ಕಠಿಣ ಸಂದರ್ಶನವಿರುವ ಟಾಪ್ 10 ಐಟಿ ಕಂಪನಿಗಳು

Posted By: Varun
ಕಠಿಣ ಸಂದರ್ಶನವಿರುವ ಟಾಪ್ 10 ಐಟಿ ಕಂಪನಿಗಳು

ನಮ್ಮಲ್ಲಿ ಬಹುತೇಕ ಜನ ಓದೋದೇ ಮುಂದೆ ಒಳ್ಳೆ ಕೆಲಸ ಸಿಗುತ್ತೆ ಅಂತ. ಕೆಲಸ ಸಿಗಬೇಕು ಅಂದ್ರೆ ಮಾರ್ಕ್ಸ್ ಚೆನ್ನಾಗಿರಬೇಕು, ಒಳ್ಳೆ ಕಂಪನಿಯಲ್ಲಿ ಮಾರ್ಕ್ಸ್ ಜೊತೆ ನಮ್ಮ ಕುಶಲ್ಯ, ಕಂಪನಿಗೆ ನಮ್ಮಿಂದ ಏನು ಲಾಭ, ನಾವುಏನೇ ಕಲ್ತುಕೊಂಡರೂ ಅದರಿಂದ ಕಂಪನಿಗೆ ಏನು ಪ್ರಯೋಜನ ಅಂತ ಇಂಟರ್ವ್ಯೂ ಅಲ್ಲಿ ತಿಳಿಸಿ ಅವರನ್ನ ಮೆಚ್ಚಿಸಿದ್ರೆ ಮಾತ್ರನೇ ಒಳ್ಳೆ ಸಂಬಳ ಇರೋ ಕೆಲಸ ಸಿಗೋದು.

ಹಾಗಂತ ಸಂದರ್ಶನ ಕಠಿಣ ಇರುತ್ತೆ ಅಂತ ಯಾರಾದ್ರೂ ಹೇಳಿದ್ರೆ ಅದರ ಅರ್ಥ ಅಲ್ಲಿ ನಿಮ್ಮ ಕ್ರಿಯಾಶೀಲತೆಯನ್ನ ಒರೆಗೆ ಹಚ್ಚುವ ಪ್ರಶ್ನೆಗಳನ್ನ ಕೇಳಿರುತ್ತಾರೆ ಎಂದರ್ಥ.

ಹಾಗಾದ್ರೆ ಯಾವ ಯಾವ ಕಂಪನಿಗಳು ಆ ರೀತಿ ಕಠಿಣ ಪರೀಕ್ಷೆ ಒಡ್ಡಿ ತಮ್ಮ ಉದ್ಯೋಗಿಗಳನ್ನ ಆರಿಸಿಕೊಳ್ಳುತ್ತೆ ಅಂತ ಗ್ಲಾಸ್ ಡೋರ್ ಎಂಬ ಒಂದು ಕಂಪನಿ ಸಮೀಕ್ಷೆ ನಡೆಸಿ ಟಾಪ್ 12 ಕಂಪನಿಗಳ ಪಟ್ಟಿ ಬಿಡುಗಡೆ ಮಾಡಿದೆ. ಅವುಗಳಲ್ಲಿ ಟಾಪ್ 11 ಕಂಪನಿಗಳು ಐಟಿ ಕಂಪನಿಗಳೇ ಆಗಿದ್ದವು.

ಆ ಕಂಪನಿಗಳು ಯಾವುವು ಎಂಬುದನ್ನು ಇಲ್ಲಿ ನೋಡಿ:

1) ThoughtWorks (IT Consultancy)

ಕಠಿಣತೆಯ ಮಟ್ಟ: 3.6 ಅಂಕ (5 ಕ್ಕೆ)

2) ಗೂಗಲ್

ಕಠಿಣತೆಯ ಮಟ್ಟ: 3.5 ಅಂಕ (5 ಕ್ಕೆ)

3) Unisys

ಕಠಿಣತೆಯ ಮಟ್ಟ: 3.5 ಅಂಕ (5 ಕ್ಕೆ)

4) Rackspace Hosting (web hosting)

ಕಠಿಣತೆಯ ಮಟ್ಟ: 3.4 ಅಂಕ (5 ಕ್ಕೆ)

5) Cypress Semiconductor

ಕಠಿಣತೆಯ ಮಟ್ಟ: 3.4 ಅಂಕ (5 ಕ್ಕೆ)

6) Sapient Corporation

ಕಠಿಣತೆಯ ಮಟ್ಟ: 3.4 ಅಂಕ (5 ಕ್ಕೆ)

7) Bazaar Voice

ಕಠಿಣತೆಯ ಮಟ್ಟ: 3.4 ಅಂಕ (5 ಕ್ಕೆ)

8 ) Juniper Networks

ಕಠಿಣತೆಯ ಮಟ್ಟ: 3.4 ಅಂಕ (5 ಕ್ಕೆ)

9) Headstrong

ಕಠಿಣತೆಯ ಮಟ್ಟ: 3.3 ಅಂಕ (5 ಕ್ಕೆ)

10) Facebook

ಕಠಿಣತೆಯ ಮಟ್ಟ: 3.3 ಅಂಕ (5 ಕ್ಕೆ)

11) Amazon

ಕಠಿಣತೆಯ ಮಟ್ಟ: 3.3 ಅಂಕ (5 ಕ್ಕೆ)

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot