TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ನಿನ್ನೆ ಆಪಲ್ ಸಂಸ್ಥೆಗೆ ಒಂದು ಪ್ರಮುಖ ದಿನವಾಗಿತ್ತು.ಯಾಕೆಂದರೆ ಆಪಲ್ ಸಂಸ್ಥೆ ಮಾರುಕಟ್ಟೆಯ ಮ್ಯಾಜಿಕಲ್ 13 ಫಿಗರ್ ಮಾರ್ಕೆಟ್ ಕ್ಯಾಪ್ ಪಡೆದ ಮೊದಲ ಯುಎಸ್ ಕಂಪೆನಿ ಆಗೆದೆ. ಇದನ್ನು ಸರಳ ಪದಗಳಲ್ಲಿ ಹೇಳುವುದಾದರೆ, ಆಪಲ್ 1 ಟ್ರಿಲಿಯಲ್ ಮಾರುಕಟ್ಟೆ ವ್ಯಾಲ್ಯೂ ಹೊಂದಿರುವ ಮೊದಲ ಸಂಸ್ಥೆಯಾಗಿದೆ. ಯಾವುದೇ ತಂತ್ರಜ್ಞಾನ ಸಂಬಂಧಿತ ಆವಿಷ್ಕಾರಗಳಲ್ಲಿ ಕಳೆದ ಹಲವು ವರ್ಷಗಳಿಂದ ಆಪಲ್ ಸಂಸ್ಥೆ ಮುಂಚೂಣಿಯಲ್ಲಿ ಇರುತ್ತದೆ.
ಅದರಲ್ಲೂ ಎಲ್ಲರಿಗೂ ತಿಳಿದಿರುವಂತೆ ಆಪಲ್ ಸಂಸ್ಥೆಯಿಂದಲೇ ಹೊರಹೊಮ್ಮಿರುವುದು ಮತ್ತು ಐತಿಹಾಸಿಕ ದಾಖಲೆ ನಿರ್ಮಿಸಿರುವುದು ಮತ್ತು ಸಾಕಷ್ಟು ಯಶಸ್ಸು ಕಂಡಿರುವ ವಸ್ತುವೆಂದರೆ ಅದುವೇ ಐಫೋನ್ ಗಳು. ಆಪಲ್ ಐಫೋನ್ ಬಗ್ಗೆ ನಿಮಗೆ ತಿಳಿದಿರದ ಕೆಲವು ಅಂಶಗಳನ್ನು ನಾವಿಲ್ಲಿ ನಿಮಗೆ ಪರಿಚಯಿಸುತ್ತಿದ್ದೇವೆ.
ಆಪಲ್ ಸ್ಮಾರ್ಟ್‌ಫೋನ್‌ಗಳು ಮೊದಲು ಐಫೋನ್‌ಗಳಾಗಿರಲಿಲ್ಲ
ಸಿಸ್ಕೋ ಸಂಸ್ಥೆ ಮೊದಲು ಐಫೋನ್ ಹೆಸರಿನಲ್ಲಿ ಟ್ರೇಡ್ ಮಾರ್ಕ್ ನ್ನು ರಿಜಿಸ್ಟರ್ ಮಾಡಿತ್ತು. ಆಪಲ್ ಮತ್ತು ಸಿಸ್ಕೋ ಎರಡೂ ಕೂಡ ಐಫೋನ್ ಹೆಸರನ್ನು ಬಳಕೆ ಮಾಡುವ ನಿಟ್ಟಿನಲ್ಲಿ ತಮ್ಮ ವಿವಾದವನ್ನು ಪರಿಹರಿಸಿಕೊಂಡಿತು
ಮೊದಲ ಐಫೋನ್ ಖರೀದಿಸಿದಾಗ ಸ್ಟೀವ್ ಜಾಬ್ಸ್ ಒಂದು ತಮಾಷೆಯ ಕರೆ ಮಾಡಿದರು
ಮೊದಲ ಐಫೋನ್ ನ ತಮಾಷೆಯ ಕರೆಯನ್ನು ಮಾಡಿದ್ದು ಬೇರೆ ಯಾರೂ ಅಲ್ಲ. ಅದು ಸ್ವತಃ ಸ್ವೀವ್ ಜಾಬ್ಸ್.2007 ರಲ್ಲಿ, ಸ್ಟೀವ್ ಜಾಬ್ಸ್ 4000 ಲ್ಯಾಟೆಗಳನ್ನು ವಿತರಿಸಲು ಕರೆ ಮಾಡಿದರು.
ಯುಐ ಡಿಸೈನರ್ ಫ್ರೆಡ್ಡಿ ಆಂಜರ್ಸ್ ಒಮ್ಮೆ ವಿಮಾನದಲ್ಲಿ ನ್ಯೂಯಾರ್ಕ್ ನಿಂದ ಸ್ಯಾನ್ ಫ್ರ್ಯಾನ್ಸಿಸ್ಕೋ ಗೆ ಸಂಚರಿಸುತ್ತಿರುವಾಗ ಬಾತ್ ರೂಮ್ ಗೆ ತೆರಳಿದರಂತೆ. ಅಲ್ಲಿದ್ದ ಸ್ಪ್ಲೈಡ್ ಲಾಕ್ ನಿಂದ ಪ್ರೇರಿತಕೊಂಡು ಸ್ಲೈಡ್ ಟು ಅನ್ ಲಾಕ್ ಮೊಬೈಲ್ ನಲ್ಲಿ ಪರಿಚಯಿಸುವ ಐಡಿಯಾ ಹೊಳೆಯಿತಂತೆ.
ಮೊದಲ ಐಫೋನಿನ ಕೋಡ್ ನೇಮ್ ಪಿ1 ಮತ್ತು ಪಿ2
ವರದಿಯೊಂದರ ಪ್ರಕಾರ 2007 ರಲ್ಲಿ ಐಫೋನ್ ಬಿಡುಗಡೆಗೊಳ್ಳುವುದಕ್ಕೂ ಸುಮಾರು ಒಂದು ವರ್ಷದ ಮುನ್ನವೇ ಇದರ ಕಾರ್ಯಗಳು ಪ್ರಾರಂಭವಾಗಿದ್ದವು ಮತ್ತು ಈ ಪ್ರೊಜೆಕ್ಟ್ ಗೆ ಪಿ1 ಮತ್ತು ಪಿ2 ಎಂದು ಹೆಸರಿಡಲಾಗಿತ್ತು. ಆದರೆ ಆ ಫೋನ್ ಗಳು ಬಿಡುಗಡೆಗೊಳ್ಳಲೇ ಇಲ್ಲ.
ಐಫೋನ್‌ನಲ್ಲಿ ಪಿಯಾನೋ ಕೀಬೋರ್ಡ್ ಅಥವಾ ಗೀಚುಬರಹ ಕೀಬೋರ್ಡ್ ಕೂಡ ಇರಬಹುದಾಗಿತ್ತು
ಐಫೋನಿನ ಮುಖಾಂತರ ಐಫೋನ್ ಸಂಸ್ಥೆ ಟಚ್ ಸ್ಕ್ರೀನ್ ನ್ನು ಪ್ರಸಿದ್ಧಗೊಳಿಸಿತು ಅನ್ನುವುದೇನೋ ನಿಜ. ಆದರೆ ಐಫೋನ್ ನಲ್ಲಿ ಪಿಯಾನೋ ರೀತಿಯ ಕೀಬೋರ್ಡ್ ಅಥವಾ ಗ್ರಾಫಿಟೀ (ಗೀಚುಬರಹ) ಕೀಬೋರ್ಡ್ ಇರುವ ಸಾಧ್ಯತೆ ಇತ್ತು.
ನಾಸಾ ಎಸ್ಟಿಎಸ್-135 ಸ್ಪೇಸ್ ಷಟಲ್ನಲ್ಲಿ ಎರಡು ಐಫೋನ್
2011 ರಲ್ಲಿ ನಾಸ ಎರಡು ಐಫೋನ್ ಗಳನ್ನು ಅಂತರಿಕ್ಷಕ್ಕೂ ಕಳಿಸಿದ್ದು ಇದು, ಅಂತರಿಕ್ಷದ ಅಧ್ಯಯನದ ಒಂದು ಭಾಗವಾಗಿತ್ತು.
ವೈಟ್ ಹೌಸ್ನಲ್ಲಿ ಕ್ರಿಸ್ಮಸ್ ಅಲಂಕಾರವನ್ನು ಚಿತ್ರೀಕರಿಸಲು ಐಫೋನ್ 6 ಪ್ಲಸ್ ಬಳಸಲಾಗುತ್ತಿತ್ತು
ಪ್ರಸಿದ್ಧ ಫೋಟೋಗ್ರಾಫರ್ ಒಬ್ಬರು ಐಫೋನ್ 6 ನ್ನು ವೈಟ್ ಹೌಸ್ ನಲ್ಲಿ ಆಗುವ ಕ್ರಿಸ್ ಮಸ್ ಅಲಂಕಾರವನ್ನು ಚಿತ್ರೀಕರಿಸಲು ಬಳಸಿದ್ದರು. ಅದೇ ಮೊದಲ ಬಾರಿಗೆ ಆ ರೀತಿ ಕೆಲಸಕ್ಕೆ ಕ್ಯಾಮರಾ ಫೋನ್ ಬಳಕೆ ಮಾಡಿರುವುದಾಗಿದೆ.
24 ಗಂಟೆಗಳಲ್ಲಿ 1 ದಶಲಕ್ಷ 4S ಮಾದರಿ ಮಾರಾಟ
ಅಕ್ಟೋಬರ್ 2011 ರಲ್ಲಿ ಬಿಡುಗಡೆಯಾದ ಮೊದಲ 24 ಗಂಟೆಗಳಲ್ಲಿ 1 ದಶಲಕ್ಷ 4S ಮಾದರಿಗಳನ್ನು ಮಾರಾಟ ಮಾಡಲಾಯಿತು.
ಯಾವಾಗಲೂ ಐಫೋನ್ ಜಾಹೀರಾತುಗಳಲ್ಲಿ 9:41 am ಆಗಿರುತ್ತದೆ.
ಇದು ಯಾಕೆಂದರೆ ಸ್ಟೀವ್ ಜಾಬ್ಸ್ ತಮ್ಮ ಐಫೋನ್ ಪ್ರಸೆಂಟೇಷನ್ ನ್ನು ಆರಂಭಿಸಿದ್ದು ಬೆಳಿಗ್ಗೆ 9 ಘಂಟೆಗೆ ಮತ್ತು ಆ ಪ್ರಸೆಂಟೇಷನ್ ಮುಗಿಯುವ ಸಮಯ 9.41 am ಎಂದಾಗಿತ್ತು. ಅದೇ ಕಾರಣಕ್ಕೆ ಐಫೋನ್ ಗಳಲ್ಲಿ ಯಾವಾಗಲೂ ಸಮಯ 9.41 ಅಥವಾ 9.42 ಎಂದೇ ಇರುತ್ತದೆ.
ಒಂದು ಶತಕೋಟಿಗಿಂತಲೂ ಹೆಚ್ಚು ಐಫೋನ್ ಮಾರಾಟ
ಒಂದು ಶತಕೋಟಿಗಿಂತಲೂ ಹೆಚ್ಚು ಐಫೋನ್ಗಳನ್ನು ಮಾರಾಟ ಮಾಡಿರುವುದರಿಂದ, ಇದು ಎಲ್ಲ ಸಮಯದ ಅತ್ಯುತ್ತಮ ಮಾರಾಟದ ಉತ್ಪನ್ನ ಎಂದು ಹೇಳಲಾಗುತ್ತದೆ
ಐಫೋನ್ ಬಿಡುಗಡೆಯಾದ ನಂತರ ಸ್ಮಾರ್ಟ್ ಫೋನ್ ದೈತ್ಯ ತನ್ನ ಹೆಸರನ್ನು ಆಪಲ್ ಕಂಪ್ಯೂಟರ್ ನಿಂದ ಆಪಲ್ ಎಂದು ಬದಲಾಯಿಸಿಕೊಂಡಿತು.
ವಿಶ್ವ ಕಂಪ್ಯೂಟರ್ ನಿಂದ ತನ್ನ ಹೆಸರನ್ನು ಹಿಂತೆಗೆದುಕೊಂಡು ಅದನ್ನು ಆಪಲ್ ಇಂಕ್ ಎಂದು ಆಪಲ್ ಕಂಪೆನಿ ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದು ಆಪಲ್ ನ ಐತಿಹಾಸಿಕ ಕ್ಷಣ, ಇದಕ್ಕೆ ಪ್ರಮುಖ ಕಾರಣವೇ ಐಫೋನ್ ಆಗಿದೆ.
ಕಂಪನಿಯ ಆದಾಯದ 61 ಶೇಕಡಾ ಕೊಡುಗೆ ಐಫೋನ್ ನಿಂದ ಬರುತ್ತದೆ
ಐಫೋನ್ ಆಪಲ್ ಸಂಸ್ಥೆಯಯ ಬಹಳ ಮೌಲ್ಯಯುತವಾದ ವಸ್ತುವಾಗಿದೆ ಯಾಕೆಂದರೆ ಕಂಪೆನಿಯ ವಾರ್ಷಿಕ ಆದಾಯದ ಶೇಕಡಾ 61 ರಷ್ಟು ಲಾಭವು ಐಫೋನ್ ನಿಂದಲೇ ದೊರಕುತ್ತಿದೆ.
ಆಪಲ್ ನ ಕೋ ಫೌಂಡರ್ ಆಗಿರುವ ಸ್ಟೀವ್ ಜಾಬ್ಸ್ ಐಫೋನ್ 4ಎಸ್ ಬಿಡುಗಡೆಗೊಂಡ ಮಾರನೇ ದಿನ ತೀರಿಕೊಂಡರು
ಐಫೋನ್ 4ಎಸ್ ಸ್ಟೀವ್ ಜಾಬ್ಸ್ ನಾಯಕತ್ವದಲ್ಲಿ ಆಪಲ್ ನಿಂದ ಹೊರಬಂದ ಕೊನೆಯ ಫೋನ್ ಆಗಿದೆ. ಆದಾದ ನಂತರ ಟೈಮ್ ಕುಕ್ ಉಸ್ತುವಾರಿಯಲ್ಲಿ ಕಂಪೆನಿ ನಡೆಯುತ್ತಿದೆ.
ತನ್ನ ಮುಂಬರುವ ಐಫೋನ್ ಬಗ್ಗೆ ಆಪಲ್ ಎಂದಿಗೂ ಟೀಸರ್ ಬಿಡುಗಡೆಗೊಳಿಸಿಲ್ಲ.
ಪ್ರತಿ ವರ್ಷದ ಬಹಳ ಕಾತುರದಿಂದ ಕಾಯುವ ವಸ್ತುವೆಂದರೆ ಐಫೋನ್. ಇತರೆ ಯಾವುದೇ ಕಂಪೆನಿಗಳಂತೆ ಐಫೋನ್ ಸಂಸ್ಥೆ ಅಧಿಕೃತ ಪ್ರಕಟಣೆ ಹೊರಡಿಸುವವರೆಗೆ ಯಾವುದೇ ಟೀಸರ್ ಬಿಡುಗಡೆಗೊಳಿಸಿ, ಫೋನ್ ಬಗ್ಗೆ ಕುರುಹುಗಳನ್ನು ನೀಡುವುದಿಲ್ಲ.
ಮೈಕ್ರೋಸಾಫ್ಟ್ ಸಿಇಓರ ಪ್ರಸಿದ್ಧ ಪದಗಳು ಐಫೋನ್ ನಲ್ಲಿದೆ
ಯಾವುದೇ ಮಾರುಕಟ್ಟೆ ಪಾಲನ್ನು ಪಡೆಯಲು ಐಫೋನ್ ಗೆ ಸಾಧ್ಯವಿಲ್ಲ. ಇದು 500 ಡಾಲರ್ ಸಬ್ಸಿಡಿ ಮಾಡಿದ ವಸ್ತುವಾಗಿದೆ. ಹೌದು ಇದು ಐಫೋನ್ ಬಿಡುಗಡೆಗೊಳ್ಳುವ ಸಂದರ್ಬದಲ್ಲಿ ಆಗಿನ ಮೈಕ್ರೋಸಾಫ್ಟ್ ಸಂಸ್ಥೆಯ ಸಿಇಓ ಆಗಿದ್ದ ಸ್ಟೀವ್ ಬಾಲ್ಮರ್ ಹೇಳಿದ ಮಾತುಗಳು.