ನಿಮ್ಮನ್ನು ಸ್ಮಾರ್ಟ್ ಆಗಿಸುವ ಟಾಪ್ 10 ಟೆಕ್ ಉತ್ಪನ್ನಗಳು

By Shwetha
|

ಇಂದಿನ ಆಧುನಿಕ ಜೀವನ ಪದ್ಧತಿಯಲ್ಲಿ ನಾವು ಹೆಚ್ಚು ಸುಧಾರಿತ ಅಂಶಗಳನ್ನು ಕಂಡುಕೊಳ್ಳುತ್ತಿದ್ದೇವೆ. ನಮ್ಮ ಜೀವನವನ್ನು ಇನ್ನಷ್ಟು ಸರಳ ಅಂತೆಯೇ ಮಾಡರ್ನ್‌ಗೊಳಿಸುವ ಈ ಸಂಗತಿಗಳು ವಿಜ್ಞಾನ ಲೋಕ ನಮಗೆ ನೀಡಿರುವ ಅದ್ಭುತ ಕೊಡುಗೆ ಎಂದೆನಿಸಿದೆ. ಇಂದಿನ ಲೇಖನದಲ್ಲಿ ಇಂತಹುದೇ ನಾವೀನ್ಯತೆಯುಳ್ಳ ಡಿವೈಸ್‌ಗಳನ್ನು ಕಾಣಲಿದ್ದು ಇದು ಮಾಡುವ ಕಾರುಬಾರು ನಿಜಕ್ಕೂ ಅಮೋಘ ಎಂದೆನಿಸಿದೆ.

ಸೋಲಾರ್ ರಸ್ತೆಗಳು

ಸೋಲಾರ್ ರಸ್ತೆಗಳು

ಸೋಲಾರ್ ರಸ್ತೆಗಳಲ್ಲಿ ಸೋಲಾರ್ ಪ್ಯಾನೆಲ್‌ಗಳನ್ನು ರಸ್ತೆಯ ಒಳಗೆ ಅಳವಡಿಸುತ್ತಿದ್ದು ಇದು ಸೌರಶಕ್ತಿಯನ್ನು ಪಡೆದುಕೊಳ್ಳುತ್ತದೆ. ಇದು ಫೈಬರ್ ಸ್ವಿಚ್‌ಗಳನ್ನು ಹೊಂದಿದೆ. ರಸ್ತೆಗಳಲ್ ಒಡೆಯುವಿಕೆ ಮೊದಲಾದ ಸಮಸ್ಯೆಗಳು ಕಡಿಮೆಯಾಗುತ್ತವೆ.

ಸ್ಮಾರ್ಟ್ ಅರ್ಬನ್ ವಾಟರ್ ಸ್ಟೇಶನ್

ಸ್ಮಾರ್ಟ್ ಅರ್ಬನ್ ವಾಟರ್ ಸ್ಟೇಶನ್

ಕಂಪ್ಯೂಟರೀಕೃತ ಕುಡಿಯುವ ನೀರಿನ ಸ್ಟೇಶನ್‌ಗಳು ನಿಮ್ಮ ನೀರಡಿಕೆಯನ್ನು ನೀಗಿಸುತ್ತವೆ. ಇದರಿಂದಾಗಿ ಪ್ಲಾಸ್ಟಿಕ್ ಬಾಟಲಿಗಳನ್ನು ಆಗಾಗ್ಗೆ ಖರೀದಿಸಿ ಎಲ್ಲೆಂದರಲ್ಲಿ ಎಸೆಯುವ ಕ್ರಮಕ್ಕೆ ಅಂತ್ಯಹಾಡಬಹುದಾಗಿದೆ.

ಕಾರು ಸುಭದ್ರತೆಗೆ ಫೈರ್‌ವಾಲ್

ಕಾರು ಸುಭದ್ರತೆಗೆ ಫೈರ್‌ವಾಲ್

ಕಾರಿನ ಚಕ್ರಗಳನ್ನು ಭದ್ರಪಡಿಸುವ ವ್ಯವಸ್ಥೆಯನ್ನು ಅರಿಲು ಅಭಿವೃದ್ಧಿಪಡಿಸಿದ್ದು ನಿಮ್ಮ ಕಾರಿಗೆ ತೊಂದರೆಗಳಾದಲ್ಲಿ ಮಾಹಿತಿ ನೀಡುತ್ತದೆ.

ಟಾಯ್ ಮೈಲ್

ಟಾಯ್ ಮೈಲ್

ವೈರ್‌ಲೆಸ್ ನೆಟ್‌ವರ್ಕ್ ಉಳ್ಳ ಆಟಿಕೆಗಳು ಇದಾಗಿದ್ದು ಮಕ್ಕಳೊಂದಿಗೆ ಇದು ಸಂಭಾಷಣೆಯನ್ನು ನಡೆಸುತ್ತವೆ. ನಿಮ್ಮ ಮಾತುಗಳನ್ನು ಫೋನ್‌ನಿಂದ ವೈಫೈ ಮೂಲಕ ಮಕ್ಕಳಿಗೆ ತಿಳಿಸುತ್ತದೆ. ಇದರಿಂದಾಗಿ ಮಕ್ಕಳಿಗೆ ಅಭದ್ರತೆ ಕಾಡುವುದಿಲ್ಲ.

ಕಾಡಿನ ಸಂರಕ್ಷಣೆ

ಕಾಡಿನ ಸಂರಕ್ಷಣೆ

ಎತ್ತರದ ಟವರ್‌ಗಳಲ್ಲಿ ವೀಡಿಯೋ ಕ್ಯಾಮೆರಾಗಳನ್ನು ಅಳವಡಿಸಿ ಕಾಡಿನ ಸಂರಕ್ಷಣೆಯನ್ನು ಮಾಡಬಹುದಾಗಿದೆ. ಕಾಡಿನಲ್ಲಿ ಬೆಂಕಿ ಕಂಡುಬಂದಲ್ಲಿ ಇದು ಕೂಡಲೇ ಸೂಚನೆಯನ್ನು ಒದಗಿಸುತ್ತದೆ.

ನೀರಿನೊಳಗಿನ ನೆಟ್‌ವರ್ಕ್

ನೀರಿನೊಳಗಿನ ನೆಟ್‌ವರ್ಕ್

ಅಂಡರ್ ವಾಟರ್ ಕಮ್ಯುನಿಕೇಶನ್ ಮತ್ತು ನ್ಯಾವಿಗೇಶನ್‌ಗೆ ಇದು ಸಹಕಾರಿಯಾಗಲಿದೆ. ನೀರಿನ ಒಳಗೆ ಜಿಪಿಎಸ್‌ನಂತಹ ನೆಟ್‌ವರ್ಕ್ ಅನ್ನು ಅಳವಡಿಸಲಾಗುತ್ತಿದ್ದು ಹಡಗಿನ ರಕ್ಷಣೆಯನ್ನು ಮಾಡುತ್ತದೆ. ಮತ್ತು ಗ್ಯಾಸ್/ಎಣ್ಣೆ ಮೊದಲಾದ ನೀರಿನೊಳಗಿನ ಸರಬರಾಜುಗಳ ಮೇಲೆ ಕಣ್ಣಿಡುತ್ತದೆ.

ಕ್ಲೌಡ್‌ಗಾಗಿ ದೃಢೀಕರಣ

ಕ್ಲೌಡ್‌ಗಾಗಿ ದೃಢೀಕರಣ

ಈ ದೃಢೀಕರಣ ವ್ಯವಸ್ಥೆ ನಿಮ್ಮೆಲ್ಲಾ ಪಾಸ್‌ವರ್ಡ್‌ಗಳು ಹ್ಯಾಕ್ ಆಗುವುದನ್ನು ತಪ್ಪಿಸುತ್ತದೆ. ಸರ್ವರ್‌ನಲ್ಲಿ ಪಾಸ್‌ವರ್ಡ್‌ ಹ್ಯಾಕರ್‌ಗೆ ದೊರೆತರೂ ಇದು ಅವರಲ್ಲಿ ಗೊಂದಲವನ್ನುಂಟು ಮಾಡುತ್ತದೆ.

ಚುಯಿ ಅನ್‌ಲಾಕ್ ಸಿಸ್ಟಮ್

ಚುಯಿ ಅನ್‌ಲಾಕ್ ಸಿಸ್ಟಮ್

ನಿಮ್ಮ ಮನೆಗೆ ಭದ್ರತೆಯನ್ನೊದಗಿಸುವ ಚುಯಿ ಮನೆಯ ಹೊರಗೆ ಕದತಟ್ಟುತ್ತಿರುವ ವ್ಯಕ್ತಿಯ ವಿವರವನ್ನು ನಿಮ್ಮ ಫೋನ್‌ಗೆ ರವಾನಿಸುತ್ತದೆ.

ವಂಡರ್ ಬಾರ್

ವಂಡರ್ ಬಾರ್

ಈ ಚಿಪ್ ಅನ್ನು ಬೇರೆ ಬೇರೆ ಡಿವೈಸ್‌ಗಳಿಗೆ ಅಳವಡಿಸಿ ಫೋನ್‌ನಲ್ಲಿರುವ ಬ್ಲ್ಯೂಟೂತ್ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತದೆ.

ಏರೋಬೋಟ್ಸ್

ಏರೋಬೋಟ್ಸ್

ಕಟ್ಟಡ ನಿರ್ಮಾಣ ತಂಡಕ್ಕೆ ಮತ್ತು ವೆಬ್ ಅಪ್ಲಿಕೇಶನ್‌ಗಳ ಮೂಲಕ ಪ್ರವೇಶವಿರುವ ಹೆಚ್ಚಿನದಕ್ಕೆ ವಿವರವಾದ ಚಿತ್ರ ನಕ್ಷೆಗಳನ್ನು ಮತ್ತು 3ಡಿ ಮಾಡ್ಯುಲ್‌ಗಳನ್ನು ಇದು ಒದಗಿಸುತ್ತದೆ.

Most Read Articles
Best Mobiles in India

English summary
Cisco has launched the Internet of Things (IoT) Innovation Grand Challenge “to spearhead an industry-wide initiative to accelerate the adoption of breakthrough technologies and products that will contribute to the growth and evolution of the Internet of Things.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more