13ನೇ ವಯಸ್ಸಿಗೇ ದುಬೈನಲ್ಲಿ ಸಾಫ್ಟ್‌ವೇರ್ ಕಂಪೆನಿ ಒಡೆಯನಾದ ಭಾರತೀಯ!

|

ತನ್ನ ಒಂಬತ್ತನೇ ವಯಸ್ಸಿಗೆ 'ಮೊಬೈಲ್ ಆಪ್' ಒಂದನ್ನು ರೂಪಿಸಿ ಗಮನಸೆಳೆದಿದ್ದ ಭಾರತೀಯ ಮೂಲದ ಬಾಲಕನೋರ್ವ ಮತ್ತೊಮ್ಮೆ ವಿಶ್ವದ ಗಮನ ಸೆಳೆದಿದ್ದಾನೆ. ಕೇರಳದ 'ಆದಿತ್ಯನ್ ರಾಜೇಶ್' ಎಂಬ ಬಾಲಕ ತನ್ನ ವಯಸ್ಸಿಗೂ ಮೀರಿದ ಸಾಧನೆ ಮಾಡಿದ್ದು, ತನ್ನ 13ನೇ ವಯಸ್ಸಿನಲ್ಲೇ ತನ್ನದೇ ಸಾಫ್ಟ್‌ವೇರ್ ಕಂಪೆನಿಯೊಂದನ್ನು ಸ್ಥಾಪಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾನೆ.

ಹೌದು, ಭಾರತೀಯ ಮೂಲದ ಆದಿತ್ಯನ್ ರಾಜೇಶ್‌ ತನ್ನ 13ನೇ ವಯಸ್ಸಿನಲ್ಲೇ 'ಟ್ರಿನೆಟ್ ಸಲೂಷನ್ಸ್' ಎಂಬ ತಂತ್ರಜ್ಞಾನ ಕಂಪನಿಯನ್ನು ದುಬೈನಲ್ಲಿ ಆರಂಭಿಸಿರುವ ಬಗ್ಗೆ ಮಾಧ್ಯಮ ವರದಿಗಳು ತಿಳಿಸಿವೆ. ಈತ ತನ್ನ 13ನೇ ವಯಸ್ಸಿನಲ್ಲೇ ಸಾಫ್ಟ್‌ವೇರ್‌ ಡೆವಲಪ್ ಕಂಪನಿಯನ್ನು ಆರಂಭಿಸಿರುವ ಬಗ್ಗೆ ಅಲ್ಲಿನ ಪ್ರಖ್ಯಾತ ಮಾಧ್ಯಮ 'ಖಲೀಜ್ ಟೈಮ್ಸ್' ಪತ್ರಿಕೆ ವರದಿ ಮಾಡಿದೆ.

13ನೇ ವಯಸ್ಸಿಗೇ ದುಬೈನಲ್ಲಿ ಸಾಫ್ಟ್‌ವೇರ್ ಕಂಪೆನಿ ಒಡೆಯನಾದ ಭಾರತೀಯ!

ಬೇಸರ ಕಳೆಯುವ ಸಲುವಾಗಿ ಮೊಬೈಲ್ ಆಪ್‌ಗಳನ್ನು ಸಿದ್ದಪಡಿಸುತ್ತಿದ್ದ ಹಾಗೂ ವೆಬ್‌ಸೈಟ್‌ಗಳನ್ನು ವಿನ್ಯಾಸಗೊಳಿಸುತ್ತಿದ್ದ ದಿತ್ಯನ್ ರಾಜೇಶ್‌ ಈಗ ತನ್ನದೇ ಸಾಫ್ಟ್‌ವೇರ್ ಕಂಪೆನಿ ಸ್ಥಾಪಿಸಿದ್ದು, ಆದಿತ್ಯನ್ ರಾಜೇಶ್‌ನ ಮೂವರು ಸ್ನೇಹಿತರು/ಸಹಪಾಠಿಗಳೇ ಆತನ ಕಂಪೆನಿಯ ಉದ್ಯೋಗಿಗಳಾಗಿದ್ದಾರೆ. ಈತನ ಕಂಪನಿಗೆ ಈಗಾಗಲೇ 12ಕ್ಕೂ ಅಧಿಕ ಕ್ಲೈಂಟ್‌ಗಳೂ ಸಹ ಇದ್ದಾರೆ.!

ತನ್ನ ಕಂಪೆನಿ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಸೇವೆ ಸಲ್ಲಿಸುವುದಾಗಿ ಆತ ಭರವಸೆ ನೀಡುವ ರಾಜೇಶ್‌, ಟೈಪಿಂಗ್‌ ಕಲಿಯಲು ನೆರವಾಗುವ ಬಿಬಿಸಿ ಟೈಪಿಂಗ್‌ ವೆಬ್‌ಸೈಟ್‌ ಅನ್ನು ಮೊದಲ ಸಲ ನಮ್ಮ ತಂದೆ ತೋರಿಸಿದರು. ಆ ನಂತರ ಬೇಸರ ಕಳೆಯಲು ಸಾಫ್ಟ್‌ವೇರ್‌ನತ್ತ ಮುಖ ಮಾಡಿದೆ. ಆಟದಂತೆ ಅದನ್ನೂ ಕಲಿಯುತ್ತಲೇ ಹೋದೆ ಎಂದು ತನ್ನ ಸಾಧನೆ ಬಗ್ಗೆ ಹೇಳಿದ್ದಾನೆ.

13ನೇ ವಯಸ್ಸಿಗೇ ದುಬೈನಲ್ಲಿ ಸಾಫ್ಟ್‌ವೇರ್ ಕಂಪೆನಿ ಒಡೆಯನಾದ ಭಾರತೀಯ!

ಆದರೆ, ರಾಜೇಶ್‌ ಈಗಲೂ ಸಹ ಕಂಪೆನಿಯ ಅಧಿಕೃತ ಮಾಲಿಕನಾಗಿಲ್ಲ. ರಾಜೇಶ್‌ ಹೇಳುವಂತೆ, 'ಹದಿನೆಂಟು ವರ್ಷ ಮುಗಿದಾಗ ಅಧಿಕೃತವಾಗಿ ನಾನು ಕಂಪನಿಯ ಮಾಲೀಕನಾಗುತ್ತೇನೆ. ಆದರೂ, ನಾವು ಕಂಪನಿಯಂತೆಯೇ ಕೆಲಸ ಮಾಡುತ್ತಿದ್ದೇವೆ. ಹನ್ನೆರಡಕ್ಕೂ ಅಧಿಕ ಕ್ಲೈಂಟ್‌ಗಳಿದ್ದು, ಡಿಸೈನ್‌ ಮತ್ತು ಕೋಡಿಂಗ್‌ ಸರ್ವೀಸ್ ಅನ್ನು ಉಚಿತವಾಗಿಯೇ ನೀಡುತ್ತಿದ್ದೇವೆ' ಎನ್ನುತ್ತಾನೆ.

Best Mobiles in India

English summary
A 13-year-old Indian boy in Dubai, who developed his first mobile application four years ago, also owns a software development company, a media report said on Sunday.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X