ನಿಮ್ಮ ಫೋಷಕರಿಗೆ ಈ 12 ಮೊಬೈಲ್ ಕ್ರೈಂಗಳ ಬಗ್ಗೆ ತಿಳಿಸಲೇಬೇಕು..!

  By GizBot Bureau
  |

  ಜಾಗತಿಕವಾಗಿ ಭಾರತದ ಮಾರುಕಟ್ಟೆಯಲ್ಲಿ ಮೊಬೈಲ್ ಅಂತರ್ಜಾಲ ಅನ್ನುವುದು ಬಹಳ ವೇಗವಾಗಿ ಬೆಳವಣಿಗೆ ಕಾಣುತ್ತಿದೆ. ಬಹುಶ್ಯ ಎಲ್ಲರ ಬಳಿಯೂ ಒಂದೊಂದು ಫೋನ್ ಇದ್ದೇ ಇರುತ್ತದೆ. ಮಿಲಿಯನ್ ಗಟ್ಟಲೆ ಜನಸಂಖ್ಯೆ ಇರುವ ಭಾರತದಲ್ಲಿ ಯುವಜನತೆ ಹೇಗೋ ಮೊಬೈಲ್ ಇಂಟರ್ನೆಟ್ ನ್ನು ಬಹಳ ಬೇಗನೆ ಅಭ್ಯಾಸ ಮಾಡಿ ಬಿಡುತ್ತಾರೆ ಮತ್ತು ದೈನಂದಿನ ಬದುಕಿಗೆ ಅಳವಡಿಸಿಕೊಂಡು ಬಳಸಲು ಯೋಗ್ಯರಾಗುತ್ತಾರೆ. ಆದರೆ ಈ ವಿಚಾರದಲ್ಲಿ ಸ್ವಲ್ಪ ಕಷ್ಟ ಪಡುವುದು ಹಿರಿಕರು.

  ಮೊಬೈಲ್ ಬಳಕೆ ಅವರಿಗೆ ಸ್ವಲ್ಪ ಕಷ್ಟ ಅನ್ನಿಸಬಹುದು ಅಥವಾ ಅದಕ್ಕಿಂತ ಹೆಚ್ಚಾಗಿ ಭಧ್ರವಾಗಿರುವುದು ಹೇಗೆ ಎಂಬ ಬಗ್ಗೆ ತಿಳುವಳಿಕೆ ಕಡಿಮೆ ಇರಬಹುದು. ಹಾಗಾಗಿ ನಿಮ್ಮ ಅಪ್ಪ ಅಮ್ಮ ಅಜ್ಜ ಅಜ್ಜಿ ಇವರಿಗೆ ಈ ವಿಚಾರದಲ್ಲಿ ಮಕ್ಕಳ ಅಗತ್ಯತೆ ಇರುತ್ತೆ. ನೀವು ನಿಮ್ಮ ಪೋಷಕರಿಗೆ ಸ್ಮಾರ್ಟ್ ಫೋನ್ ಭದ್ರತೆಗಳ ಬಗ್ಗೆ ತಿಳಿಸಿಕೊಡಬೇಕಾದ ಪ್ರಮುಖ ವಿಚಾರಗಳನ್ನು ನಾವಿಲ್ಲಿ ಹೇಳುತ್ತಿದ್ದೇವೆ.

  ನಿಮ್ಮ ಫೋಷಕರಿಗೆ ಈ 12 ಮೊಬೈಲ್ ಕ್ರೈಂಗಳ ಬಗ್ಗೆ ತಿಳಿಸಲೇಬೇಕು..!

  ಅಲ್ಲಿ ಇಲ್ಲಿ ಸುದ್ದಿಗಳನ್ನು ಓದಿ ಫೋನಿನಿಂದ ಕಳ್ಳತನವಾಯ್ತಂತೆ ಎಂದು ಕೇಳಿದಾಗ ಅವರು ಗಾಬರಿಗೊಳ್ಳುವುದು ಸಹಜವೇ ಮತ್ತು ಅವರಿಗೆ ಈ ನಿಟ್ಟಿನಲ್ಲಿ ತಿಳಿಸಿಕೊಡುವುದು ಕೂಡ ಸ್ವಲ್ಪ ಕಷ್ಟವೇ ಆಗಿರಬಹುದು. ಆದರೂ ನೀವು ಅವರಿಗೆ ತಿಳಿಸಿಕೊಡಲೇಬೇಕಾಗಿರುವ ಕೆಲವು ಪ್ರಮುಖ ವಿಚಾರಗಳ ಬಗ್ಗೆ ನಾವಿಲ್ಲಿ ಪ್ರಸ್ತಾಪಿಸುತ್ತಿದ್ದೇವೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಸ್ಮಾರ್ಟ್ ಫೋನ್ ಗಳು ಆಟದ ವಸ್ತುಗಳಲ್ಲ ಅವುಗಳನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು 

  ಸರಿಯಾದ ಜಾಗದಲ್ಲಿ ಇಡದೆ ಇದ್ದರೆ ಅಥವಾ ಮೊಬೈಲ್ ಬಗ್ಗೆ ಜಾಗೃತಿ ವಹಿಸದೆ ಇದ್ದಲ್ಲಿ ಅದು ನಿಮಗೆ ಒಂದು ದಿನ ತೊಂದರೆ ನೀಡುವ ಸಾಧ್ಯತೆ ಇದೆ. ಮೊಬೈಲ್ ಒಂದು ಆಟದ ಸಾಮಾನಲ್ಲ ಎಂಬುದನ್ನು ನೀವು ನಿಮ್ಮ ಪೋಷಕರಿಗೆ ತಿಳಿಸಿ. ಅದೊಂದು ವಯಕ್ತಿಕ ವಸ್ತು ಮತ್ತು ಅದರಲ್ಲಿರುವ ಮಾಹಿತಿಗಳು ವಯಕ್ತಿಕವಾಗಿರಬೇಕು.ಹಾಗಾಗಿ ಸರಿಯಾದ ಜಾಗದಲ್ಲಿ ಜಾಗರೂಕತೆಯಿಂದ ಇಟ್ಟುಕೊಳ್ಳಬೇಕು ಎಂಬುದನ್ನು ನಿಮ್ಮ ಹಿರಿಯರಿಗೆ ತಿಳಿಸಿ ಹೇಳಿ. ಹೊಸದಾಗಿ ಮೊಬೈಲ್ ಕಲಿತು ಕೊಳ್ಳುತ್ತಿರುವವರಿಗೆ ಮೊಬೈಲ್ ಲಾಕ್ ಬಗ್ಗೆ ತಿಳಿಸಿ. ಪಾಸ್ ವರ್ಡ್ ಬಳಸಿ ಇಲ್ಲವೇ ಫಿಂಗರ್ ಪ್ರಿಂಟ್ ಬಳಸಿ ಹೇಗೆ ಭದ್ರವಾಗಿ ಇಟ್ಟು ಕೊಳ್ಳಬೇಕು ಎಂಬುದನ್ನ ತಿಳಿಸಿರಿ. ಅಪರಿಚಿತ ವ್ಯಕ್ತಿಗಳಿಗೆ ಫೋನ್ ಕೊಡಬಾರದು ಎಂಬುದನ್ನ ಮನವರಿಕೆ ಮಾಡಿಕೊಡಿ.

  ನಕಲಿ ಅಪ್ಲಿಕೇಷನ್ ಗಳು ಮತ್ತು ಡಾಟಾ ಕದಿಯುವಿಕೆಯ ಬಗ್ಗೆ ಅವರಿಗೆ ಮಾಹಿತಿ ನೀಡಿ 

  ನಕಲಿ ಆಪ್ ಗಳು ಹೇಗೆ ಕೆಲಸ ನಿರ್ವಹಿಸುತ್ತವೆ ಎಂಬುದನ್ನ ಅವರಿಗೆ ತಿಳಿಸಿಕೊಡಬೇಕು. ಆಂಡ್ರಾಯ್ಡ್ ನಲ್ಲಿ ನಕಲಿ ಆಪ್ ಗಳು ಸುಲಭದಲ್ಲಿ ಜಾಗ ಮಾಡಿಕೊಳ್ಳುತ್ತವೆ. ನಕಲಿ ಆಪ್ ಮತ್ತು ನಿಜವಾದ ಆಪ್ ಗಳನ್ನು ಗುರುತಿಸುವಿಕೆ ಹೇಗೆ ಎಂಬುದನ್ನ ಅವರಿಗೆ ತಿಳಿಸಿ.

  ಎಟಿಎಂ ಅಥವಾ ಕ್ರೆಡಿಟ್/ಡೆಬಿಟ್ ಕಾರ್ಡ್ ಪಿನ್ ನಂಬರ್ ಗಳನ್ನು ಸೇವ್ ಮಾಡಿರದಂತೆ ತಿಳಿಸಿ

  ಮತ್ತೊಂದು ಪ್ರಮುಖ ವಿಚಾರ ನೀವು ನಿಮ್ಮ ಪೋಷಕರಿಗೆ ತಿಳಿಸಬೇಕಾಗಿರುವುದು ಏನೆಂದರೆ ಬ್ಯಾಂಕ್ ಮತ್ತು ಬ್ಯಾಂಕಿಂಗ್ ಗೆ ಸಂಬಂಧಿಸಿದ ಮಾಹಿತಿಯನ್ನು ಯಾವುದೇ ಕಾರಣಕ್ಕೂ ಮೊಬೈಲ್ ನಲ್ಲಿ ಇಲ್ಲವೇ ಯಾವುದೇ ಬ್ರೌಸರ್ ನಲ್ಲಿ ಶೇಖರಿಸಿ ಇಡಬಾರದು ಅರ್ಥಾತ್ ಸೇವ್ ಮಾಡಬಾರದು ಎಂಬುದು. ಉದಾಹರಣೆಗೆ ಎಟಿಎಂ ಅಥವಾ ಕ್ರೆಡಿಟ್/ಡೆಬಿಟ್ ಕಾರ್ಡ್ ಪಿನ್ ಗಳನ್ನು ಮೊಬೈಲ್ ನಲ್ಲಿ ಸೇವ್ ಮಾಡಿ ಇಟ್ಟುಕೊಳ್ಳದಂತೆ ಸಲಹೆ ನೀಡಿ.

  ಫಿಶಿಂಗ್ ದಾಳಿಯ ಬಗ್ಗೆ ಅವರಿಗೆ ತಿಳಿದಿರಲಿ- ಸರಳವಾದ ಇಮೇಲ್ ಮತ್ತು ಸಂದೇಶಗಳು ಅವರನ್ನು ಹೇಗೆ ಮೋಸಗೊಳಿಸಬಹುದು ಎಂದು ತಿಳಿಸಿ 

  ಫಿಶಿಂಗ್ ಅನ್ನುವುದು ಬಹಳ ಪ್ರಸಿದ್ಧವಾಗಿರುವ ಆನ್ ಲೈನ್ ಟ್ರ್ಯಾಪ್ ಆಗಿದೆ. ಹಾಗಾಗಿ ಈ ಫಿಶಿಂಗ್ ಹೇಗೆ ಕೆಲಸ ಮಾಡುತ್ತದೆ ಮತ್ತು ಅದು ಎಷ್ಟು ಅಪಾಯಕಾರಿ ಎಂಬ ಬಗ್ಗೆ ಹಿರಿಯರಿಗೆ ಸರಿಯಾದ ಮಾಹಿತಿಯನ್ನು ಒದಗಿಸುವುದು ನಿಮ್ಮ ಕರ್ತವ್ಯಗಳಲ್ಲಿ ಒಂದಾಗಿರುತ್ತದೆ.

  ಎಲ್ಲಾ ಕರೆಗಳು ಮಹತ್ವದ ಕರೆಗಳಾಗಿರುವುದಿಲ್ಲ. ಮೋಸಗೊಳಿಸುವಿಕೆ ಕರೆಗಳಲ್ಲಿ ಹೇಗೆ ನಡೆಯುತ್ತದೆ?

  ಒಂದೇ ನಿಮಿಷದಲ್ಲಿ ಕರೆ ಮಾಡುವ ಅಪರಿಚಿತ ವ್ಯಕ್ತಿಯೊಬ್ಬ ಹೇಗೆ ನಿಮ್ಮ ಸ್ಮಾರ್ಟ್ ಫೋನ್ ಮೂಲಕವೇ ನಿಮ್ಮ ಬ್ಯಾಂಕ್ ಅಕೌಂಟಿನಲ್ಲಿರುವ ಪೂರ್ತಿ ಹಣವನ್ನು ಕದಿಯಬಲ್ಲ ಎಂಬ ಸಂಪೂರ್ಣ ಮಾಹಿತಿಯನ್ನು ಅವರಿಗೆ ಒದಗಿಸಿ. ಮೋಸಗೊಳಿಸುವ ಎಲ್ಲಾ ರೀತಿಯ ಕರೆಗಳ ಬಗೆಗಿನ ಮಾಹಿತಿಯನ್ನು ನೀವು ಅವರಿಗೆ ನೀಡುವುದು ಬಹಳ ಮುಖ್ಯ.

  ಮಿಸ್ಡ್ ಕಾಲ್ ಮತ್ತು ಕಾಂಟ್ಯಾಕ್ಟ್ ಪಟ್ಟಿಯಲ್ಲಿರದ(ಪರಿಚಯವಿಲ್ಲದ) ಕರೆಗಳಿಗೆ ಪ್ರತ್ಯತ್ತರ ನೀಡಬೇಡಿ

  ಅವರಿಗೆ ಮಿಸ್ಡ್ ಕಾಲ್ ಗಳ ಮತ್ತು ಹೆಸರು ಬರದೇ ಇರುವ ಅಂದರೆ ಅವರ ಕಾಂಟ್ಯಾಕ್ಟ್ ನಲ್ಲಿ ಇಲ್ಲದ ಕರೆಗಳನ್ನು ಯಾವಾಗಲೂ ಸ್ವೀಕರಿಸುವ ಅಗತ್ಯವಿಲ್ಲ ಎಂಬುದನ್ನು ಮನದಟ್ಟು ಮಾಡಿ. ಅದೆಷ್ಟೋ ಸುಳ್ಳು ಕರೆಗಳು ಜಸ್ಟ್ ಮಿಸ್ ಕಾಲ್ ನೀಡುತ್ತವೆ ಮತ್ತು ಮರಳಿ ಕಾಲ್ ಮಾಡಿದಾಗ ಯಾವುದೋ ಸೇವೆಯ ನೆಪದಲ್ಲಿ 50, 100 ರುಪಾಯಿ ಪೀಕುತ್ತವೆ. ಅವುಗಳು ಖಂಡಿತವಾಗಿಯೂ ಅವರಿಗೆ ಅಗತ್ಯವಿರುವುದಿಲ್ಲ.

  ಅವರ ಯೂನಿಕ್ ಸಿಮ್ ನಂಬರ್ ನ್ನು ಯಾರೊಡನೆಯೂ ಹಂಚಿಕೊಳ್ಳದಂತೆ ಮಾಹಿತಿ ನೀಡಿ. 

  ಪ್ರತಿ ಸಿಮ್ ಗೂ ಕೂಡ 20 ಡಿಜಿಟ್ ಇರುವ ಒಂದು ಯೂನಿಕ್ ಸಿಮ್ ನಂಬರ್ ಇರುತ್ತದೆ. ಇದು ನಿಮ್ಮ ಮೊಬೈಲ್ ನಂಬರ್ ನ್ನು ಗುರುತಿಸುವಿಕೆಗಾಗಿ ಇರುವ ಸಂಖ್ಯೆಯಾಗಿರುತ್ತದೆ. ಈ ನಂಬರ್ ನ್ನು ಯಾವುದೇ ಕಾರಣಕ್ಕೂ ಯಾರಿಗೂ ಕೊಡಬಾರದು ಎಂಬುದನ್ನು ಅವರಿಗೆ ತಿಳಿಸಿ ಮತ್ತು ಸಿಮ್ ಸ್ಪ್ಯಾಪ್ ಹೇಗೆ ಕೆಲಸ ಮಾಡುತ್ತದೆ ಎಂಬ ಬಗ್ಗೆ ಅವರಿಗೆ ಅರಿವು ಮೂಡಿಸಿ.

  ಅತಿಯಾಗಿ ಯಾವುದನ್ನೇ ಫೇಸ್ ಬುಕ್, ಟ್ವೀಟರ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದು ಬೇಡ 

  ಸಾಮಾಜಿಕ ಜಾಲತಾಣದಲ್ಲಿ ಇರುವುದು ಒಳ್ಳೆಯದೇ ಆದರೆ ಅದರಿಂದ ಕೆಲವು ಸಮಸ್ಯೆಗಳು ಎದುರಾಗುತ್ತದೆ ಎಂಬ ಜಾಗೃತಿ ಅವರಿಗೆ ಇರಲಿ. ಈಗ ತಾನೆ ಅಂತರ್ಜಾಲಕ್ಕೆ ಕಾಲಿಟ್ಟವರಿಗೆ ಕುತೂಹಲಗಳು ಹೆಚ್ಚು. ರಜೆಗಳ ದಿನಗಳ ಬಗ್ಗೆ ಹಂಚಿಕೊಳ್ಳುವುದು, ಪ್ರಚಾರ ಸಿಗುವ ಉದ್ದೇಶದಿಂದ ನಿಮ್ಮ ಸ್ಥಳದ ಮಾಹಿತಿಯನ್ನು ಹಂಚಿಕೊಳ್ಳುವುದು ಮತ್ತು ಇತ್ಯಾದಿಗಳು ಹೇಗೆ ಕಳ್ಳ ಕಾಕರಿಗೆ ಸುಲಭದ ದಾರಿ ಮಾಡಿಕೊಡುತ್ತದೆ ಎಂಬುದನ್ನು ತಿಳಿಸಿ ಹೇಳಿ.

  ಅಪರಿಚಿತರೊಡನೆ ಯಾವುದೇ ಕಾರಣಕ್ಕೂ ಆಧಾರ್ ಅಥವಾ ಇತರೆ ಯಾವುದೇ ದಾಖಲಾತಿಗಳನ್ನು ಫೋನ್ ಮೂಲಕ ಹಂಚಿಕೊಳ್ಳುವುದು ಬೇಡ 

  ಆಧಾರ್ ಸೇರಿದಂತೆ ಯಾವುದೇ ವಯಕ್ತಿಕ ದಾಖಲಾತಿಗಳನ್ನು ಫೋನ್ ಮೂಲಕ ಹಂಚಿಕೊಳ್ಳಬಾರದು ಇದು ಭದ್ರತಾ ದೃಷ್ಟಿಯಿಂದ ಹಿತವಾದುದ್ದಲ್ಲ ಎಂಬುದನ್ನು ಅವರಿಗೆ ತಿಳಿಸಿಕೊಡಿ. ಒಂದು ವೇಳೆ ಯಾವುದೇ ಕರೆಯಲ್ಲಿ ದಾಖಲಾತಿಗಳನ್ನು ಒದಗಿಸುವಂತೆ ಒತ್ತಾಯ ಮಾಡಿದರೆ ಅಂತಹ ಕರೆಗಳನ್ನು ಕಡಿತಗೊಳಿಸುವಂತೆ ಅವರಿಗೆ ಸೂಚಿಸಿ. ಯಾವುದೇ ಅಧಿಕೃತ ಸೇವೆ ಒದಗಿಸುವವರು ಫೋನ್ ನಲ್ಲಿ ಇಂತಹ ದಾಖಲಾತಿಗಳನ್ನು ಕೇಳುವುದಿಲ್ಲ ಎಂಬ ಬಗ್ಗೆ ಅವರಿಗೆ ಮಾಹಿತಿ ನೀಡಿ.

  ಆಪ್ ಗಳ ಪರ್ಮಿಷನ್ ಗಳ ಬಗ್ಗೆ ಅವರಿಗೆ ಜಾಗೃತರಾಗಿರುವಂತೆ ತಿಳಿಸಿ 

  ಆಪ್ ಗಳಿಗೆ ಪರ್ಮಿಷನ್ ನೀಡುವ ಮುನ್ನ ಜಾಗೃತರಾಗಿರುವಂತೆ ತಿಳಿಸಿ. ಆಂಡ್ರಾಯ್ಡ್ ನಲ್ಲಿ ಆಪ್ ಗಳಿಗೆ ಅನುಮತಿ ನೀಡುವಿಕೆಯು ಕೂಡ ಸಮಸ್ಯೆಗೆ ಕಾರಣವಾಗಬಹುದು ಎಂಬುದನ್ನು ಅವರಿಗೆ ತಿಳಿಸಿ. ವೈ-ಫೈ ಡೀಟೇಲ್ಸ್, ಕ್ಯಾಮರಾ ಇತ್ಯಾದಿಗಳಿಗೆ ಅನುಮತಿ ನೀಡುವುದರಿಂದ ನಿಮ್ಮ ವಯಕ್ತಿಕ ಮಾಹಿತಿಗಳು ಕಳುವಾಗುವ ಭಯವನ್ನು ಅವರಿಗೆ ಮೊದಲೇ ತಿಳಿಸಿರಿ.

  ಆನ್ ಲೈನ್ ಲಾಟರಿಯನ್ನು ಎಂದಿಗೂ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಅವರಿಗೆ ತಿಳಿಸಿ 

  ಅಂತರ್ಜಾಲದಲ್ಲಿ ಯಾವುದೇ ಲಾಟರಿಯೂ ಸಿಗುವುದಿಲ್ಲ. ಹಣ, ಜಾಗ ಅಥವಾ ಇತ್ಯಾದಿ ಯಾವುದೇ ಆಮಿಷಗಳಿಗೂ ಕೂಡ ಆನ್ ಲೈನ್ ನಲ್ಲಿ ಬಲಿಯಾಗಬಾರದು ಎಂಬುದನ್ನು ಮನದಟ್ಟು ಮಾಡಿ. ಕೆಲವು ಬೇಸಿಕ್ ಹಗರಣ ಮತ್ತು ಮೋಸದ ಬಗ್ಗೆ ಅವರಿಗೆ ವಿವರಣೆ ನೀಡಿ ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸಿರಿ.

  ಆಂಡ್ರಾಯ್ಡ್ ಸ್ಮಾರ್ಟ್ ಫೋನಿಗೆ ಆಂಟಿ ವೈರಸ್ ನ್ನು ಇನ್ಸ್ಟಾಲ್ ಮಾಡಿಕೊಳ್ಳಿ 

  ಮತ್ತೊಂದು ಪ್ರಮುಖವಾದ ಬೇಸಿಕ್ ನಿಯಮ ಏನೆಂದರೆ ಆಂಟಿ ವೈರಸ್ ಆಪ್ ಇನ್ಸ್ಟಾಲ್ ಮಾಡುವುದು ಮತ್ತು ಅದನ್ನು ನಿಭಾಯಿಸುವುದು. ಅತ್ಯುತ್ತಮ ಆಂಟಿ ವೈರಸ್ ನ್ನು ಅವರಿಗೆ ಇನ್ಸ್ಟಾಲ್ ಮಾಡಿಕೊಡಿ ಮತ್ತು ಅದನ್ನು ನಿಭಾಯಿಸುವ ತಂತ್ರಗಾರಿಕೆಯನ್ನು ತಿಳಿಸಿ ಹೇಳಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  12 mobile scam tips you must teach your parents. To know more this visit kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more