Home
ಸುದ್ದಿಜಾಲ

2021 ರಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿ ನಿರೀಕ್ಷಿಸಬಹುದಾದ ಪ್ರಮುಖ ಬದಲಾವಣೆಗಳು!

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಸ್ಮಾರ್ಟ್‌ಫೋನ್‌ ಕಂಪೆನಿಗಳು ತಮ್ಮ ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸುತ್ತಲೇ ಬಂದಿವೆ. ಇನ್ನು ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಕಾಲಿಟ್ಟ ದಿನದಿಂದಲೂ ಹಂತಹಂತವಾಗಿ ಸಾಕಷ್ಟು ಬದಲಾವಣೆಯನ್ನು ಹೊಂದಿವೆ. ಸ್ಮಾರ್ಟ್‌ಫೋನ್‌ ವಿನ್ಯಾಸದಿಂದ ಹಿಡಿದು ಪ್ರೊಸೆಸರ್‌ ಮಾದರಿಯ ವರೆಗೂ ಸ್ಮಾರ್ಟ್‌ಫೋನ್‌ಗಳು ಬದಲಾಗುತ್ತಲೇ ಬಂದಿವೆ. ಅಲ್ಲದೆ ಡಿಸ್‌ಪ್ಲೇ ವಿನ್ಯಾಸ ಕ್ಯಾಮೆರಾ ಫೀಚರ್ಸ್‌ಗಳಲ್ಲೂ ಹೊಸತನವನ್ನು ಪರಿಚಯಿಸುತ್ತಾ ಬಂದಿವೆ.

ಸ್ಮಾರ್ಟ್‌ಫೋನ್‌

ಹೌದು, ಸ್ಮಾರ್ಟ್‌ಫೋನ್‌ಗಳಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಸ್ಮಾರ್ಟ್‌ಫೋನ್‌ಗಳು ಇನ್ನಷ್ಟು ಸ್ಮಾರ್ಟ್‌ ಆಗುತ್ತಿವೆ. ಹೊಸ ಆಪರೇಟಿಂಗ್‌ ಸಿಸ್ಟಂ, ಹಾರ್ಡ್‌ವೇರ್‌, ಸಾಫ್ಟ್‌ವೇರ್‌ಗಳಲ್ಲಿ ಗಮನಾರ್ಹವಾದ ಬದಲಾವಣೆಯನ್ನು ಹೊಂದಿದ್ದು, ಹೊಸ ಮಾದರಿಯಲ್ಲಿ ಸ್ಮಾರ್ಟ್‌ಫೋನ್‌ಗಳು ಗ್ರಾಹಕರ ಕೈ ಸೇರುತ್ತಿವೆ. ಸದ್ಯ 2021 ರಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿ ಯಾವೆಲ್ಲ ಬದಲಾವಣೆಗಳನ್ನು ಕಾಣಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕೈಗೆಟುಕುವ ದರದಲ್ಲಿ ಫೊಲ್ಡಬಲ್‌ ಸ್ಮಾರ್ಟ್‌ಫೋನ್‌ಗಳು

ಕೈಗೆಟುಕುವ ದರದಲ್ಲಿ ಫೊಲ್ಡಬಲ್‌ ಸ್ಮಾರ್ಟ್‌ಫೋನ್‌ಗಳು

ಸ್ಮಾರ್ಟ್‌ಫೋನ್‌ ಯುಗದಲ್ಲಿ ಅತ್ಯಂತ ಗಮನಾರ್ಹ ಶೈಲಿಯೆಂದರೆ ಅದು ಫೊಲ್ಡಬಲ್‌ ಸ್ಮಾರ್ಟ್‌ಫೋನ್‌. ಸದ್ಯ ಫೊಲ್ಡಬಲ್‌ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ. ಆದರೆ ಹೆಚ್ಚಿನ ಬೆಲೆಯ ಕಾರಣದಿಂದಾಗಿ ಹೆಚ್ಚಿನ ಜನರು ಇನ್ನು ಫೊಲ್ಡಬಲ್‌ ಸ್ಮಾರ್ಟ್‌ಫೋನ್‌ ಬಳಸುತ್ತಿಲ್ಲ. ಸದ್ಯ 2021 ರಲ್ಲಿ, ಶಿಯೋಮಿ, ಒಪ್ಪೊ ಮತ್ತು ವಿವೊ ತಮ್ಮ ಮಡಿಸಬಹುದಾದ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇದು ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ನಿರೀಕ್ಷೆ ಇದೆ. ಸ್ಯಾಮ್‌ಸಂಗ್ ಕೂಡ ಕೈಗೆಟುಕುವ ಬೆಲೆಯಲ್ಲಿ ಮಡಿಸಬಹುದಾದ ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸುವ ಸಾಧ್ಯತೆ ಇದೆ.

ಡಾಲ್ಬಿ ವಿಷನ್ ವಿಡಿಯೋ ರೆಕಾರ್ಡಿಂಗ್

ಡಾಲ್ಬಿ ವಿಷನ್ ವಿಡಿಯೋ ರೆಕಾರ್ಡಿಂಗ್

ಆಪಲ್‌ ಐಫೋನ್‌ಗಳಲ್ಲಿ ಲಭ್ಯವಿರುವ ಡಾಲ್ಬಿ ವಿಷನ್‌ ರೆಕಾರ್ಡಿಂಗ್‌ ವಿಶೇಷತೆಯನ್ನು, ಆಂಡ್ರಾಯ್ಡ್ ನಲ್ಲಿಯೂ ಪರಿಚಯಿಸುವ ಸಾಧ್ಯತೆ ಇದೆ. ಆಂಡ್ರಾಯ್ಡ್‌ ತಯಾರಕರು ಡಾಲ್ಬಿ ವಿಷನ್ ಹೆಚ್‌ಡಿಆರ್ ವಿಡಿಯೋ ರೆಕಾರ್ಡಿಂಗ್ ಬೆಂಬಲವನ್ನು ತಮ್ಮ ಸ್ಮಾರ್ಟ್‌ಫೋನ್‌ಗಳಿಗೆ ಲಭ್ಯವಾಗಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ.

ಅಂಡರ್-ಡಿಸ್ಪ್ಲೇ ಸೆಲ್ಫಿ ಕ್ಯಾಮೆರಾ

ಅಂಡರ್-ಡಿಸ್ಪ್ಲೇ ಸೆಲ್ಫಿ ಕ್ಯಾಮೆರಾ

ಸ್ಮಾರ್ಟ್‌ಫೋನ್‌ಗಳಲ್ಲಿ ಅಂಡರ್-ಡಿಸ್‌ಪ್ಲೇ ಸೆಲ್ಫಿ ಕ್ಯಾಮೆರಾಗಳು 2021 ರಲ್ಲಿ ಹೆಚ್ಚು ಮನ ಸೆಳೆಯುವ ಸಾಧ್ಯತೆ ಇದೆ. ZTE ಈಗಾಗಲೇ ಆಕ್ಸಾನ್ 20 5G ಅನ್ನು ಅಂಡರ್ ಡಿಸ್‌ಪ್ಲೇ ಸೆಲ್ಫಿ ಕ್ಯಾಮೆರಾದೊಂದಿಗೆ ಬಿಡುಗಡೆ ಮಾಡಿದೆ. ಸ್ಯಾಮ್‌ಸಂಗ್ ಮತ್ತು ಗೂಗಲ್ ಕೂಡ ಈ ತಂತ್ರಜ್ಞಾನವನ್ನು ತಮ್ಮ ಸ್ಮಾರ್ಟ್‌ಫೋನ್‌ಗಳಿಗೆ ತರುವಲ್ಲಿ ಕೆಲಸ ಮಾಡುತ್ತಿವೆ ಎನ್ನಲಾಗಿದೆ.

ಲಿಡಾರ್ ಕ್ಯಾಮೆರಾ

ಲಿಡಾರ್ ಕ್ಯಾಮೆರಾ

ಲಿಡಾರ್ ಎಂದರೆ ಲೈಟ್ ಡಿಟೆಕ್ಷನ್ ಮತ್ತು ರೇಂಜಿಂಗ್ ಕ್ಯಾಮೆರಾ ಸೆನ್ಸಾರ್. ಲಿಡಾರ್ ಸೆನ್ಸಾರ್‌ ಐಫೋನ್ 12 ಪ್ರೊನ ಪ್ರಮುಖ ಲಕ್ಷಣವಾಗಿದೆ. ಇದು ಪ್ರಾಥಮಿಕವಾಗಿ ಶ್ರೇಣಿ ಮತ್ತು ಸ್ಕ್ಯಾನಿಂಗ್ ಸಾಮರ್ಥ್ಯಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರರ್ಥ ಇತರ ವಸ್ತುಗಳ ಮುಂದೆ ಅಥವಾ ಹಿಂದೆ ವಸ್ತುವನ್ನು ಕಂಡುಹಿಡಿಯುವಲ್ಲಿ ಲಿಡಾರ್ ಉತ್ತಮವಾಗಿದೆ. ಈ ವರ್ಷ ಹೆಚ್ಚಿನ ಆಂಡ್ರಾಯ್ಡ್ ಫೋನ್‌ಗಳಿಗೆ ಈ ಸೆನ್ಸಾರ್‌ ಲಭ್ಯವಾಗಬಹುದು.

ಕಾಂಪ್ಯಾಕ್ಟ್ ಸ್ಮಾರ್ಟ್‌ಫೋನ್‌ಗಳು

ಕಾಂಪ್ಯಾಕ್ಟ್ ಸ್ಮಾರ್ಟ್‌ಫೋನ್‌ಗಳು

ಐಫೋನ್ 12 ಮಿನಿ ಕಾಂಪ್ಯಾಕ್ಟ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಪ್ರವೃತ್ತಿಯನ್ನು ಸೃಷ್ಟಿಸುವ ಸಾಧ್ಯತೆಯಿದೆ. ನಾವು ಈ ವರ್ಷ ಚಿಕ್ಕ ಗಾತ್ರದ ಆಂಡ್ರಾಯ್ಡ್ ಫೋನ್‌ಗಳನ್ನು ನಿರೀಕ್ಷಿಸಬಹುದು.

ಬಜೆಟ್ 5G ಸ್ಮಾರ್ಟ್‌ಫೋನ್‌ಗಳು

ಬಜೆಟ್ 5G ಸ್ಮಾರ್ಟ್‌ಫೋನ್‌ಗಳು

ಕ್ವಾಲ್ಕಾಮ್ ಮತ್ತು ಮೀಡಿಯಾ ಟೆಕ್ ಎರಡೂ ಕೈಗೆಟುಕುವ ಫೋನ್‌ಗಳಿಗಾಗಿ 5G ಕಂಪ್ಲೈಂಟ್ ಪ್ರೊಸೆಸರ್‌ಗಳನ್ನು ಪರಿಚಯಿಸುತ್ತಿದ್ದು, 5G ಈ ಸ್ಮಾರ್ಟ್‌ಫೋನ್‌ಗಳಿಗೆ 2021 ರಲ್ಲಿ ಲಭ್ಯವಾಗಲಿದೆ.

ಹೆಚ್ಚಿನ ಸ್ಮಾರ್ಟ್‌ಫೋನ್‌ಗಳಲ್ಲಿ 108mp ಸೆನ್ಸಾರ್‌

ಹೆಚ್ಚಿನ ಸ್ಮಾರ್ಟ್‌ಫೋನ್‌ಗಳಲ್ಲಿ 108mp ಸೆನ್ಸಾರ್‌

108 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳು 2020 ರಲ್ಲಿ ಉನ್ನತ-ಮಟ್ಟದ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿತ್ತು. ಇವುಗಳಲ್ಲಿ ಸ್ಯಾಮ್‌ಸಂಗ್ ಮತ್ತು ಶಿಯೋಮಿ ಸೇರಿವೆ. ಈ ವರ್ಷ ನಾವು ಇನ್ನು ಹೆಚ್ಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಬಹುದು ಎಂದು ನಿರೀಕ್ಷಿಸಲಾಗಿದೆ.

144Hz ರಿಫ್ರೆಶ್ ರೇಟ್‌ ಸಾಮರ್ಥ್ಯದ ಸ್ಮಾರ್ಟ್‌ಫೋನ್‌ಗಳು

144Hz ರಿಫ್ರೆಶ್ ರೇಟ್‌ ಸಾಮರ್ಥ್ಯದ ಸ್ಮಾರ್ಟ್‌ಫೋನ್‌ಗಳು

ಈ ವರ್ಷ 144Hz ರಿಫ್ರೆಶ್ ರೇಟ್‌ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಸದ್ದು ಮಾಡುವ ಸಾಧ್ಯತೆಯಿದೆ. 90Hz ಡಿಸ್‌ಪ್ಲೇ ಸುಮಾರು ಎರಡು ವರ್ಷಗಳ ಹಿಂದೆಯೇ ಸ್ಮಾರ್ಟ್‌ಫೋನ್‌ಗಳಿಗೆ ಬಂದಿತು. 2019 ರಲ್ಲಿ 120Hz, ಮತ್ತು ಇನ್ನು ಈ ವರ್ಷ 144Hz ಪಡೆದುಕೊಳ್ಳಲಿವೆ ಎಂದು ಅಂದಾಜಿಸಲಾಗಿದೆ.

100W ಗಿಂತ ಹೆಚ್ಚಿನ ವೇಗದ ಚಾರ್ಜಿಂಗ್

100W ಗಿಂತ ಹೆಚ್ಚಿನ ವೇಗದ ಚಾರ್ಜಿಂಗ್

ವೈರ್ಡ್ ಮತ್ತು ವಾಯರ್‌ಲೆಸ್ ಎರಡೂ ಉತ್ತಮ ಮತ್ತು ವೇಗವಾಗಿ ಚಾರ್ಜಿಂಗ್ ಬೆಂಬಲ ನೀಡುವ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು 2021 ರಲ್ಲಿ ಬರುವ ನಿರೀಕ್ಷೆಯಿದೆ.

ದೊಡ್ಡ ಬ್ಯಾಟರಿ

ದೊಡ್ಡ ಬ್ಯಾಟರಿ

2020 ರಲ್ಲಿ ಬಿಗ್‌ ಬ್ಯಾಟರಿ ಸಾಮರ್ಥ್ಯದ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಆಗಿದ್ದವು. ಇನ್ನು ಈ ವರ್ಷ ಹೆಚ್ಚಿನ ಪ್ರಮಾಣದ ಸ್ಮಾರ್ಟ್‌ಫೋನ್‌ಗಳು ಬಿಗ್‌ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರಲಿವೆ ಎಂದು ನಿರೀಕ್ಷಿಸಲಾಗಿದೆ.

ಗೋ-ಟು ಆಪರೇಟಿಂಗ್ ಸಿಸ್ಟಮ್

ಗೋ-ಟು ಆಪರೇಟಿಂಗ್ ಸಿಸ್ಟಮ್

ಆಂಡ್ರಾಯ್ಡ್ 11 ಆಂಡ್ರಾಯ್ಡ್‌ನ ಇತ್ತೀಚಿನ ಆವೃತ್ತಿಯಾಗಿದ್ದು, 2021 ರಲ್ಲಿ ಬಿಡುಗಡೆಯಾದ ಹೆಚ್ಚಿನ ಫೋನ್‌ಗಳು ಆಂಡ್ರಾಯ್ಡ್ 11 ಅನ್ನು ಗೋ-ಟು ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಸಾಧ್ಯತೆಯಿದೆ.

Best Mobiles in India

English summary
Wonder what are the features, both hardware and software wise, that will be common in smartphones in 2021.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+