ಕಣ್ಣಿಗೆ ತಂಪು ಬಳಸಲು ಅನುಕೂಲಕಾರಿ ಗ್ಯಾಜೆಟ್‌ಗಳು
ನಾವು ಆಧುನೀಕತೆಗೆ ಎಷ್ಟು ತಲೆಬಾಗಿದರೂ ಪ್ರಕೃತಿಯು ನಮಗೆ ಒದಗಿಸುವ ಮೂಲ ಅಂಶಗಳನ್ನು ನಾವು ಮರೆಯುವಂತಿಲ್ಲ. ಹೌದು ಆಧುನೀಕತೆ ಮತ್ತು ವಿಜ್ಞಾನವು ಪರಿಸರದ ಮೇಲೆ ಉಂಟುಮಾಡುತ್ತಿರುವ ಹಾನಿ ಅದರಿಂದ ನಮಗುಂಟಾಗುತ್ತಿರುವ ನಷ್ಟಕ್ಕೆ ನಾವು ಬೆಲೆ ತೆರಬೇಕಾಗುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಂಡೇ ಹೆಚ್ಚು ಹೆಚ್ಚು ಪರಿಸರ ಸ್ನೇಹಿಯಾಗಿ ನಮ್ಮನ್ನು ನಾವು ಮಾರ್ಪಡಿಸಿಕೊಳ್ಳಬೇಕು.
[ಓದಿರಿ: ಆಧುನಿಕ ಭವಿಷ್ಯದ ನೋಟ ಈ ಟಾಪ್ ಮ್ಯೂಸಿಯಮ್‌ಗಳಲ್ಲಿ]
ಇಂದಿನ ಲೇಖನದಲ್ಲಿ ಬರೀ ಮರ ಅಥವಾ ಪರಿಸರ ಪ್ರೇಮಿ ವಸ್ತುಗಳಿಂದ ಮಾಡಿರುವ ಗ್ಯಾಜೆಟ್‌ಗಳ ಪರಿಚಯವನ್ನು ನಾವು ಮಾಡುತ್ತಿದ್ದು ಕಣ್ಣಿಗೆ ತಂಪು ಬಳಸಲು ಅನುಕೂಲಕರವಾಗಿರುವ ಗ್ಯಾಜೆಟ್‌ಗಳಿಂದ ಪರಿಸರಕ್ಕೆ ಹಾನಿ ಇಲ್ಲ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರಿತುಕೊಳ್ಳಿ.

ರಿಫ್ಲೀಸ್
ಬಾಟಲ್‌ಗಳನ್ನು ಬಳಸಿ ಮಾಡಿರುವ ರಿಫ್ಲೀಸ್ ಬಳಸಿ ಟ್ಯಾಬ್ಲೆಟ್ ಕವರ್‌ಗಳು, ಇ ರೀಡರ್ ಕೇಸ್‌ಗಳು, ಐಪಾಡ್ ಸ್ಲೀವ್‌ಗಳನ್ನು ತಯಾರಿಸಬಹುದಾಗಿದೆ. ಪ್ಲಾಸ್ಟಿಕ್ ಬಾಟಲ್ ಮತ್ತು ಕಾರ್ಪೆಟ್ ಫೈಬರ್‌ಗಳನ್ನು ಇದಕ್ಕಾಗಿ ಬಳಸಲಾಗಿದೆ.

ಐಬ್ಯಾಂಬೂ ಸ್ಪೀಕರ್
ಬಿದಿರಿನ ತುಂಡಿನಿಂದ ತಯಾರಿಸಲಾದ ಇಲೆಕ್ಟ್ರಿಸಿಟಿ ರಹಿತ ಸ್ಪೀಕರ್ ಇದಾಗಿದೆ.

ಡೆಸ್ಕ್
ಸ್ಟ್ಯಾಂಡಿಂಗ್ ಡೆಸ್ಕ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ. ಕಾರ್ಡ್‌ಬೋರ್ಡ್ ಅನ್ನು ಬಳಸಿ ಮಾಡಿರುವ ಡೆಸ್ಕ್ ಇದಾಗಿದೆ.

ಯುಎಸ್‌ಬಿ ಸೆಲ್
ಯುಎಸ್‌ಬಿ ಬಳಸಿ ರೀಚಾರ್ಜ್ ಮಾಡಬಹುದಾದ ಯುಎಸ್‌ಬಿ ಸೆಲ್ ಬ್ಯಾಟರಿ ಇದಾಗಿದೆ. ಸಾಮಾನ್ಯ ಬ್ಯಾಟರಿಗಳು ಕಾರ್ಯನಿರ್ವಹಿಸುವಂತೆಯೇ ಈ ಬ್ಯಾಟರಿಗಳು ಕೆಲಸ ಮಾಡುತ್ತವೆ.

ನೋಮಾಡ್ 13 ಸೋಲಾರ್ ಪ್ಯಾನೆಲ್
ಇದು ಪೋರ್ಟೇಬಲ್ ಆಗಿದ್ದು, ಸುಲಭವಾಗಿ ಚಾರ್ಜ್ ಕೂಡ ಮಾಡಬಹುದಾಗಿದೆ. ಇದರ ತೂಕ 1.6 ಪೌಂಡ್‌ಗಳಾಗಿದ್ದು 13 ವ್ಯಾಟ್ ಸೋಲಾರ್ ಪವರ್ ಅನ್ನು ಉತ್ಪತ್ತಿ ಮಾಡುತ್ತದೆ.

ಗೋಲ್ಡನ್ ಚೈಲ್ಡ್ ಸೋಲಾರ್ ಪಾಕ್ ಚಾರ್ಜರ್
ಸಣ್ಣ ಇಲೆಕ್ಟ್ರಾನಿಕ್ ಡಿವೈಸ್‌ಗಳಿಗೆ ಇದು ಅತ್ಯುತ್ತಮವಾಗಿದೆ. ಸೋಲಾರ್ ಪ್ಯಾನೆಲ್ ಅಥವಾ ಯುಎಸ್‌ಬಿ ಡ್ರೈವ್ ಮೂಲಕ ಇದು ಚಾರ್ಜ್ ಮಾಡುತ್ತದೆ.

ಫೋನ್ ಕೇಸ್‌ಗಳು
ಐಫೋನ್ 5 ಗಾಗಿ ಪ್ಲಾಸ್ಟಿಕ್‌ನಿಂದ ತಯಾರಿಸಲಾದ ಫೋನ್ ಕೇಸ್‌ಗಳು ಇಲ್ಲಿವೆ. ಕ್ರೆಡಿಟ್ ಕಾರ್ಡ್ ಹೋಲ್ಡರ್ ಇದರಲ್ಲಿದ್ದು ಕ್ರೆಡಿಟ್ ಕಾರ್ಡ್‌ಗಳು ಇದರಲ್ಲಿವೆ.

ಸೋಲಾರ್ ಪವರ್ ಟೆಂಟ್
ನೀವು ಕ್ಯಾಂಪೈನ್ ಪ್ರವಾಸದಲ್ಲಿದ್ದೀರಿ ಎಂದಾದಲ್ಲಿ ಈ ಸೋಲಾರ್ ಪವರ್ ಟೆಂಟ್ ನಿಮ್ಮ ಗ್ಯಾಜೆಟ್‌ಗಳನ್ನು ಚಾರ್ಜ್ ಮಾಡುತ್ತದೆ. 5 ವಾಟ್ ಸೋಲಾರ್ ಪ್ಯಾನೆಲ್‌ನೊಂದಿಗೆ ಬಂದಿರುವ ಈ ಟೆಂಟ್ ಲಿಥಿಯಮ್ ಸೋಲಾರ್ ಸ್ಟೋರೇಜ್ ಬ್ಯಾಂಕ್ ಮತ್ತು ಮೊಬೈಲ್ ಯುಎಸ್‌ಬಿ ಚಾರ್ಜಿಂಗ್ ಅಡಾಪ್ಟರ್‌ಗಳನ್ನು ಹೊಂದಿದೆ.

ರುಕೂಸ್ ಸೋಲಾರ್
ಈ ಸೋಲಾರ್ ಆಧಾರಿತ, ವೈರ್‌ಲೆಸ್ ಸೌಂಡ್ ಸಿಸ್ಟಮ್ ಪ್ರಯಾಣದಲ್ಲಿ ಸಂಗೀತ ಆಲಿಸಲು ಹೆಚ್ಚು ಸಹಕಾರಿಯಾಗಿದೆ. ಪರಿಸರ ಸ್ನೇಹಿ ಸೌಂಡ್ ಸಿಸ್ಟಮ್ ಇದಾಗಿದ್ದು ಎಂಟು ಗಂಟೆಗಳವರಗೆ ಇದು ಕಾರ್ಯಿರ್ವಹಿಸುತ್ತದೆ.

ಸನ್‌ಶೈನ್ ಸೋಲಾರ್ ಚಾರ್ಜರ್
ಎಕ್ಸ್‌ಡಿ ಡಿಸೈನ್‌ನಿಂದ ತಯಾರಿಸಲಾದ ಈ ಸೋಲಾರ್ ಚಾರ್ಜರ್ ಹೂವಿನ ಆಕಾರದಲ್ಲಿದೆ. ನಿಮ್ಮ ಗ್ಯಾಜೆಟ್‌ಗಳನ್ನು ಚಾರ್ಜ್ ಮಾಡಲು ಇದು ಹೇಳಿಮಾಡಿಸಿರುವ ಉಪಕರಣವಾಗಿದೆ.

ವಾಟರ್ ಪೆಬ್ಬಲ್
ನೀರನ್ನು ಉಳಿಸಲು ಈ ವಾಟರ್ ಪೆಬ್ಬಲ್ ಸಹಕಾರಿ. ನೀವು ನೀರು ಖರ್ಚು ಮಾಡಿದಂತೆಲ್ಲಾ ಈ ಡಿವೈಸ್ ಎಷ್ಟು ನೀರು ಪೋಲಾಗಿದೆ ಎಂಬುದನ್ನು ತಿಳಿಸುತ್ತದೆ.


Click it and Unblock the Notifications