲ್ಲಿಯೇ ಬೆಳೆದ ಜಾವೇದ್ ತನ್ನ ಆಸೆಯಂತೆ 19ನೇ ವಯಸ್ಸಿನಲ್ಲಿಯೇ ಸ್ವಂತ ಮನೆಯನ್ನು ಕಟ್ಟಿದ್ದಾರೆ. ಬಿಎಂಡಬ್ಲೂ ಕಾರನ್ನು ಸಹ ಖರೀದಿಸಿದ್ದಾರೆ.!

Best Mobiles in India

English summary
We are living in a time where the internet is used as a vast platform to showcase what we think and feel. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+