14ರ ಹುಡುಗ ನಿರ್ಮಿಸಿದ ಮಿನಿಯೇಚರ್ ವಿಮಾನ‌

By Suneel
|

ಅತೀ ಚಿಕ್ಕ ವಯಸ್ಸಿಗೆ ಸಾಧನೆ ಮಾಡೋರು ತುಂಬ ವಿರಳ ಅಲ್ವಾ. ಆದರೆ ಆ ವಿರಳ ಸಂಖ್ಯೆಗೆ 14 ವರ್ಷದ ಹುಡುಗನೊಬ್ಬ ಕ್ವಾಡ್‌ಕಾಪ್ಟರ್‌, ಮಿನಿಯೇಚರ್‌ ವಿಮಾನಗಳನ್ನು ನಿರ್ಮಿಸಿ ಮುಂದಿನ ಭರವಸೆಯ ವಿಜ್ಞಾನಿಯಾಗುವ ಸಾಲಿಗೆ ಸೇರಲಿದ್ದಾನೆ. ಅಂದಹಾಗೆ ಆತ ನಮ್ಮ ಬೆಂಗಳೂರಿನ ಹುಡುಗ ಅನ್ನೋದನ್ನ ಯಾರೂ ಸಹ ಮರೆಯೋ ಹಾಗಿಲ್ಲಾ. ರೀಮೋಟ್‌ ನಿಯಂತ್ರಿತ ವಿಮಾನಗಳನ್ನು, ತುರ್ತು ಪರಿಸ್ಥಿತಿಗೆ ಸಹಾಯವಾಗುವ ಸಣ್ಣ ವಿಮಾನಗಳನ್ನು ನಿರ್ಮಿಸಿರುವ ಈ 14ರ ಪೋರ ಯಾರು ಅಂತ ತಿಳಿಯಬೇಕೆ, ಆತನ ಸಾಧನೆಗಳೇನು ತಿಳಿಯ ಬೇಕೆ, ಹಾಗಾದ್ರೆ ಲೇಖನದ ಸ್ಲೈಡರ್‌ಗಳನ್ನು ಓದಿರಿ.

14ನೇ ವಯಸ್ಸಿಗೆ ವಿಮಾನ ನಿರ್ಮಿಸಿದ ಹುಡುಗ

14ನೇ ವಯಸ್ಸಿಗೆ ವಿಮಾನ ನಿರ್ಮಿಸಿದ ಹುಡುಗ

14 ವರ್ಷದ ಕಿರಣ್‌ ರವೀಂದ್ರ ಪಾಟೀಲ್, ಬೆಂಗಳೂರಿನ ಯಲಹಂಕದ ನಾಗಾರ್ಜುನ ವಿದ್ಯಾನಿಕೇತನ ಶಾಲೆಯಲ್ಲಿ ಸಿಬಿಎಸ್‌ಸಿ ವಿಭಾಗದಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದು, ಮಿನಿಯೇಚರ್‌ ವಿಮಾನವನ್ನು ನಿರ್ಮಿಸಿದ್ದಾನೆ.

ವಿಶ್ವದ 15 ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ಒಬ್ಬ

ವಿಶ್ವದ 15 ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ಒಬ್ಬ

ಕಿರಣ್‌ ರವೀಂದ್ರ ಪಾಟೀಲ್‌ ವಿಶ್ವದ 15 ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ಒಬ್ಬನಾಗಿದ್ದು, ಈತ "ಆರ್‌ ಸಿ ವಲ್ಡ್: ಎ ಜರ್ನಿ ಟು ರಿಮೋಟ್‌ ಕಂಟ್ರೊಲ್‌ ಪ್ಲೇನ್‌ ಆವೃತ್ತಿ-1" ಎಂಬ ಪುಸ್ತಕವನ್ನು ಶಾಲಾ ಫೆಸ್ಟ್ ದಿನದಂದು ಬಿಡುಗಡೆ ಮಾಡಿದ್ದಾನೆ.

"ಆರ್‌ ಸಿ ವಲ್ಡ್: ಎ ಜರ್ನಿ ಟು ರಿಮೋಟ್‌ ಕಂಟ್ರೊಲ್‌ ಪ್ಲೇನ್‌ ಆವೃತ್ತಿ-1"

ಕಿರಣ್‌ ಬಿಡುಗಡೆ ಮಾಡಿರುವ "ಆರ್‌ ಸಿ ವಲ್ಡ್: ಎ ಜರ್ನಿ ಟು ರಿಮೋಟ್‌ ಕಂಟ್ರೊಲ್‌ ಪ್ಲೇನ್‌ ಆವೃತ್ತಿ-1" ಪುಸ್ತಕದಲ್ಲಿ ಮಿನಿಯೇಚರ್ ವಿಮಾನವನ್ನು ನಿರ್ಮಿಸಲು ಬೇಕಾದ ತಾಂತ್ರಿಕ ಅಂಶಗಳು, ವಿಧಾನಗಳು ಹಾಗೂ ಮುನ್ನೆಚ್ಚರಿಕೆ ಎಲ್ಲವನ್ನು ತಿಳಿಸಲಾಗಿದೆ. ಅಲ್ಲದೇ ಈತ ಮಿನಿಯೇಚರ್ ವಿಮಾನ ನಿರ್ಮಿಸಿದ ವಿಧಾನ, ಆತ ಮಾಡಿದ ಸರಿ-ತಪ್ಪುಗಳು ಎಲ್ಲವನ್ನು ತಿಳಿಸಲಾಗಿದೆ
ಚಿತ್ರ ಕೃಪೆ : ಟಿವಿ9, ಕನ್ನಡ ನ್ಯೂಸ್‌ ಚಾನೆಲ್‌

 ಚಿಕ್ಕವಯಸ್ಸಿಗೆ ದೊಡ್ಡ ಸಾಧನೆ

ಚಿಕ್ಕವಯಸ್ಸಿಗೆ ದೊಡ್ಡ ಸಾಧನೆ

ಅಂದಹಾಗೆ ಕಿರಣ್‌ ಮಿನಿಯೇಚರ್‌ ವಿಮಾನ ನಿರ್ಮಿಸಿ, ಅದರು ಕುರಿತು ಪುಸ್ತಕ ಬಿಡುಗಡೆ ಮಾಡಿದ ಸಾಧನೆಯ ಹಿಂದೆ ಆತನಿಗೆ ಚಿಕ್ಕಂದಿನಿಂದಲೇ ಇರುವ ವಿಮಾನದ ಕುತೂಹಲವಾಗಿದೆ. ಈತ ಸಣ್ಣ ವಿಮಾನದ ಆಟಿಕೆಗಳಲ್ಲಿ ಆಟವಾಡುತ್ತಿದ್ದನಂತೆ. 2ನೇ ತರಗತಿಗೆ ಬರುವ ಹೊತ್ತಿಗೆ 'ಆರ್‌ ಸಿ ಕಿಟ್‌'ನಿಂದ ಎಲೆಕ್ಟ್ರಾನಿಕ್‌ ವಿಮಾನಗಳನ್ನು ಹೇಗೆ ನಿರ್ಮಿಸಬೇಕೆಂಬುದನ್ನು ಕಲಿತಿದ್ದನಂತೆ.
ಚಿತ್ರ ಕೃಪೆ : ಟಿವಿ9, ಕನ್ನಡ ನ್ಯೂಸ್‌ ಚಾನೆಲ್‌

ಮಿನಿಯೇಚರ್ ವಿಮಾನ ನಿರ್ಮಿಸಿದ್ದು ಹೇಗೆ?

ಮಿನಿಯೇಚರ್ ವಿಮಾನ ನಿರ್ಮಿಸಿದ್ದು ಹೇಗೆ?

ಕಿರಣ್‌ಗೆ ವಿಮಾನಗಳಲ್ಲಿ ಏರೊಬಾಟಿಕ್ಸ್‌ ಮಾಡುವುದೆಂದರೆ ಬಹಳ ಇಷ್ಟವಿತಂತೆ. ಈತ ಆತ ತಯಾರಿಸಿರುವ ಮಿನಿಯೇಚರ್‌ ವಿಮಾನವಲ್ಲದೇ, ಮೈಕ್ರೋ ವಿಮಾನಗಳನ್ನು ಸಹ ಹಾರಿಸುತ್ತಾನ.
ಚಿತ್ರ ಕೃಪೆ : ಟಿವಿ9, ಕನ್ನಡ ನ್ಯೂಸ್‌ ಚಾನೆಲ್‌

ಮಿನಿಯೇಚರ್ ವಿಮಾನ ಕುರಿತು ಕಿರಣ್‌ ಹೇಳಿದ್ದೇನು?

ಮಿನಿಯೇಚರ್ ವಿಮಾನ ಕುರಿತು ಕಿರಣ್‌ ಹೇಳಿದ್ದೇನು?

ಕಿರಣ್‌ ನಿರ್ಮಿಸಿರುವ ರಿಮೋಟ್ ನಿಯಂತ್ರಣ ವಿಮಾನ ಕ್ಚಾಡ್‌ಕಾಪ್ಟರ್‌ ಆಗಿದ್ದು, "ತುರ್ತುಪರಿಸ್ಥಿತಿಗಳಲ್ಲಿ ಸೈರನ್‌ನೊಂದಿಗೆ ಕಾರ್ಯಚಲನೆ ಹೊಂದುತ್ತದೆ. ಅಂತರಾಷ್ಟ್ರೀಯವಾಗಿ ಶೇಕಡ 50 ರಷ್ಟು ಜನರು ಹೃದಯಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಇಂತಹ ಆರೋಗ್ಯ ತುರ್ತು ಸಂದರ್ಭಗಳಿಗೆ ನನ್ನ ಹವ್ಯಾಸದೊಂದಿಗೆ ಸೇವೆ ಸಲ್ಲಿಸಬೇಕು" ಎಂದು ಕಿರಣ್‌ ಹೇಳಿದ್ದಾರೆ.
ಚಿತ್ರ ಕೃಪೆ : ಟಿವಿ9, ಕನ್ನಡ ನ್ಯೂಸ್‌ ಚಾನೆಲ್‌

ಟೆಕ್‌ ಫೆಸ್ಟ್‌ನಲ್ಲಿ 3ನೇ ಬಹುಮಾನ

ಟೆಕ್‌ ಫೆಸ್ಟ್‌ನಲ್ಲಿ 3ನೇ ಬಹುಮಾನ

2 ತಿಂಗಳ ಹಿಂದೆ ಮುಂಬೈಯ ಐಐಟಿ ಕೇಂದ್ರದಲ್ಲಿ ಆಯೋಜಿಸಿದ್ದ ಟೆಕ್‌ ಫೆಸ್ಟ್‌ನಲ್ಲಿ 3ನೇ ಬಹುಮಾನ ಗಳಿಸಿದ್ದಾರೆ. ಕಿರಣ್‌ ಪೋಷಕರು, ಆತನ ವಿಮಾನ ನಿರ್ಮಾಣ ಹವ್ಯಾಸಕ್ಕೆ ಸಹಾಯ ಮಾಡುತ್ತಿದ್ದು, ವಿದೇಶಗಳಿಂದ ಕೆಲವೊಂದು ಉಪಕರಣಗಳನ್ನು ತರಸಬೇಕಾಗುತ್ತದೆ.
ಚಿತ್ರ ಕೃಪೆ : ಟಿವಿ9, ಕನ್ನಡ ನ್ಯೂಸ್‌ ಚಾನೆಲ್‌

ಗಿಜ್‌ಬಾಟ್

ಗಿಜ್‌ಬಾಟ್

ಐಫೋನ್‌ನಲ್ಲಿ 'ಫೈಲ್‌ ಮ್ಯಾನೇಜರ್‌' ಪಡೆಯುವುದು ಹೇಗೆ?ಐಫೋನ್‌ನಲ್ಲಿ 'ಫೈಲ್‌ ಮ್ಯಾನೇಜರ್‌' ಪಡೆಯುವುದು ಹೇಗೆ?

ಗೂಗಲ್‌ ಮ್ಯಾಪ್‌ನಲ್ಲಿ ಪತ್ತೆಯಾದ ವಿಚಿತ್ರ ಸ್ಥಳಗೂಗಲ್‌ ಮ್ಯಾಪ್‌ನಲ್ಲಿ ಪತ್ತೆಯಾದ ವಿಚಿತ್ರ ಸ್ಥಳ

ಗಿಜ್‌ಬಾಟ್‌

ಗಿಜ್‌ಬಾಟ್‌

ಕನ್ನಡ ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
14-Yr-old Kiran, a Promising Young Scientist Builds Miniature Planes. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X