ಹಾಸಿಗೆ ಪಕ್ಕದಲ್ಲಿ ಫೋನ್ ಇಟ್ಟುಕೊಂಡು ಮಲಗಿದ್ದ 14 ವರ್ಷದ ಯುವತಿ ದುರ್ಮರಣ!

|

ಹಾಸಿಗೆ ಪಕ್ಕದಲ್ಲಿ ಫೋನ್ ಇಟ್ಟುಕೊಂಡು ಮಲಗಿದ್ದ ಶಾಲಾ ವಿದ್ಯಾರ್ಥಿನಿಯೊಬ್ಬಳು ಮೊಬೈಲ್ ಸ್ಪೋಟದಿಂದಾಗಿ ಮೃತಪಟ್ಟಿರುವ ಮತ್ತೊಂದು ದುರಂತ ಘಟನೆ ಇತ್ತೀಚಿಗೆ ವರದಿಯಾಗಿದೆ. ದೂರದ ಕಜಕಿಸ್ತಾನ ದೇಶದ ಬಾಸ್ಟೋಬ್ನಲ್ಲಿರುವ ಮನೆಯೊಂದರಲ್ಲಿ ಸಂಗೀತ ಕೇಳುತ್ತಾ ರಾತ್ರಿ ಮಲಗಿದ್ದ 14 ವರ್ಷದ ಅಲುವಾ ಅಸೆಟ್ಕಿಜಿ ಅಬ್ಜಲ್ಬೆಕ್ ಎಂಬ ಯುವತಿ ಸಾವಿಗೀಡಾಗಿದ್ದು, ಬೆಳಿಗ್ಗೆ ವೇಳೆಗೆ ಮೊಬೈಲ್ ಬ್ಯಾಟರಿ ಅವಳ ತಲೆಯ ಹತ್ತಿರ ಸ್ಫೋಟಗೊಂಡು ಸತ್ತಿದ್ದಾಳೆ ಎಂದು ಅಲ್ಲಿನ ಮಾಧ್ಯಮ ವರದಿಗಳು ತಿಳಿಸಿವೆ.

ಸಂಗೀತವನ್ನು ಆಲಿಸುತ್ತಾ ಮಲಗಿದ್ದಾಳೆ

ಅಲ್ಲಿನ ಸ್ಥಳೀಯ ವರದಿಗಳ ಪ್ರಕಾರ, ಅಲುವಾ ಅಸೆಟ್ಕಿಜಿ ಅಬ್ಜಲ್ಬೆಕ್ ಎಂಬ ಯುವತಿ ಮೊಬೈಲ್ ಚಾರ್ಜ್ ಆಗುತ್ತಿವಾಗಲೇ ಸಂಗೀತವನ್ನು ಆಲಿಸುತ್ತಾ ಮಲಗಿದ್ದಾಳೆ. ಈ ವೇಳೆಯಲ್ಲಿ ಮೊಬೈಲ್ ಹೆಚ್ಚು ಬಿಸಿಯಾದ ನಂತರ ಮುಂಜಾನೆ ಸ್ಫೋಟಗೊಂಡಿದೆ ಎಂದು ವಿಧಿವಿಜ್ಞಾನ ತಜ್ಞರು ದೃಢಪಡಿಸಿದ್ದಾರೆ ಎಂದು ಹೇಳಿವೆ. ಮೊಬೈಲ್ ಸ್ಫೋಟದ ಪರಿಣಾಮವಾಗಿ ಆಕೆ ತಲೆಗೆ ತೀವ್ರವಾದ ಗಾಯಗಳಾಗಿದ್ದಾಳೆ ಮತ್ತು ಆ ಸ್ಫೋಟದ ಪರಿಣಾಮದಿಂದ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ನಂಬಲಾಗಿದೆ ಎಂದು ವರದಿಗಳಲ್ಲಿ ತಿಳಿಸಿವೆ.

 ಮಾಧ್ಯಮಗಳು ಉಲ್ಲೇಖಿಸಿವೆ.

ಅಲುವಾ ಅಸೆಟ್ಕಿಜಿ ಅಬ್ಜಲ್ಬೆಕ್ ಮೃತಪಟ್ಟಿರುವುದನ್ನು ಅಲ್ಲಿನ ಮಾಧ್ಯಮಗಳು ದುರಂತ ಅಪಘಾತವೆಂದು ಬಣ್ಣಿಸಿವೆ. ಅಲುವಾ ಅವರ ಅತ್ಯುತ್ತಮ ಸ್ನೇಹಿತೆಯಾಗಿದ್ದ ಡೋಲಶೆವಾ ಎಂಬ ಯುವತಿ ಸಾಮಾಜಿಕ ಮಾಧ್ಯಮದಲ್ಲಿ ಆಕೆಯ ಸಾವಿನ ಬಗ್ಗೆ ಪೋಸ್ಟ್ ಮಾಡಿರುವುದನ್ನು ಮಾಧ್ಯಮಗಳು ಉಲ್ಲೇಖಿಸಿವೆ. 'ನಾನು ಅದನ್ನು ಇನ್ನೂ ನಂಬಲು ಸಾಧ್ಯವಿಲ್ಲ. ನೀನು ಉತ್ತಮ ಗೆಳತಿ. ನಾವು ಬಾಲ್ಯದಿಂದಲೂ ಒಟ್ಟಿಗೆ ಇದ್ದೇವೆ. ನೀನಿಲ್ಲದೆ ನನಗೆ ತುಂಬಾ ಕಷ್ಟ. ನೀವು ನನ್ನನ್ನು ಶಾಶ್ವತವಾಗಿ ತೊರೆದಿದ್ದೀರಿ ಎಂದು ಆಕೆಯ ಸ್ನೇಹಿತೆ ಕಂಬನಿ ಮಿಡಿದಿದ್ದಾಳೆ.

ಪೋಕರ್ ಆಟಗಾರ್ತಿ

ಅಲುವಾ ಅವರ ಸಾವು ರಷ್ಯಾ ಮತ್ತು ಇತರ ದೇಶಗಳಲ್ಲಿನ ಮೊಬೈಲ್ ಫೋನ್‌ಗಳನ್ನು ಒಳಗೊಂಡ ಸಾವಿನ ಸರಣಿಯನ್ನು ಅನುಸರಿಸುತ್ತದೆ. ರಷ್ಯಾದ ಅತ್ಯಂತ ಸುಂದರವಾದ ಪೋಕರ್ ಆಟಗಾರ್ತಿ ಎಂದು ಕರೆಸಿಕೊಳ್ಳುತ್ತುದ್ದ 26 ಲಿಲಿಯಾ ನೋವಿಕೋವಾ ಎಂಬಾಕೆ ಕೂಡ ಸ್ನಾನಗೃಹದಲ್ಲಿ ವಿದ್ಯುತ್ ಆಘಾತದಿಂದ ಶವವಾಗಿ ಪತ್ತೆಯಾಗಿದ್ದಳು. ಇದಕ್ಕೆ ಮೊಬೈಲ್ ವಿದ್ಯುತ್ ಪ್ರವಹಿಸಿರುವುದೇ ಕಾರಣ ಎಂದು ಹೇಳಲಾಗಿತ್ತು. ಇನ್ನು ಮಲೇಷ್ಯಾದಲ್ಲೂ ಕೂಡ ಇಂತಹುದೇ ಘಟನೆಯೊಂದು ವರದಿಯಾಗಿದ್ದನ್ನು ನಾವು ನೋಡಬಹುದು.

ಕ್ರಡಲ್‌ ಫಂಡ್‌

ಬೆಡ್‌ ರೂಂನಲ್ಲಿ ಮೊಬೈಲ್‌ನ್ನು ಚಾರ್ಜ್‌ ಮಾಡಲು ಇಟ್ಟು, ಹತ್ತಿರವೇ ಮಲಗಿದ ಮಲೇಷ್ಯಾ ಸಚಿವಾಲಯದ ಕ್ರಡಲ್‌ ಫಂಡ್‌ ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ನಜ್ರಿನ್ ಹಸನ್ ಅವರು ಜೀವ ಕಳೆದುಕೊಂಡಿದ್ದ ಘಟನೆ ಕೆಲ ತಿಂಗಳ ಹಿಂದಷ್ಟೇ ವರದಿಯಾಗಿತ್ತು. ಹೀಗೆ ಬೆಡ್‌ ರೂಂನಲ್ಲಿ ಮೊಬೈಲ್‌ನ್ನು ಚಾರ್ಜ್‌ ಮಾಡಲು ಇಟ್ಟು, ಹತ್ತಿರವೇ ಮಲಗಿ ಜೀವ ಕಳೆದುಕೊಂಡಿರುವ ಹಲವಾರು ಘಟನೆಗಳು ನಡೆದಿವೆ. ಹಾಗಾಗಿ, ನೀವು ಕೂಡ ರಾತ್ರಿ ವೇಳೆ ಮೊಬೈಲ್‌ ಚಾರ್ಜ್‌ಗೆ ಇಟ್ಟು ಮಲಗುವ ಅಭ್ಯಾಸವನ್ನು ಹೊಂದಿದ್ದರೆ ಈಗಲೇ ಬಿಟ್ಟು ಬಿಡಿ.

Best Mobiles in India

English summary
A SCHOOLGIRL was killed in her sleep after her charging smartphone explodes on her pillow as she slept, according to reports.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X