ಹಳತನ್ನು ಮರೆತು ಹೊಸತನ್ನು ನಿಮ್ಮದಾಗಿಸಿ

Posted By:

ತಂತ್ರಜ್ಞಾನ ಅಭಿವೃದ್ಧಿಯಾದಂತೆ ನಮ್ಮ ಜೀವನ ಶೈಲಿ ಕೂಡ ಬದಲಾಗುತ್ತದೆ. ಹಳತನ್ನು ಹೆಚ್ಚು ಸಮಯ ಬಳಸಲು ಯಾರಿಗೆ ಮನಸಾಗುವುದಿಲ್ಲವೋ ಅದೇ ರೀತಿ ಹೊಸತನ್ನು ತಮ್ಮದಾಗಿಸಿಕೊಳ್ಳಲು ಮನ ಹಂಬಲಿಸುತ್ತಿರುತ್ತದೆ. ಇದು ಪ್ರತಿಯೊಂದು ಕ್ಷೇತ್ರಕ್ಕೂ ಸೀಮಿತ.

ತಂತ್ರಜ್ಞಾನಕ್ಕೆ ಬಂದಾಗ ಈ ಮಾತು ಅಕ್ಷರಶಃ ನಿಜವಾಗುತ್ತದೆ. ಮುಂಚೆ ಇದ್ದ ಎಲ್ಲಾ ತಾಂತ್ರಿಕ ಉಪಕರಣಗಳು ಈಗ ಮೂಲೆಗುಂಪಾಗಿ ಅವುಗಳ ಜಾಗವನ್ನು ಹೊಸ ಅತ್ಯಾಧುನಿಕ ಅಭಿವೃದ್ಧಿ ಬಂದು ಕುಳಿತಿದೆ. ಮನುಷ್ಯ ಹೇಗೆ ಹೊಸದಕ್ಕೆ ತನ್ನನ್ನು ಹೊಂದಿಸಿಕೊಳ್ಳುತ್ತಾನೆ ಎಂಬುದಕ್ಕೆ ಈಗ ಸಾಕಷ್ಟು ಉದಾಹರಣೆಗಳಿವೆ. ಪೇಜರ್, ಕಾರ್ಡಲೆಸ್ ಈಗ ಮೂಲೆಗುಂಪಾಗಿ ಅವುಗಳ ಸ್ಥಾನವನ್ನು ಹೊಸ ಮೊಬೈಲ್ ಫೋನ್‌ಗಳು ಸ್ಮಾರ್ಟ್‌ಫೋನ್‌ಗಳು ತಮ್ಮದಾಗಿಸಿಕೊಂಡಿವೆ.

ಈ ಹೊಸತನದ ಅಲೆ ಇನ್ನೂ ಮುಗಿದಿಲ್ಲ ಎಂದೇ ಹೇಳಬಹುದು. ನಿಮ್ಮನ್ನು ಇನ್ನಷ್ಟು ಹೊಸತು ಹಳತರ ನಡುವೆ ಕೊಂಡೊಯ್ಯಲು ನಾವು ಉತ್ಸುಕರಾಗಿದ್ದು ಅವುಗಳು ಯಾವುವು ಎಂಬುದನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬ್ಲೂಟೂತ್

#1

ಹಿಂದೆ ಮನೆಯ ಹಿರಿಯರು ಹೆಚ್ಚು ಹೊತ್ತು ಕಿವಿಗೆ ಫೋನ್ ಇಟ್ಟುಕೊಂಡು ಕುಳಿತಿದ್ದರೆ ಬೈಯ್ದು ಬಿಡುತ್ತಿದ್ದರು. ಅದರ ನಂತರ ಅದರ ನವೀಕೃತ ಮಾದರಿ ಬ್ಲೂಟೂತ್ ಅಸ್ತಿತ್ವಕ್ಕೆ ಬಂದಿತು. ಈಗ ಬ್ಲೂಟೂತ್ ಅನ್ನು ಬಳಸುವವರ ಸಂಖ್ಯೆ ಕಡಿಮೆಯಾಗಿದೆ ಎಂದೇ ಹೇಳಬಹುದು. ಹೆಡ್‌ಸೆಟ್ ಅನ್ನೇ ಈಗ ಹೆಚ್ಚಿನವರು ಉಪಯೋಗಿಸುತ್ತಿದ್ದಾರೆ. ಬ್ಲೂಟೂತ್‌ ಬಳಕೆ ಮಾಡಲು ಹೆಚ್ಚಿನ ಚಾರ್ಜ್ ಆವಶ್ಯವಾಗಿರುತ್ತದೆ. ಅದರಿಂದ ಬ್ಲೂಟೂತ್ ಕೂಡ ಈಗ ಹಿಂದೆ ಸರಿಯುತ್ತಿದೆ.

ಐಪ್ಯಾಡ್‌ಗೆ ಸಮನಾಗದ ಬ್ಲಾಕ್‌ಬೆರ್ರಿ ಪ್ಲೇಬುಕ್

#2

ಬ್ಲಾಕ್‌ಬೆರ್ರಿ ಮೊದಲ ಬಾರಿಗೆ ಪ್ಲೇಬುಕ್ ಎಂಬ ಟ್ಯಾಬ್ಲೆಟ್ ಅನ್ನು ಹೊರತಂದಿತು. ಬಂದ ಹೊಸದರಲ್ಲಿ ಇದು ಹೆಚ್ಚಿನ ಟ್ಯಾಬ್ಲೆಟ್ ಪ್ರಿಯರ ಮನವನ್ನು ಗೆದ್ದಿತು ಇದಕ್ಕೆ ಬಳಸಲಾದ ತಂತ್ರಜ್ಞಾನ ಕೂಡ ಅಷ್ಟೇ ಮಹತ್ವದ್ದಾಗಿತ್ತು. ಆದರೆ ಐಪ್ಯಾಡ್ ಮಾರುಕಟ್ಟೆಗೆ ಕಾಲಿಟ್ಟ ಕ್ಷಣದಿಂದ ಪ್ಲೇಬುಕ್ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿತು.

ಗೂಗಲ್ ವಾಲೆಟ್‌ ನಿಮ್ಮನ್ನು ಸೂಪರ್ ಮಾರ್ಕೆಟ್‌ಗೆ ಕೊಂಡೊಯ್ಯದು

#3

ಹೆಚ್ಚಿನ ಮೊಬೈಲ್ ವಾಲೆಟ್ ಕೂಡ ಮಾರುಕಟ್ಟೆ ಸುದ್ದಿಯನ್ನು ನೀಡುವಲ್ಲಿ ವಿಫಲವಾಗಿದೆ. ಗೂಗಲ್ ವಾಲೆಟ್ ಕೂಡ ಇದಕ್ಕೆ ಹೊರತಲ್ಲ. ಆದರೆ ಇದು ಶೇರು ಮಾರುಕಟ್ಟೆಯ ಸುದ್ದಿಯನ್ನು ತಿಳಿಸಲು ಸಮರ್ಪಕವಾದ ವಿಧಾನವಲ್ಲ.

ಡಿವಿಡಿ ಪ್ಲೇಯರ್ ೨೦ ನೇ ಶತಮಾನದ್ದು

#4

ವಿಸಿಆರ್‌ಗಳು ಹೊದ ನಂತರ ಅವುಗಳ ಸ್ಥಾನವನ್ನು ಕ್ರಮಿಸಿದ ಡಿವಿಡಿ ಪ್ಲೇಯರ್‌ಗಳು ಕೂಡ ತಮ್ಮ ಸ್ಥಾನವನ್ನು ಬೇರೊಂದಕ್ಕೆ ಕೊಟ್ಟುಬಿಟ್ಟಿದೆ. ಲ್ಯಾಪ್‌ಟಾಪ್ ಬಂದ ನಂತರ ಡಿವಿಡಿ ಈಗ ಹಳತಾಗಿದೆ. ಈಗಂತೂ ಡಿವಿಆರ್, ಹುಲು, ನೆಟ್‌ಫ್ಲಿಕ್ಸ್ ಮುಂತಾದ ಚಲನ ಚಿತ್ರ ಅಪ್ಲಿಕೇಶನ್‌ಗಳು ಡಿವಿಡಿ ಮಾಡುತ್ತಿದ್ದ ಕೆಲಸವನ್ನು ನಿರ್ವಹಿಸುತ್ತಿವೆ.

ಮೂಲೆಗುಂಪಾದ ಐಪೋಡ್

#5

ಈಗ ಮೊಬೈಲ್‌ ಫೋನ್‌ಗಳೇ ಐಪೋಡ್‌ಗಳ ಸ್ಥಾನವನ್ನು ತುಂಬುತ್ತಿರುವ ಕಾರಣ ಐಪೊಡ್ ಖರೀದಿಗೆ ಯಾರೂ ಮುಂದುವರಿಯುತ್ತಿಲ್ಲ ಎಂದೇ ಹೇಳಬಹುದು. ಈಗಂತೂ ಮೊಬೈಲ್‌ನಲ್ಲಿ ಎಲ್ಲಾ ಹಾಡು ಕೇಳುವ ಫಂಕ್ಷನ್‌ಗಳು ಇರುವುದರಿಂದ ಐಪೋಡ್‌ಗೆ ಬೈ ಹೇಳಲೇಬೇಕು.

ರಿಮೋಟ್ ಬೇಡ

#6

ನಿಮಗೆ ಟೀವಿಯಲ್ಲಿ ಆಟವಾಡಲು ಈಗ ರಿಮೋಟ್ ಅವಶ್ಯಕತೆಯಿಲ್ಲ. ನಿಮ್ಮ ಕೈಯನ್ನೇ ಬಳಸಿ ಆಟಗಾರರನ್ನು ನಿಯಂತ್ರಿಸಬಹುದು. ಗೇಮ್ ಅಪ್ಲಿಕೇಶನ್‌ನಲ್ಲಿ ಈ ರೀತಿಯ ಮಾರ್ಪಾಡುಗಳೂ ಬಂದಿವೆ.

ಆಂಗ್ರೀ ಬರ್ಡ್‌ಗೆ ವಿದಾಯ ಹೇಳಿ

#7

ಸದ್ಯಕ್ಕೆ ಆಂಗ್ರೀ ಬರ್ಡ್‌ ಅನ್ನು ಯಾರೂ ಆಡುತ್ತಿಲ್ಲ. ಇದರ ನಂತರದ ಹೊಸ ಹೊಸ ಗೇಮ್‌ಗಳು ಈಗ ಬಂದಿರುವುದರಿಂದ ಆಂಗ್ರೀ ಬರ್ಡ್‌ ವಿದಾಯ ಹೇಳಲೇಬೇಕು.

ಗ್ಯಾಲಕ್ಸಿ ಗೇರ್ ಸ್ಮಾರ್ಟ್‌ವಾಚ್

#8

ಸ್ಯಾಮ್‌ಸಂಗ್‌ನ ಮೊದಲ ಸ್ಮಾರ್ಟ್‌ವಾಚ್ ಗ್ಯಾಲಕ್ಸಿ ಗೇರ್ ಈಗ ನಿಂತಿದೆ. ಇದು ತುಂಬಾ ದುರ್ಬಲ ಬ್ಯಾಟರಿ ಜಿವನವನ್ನು ಹೊಂದಿದ್ದು ಕಡಿಮೆ ಸಾಮರ್ಥ್ಯವನ್ನು ಹೊಂದಿತ್ತು. ಈಗ ಇದರ ನಂತರದ ಹೊಸ ಸ್ಮಾರ್ಟ್‌ವಾಚ್‌ಗಳು ಮಾರುಕಟ್ಟೆಗೆ ಆಗಮಿಸಿದ್ದು ಈ ಎಲ್ಲಾ ನೆಗೆಟೀವ್ ಅಂಶಗಳನ್ನು ಬದಿಗೊತ್ತಿವೆ.

ಬ್ಲಾಕ್‌ಬೆರ್ರಿ Z10

#9

ಕಳೆದ ವರ್ಷವಷ್ಟೇ ಮಾರುಕಟ್ಟೆಗೆ ಬಂದ ಬ್ಲಾಕ್‌ಬೆರ್ರಿZ10 ಅಷ್ಟೇನೂ ಪ್ರಸಿದ್ಧಿಯನ್ನು ಪಡೆದಿಲ್ಲ. ಇದರಲ್ಲಿ ಅಪ್ಲಿಕೇಶನ್‌ ಆಯ್ಕೆಗಳು ಅಷ್ಟೊಂದು ಒಳ್ಳೆಯ ಮಟ್ಟದಲ್ಲಿಲ್ಲ.

ಫೇಸ್‌ಬುಕ್ ಹೋಮ್

#10

ಫೇಸ್‌ಬುಕ್ ಹೋಮ್ ನಿಮ್ಮ ಆಂಡ್ರಾಯ್ಡ್ ಫೋನ್ ಅನ್ನು ಫೇಸ್‌ಬುಕ್ ಕೇಂದ್ರೀಕೃತ ಸಾಮಾಜಿಕ ಮಾಧ್ಯಮ ಜಾಲವಾಗಿ ಮಾರ್ಪಡಿಸುತ್ತದೆ. ಇದರೊಂದಿಗೆ ಇತರ ವಿಷಯಗಳನ್ನು ಕೂಡ ನಿಮ್ಮ ಫೋನ್‌ನಲ್ಲಿ ನೀವು ಬಳಸಬಹುದಾಗಿದೆ.

ಡಂಬ್ ಫೋನ್ ಅವಶ್ಯಕತೆಯಿಲ್ಲ

#11

ನೀವು ಸ್ಮಾರ್ಟ್‌ಫೋನ್‌ ಅನ್ನು ಬಳಸುತ್ತೀರಿ ಎಂದಾದಲ್ಲಿ ನಿಮಗೆ ನಿರ್ದಿಷ್ಟ ಲೊಕೇಶನ್ ಅನ್ನು ಹುಡುಕುವಲ್ಲಿ ಅದು ಸಹಾಯ ಮಾಡುತ್ತದೆ. ಅದರಲ್ಲೂ ಆಂಡ್ರಾಯ್ಡ್ ಫೋನ್‌ಗಳು ನಿಮಗೆ ಇನ್ನಷ್ಟು ಸಹಾಯ ಮಾಡುತ್ತವೆ.

ಗೂಗಲ್ ಗ್ಲಾಸ್ ಕಾಲ ಮುಗಿಯಿತು

#12

ಗೂಗಲ್ ಗ್ಲಾಸ್ ಬೇಡ ಎಂಬ ಅಂಶವನ್ನು ಮುಖ್ಯವಾಗಿಸಲು ಗೂಗಲ್ ಬಹಳಷ್ಟು ಪರಿಶ್ರಮವನ್ನು ಪಡುತ್ತಿದೆ. ಅಂದರೆ ಇದರ ಲೇಟೆಸ್ಟ್ ಮಾದರಿ ಇನ್ನೇನು ಮಾರುಕಟ್ಟೆಗೆ ಕಾಲಿಡುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot