12ನೇ ವಯಸ್ಸಿನ ಬಾಲಕಿ ತಯಾರಿಸಿದ್ದು ಜಗತ್ತನ್ನೇ ಉಳಿಸುವ 'ರೊಬೊಟ್'!!

|

ಆಕೆಗಿನ್ನು 12 ವರ್ಷ ಎಂದು ಹೇಳಿದಾಕ್ಷಣ, ಯಾವುದೋ ಒಂದು ಹುಡುಗಿ ಎಲ್ಲಿಯೋ ಆಟವಾಡುತ್ತಿರುವ ಅಥವಾ ಆ ಹುಡುಗಿ ಶಾಲೆಗೆ ಅಥವಾ ಮನೆಗೆ ಹೊಗುತ್ತಿರುವ ಚಿತ್ರಣವೊಂದು ನಮ್ಮೆಲ್ಲರ ಕಣ್ಣ ಮುಂದೆ ಹಾದುಹೋಗಬಹುದು. ಏಕೆಂದರೆ, 12 ವರ್ಷದ ಒಂದು ಮಗು ಏನು ಮಾಡುತ್ತಿರಬಹುದು ಎಂಬುದರ ಕಲ್ಪನೆ ನಮಗೆ ಅಚ್ಚಾಗಿರುವುದು ಈ ರೀತಿಯಲ್ಲಿ ಮಾತ್ರ.

ಆದರೆ, ಅಮೇರಿಕಾದ ಬೋಸ್ಟನ್ ನಗರದಲ್ಲಿನ 'ಅನಾ ಡ್ಯು' ಎಂಬ 12 ವರ್ಷದ ಹುಡುಗಿ ನಿಮ್ಮ ಯೋಚನೆಗೆ ಮಾತ್ರವಲ್ಲ, ನಿಮ್ಮ ಕಲ್ಪನೆಗೂ ಸಿಗುವುದಿಲ್ಲ. ಏಕೆಂದರೆ, ಪರಿಸರವನ್ನು ತನ್ನಿಷ್ಟದಂತೆ ಹಾಳು ಮಾಡುತ್ತಿರುವ ಮಾನವ ಜನಾಗಂದ ಮಧ್ಯೆ, ತನ್ನ 12 ನೇ ವರ್ಷದಲ್ಲೇ ಪರಿಸರ ಕಾಳಜಿಗಾಗಿ ಸಂಶೋಧನೆಯಲ್ಲಿ ತೊಡಗಿರುವ ಸಂಶೋಧಕಿ ಈ 'ಅನಾ ಡ್ಯು'.!

12ನೇ ವಯಸ್ಸಿನ ಬಾಲಕಿ ತಯಾರಿಸಿದ್ದು ಜಗತ್ತನ್ನೇ ಉಳಿಸುವ 'ರೊಬೊಟ್'!!

ಹೌದು, ನಿಮಗೆ ಆಶ್ಚರ್ಯವಾದರೂ ಇದು ನಿಜ. ತನ್ನ 12ನೇ ವರ್ಷದಲ್ಲೇ 'ಅನಾ ಡ್ಯು' ರೊಬೊಟ್ ಒಂದನ್ನು ಕಂಡುಹಿಡಿದು ಹೆಸರಾಗಿದ್ದಾಳೆ. ಈ ರೊಬೊಟ್ ಮೂಲಕ ಮಹತ್ವದ ಒಂದು ಕೆಲಸ ಮಾಡುವ ಆಸೆಯನ್ನು ಇಟ್ಟುಕೊಂಡಿದ್ದಾಳೆ. ಹಾಗಾಗಿ, ತನ್ನ 12 ನೇ ವರ್ಷದಲ್ಲೇ ಇಂತಹದೊಂದು ಸಾಧನೆ ಮಾಡಲು ಹೊರಟಿರುವ 'ಅನಾ ಡ್ಯು' ಬಗ್ಗೆ ನಾವು ತಿಳಿಯದಿದ್ದರೆ ಹೇಗೆ.?

ಯಾರೀಕೆ 'ಅನಾ ಡ್ಯು'?

ಯಾರೀಕೆ 'ಅನಾ ಡ್ಯು'?

ನಾವು ಮೊದಲೇ ಹೇಳಿದಂತೆ ಪರಿಸರ ಕಾಳಜಿಗಾಗಿ ಸಂಶೋಧನೆಯಲ್ಲಿ ತೊಡಗಿರುವ ಸಂಶೋಧಕಿ ಈ ಅನಾ ಡ್ಯು. ನೀರಿನಾಳದಲ್ಲಿರುವ ಮೈಕ್ರೋಪ್ಲಾಸ್ಟಿಕ್ ಪತ್ತೆ ಮಾಡುವ ಇನ್ಫ್ರಾರೆಡ್ ಆಧಾರಿತ ರೊಬೊ ಕಂಡುಹಿಡಿದು ಸುದ್ದಿಯಾದವಳು. ಇತ್ತೀಚಿಗೆ ನಡೆದ 2018ನೇ ಡಿಸ್ಕವರಿ ಎಜುಕೇಶನ್ 3ಎಂ ಯಂಗ್ ಸೈಂಟಿಸ್ಟ್ ಚಾಲೆಂಜ್‌ನಲ್ಲಿ ಈಕೆ ಅಂತಿಮ ಸ್ಪರ್ಧಿ ಕೂಡ ಹೌದು.

ರೊಬೊ ನಿರ್ಮಾತೃ!

ರೊಬೊ ನಿರ್ಮಾತೃ!

ರೊಬೊಟ್ ಎಂದರೆ ಏನು ಎಂದು ತಿಳಿಯುವ ವಯಸ್ಸು ಸಹ ಆಗಿಲ್ಲ 'ಅನಾ ಡ್ಯು' ಒಂದು ರೊಬೊವನ್ನು ಕಂಡುಹಿಡಿದು ಸುದ್ದಿಯಾಗಿದ್ದಾಳೆ. ಪ್ಲಾಸ್ಟಿಕ್ ಜಲಮಾಲಿನ್ಯಕ್ಕೆ ಪ್ರಮುಖ ಕಾರಣ. ಜತೆಗೆ ಜಲಚರಗಳ ಜೀವಕ್ಕೂ ಕುತ್ತಾಗಿ ಪರಿಣಮಿಸಿದೆ ಎಂಬ ಅಂಶವನ್ನು ತನ್ನ ತರಗತಿಯಲ್ಲಿ ಕಲಿತಿದ್ದ ಅನಾ ಡ್ಯು ಇದಕ್ಕಾಗಿ ಏನಾದರೂ ಮಾಡಬೇಕು ಎಂದು ರೊಬೊ ಒಂದನ್ನು ತಯಾರಿಸಿದ್ದಾಳೆ.

 ಹೇಗಿದೆ 'ಅನಾ ಡ್ಯು' ರೋಬೊ?

ಹೇಗಿದೆ 'ಅನಾ ಡ್ಯು' ರೋಬೊ?

ಸಾಗರವನ್ನೇ ಸ್ವಚ್ಚಗೊಳಿಸುವ ಆಕಾಂಕ್ಷೆ ಹೊತ್ತ ಅನಾ ಡ್ಯೂ ಕಂಡುಹಿಡಿದ ರೊಬೊ ಹೆಸರು 'ರಿಮೋಟ್ ಆಪರೇಟೆಡ್ ವಾಹನ' (Remote Operated Vehicle). ಈ ರೊಬೊ ಇನ್‌ಫ್ರಾ ರೆಡ್ ಕಿರಣಗಳನ್ನು ಬಳಸಿ ಮೈಕ್ರೋಪ್ಲಾಸ್ಟಿಕ್ ಅನ್ನು ಪತ್ತೆ ಮಾಡುತ್ತದೆಯಂತೆ. ಈ ಉಪಕರಣ ಬಳಸಿ ಸಾಗರದಾಳದಲ್ಲಿನ ಪ್ಲಾಸ್ಟಿಕ್ ಅನ್ನು ಸಹ ಗುರುತಿಸಬಹುದು ಎಂದು ಅನಾ ಡ್ಯೂ ಹೇಳಿದ್ದಾಳೆ.

ಸಾಗರವನ್ನೇ ಸ್ವಚ್ಚಗೊಳಿಸುವ ಆಕಾಂಕ್ಷಿ!

ಸಾಗರವನ್ನೇ ಸ್ವಚ್ಚಗೊಳಿಸುವ ಆಕಾಂಕ್ಷಿ!

ಈಗಾಗಲೇ 150 ಮಿಲಿಯನ್ ಮೆಟ್ರಿಕ್ ಟನ್ ಪ್ಲಾಸ್ಟಿಕ್ ಸಾಗರದಾಳದಲ್ಲಿ ಸಂಗ್ರಹಗೊಂಡಿದ್ದು, ಪ್ರತಿವರ್ಷ 8 ಮಿಲಿಯನ್ ಟನ್‌ನಷ್ಟು ಮೈಕ್ರೋಪ್ಲಾಸ್ಟಿಕ್ ಸಾಗರ ತಳ ಸೇರುತ್ತಿದೆ. ಇದು ಜಲಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ. ಜತೆಯಲ್ಲಿ ಜಲಚರಗಳ ಜೀವಕ್ಕೂ ಕುತ್ತಾಗಿ ಪರಿಣಮಿಸಿದೆ ಎಂಬುದನ್ನು ತಿಳಿದ ಅನಾ ಡ್ಯುಗೆ ಸಾಗರವನ್ನೇ ಸ್ವಚ್ಚಗೊಳಿಸುವ ಆಕಾಂಕ್ಷೆ ಇದೆಯಂತೆ.

'ಅನಾ ಡ್ಯು' ಹೇಳುವುದೇನು?

'ಅನಾ ಡ್ಯು' ಹೇಳುವುದೇನು?

ಸಾಕಷ್ಟು ಮಲಿನಕಾರಕಗಳು ಪರಿಸರದಲ್ಲಿ ಸೇರಿಕೊಳ್ಳುವುದರಿಂದ ಪರಿಸರ ಹಾಳಾಗಲು ಕಾರಣವಾಗಿವೆ. ಅವುಗಳಲ್ಲಿ ಪ್ಲಾಸ್ಟಿಕ್ ಮಾತ್ರ ಬಹಳ ಅಪಾಯಕಾರಿ ಮಲಿನಕಾರಕವಾಗಿದೆ. . ಏಕೆಂದರೆ ಅದು ಜೈವಿಕ ಶಿಥಿಲೀಯವಲ್ಲ. ಹೀಗಾಗಿ ಪ್ಲಾಸ್ಟಿಕ್‌ನಿಂದಾಗುವ ಮಾಲಿನ್ಯವನ್ನು ನಿಯಂತ್ರಿಸುವುದು ಬಹಳಮುಖ್ಯ ಎಂದು 12 ವರ್ಷ ವಯಸ್ಸಿನ ಅನಾ ಡ್ಯೂ ಹೇಳುತ್ತಾಳೆ.

ಇಂಜಿನಿಯರ್ ಆಗುವಾಸೆ!

ಇಂಜಿನಿಯರ್ ಆಗುವಾಸೆ!

ತನ್ನ 12ನೇ ವಯಸ್ಸಿನಲ್ಲೇ ಪರಿಸರಕ್ಕೆ ಪ್ಲಾಸ್ಟಿಕ್ ಬಹಳ ಅಪಾಯಕಾರಿ ಎಂದು ತಿಳಿದಿರುವ 'ಅನಾ ಡ್ಯೂ', ಪರಿಸರ ಸಮಸ್ಯೆಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಹಲವು ಬಗೆಯ ಉಪಕರಣಗಳನ್ನು ತಯಾರಿಸುವ ಗುರಿಯನ್ನು ಹೊತ್ತಿದ್ದಾಳೆ. ಅದಕ್ಕಾಗಿ ನಾನು ಎಂಜಿನಿಯರ್ ಆಗಬೇಕು ಎಂದು ತನ್ನ ಮನದ ಇಂಗಿತವನ್ನು ವ್ಯಕ್ತಪಡಿಸಿದ್ದಾಳೆ ಈ ಚಿಕ್ಕ ಬಾಲೆ.

Best Mobiles in India

English summary
For 12-year-old Anna Du a love of the ocean and marine animals inspired her to build a device that hunts for microplastics.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X