ಎಮೋಜಿ ಬಳಸಿ ಅಪರಾಧಕ್ಕೆ ಗುರಿಯಾದ 12ರ ಹುಡುಗಿ: ಎಚ್ಚರ!

By Suneel
|

ಫೇಸ್‌ಬುಕ್‌ನ ಹಲವು ಬಳಕೆದಾರರು ಲೈಕ್‌ ಬಟನ್‌ ಮಾತ್ರ ಇದೆ, ನಮಗೆ ಡಿಸ್‌ಲೈಕ್‌ ಬಟನ್‌ ಬೇಕು ಅಂತ ಕೇಳಿದ್ದೇ ಕೇಳಿದ್ದು. ಮಾರ್ಕ್‌ ಜುಕರ್‌ಬರ್ಗ್‌ ಡಿಸ್‌ಲೈಕ್‌ ಬಟನ್‌ನ ಬದಲಾಗಿ 5 ವಿನೂತನ ಭಾವನಾತ್ಮಕತೆ ವ್ಯಕ್ತಪಡಿಸುವ ಎಮೋಜಿಗಳನ್ನು ಅಭಿವೃದ್ದಿಪಡಿಸಿ ಸದ್ಯಕ್ಕೆ ಇವುಗಳನ್ನು ಬಳಸುತ್ತಿರಿ ಅಂದ್ರು. ಆದರೆ ಕೆಲವು ಫೇಸ್‌ಬುಕ್‌ ಬಳಕೆದಾರರಿಗೆ ಆ ಎಮೋಜಿಗಳೇ ಸಮಸ್ಯೆ ಉಂಟುಮಾಡಿವೆ.

ಹೌದು, ಇಂಟರ್ನೆಟ್‌ ಬಳಕೆದಾರರೆಲ್ಲಾ ಸಾಮಾನ್ಯವಾಗಿ ಎಮೋಜಿಗಳನ್ನು ಬಳಸಿ ವಿವಿಧ ಅಭಿಪ್ರಾಯ, ಭಾವನಾತ್ಮಕತೆಯನ್ನು ವ್ಯಕ್ತಪಡಿಸಲು ಇಷ್ಟಪಡುತ್ತಾರೆ. ಅಂತೆಯೇ 12 ವರ್ಷದ ಯುವತಿಯೊಬ್ಬಳು ಇತ್ತೀಚೆಗೆ ಅಭಿವೃದ್ದಿಗೊಂಡ ಫೇಸ್‌ಬುಕ್‌ ಎಮೋಜಿಯನ್ನ ಬಳಸಿದ್ದಕ್ಕಾಗಿ ಅಪರಾಧ ಆರೋಪವನ್ನು ಎದುರಿಸುತ್ತಿದ್ದಾಳೆ. ನೀವು ಸಹ ಫೇಸ್‌ಬುಕ್‌ನಲ್ಲಿ ಎಮೋಜಿಗಳನ್ನ ಬಳಸುತ್ತಿದ್ದೆ ಆದಲ್ಲಿ ಮೊದಲು ಈ ಲೇಖನ ಓದಿ. ಆಕೆ ಅಪರಾಧ ಆರೋಪವನ್ನು ಎದುರಿಸುತ್ತಿರುವುದಾದರೂ ಏಕೆ ಎಂದು ತಿಳಿಯಿರಿ.

ಎಮೋಜಿ ಸಿಂಬಲ್ ಬಳಕೆ

ಎಮೋಜಿ ಸಿಂಬಲ್ ಬಳಕೆ

ವರ್ಜೀನಿಯಾದ ಫೇರ್‌ಪಾಕ್ಸ್‌ ಪ್ರದೇಶದ 12 ವರ್ಷದ ಹುಡುಗಿಯೊಬ್ಬಳು ಶಾಲೆ ಮುಗಿಸಿದ ನಂತರ ಗನ್‌, ಬಾಂಬ್‌, ಚಾಕುವಿನ ಎಮೋಜಿ ಸಿಂಬಲ್‌ ಬಳಸಿ ಶೀರ್ಷಿಕೆ ನೀಡಿ ಮಾಡಿದ ಪೋಸ್ಟ್‌ ಆಧಾರದಿಂದ ಅಪರಾಧದ ಪ್ರಕರಣದಲ್ಲಿ ಸಲುಕಿದ್ದಾಳೆ.

ಇನ್‌ಸ್ಟಗ್ರಾಂ ಸಾಮಾಜಿಕ ತಾಣದಲ್ಲಿ ಪೋಸ್ಟ್‌

ಇನ್‌ಸ್ಟಗ್ರಾಂ ಸಾಮಾಜಿಕ ತಾಣದಲ್ಲಿ ಪೋಸ್ಟ್‌

ಹುಡುಗಿಯು ಇನ್‌ಸ್ಟಗ್ರಾಂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಏನು ಎಂದು ಚಿತ್ರ ನೋಡಿ.

ವಾಷಿಂಗ್ಟನ್‌ ಪೋಸ್ಟ್‌

ವಾಷಿಂಗ್ಟನ್‌ ಪೋಸ್ಟ್‌

ಅಪರಾಧಕ್ಕೆ ಗುರಿಯಾಗಿರುವ ಹುಡುಗಿಯು ಸಿಡ್ನಿಯ ಲನಿಯರ್‌ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದು, ಈಕೆ ಕಳೆದ ಡಿಸೆಂಬರ್‌ನಲ್ಲಿ ಪೋಸ್ಟ್‌ ಮಾಡಿದ್ದಾಳೆ. ಪೋಸ್ಟ್‌ನಲ್ಲಿ "Killing, "meet me in the library Tuesday". ಎಂದು ಬರೆಯಲಾಗಿತ್ತು ಎಂದು ವಾಷಿಂಗ್ಟನ್‌ ಪೋಸ್ಟ್‌ ಹೇಳಿದೆ.

ತನಿಖೆ

ತನಿಖೆ

ಈ ಪೋಸ್ಟ್‌ ಬಗ್ಗೆ ತನಿಖೆಯನ್ನು ಡಿಸೆಂಬರ್‌ 14ರಲ್ಲಿ ಪ್ರಾರಂಭಿಸಿ ತನಿಖಾ ತಂಡದವರು ಸಿಡ್ನಿ ಲನಿಯರ್‌ ಮಾಧ್ಯಮಿಕ ಶಾಲೆಗೆ ಹೋದಾಗ ಪೋಸ್ಟ್‌ ಅನ್ನು ವಿದ್ಯಾರ್ಥಿನಿ ಹಾಕಿರುವುದು ಎಂದು ಹೇಳಿದ್ದಾರೆ.

 ಐಪಿ ವಿಳಾಸ

ಐಪಿ ವಿಳಾಸ

ವಿದ್ಯಾರ್ಥಿಗಳಲ್ಲಿ ಪ್ರಶ್ನೆಗಳನ್ನು ಆರಂಭಿಸಿ ವಿವಾದಾತ್ಮಕ ಪೋಸ್ಟ್‌ ಹಾಕಿದ ಬಳಕೆದಾರರ ಐಪಿ ವಿಳಾಸ ಪಡೆಯಲಾಗಿದೆ. ವಿದ್ಯಾರ್ಥಿನಿ ಚಿಕ್ಕ ವಯಸ್ಸಾಗಿರುವುದರಿಂದ ಹೆಸರನ್ನು ಬಹಿರಂಗ ಪಡಿಸಿಲ್ಲ.

 ವಿವಾದಾತ್ಮಕ ಸಂದೇಶ

ವಿವಾದಾತ್ಮಕ ಸಂದೇಶ

ವಿವಾದಾತ್ಮಕ ಸಂದೇಶ ಪೋಸ್ಟ್‌ ಮಾಡಿರುವ ಹುಡುಗಿ ಅಧಿಕಾರಿಗಳ ಮುಂದೆ ಪೋಸ್ಟ್ ಮಾಡಲು ಇನ್‌ಸ್ಟಗ್ರಾಂನಲ್ಲಿ ಬೇರೇ ವಿದ್ಯಾರ್ಥಿಯ ಹೆಸರು ಬಳಸಿರುವುದಾಗಿ ಒಪ್ಪಿಕೊಂಡಿದ್ದಾಳೆ. ಈಕೆಯು ಕಂಪ್ಯೂಟರ್‌ ಮೂಲಕ ಕಿರುಕುಳ ಅಪರಾಧದಲ್ಲಿ ಸಿಲುಕಿದ್ದಾಳೆ.

ಎಮೋಜಿ ಬಳಸುವುದು ಎಷ್ಟು ಸೌಖ್ಯ?

ಎಮೋಜಿ ಬಳಸುವುದು ಎಷ್ಟು ಸೌಖ್ಯ?

ಸಾಮಾಜಿಕ ಜಾಲತಾಣಗಳಲ್ಲಿ ಇಷ್ಟಬಂದಂತೆ ಎಮೋಜಿಗಳನ್ನು ಹೇಗೆ ಬೇಕೆಂದರೆ ಹಾಗೆ ಬಳಸುವುದು ಸೌಖ್ಯವಲ್ಲ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಆದ್ದರಿಂದ ಸಾಮಾಜಿಕ ಜಾಲತಾಣ ಬಳಸುವವರು ಎಮೋಜಿ ಬಳಸುವ ಮುನ್ನ ವಿವಾದಾತ್ಮಕವಾಗುವಂತಹ ಎಮೋಜಿ ಸಿಂಬಲ್‌ಗಳನ್ನು ಬಳಸದಿರುವುದು ಒಳ್ಳೆಯದು.

ಗಿಜ್‌ಬಾಟ್‌

ಗಿಜ್‌ಬಾಟ್‌

ಸ್ಮಾರ್ಟ್‌ಫೋನ್‌ಗಳಿಗೆ ಸ್ಮಾರ್ಟ್‌ಫೋನ್‌ಗಳಿಗೆ "ರೀಸೈಕಲ್ ಬಿನ್"‌ ಪಡೆಯುವುದು ಹೇಗೆ?

ಆಂಟಿವೈರಸ್ ವರ್ಕ್‌ ಆಗುತ್ತಿದೆಯೋ, ಇಲ್ಲವೋ: ಚೆಕ್‌ ಮಾಡುವುದು ಹೇಗೆ?ಆಂಟಿವೈರಸ್ ವರ್ಕ್‌ ಆಗುತ್ತಿದೆಯೋ, ಇಲ್ಲವೋ: ಚೆಕ್‌ ಮಾಡುವುದು ಹೇಗೆ?

ಬ್ಲ್ಯಾಕ್‌ಬೆರಿ, ನೋಕಿಯಾಗಳಲ್ಲಿ ವಾಟ್ಸಾಪ್ ಇನ್ನುಮುಂದೆ ಇಲ್ಲಬ್ಲ್ಯಾಕ್‌ಬೆರಿ, ನೋಕಿಯಾಗಳಲ್ಲಿ ವಾಟ್ಸಾಪ್ ಇನ್ನುಮುಂದೆ ಇಲ್ಲ

ಫ್ರೀಡಂ 251 ಬುಕ್‌ ಮಾಡಿದವರ ಹಣ ವಾಪಸ್‌: ಮುಂದೇನು?ಫ್ರೀಡಂ 251 ಬುಕ್‌ ಮಾಡಿದವರ ಹಣ ವಾಪಸ್‌: ಮುಂದೇನು?

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

Best Mobiles in India

English summary
12 Year Girl faces Criminal Charges for Using Emoji Symbol. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X