ಮೊಬೈಲ್ ಬಳಕೆದಾರರ ನಂಬರ್ ಎಂದಿಗೂ ಬದಲಾಗುವುದಿಲ್ಲ..! ಚಿಂತೆ ಬೇಡ..!

|

ಇಷ್ಟು ದಿನ 10 ಅಂಕಿಗಳ ಮೊಬೈಲ್ ಸಂಖ್ಯೆಯನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಿದ್ದವರು ಇನ್ನು ಮುಂದೆ 13 ಅಂಕಿಗಳನ್ನು ತಮ್ಮ ಸ್ಮೃತಿ ಪಟಲಕ್ಕೆ ಸೇರಿಕೊಳ್ಳಬೇಕಾದ ಅಗತ್ಯವಿಲ್ಲ. ದೇಶದಲ್ಲಿನ ಅಂತರಿಕ ಭದ್ರತಾ ದೃಷ್ಟಿಯಿಂದ ಮೊಬೈಲ್ ಸಂಖ್ಯೆಯನ್ನ 10ರಿಂದ 13ಕ್ಕೆ ಅಂಕಿಗೆ ಏರಿಸುವಂತೆ ಎಲ್ಲ ಟೆಲಿಕಾಂ ಕಂಪನಿಗಳಿಗೆ ಕೇಂದ್ರ ಟೆಲಿಕಾಂ ಇಲಾಖೆ ನಿರ್ದೇಶನ ನೀಡಿದೆ. ಆದರೆ ಇದು ಟೆಲಿಕಾಂ ಕಂಪನಿಗಳ ಒಳಗಿನ ವ್ಯವಹಾರಕ್ಕೆ ಮಾತ್ರ ಎನ್ನಲಾಗಿದೆ.ಎನ್ನಲಾಗಿದೆ.

ಮೊಬೈಲ್ ಬಳಕೆದಾರರ ನಂಬರ್ ಎಂದಿಗೂ ಬದಲಾಗುವುದಿಲ್ಲ..! ಚಿಂತೆ ಬೇಡ..!

2018ರ ಡಿಸೆಂಬರ್ 31ರವರೆಗೆ ಮಾತ್ರ 10 ಅಂಕಿಗಳು ಬಳಕೆಯಲ್ಲಿರಲಿದ್ದು, ನಂತರದಲ್ಲಿ 13 ಅಂಕಿಗಳ ಮೊಬೈಲ್ ನಂಬರ್ ಬಳಕೆಯಾಗಲಿದೆ. ಆದರೆ ಇದು ಟೆಲಿಕಾಂ ಕಂಪನಿಗಳ ಒಳಗಿನ ವ್ಯವಹಾರಕ್ಕೆ ಮಾತ್ರ ಎನ್ನಲಾಗಿದೆ.ಎನ್ನಲಾಗಿದೆ. ಈಗಾಗಲೇ ಎಲ್ಲಾ ಟೆಲಿಕಾಂ ಕಂಪನಿಗಳು ಈ ಕಾರ್ಯಕ್ಕೆ ಮಂದಾಗಿವೆ ಎನ್ನಲಾಗಿದೆ.

ಡಿಸೆಂಬರ್ 31ರವರೆಗೆ ಗಡುವು:

ಡಿಸೆಂಬರ್ 31ರವರೆಗೆ ಗಡುವು:

ಇದೇ ಅಕ್ಟೋಬರ್ ನಿಂದ ಮೊಬೈಲ್ ಸಂಖ್ಯೆಗಳು 10ರಿಂದ 13ಕ್ಕೆ ಏರಿಕೆಯಾಗುವ ಕಾರ್ಯಕ್ಕೆ ಚಾಲನೆ ದೊರೆಯಲಿದೆ. ಈ ಪ್ರಕ್ರಿಯೆ ಪೂರ್ಣಗೊಳಿಸಲು ಟೆಲಿಕಾಂ ಕಂಪನಿಗಳಿಗೆ ಡಿಸೆಂಬರ್ 31ರವರೆಗೆ ಗಡುವು ನೀಡಲಾಗಿದೆ. ಮೊಬೈಲ್ ಸಂಖ್ಯೆ ಹೆಚ್ಚಳಕ್ಕೆ ಈ ಹಿಂದೆಯೇ ಸೂಚನೆಯನ್ನು ನೀಡಲಾಗಿತ್ತು.

ಜುಲೈ ಬಳಿಕ:

ಜುಲೈ ಬಳಿಕ:

ಮೊಬೈಲ್ ಸಂಖ್ಯೆಯನ್ನ 10 ರಿಂದ 13ಕ್ಕೆ ಏರಿಸುವ ಪ್ರಕ್ರಿಯೆ ಜುಲೈ ಬಳಿಕ ಆರಂಭವಾಗುವ ಸಾಧ್ಯತೆ ಇದೆ. ಇದಕ್ಕಾಗಿ ಸರಕಾರಿ ಸ್ವಾಮ್ಯದ BSNL ಸಹ ತಯಾರಿಯನ್ನು ನಡೆಸಿದೆ ಎನ್ನಲಾಗಿದೆ.

ಈಗಿರುವ ಸಂಖ್ಯೆ?

ಈಗಿರುವ ಸಂಖ್ಯೆ?

ಈಗಿರುವ ಮೊಬೈಲ್ ಸಂಖ್ಯೆಗೆ ಹೆಚ್ಚುವರಿಯಾಗಿ ಮೂರು ಅಂಕಿಗಳನ್ನು ಸೇರಿಸಲು ಟೆಲಿಕಾಂ ಕಂಪನಿಗಳಿಗೆ ಸೂಚಿಸಲಾಗಿದೆ. ಬಿಎಸ್‌ಎನ್ಎಲ್ ಸಹ 2018ರ ಡಿಸೆಂಬರೊಳಗೆ 13 ಸಂಖ್ಯೆಗಳನ್ನುಸೇರಿಸಲಿದೆ. ಅಕ್ಟೋಬರ್ 1ರಿಂದ ಡಿಸೆಂಬರ್ 31ರೊಳಗೆ ಈ ಬದಲಾವಣೆ ಪ್ರಕ್ರಿಯೆ ನಡೆಯಲಿದೆ.

ಭಿನ್ನ ಅಭಿಪ್ರಾಯ:

ಭಿನ್ನ ಅಭಿಪ್ರಾಯ:

ಸರಕಾರಿ ಸ್ವಾಮ್ಯದ BNSL ಈ ಹೊಸ ಕ್ರಮವನ್ನು ಸ್ವಾಗತಿಸಿದರೆ ಖಾಸಗಿ ಟೆಲಿಕಾಂ ಕಂಪನಿಗಳಾದ ವೊಡಾಫೋನ್, ಜಿಯೋ, ಐಡಿಯಾ ಮತ್ತು ಏರ್‌ಟೆಲ್ ಭಿನ್ನ ಅಭಿಪ್ರಾಯವನ್ನು ಹೊಂದಿವೆ. 13 ಅಂಕಿಗಳ ಮೊಬೈಲ್ ಸಂಖ್ಯೆ ಹೊರೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿವೆ.

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
5G ತಯಾರಿ:

5G ತಯಾರಿ:

ಮೂಲಗಳ ಪ್ರಕಾರ ಮೊಬೈಲ್ ಬಳಕೆದಾರರ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಹೆಚ್ಚಿನ ಅಂಕಿಗಳನ್ನು ಸೃಷ್ಟಿಸುವ ಕಾರಣ ಮತ್ತು ಮುಂದಿನ ತಲೆ ಮಾರಿನ ನೆಟ್‌ವರ್ಕ್ ಸ್ವಾಗತಕ್ಕೆ ಈ ಕ್ರಮ ಎನ್ನಲಾಗಿದೆ.

Best Mobiles in India

English summary
|13 Digit mobile numbers coming to India from July. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X