ಬರೇ 4 ಸೆಕುಂಡುಗಳಲ್ಲಿ ಮೈಕ್ರೋಮ್ಯಾಕ್ಸ್ ವೈಯು ಅದ್ಭುತ ಮಾರಾಟ

Written By:

ಇ ಕಾಮರ್ಸ್ ಪೋರ್ಟಲ್‌ನಲ್ಲಿ ಸ್ಮಾರ್ಟ್‌ಫೋನ್ ಫ್ಲ್ಯಾಶ್ ಸೇಲ್ ದೈನಂದಿನ ಚಟುವಟಿಕೆಯಾಗಿದೆ. ಶ್ಯೋಮಿ, ಲೆನೊವೊ, ಮೈಕ್ರೋಮ್ಯಾಕ್ಸ್ ವೈಯು ಹೀಗೆ ರೀಟೈಲ್ ತಾಣಗಳಲ್ಲಿ ಸ್ಮಾರ್ಟ್‌ಫೋನ್ ಫ್ಲ್ಯಾಶ್‌ಸೇಲ್ ಬಳಕೆದಾರರನ್ನು ಸೆಳೆಯುತ್ತಿದ್ದು ಅಮೆಜಾನ್ ಇಂಡಿಯಾದಲ್ಲಿ ಯುರೇಕಾ ಸ್ಮಾರ್ಟ್‌ಫೋನ್‌ನ 15,000 ಯೂನಿಟ್‌ಗಳನ್ನು ವೈಯು ಮಾರಾಟ ಮಾಡಿದೆ.

ಬರೇ 4 ಸೆಕುಂಡುಗಳಲ್ಲಿ ಮೈಕ್ರೋಮ್ಯಾಕ್ಸ್ ವೈಯು ಅದ್ಭುತ ಮಾರಾಟ

ಬರೇ ನಾಲ್ಕು ಸೆಕುಂಡುಗಳಲ್ಲಿ ಯುರೇಕಾ ಫೋನ್‌ಗಳು ಮಾರಾಟವಾಗಿರುವುದು ಚಮತ್ಕಾರೀ ಕಾರ್ಯವಾಗಿ ಪರಿಗಣಿತವಾಗಿದೆ. ನಾಲ್ಕು ಸೆಕುಂಡುಗಳಲ್ಲಿ 15,000 ಯೂನಿಟ್‌ಗಳನ್ನು ವೈಯು ಮಾರಾಟ ಮಾಡಿದ್ದು ಕಳೆದ ವಾರ, ಕಂಪೆನಿಯು 25,000 ಯೂನಿಟ್‌ಗಳನ್ನು ಆಫರ್ ಮಾಡಿತ್ತು.

ಬರೇ 4 ಸೆಕುಂಡುಗಳಲ್ಲಿ ಮೈಕ್ರೋಮ್ಯಾಕ್ಸ್ ವೈಯು ಅದ್ಭುತ ಮಾರಾಟ

ರೂ 10,000ದ ಒಳಗೆ ಬರುವ ಡಿವೈಸ್‌ಗಳಲ್ಲಿ ಯುರೇಕಾ ಅತ್ಯಂತ ಉತ್ತಮ ಫೋನ್ ಆಗಿದ್ದು ಇದು 5.5 ಇಂಚಿನ 720p ಸ್ಕ್ರೀನ್ ಅನ್ನು ಪಡೆದುಕೊಂಡಿದೆ ಶಕ್ತಿಯುತ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 615 ಪ್ರೊಸೆಸರ್ ಇದರಲ್ಲಿದ್ದು, ಓಕ್ಟಾ ಕೋರ್ ಚಿಪ್ 64 ಬಿಟ್ ಬೆಂಬಲವನ್ನು ಇದು ಹೊಂದಿದೆ. ಇದು 4ಜಿ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಭಾರತದಲ್ಲಿ ಲಭ್ಯವಿರುವ ಕಡಿಮೆ ದರದ 4ಜಿ ಫೋನ್ ಆಗಿ ಯುರೇಕಾ ಗಮನಸೆಳೆದಿದೆ.

ಬರೇ 4 ಸೆಕುಂಡುಗಳಲ್ಲಿ ಮೈಕ್ರೋಮ್ಯಾಕ್ಸ್ ವೈಯು ಅದ್ಭುತ ಮಾರಾಟ

ಫೋನ್ ರಿಯರ್ ಕ್ಯಾಮೆರಾ ಆಗಿ 13 ಮೆಗಪಿಕ್ಸೆಲ್‌ಗಳನ್ನು ಹೊಂದಿದ್ದು ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಅನ್ನು ಪಡೆದುಕೊಂಡಿದೆ. ಇದು 2,500 mAh ಬ್ಯಾಟರಿಯನ್ನು ಹೊಂದಿದ್ದು ಡ್ಯುಯಲ್ ಸಿಮ್ ಇದರಲ್ಲಿದೆ. ಸಿನೋಜಿನ್ ಮೋಡ್ ರೋಮ್ ಡಿವೈಸ್‌ನಲ್ಲಿದ್ದು, ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಇದರಲ್ಲಿದೆ. ಪ್ರತೀ ಗುರುವಾರ ಅಮೆಜಾನ್‌ನಲ್ಲಿ ವೈಯು ಯುರೇಕಾ ಫ್ಲ್ಯಾಶ್‌ಸೇಲ್‌ನಲ್ಲಿ ರೂ 8,990 ಕ್ಕೆ ದೊರೆಯುತ್ತಿದೆ.

English summary
This article tells about 15,000 Yu Yureka phones sold out in 4 secs on Amazon India.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot