ಮುಂಬೈ ಡಬ್ಬಾವಾಲಾಗಳಿಗೆ ಆಪ್‌ ಮೂಲಕ ನೆರವಾದ 13 ವರ್ಷದ ಬಾಲಕ

By Avinash
|

ಮುಂಬೈ ಎಂದರೆ ನಮಗೆಲ್ಲಾ ನೆನಪು ಬರುವುದು ತಾಜ್‌ ಹೋಟೆಲ್‌, ಛತ್ರಪತಿ ಶಿವಾಜಿ ಟರ್ಮಿನಲ್, 26/11 ಮುಂಬೈ ದಾಳಿ, ಧಾರಾವಿ ಸ್ಲಮ್‌ ಇವುಗಳ ಜತೆ ಡಬ್ಬಾವಾಲಾಗಳು. ಹೌದು, ಭಾರತದ ವಾಣಿಜ್ಯ ನಗರ ಆಗಿರುವ ಮುಂಬೈನಲ್ಲಿ ಡಬ್ಬಾವಾಲಾಗಳು ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ಆದರೆ, ಡಬ್ಬಾವಾಲಾಗಳಿಗೆ ಸರಿಯಾದ ಭದ್ರತೆ ಇಲ್ಲ.

ಮುಂಬೈ ಡಬ್ಬಾವಾಲಾಗಳಿಗೆ ಆಪ್‌ ಮೂಲಕ ನೆರವಾದ 13 ವರ್ಷದ ಬಾಲಕ

ಆದರೆ, ಮುಂಬೈ ಬಾಲಕ ಒಬ್ಬ ಡಬ್ಬಾವಾಲಾಗಳಿಗೆ ಜೀವನ ಭದ್ರತೆ ಒದಗಿಸಿ ಅವರ ಜೀವನಕ್ಕೆ ನೆರವಾಗಿದ್ದಾನೆ. 13 ವರ್ಷದ ತಿಲಕ್ ಮೆಹ್ತಾ ಡಬ್ಬಾವಾಲಾಗಳಿಗಾಗಿ ಹೊಸ ಆಪ್ ಕಂಡು ಹಿಡಿದು ಅವರ ವ್ಯಾಪಾರಕ್ಕೆ ಭದ್ರ ಬುನಾದಿ ಹಾಕಿದ್ದಾನೆ. ಆಪ್ ನಿರ್ಮಿಸಿರುವುದಲ್ಲದೇ ಹೊಸ ಕಂಪನಿಯನ್ನು ಸ್ಥಾಪಿಸಿ ಸ್ಟಾರ್ಟ್‌ಅಪ್‌ ಲೋಕದಲ್ಲೊಂದು ಹೊಸ ಕ್ರಾಂತಿ ಹುಟ್ಟು ಹಾಕಿದ್ದಾನೆ.

ಪೇಪರ್ಸ್‌ ಎನ್‌ ಪಾರ್ಸಲ್ಸ್‌

ಪೇಪರ್ಸ್‌ ಎನ್‌ ಪಾರ್ಸಲ್ಸ್‌

ತಿಲಕ್ ಮೆಹ್ತಾ ಪ್ರಾರಂಭಿಸಿರುವ ಹೊಸ ಸ್ಟಾರ್ಟ್‌ಅಪ್‌ ಹೆಸರು ಪೇಪರ್ಸ್‌ ಎನ್‌ ಪಾರ್ಸಲ್ಸ್‌ ಎಂದು. ಇದು ಲಾಜಿಸ್ಟಿಕ್ಸ್‌ಗೆ ಬೆಂಬಲಿಸುವ ಪ್ಲಾಟ್‌ಫಾರ್ಮ್‌ ಆಗಿದ್ದು, ಮುಂಬೈ ನಗರದ ಡಬ್ಬಾವಾಲಾಗಳು ಈ ಆಪ್‌ ಮೂಲಕ ಕಾರ್ಯನಿರ್ವಹಿಸುವಂತೆ ಮಾಡಲಾಗಿದೆ. ಈ ಆಪ್‌ನಿಂದ ಮುಂಬೈ ನಗರದ ಯಾವುದೇ ಸ್ಥಳಕ್ಕೆ ಪೇಪರ್‌ ಮತ್ತು ಪಾರ್ಸಲ್‌ಗಳನ್ನು ತರಲು ಡೆಲಿವರಿ ಬಾಯ್‌ ನೇಮಕ ಮಾಡಿಕೊಳ್ಳಬಹುದಾಗಿದೆ.

ಸಿಂಗಲ್ ಡೇ ಡೆಲಿವರಿ ಪ್ರತಿಜ್ಞೆ

ಸಿಂಗಲ್ ಡೇ ಡೆಲಿವರಿ ಪ್ರತಿಜ್ಞೆ

ಪೇಪರ್ಸ್‌ ಎನ್‌ ಪಾರ್ಸಲ್ಸ್‌ ವಾಣಿಜ್ಯ ನಗರಿಗರಿಗೆ ಸಿಂಗಲ್ ಡೇ ಡೆಲಿವರಿ ಪ್ರತಿಜ್ಞೆಯನ್ನು ಮಾಡಿದೆ. ತಿಲಕ್‌ ಮೆಹ್ತಾ ಸ್ಟಾರ್ಟ್‌ಅಪ್‌ ಮುಂಬೈ ನಗರದ ಜನಪ್ರಿಯ ಡಬ್ಬಾವಾಲಾಗಳ ಜತೆ ಒಪ್ಪಂದ ಮಾಡಿಕೊಂಡಿದ್ದು, ನಾಗರಿಕರಿಗೆ ಸಮಯಕ್ಕೆ ಸರಿಯಾದ ಡೆಲಿವರಿ ನೀಡುವಲ್ಲಿ ಯಶಸ್ವಿಯಾಗುತ್ತಿದೆ.

ದೊಡ್ಡಮಟ್ಟದಲ್ಲಿ ಕಾರ್ಯನಿರ್ವಹಣೆ

ದೊಡ್ಡಮಟ್ಟದಲ್ಲಿ ಕಾರ್ಯನಿರ್ವಹಣೆ

ಪೇಪರ್ಸ್‌ ಎನ್‌ ಪಾರ್ಸಲ್ಸ್‌ ಸ್ಟಾರ್ಟ್‌ಅಪ್‌ ತನ್ನ ಆಪ್ ಮೂಲಕ ಕಾರ್ಯನಿರ್ವಹಿಸುತ್ತಾ ಹೀಗಾಗಲೇ 200 ಜನಕ್ಕೆ ಉದ್ಯೋಗಗಳನ್ನು ನೀಡಿದೆ. ಇದನ್ನು 2019ರ ಅಂತ್ಯಕ್ಕೆ 2000 ಮೀರಿಸುವ ಯೋಜನೆಯನ್ನು ಸ್ಟಾರ್ಟ್‌ಅಪ್‌ ಹಾಕಿಕೊಂಡಿದೆ. ಅಂದರೆ ಒಂದೇ ವರ್ಷದಲ್ಲಿ 10 ಪಟ್ಟು ಹೆಚ್ಚು ಬೆಳವಣಿಗೆಯನ್ನು ಪೇಪರ್ಸ್‌ ಎನ್‌ ಪಾರ್ಸಲ್ಸ್‌ ನಿರೀಕ್ಷಿಸುತ್ತಿದೆ.

ಡಬ್ಬಾವಾಲಾಗಳ ಜತೆ ಒಪ್ಪಂದ

ಡಬ್ಬಾವಾಲಾಗಳ ಜತೆ ಒಪ್ಪಂದ

ಪೇಪರ್ಸ್‌ ಎನ್‌ ಪಾರ್ಸಲ್ಸ್‌ ಕಂಪನಿಯು ಮುಂಬೈನ ಜನಪ್ರಿಯ ಡಬ್ಬಾವಾಲಾಗಳ ನೆಟ್‌ವರ್ಕ್‌ ಜತೆ ಒಪ್ಪಂದ ಮಾಡಿಕೊಂಡಿದ್ದು, ಈ ನೆಟ್‌ವರ್ಕ್‌ನಲ್ಲಿ 5000ಕ್ಕೂ ಹೆಚ್ಚು ಡಬ್ಬಾವಾಲಾಗಳು ಇದ್ದಾರೆ. ಸದ್ಯಕ್ಕೆ ಮುಂಬೈನ 300 ಡಬ್ಬಾವಾಲಾಗಳು ಕಂಪನಿ ಜತೆ ಕಾರ್ಯನಿರ್ವಹಿಸುತ್ತಿದ್ದಾರೆ. ಮೂರು ಕಿ.ಗ್ರಾಂ ವಸ್ತುವಿನ ಡೆಲಿವರಿಯನ್ನು 40 ರೂ. ಗೆ ನೀಡುತ್ತಿದೆ.

ದಿನವೊಂದಕ್ಕೆ ಸಾವಿರಕ್ಕೂ ಹೆಚ್ಚು ಡೆಲಿವರಿ

ದಿನವೊಂದಕ್ಕೆ ಸಾವಿರಕ್ಕೂ ಹೆಚ್ಚು ಡೆಲಿವರಿ

ತಿಲಕ್ ಮೆಹ್ತಾ ಪ್ರಾರಂಭಿಸಿರುವ ಪೇಪರ್ಸ್‌ ಎನ್‌ ಪಾರ್ಸಲ್ಸ್‌ ಸ್ಟಾರ್ಟ್‌ಅಪ್‌ ದಿನವೊಂದಕ್ಕೆ 1200ಕ್ಕೂ ಹೆಚ್ಚು ಡೆಲಿವರಿ ಮಾಡುತ್ತಿದ್ದು, ಮುಂಬೈ ನಗರದಾದ್ಯಂತ ತನ್ನ ಕಾರ್ಯನಿರ್ವಹಣೆಯನ್ನು ವಿಸ್ತರಿಸಿದ್ದು, ಮುಂಬೈ ನಗರದ ಪ್ರಮುಖ ವ್ಯವಹಾರವಾಗಿ ಬೆಳೆಯುತ್ತಿದೆ. ಈ ಪ್ರಮಾಣವನ್ನು ಮುಂದಿನ ವರ್ಷದ ಅಂತ್ಯಕ್ಕೆ 1 ಲಕ್ಷಕ್ಕೆ ವಿಸ್ತರಿಸುವ ಗುರಿಯನ್ನು ಹೊಂದಿದ್ದಾರೆ.

ಆಪ್‌ ಪ್ರಾರಂಭದ ಹಿಂದಿದೆ ಕಥೆ

ಆಪ್‌ ಪ್ರಾರಂಭದ ಹಿಂದಿದೆ ಕಥೆ

ಪೇಪರ್ಸ್‌ ಎನ್‌ ಪಾರ್ಸಲ್ಸ್‌ ಆಪ್ ಪ್ರಾರಂಭದ ಹಿಂದೆ ಒಂದು ಕಥೆಯಿದೆ. ತಿಲಕ್ ಮೆಹ್ತಾ ತನ್ನ ಚಿಕ್ಕಪ್ಪನ ಮನೆಯಲ್ಲಿ ತನ್ನ ಕೆಲವೊಂದು ಪುಸ್ತಕಗಳನ್ನು ಮರೆತು ಬಂದಿದ್ದನು. ಮನೆ ದೂರವಿತ್ತು. ತನ್ನ ತಂದೆಗೆ ಪುಸ್ತಕ ತಂದುಕೊಡುವಂತೆ ಕೇಳಲು ತಿಲಕ್‌ಗೆ ಇಷ್ಟವಿರಲಿಲ್ಲ. ಏಕೆಂದರೆ ಅವರ ತಂದೆ ಕೆಲಸ ಮಾಡಿ ದಣಿದು ಮನೆಗೆ ಬಂದಿದ್ದರು. ಆ ಸಂದರ್ಭದಲ್ಲಿಯೇ ತಿಲಕ್ ಮೆಹ್ತಾಗೆ ಈ ಆಪ್ ಐಡಿಯಾ ಹುಟ್ಟಿದ್ದು.

Best Mobiles in India

English summary
13-year-old ‘delivers’ startup Papers N Parcels. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X