Home
ಸುದ್ದಿಜಾಲ

ಕ್ಯಾಶ್‌ಲೆಸ್‌ ಇಂಡಿಯಾದಲ್ಲಿ ಕೇರ್‌ಲೆಸ್ ಇಂಡಿಯನ್ಸ್‌ ಆಗ್ಬಾರದು ಎಂದರೆ ಇದನ್ನು ಓದಿ..!

By Avinash

ಕೆಲವು ವರ್ಷಗಳಿಂದ ನಮ್ಮ ಆರ್ಥಿಕ ಜೀವನ ಕ್ಯಾಶ್‌ಲೆಸ್ ಆಗಿ ಆನ್‌ಲೈನ್‌ಗೆ ಸ್ಥಳಾಂತರಗೊಂಡಿದೆ. ಡಿಜಿಟಲ್ ಇಂಡಿಯಾ ಪರಿಕಲ್ಪನೆಯಲ್ಲಿ ಎಲ್ಲವನ್ನೂ ಡಿಜಿಟಲ್ ಮಾಡುತ್ತಾ ನಮ್ಮ ವೈಯಕ್ತಿಕ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಎಲ್ಲರಿಗೂ ಕಾಣುವಂತೆ ಮಾಡುತ್ತಿದ್ದೇವೆ. ಬ್ಯಾಂಕ್‌ಗಳಿಂದಿಡಿದು ಮ್ಯೂಚುಯಲ್ ಫಂಡ್, ಇನ್ಶುರೆನ್ಸ್‌ ಪಾಲಿಸಿ, ಶಾಪಿಂಗ್ ಮತ್ತು ಇನ್ನಿತರ ವಿಷಯಗಳು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಸ್ವೈಪ್‌ಗೆ ಬದಲಾಗಿವೆ.

ಹಿಂದೆಲ್ಲಾ ಜೇಬು ತುಂಬಾ ಹಣ ಇಟ್ಟುಕೊಂಡು ಕದಿಯುತ್ತಾರೆ ಎಂಬ ಭಯದೊಂದಿಗೆ ಜನ ಇರುತ್ತಿದ್ದರು. ಆದರೆ, ಈಗ ಜೇಬಲ್ಲಿ ದುಡ್ಡಿಲ್ಲ ಎಂದರೂ ಸಹ ಕದೀಮರು ಕದಿಯುತ್ತಾರೆ ಎಂಬ ಭಯ ಶುರುವಾಗಿದೆ. ಹೌದು, ನೀವೆಲ್ಲಾ ದಿನವೂ ಸುದ್ದಿಯನ್ನು ಕೇಳ್ತಾನೆ ಇರ್ತಿರಿ. ನಮ್ಮ ಆನ್‌ಲೈನ್ ಮಾಹಿತಿ, ಬ್ಯಾಂಕಿಂಗ್ ಡೇಟಾ ಯಾವುದು ಸುರಕ್ಷಿತವಲ್ಲ. ಯಾರೋ ಒಬ್ಬರು ನಮ್ಮ ವ್ಯವಹಾರಗಳ ಮೇಲೆ ಕಣ್ಣಿಟ್ಟಿರುವುದಂತು ಖಂಡಿತ.

ಕ್ಯಾಶ್‌ಲೆಸ್‌ ಇಂಡಿಯಾದ ಕೇರ್‌ಲೆಸ್ ಇಂಡಿಯನ್ಸ್‌ ಆಗ್ಬಾರದು ಎಂದರೆ ಇದನ್ನು ಓದಿ..!

ಅದರಂತೆ, ಡೆಬಿಟ್‌ ಮತ್ತು ಕ್ರೆಡಿಟ್ ಸಂಬಂಧಿತ ವಂಚನೆ ಪ್ರಕರಣಗಳು ಭಾರತ ಸೇರಿ ಇಡೀ ವಿಶ್ವದಾದ್ಯಂತ ವರದಿಯಾಗುತ್ತಿವೆ. ಸೈಬರ್‌ ಸೆಲ್ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಸೈಬರ್ ಕ್ರೈಮ್ ಸಂಬಂಧಿತ ದೂರುಗಳು 2013ರಿಂದ 350% ಹೆಚ್ಚಳ ಮತ್ತು 2016ರಿಂದ 44% ಕ್ಕಿಂತ ಹೆಚ್ಚಾಗಿದ್ದು, ಇನ್ನು ಹೆಚ್ಚಾಗುವ ಸಾಧ್ಯತೆಯಿದೆ.

ಅದಕ್ಕಾಗಿಯೇ ನಿಮ್ಮ ಎಟಿಎಂ ಡೆಬಿಟ್ ಕಾರ್ಡ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಬಳಸಿಕೊಂಡು ನಿಮ್ಮ ಜೇಬನ್ನು ಯಾವ ರೀತಿ ಖಾಲಿ ಮಾಡುತ್ತಾರೆ ಎಂಬುದನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಯಾವೆಲ್ಲಾ ತಂತ್ರಗಳನ್ನು ಹ್ಯಾಕರ್‌ಗಳು ಅನುಸರಿಸುತ್ತಾರೆ ಎಂಬುದನ್ನು ಕೇಳಿ ಬೆಚ್ಚಿಬೀಳ್ತಿರಾ..!

ಸ್ಕಿಮ್ಮಿಂಗ್

ಸ್ಕಿಮ್ಮಿಂಗ್

ಎಟಿಎಂ ಸ್ಕಿಮ್ಮಿಂಗ್ ಸಾಮಾನ್ಯ ವಿಧಾನವಾಗಿದೆ. ಎಟಿಎಂ ಯಂತ್ರದಲ್ಲಿ ಕೌಂಟರ್‌ಫೀಟ್‌ ರೀಡರ್ ಅಳವಡಿಸಲಾಗಿರುತ್ತದೆ. ಆ ರೀಡರ್ ನಿಮ್ಮ ಎಟಿಎಂ ಕಾರ್ಡ್ ಮೇಲೆ ಇರುವ ಮ್ಯಾಗ್ನೆಟಿಕ್‌ ಸ್ಟ್ರೀಪ್‌ನ ಮಾಹಿತಿ ಓದುತ್ತದೆ ಮತ್ತು ಸಂಗ್ರಹಿಸುತ್ತದೆ. ನಂತರ ಇದೇ ಮಾಹಿತಿಯನ್ನು ಹಣ ಕದಿಯಲು ಹ್ಯಾಕರ್ಸ್ ಬಳಸುತ್ತಾರೆ. ಆದ್ದರಿಂದ ಎಚ್ಚರಿಕೆ ಇರಲಿ.

ನಕಲಿ ಕೀಬೋರ್ಡ್‌ಗಳು

ನಕಲಿ ಕೀಬೋರ್ಡ್‌ಗಳು

ನಕಲಿ ಕೀಪ್ಯಾಡ್‌ಗಳನ್ನು ಎಟಿಎಂನಲ್ಲಿ ಅಳವಡಿಸುವುದರಿಂದ ನೀವು ಎಂಟರ್ ಮಾಡಿದ ಎಟಿಎಂ ಪಿನ್‌ನ್ನು ರೇಕಾರ್ಡ್‌ ಮಾಡುತ್ತದೆ. ನೈಜ ಕೀಬೋರ್ಡ್‌ ಮೇಲಿರುವ ನಕಲಿ ಕೀಪ್ಯಾಡ್‌ ಬಳಸುವುದರಿಂದ ಸಾಮಾನ್ಯವಾಗಿ ಬಳಕೆದಾರರಿಗೆ ಇದರ ಬಗ್ಗೆ ಅರಿವಿರುವುದಿಲ್ಲ. ಇದರ ಮೂಲಕ ಜನರ ಪಿನ್‌ಗಳನ್ನು ಸೆರೆಹಿಡಿದು ಹಣ ಕದಿಯುತ್ತಾರೆ.

ಹಿಡನ್ ಕ್ಯಾಮೆರಾಗಳು

ಹಿಡನ್ ಕ್ಯಾಮೆರಾಗಳು

ಎಟಿಎಂ ಯಂತ್ರಗಳ ಬಳಿ ಹಿಡನ್ ಕ್ಯಾಮೆರಾಗಳನ್ನು ಇಟ್ಟು ನಿಮ್ಮ ಹಣ ಕದಿಯಲುಬಹುದು. ಈ ರೀತಿಯ ಕ್ಯಾಮೆರಾಗಳನ್ನು ನೀವು ಎಂಟರ್ ಮಾಡುವ ಎಟಿಎಂ ಪಿನ್ ಸಂಖ್ಯೆಯನ್ನು ರೆಕಾರ್ಡ್‌ ಮಾಡುವಂತೆ ಅಳವಡಿಸಲಾಗಿರುತ್ತದೆ. ಅವುಗಳು ಸೂಕ್ಷ್ಮವಾಗಿದ್ದು, ಸಾಮಾನ್ಯವಾಗಿ ಕೀಪ್ಯಾಡ್ ಹತ್ತಿರ ಅಳವಡಿಸಲಾಗಿರುತ್ತದೆ. ಸ್ವಲ್ಪ ಎಚ್ಚರವಹಿಸಿ.

ಕಾರ್ಡ್‌ ಟ್ರಾಪಿಂಗ್

ಕಾರ್ಡ್‌ ಟ್ರಾಪಿಂಗ್

ಎಟಿಎಂ ಯಂತ್ರದಲ್ಲಿ ಕಾರ್ಡ್‌ ಟ್ರಾಪಿಂಗ್ ಕೂಡ ಮಾಡಲಾಗುತ್ತದೆ. ಯಂತ್ರದೊಳಗೆ ನಿಮ್ಮ ಕಾರ್ಡ್‌ ಹಾಕಿದಾಗ ಅದನ್ನು ತನ್ನಲ್ಲೇ ಉಳಿಸಿಕೊಂಡು ಸ್ವಲ್ಪ ಸಮಯದ ನಂತರ ವಾಪಸ್ ಕೊಡುತ್ತದೆ. ಇಂತಹ ಸಂದರ್ಭದಲ್ಲಿ ಕಾರ್ಡ್‌ ಟ್ರಾಪಿಂಗ್ ಆಗಿ ನಿಮ್ಮ ಕಾರ್ಡ್‌ ಡೇಟಾ ವರ್ಗಾವಣೆಯಾಗಿರುವ ಸಾಧ್ಯತೆ ಹೆಚ್ಚಿರುತ್ತದೆ.

ಫಾರ್ಮಿಂಗ್

ಫಾರ್ಮಿಂಗ್

ಈ ವಿಧಾನದಲ್ಲಿ ಹ್ಯಾಕರ್ಸ್‌ಗಳು ನೈಜ್ ವೆಬ್‌ಸೈಟ್ ಹೋಲುವಂತೆ ನಕಲಿ ವೆಬ್‌ಸೈಟ್ ರೂಪಿಸಿ ನಿಮ್ಮನ್ನು ಬಲೆಗೆ ಕೆಡವುತ್ತಾರೆ. ನೀವು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳ ಮೂಲಕ ವ್ಯವಹರಿಸುವಾಗ ಮತ್ತು ಪಾವತಿಸಿದಾಗ, ಕಾರ್ಡ್ ವಿವರಗಳನ್ನು ಸಂಗ್ರಹಿಸಿ, ನಂತರ ನಿಮ್ಮ ಖಾತೆಯಿಂದ ಹಣ ಕದಿಯಲು ಬಳಸಲಾಗುತ್ತದೆ. ಆದ್ದರಿಂದ ನಕಲಿ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರವಿರಲಿ ಆನ್‌ಲೈನ್ ವ್ಯವಹಾರಕ್ಕೂ ಮುಂಚೆ ವೆಬ್‌ಸೈಟ್‌ ನೈಜತೆಯನ್ನು ಖಾತ್ರಿ ಪಡಿಸಿಕೊಳ್ಳಿ.

ಕೀಸ್ಟ್ರೋಕ್ ಲಾಗಿಂಗ್

ಕೀಸ್ಟ್ರೋಕ್ ಲಾಗಿಂಗ್

ಹ್ಯಾಕರ್‌ಗಳು ನಿಮ್ಮನ್ನು ಬಲೆಗೆ ಕೆಡವಲು ಬಳಸುವ ಮತ್ತೊಂದು ವಿಧಾನ ಕೀಸ್ಟ್ರೋಕ್ ಲಾಗಿಂಗ್ ಆಗಿದೆ. ನೆಟ್‌ ಬ್ಯಾಂಕಿಂಗ್ ಮಾಹಿತಿ ಕದಿಯಲು ಈ ವಿಧಾನವನ್ನು ಬಳಸಲಾಗುತ್ತದೆ. ಇಲ್ಲಿ, ಬಳಕೆದಾರರನು ಯಾವುದೇ ಉದ್ದೇಶವಿಲ್ಲದೆ ಸಾಫ್ಟ್‌ವೇರ್‌ ಡೌನ್‌ಲೋಡ್ ಮಾಡಿಕೊಳ್ಳುವಂತೆ ಹ್ಯಾಕರ್‌ಗಳು ಪ್ರೇರೆಪಿಸುತ್ತಾರೆ. ಇದರಿಂದ ಹ್ಯಾಕರ್ರ್‌ಗಳು ನಿಮ್ಮ ಪಾಸ್‌ವರ್ಡ್‌ಗಳು, ಕ್ರೆಡಿಟ್ ಕಾರ್ಡ್ ಮತ್ತು ನೆಟ್ ಬ್ಯಾಂಕಿಂಗ್ ವಿವರಗಳನ್ನು ಕದಿಯಲು ಸುಲಭವಾಗುತ್ತದೆ.

ನಕಲಿ ಎಟಿಎಂ ಮುಂಭಾಗ

ನಕಲಿ ಎಟಿಎಂ ಮುಂಭಾಗ

ಖದೀಮರು ನಿಮ್ಮ ಹಣ ಕದಿಯಲು ಯಾವ ರೀತಿ ಪ್ಲಾನ್ ಮಾಡಿರುತ್ತಾರೆ ಎಂದರೆ ಎಟಿಎಂ ತರಹದ್ದೆ ಯಂತ್ರದ ಮುಂಭಾಗವನ್ನು ಸ್ಥಾಪಿಸಿ ನಿಮ್ಮ ಮಾಹಿತಿಯನ್ನು ಕದಿಯುತ್ತಾರೆ. ಇವುಗಳನ್ನು ಸಾಮಾನ್ಯರು ಗುರುತಿಸುವುದು ಬಹಳಷ್ಟು ಕಷ್ಟ. ಸಾಮಾನ್ಯ ಎಟಿಎಂ ಮುಂಭಾಗಕ್ಕಿಂತ ಈ ಯಂತ್ರ ಸ್ವಲ್ಪ ದೊಡ್ಡದಾಗಿರುತ್ತದೆ.

ಸಾರ್ವಜನಿಕ Wi-Fi

ಸಾರ್ವಜನಿಕ Wi-Fi

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅಥವಾ ಲ್ಯಾಪ್‌ಟಾಪ್‌ನಲ್ಲಿ ಆನ್‌ಲೈನ್ ವಹಿವಾಟು ನಡೆಸಲು ನೀವು ಬಯಸಿದರೆ ಯಾವತ್ತೂ ಸಾರ್ವಜನಿಕ Wi-Fi ಬಳಸಬೇಡಿ. ಏಕೆಂದರೆ ಅನೇಕ ಕಡೆ ಹ್ಯಾಕರ್‌ಗಳು ನಿಮ್ಮ ಮಾಹಿತಿ ಕದಿಯಲು ತಾವೇ ವೈ-ಫೈ ಸ್ಥಾಪಿಸಿರಲುಬಹುದು. ಆಗ ನಿಮ್ಮ ಮಾಹಿತಿ ಅತಿ ಸುಲಭವಾಗಿ ಹ್ಯಾಕರ್ಸ್‌ ಕೈ ಸೇರುತ್ತದೆ ಎಂಬುದನ್ನು ಮರೆಯಬೇಡಿ. ಸಾರ್ವಜನಿಕ ವೈ-ಫೈನಿಂದ ಮಾಹಿತಿಯನ್ನು ಬಹಳ ಸುಲಭವಾಗಿ ಕದಿಯಬಹುದು.

ಮಾಲ್‌ವೇರ್

ಮಾಲ್‌ವೇರ್

ಇದು ಎಟಿಎಂ ಅಥವಾ ಬ್ಯಾಂಕ್ ಸರ್ವರ್‌ಗಳಲ್ಲಿನ ಕಂಪ್ಯೂಟರ್ ಸಿಸ್ಟಮ್‌ಳಿಗೆ ಹಾನಿ ಮಾಡುವ ಒಂದು ತಂತ್ರಾಂಶ ಆಗಿದ್ದು, ನಿಮ್ಮ ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್ ನಲ್ಲೂ ಕೂಡ ಈ ಮಾಲ್‌ವೇರ್ ದಾಳಿಯಿಟ್ಟು ನಿಮ್ಮ ಮಾಹಿತಿಯನ್ನು ಖದಿಯುತ್ತದೆ. ಇದರಿಂದ ಹ್ಯಾಕರ್‌ಗಳು ನಿಮ್ಮ ಬ್ಯಾಂಕಿಂಗ್ ಡೇಟಾವನ್ನು ಕದಿಯುತ್ತಾರೆ.

ಫೀಶಿಂಗ್

ಫೀಶಿಂಗ್

ಇಲ್ಲಿ ನಿಮ್ಮ ಇನ್‌ಬಾಕ್ಸ್‌ನಲ್ಲಿ ಬಂದ ಮೇಲ್‌ನಿಂದ ನೀವು ಹಣ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಆದಾಯ ತೆರಿಗೆ ಇಲಾಖೆ ಅಥವಾ ನಿಮ್ಮ ಬ್ಯಾಂಕ್ ಎಂದು ಹೇಳಿ ಲಿಂಕ್ ನೀಡಿರುತ್ತಾರೆ. ಆ ಲಿಂಕ್ ಕ್ಲಿಕ್ ಮಾಡಿದರೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕಲೆಹಾಕುವ ವೆಬ್‌ಸೈಟ್‌ಗೆ ನಿಮ್ಮನ್ನು ಕರೆದೊಯ್ಯುತ್ತೆ. ಆದ್ದರಿಂದ ಅಂತಹ ಮೇಲ್‌ಗಳಿಗೆ ಪ್ರತಿಕ್ರಿಯಿಸಬೇಡಿ.

ವಿಶಿಂಗ್

ವಿಶಿಂಗ್

ಫಿಶಿಂಗ್‌ನ್ನು ಸ್ಪ್ಯಾಮ್ ಮೇಲ್‌ಗಳಿಂದ ಗುರುತಿಸಬಹದು. ಆದರೆ, ವಿಶಿಂಗ್ ಎನ್ನುವ ಕೃತ್ಯ ನಡೆಯುವುದು ಮೊಬೈಲ್ ಮೂಲಕ. SMS ಅಥವಾ ಫೋನ್ ಕರೆ ಬಳಸಿಕೊಂಡು ಖದೀಮರು ನಿಮ್ಮ ಪಾಸ್‌ವರ್ಡ್, ಪಿನ್ ಅಥವಾ ಬ್ಯಾಂಕ್ ಖಾತೆ ಸಂಖ್ಯೆಯನ್ನು ತೆಗೆದುಕೊಂಡು ಹಣ ಗುಳುಂ ಮಾಡುತ್ತಾರೆ.

SIM ಸ್ವಾಪ್ ಹಗರಣ

SIM ಸ್ವಾಪ್ ಹಗರಣ

ಇದು ದೊಡ್ಡ ವಂಚನೆಯಾಗಿದ್ದು, ಇಲ್ಲಿ ಖದೀಮ ನಿಮ್ಮ ಮೊಬೈಲ್ ಆಪರೇಟರ್‌ನ್ನು ನಕಲಿ ಗುರುತಿನ ಚೀಟಿಗಳಿಂದ ಸಂಪರ್ಕಿಸಿ ಮತ್ತು ನಕಲಿ SIM ಕಾರ್ಡ್ ಪಡೆಯುತ್ತಾನೆ. ಆಗ ಟೆಲಿಕಾಂ ಆಪರೇಟರ್ ನಿಮ್ಮ ಮೂಲ ಸಿಮ್‌ನ್ನು ನಿಷ್ಕ್ರಿಯಗೊಳಿಸುತ್ತದೆ. ಇದರಿಂದ ಕಳ್ಳನು ಆನ್‌ಲೈನ್ ​​ವಹಿವಾಟು ನಡೆಸಲು ಫೋನ್‌ನಲ್ಲಿ ಬರುವ ಒಂದು ಬಾರಿ ಪಾಸ್‌ವರ್ಡ್(OTP)ಉತ್ಪಾದಿಸಿ ಯಾರದೋ ದುಡ್ಡು, ಯಲ್ಲಮ್ಮನ ಜಾತ್ರೆ ಎಂಬಂತೆ ಮಜಾ ಮಾಡುತ್ತಾನೆ.

ನಕಲಿ ಆಪ್‌ಗಳು

ನಕಲಿ ಆಪ್‌ಗಳು

ನೀವು ನಿಮ್ಮ ಸ್ಮಾರ್ಟ್‌ಫೋನ್‌ಗೆ ಸರಿಯಾದ ಮೂಲದಿಂದ ಆಪ್‌ ಡೌನ್‌ಲೋಡ್ ಮಾಡಿಲ್ಲ ಎಂದರೆ ಆ ಆಪ್‌ಗಳು ತುಂಬಾ ಅಪಾಯಕಾರಿ. ಗೂಗಲ್ ಪ್ಲೇಸ್ಟೋರ್ ಅಥವಾ ಆಪಲ್ ಸ್ಟೋರ್‌ನಿಂದ ಆಪ್‌ಗಳನ್ನು ಡೌನ್‌ಲೋಡ್‌ ಮಾಡಿ. ನಿಮ್ಮ ಗೌಪ್ಯ ಹಣಕಾಸಿನ ಮಾಹಿತಿಯನ್ನು ನಕಲಿ ಆಪ್‌ಗಳು ಕದಿಯುತ್ತವೆ. ಮತ್ತು ಈ ಮಾಹಿತಿಯನ್ನು ಅನಧಿಕೃತ ವಹಿವಾಟುಗಳಿಗೆ ಬಳಸಿಕೊಳ್ಳುತ್ತವೆ.

ಕಳೆದ ಅಥವಾ ಕದ್ದ ಕಾರ್ಡ್‌ಗಳಿಂದ ಮಾಹಿತಿ ಲೀಕ್

ಕಳೆದ ಅಥವಾ ಕದ್ದ ಕಾರ್ಡ್‌ಗಳಿಂದ ಮಾಹಿತಿ ಲೀಕ್

ಕಳೆದ ಕಾರ್ಡ್‌ ಬಳಸಿಕೊಂಡು ವಹಿವಾಟು ನಡೆಸಲಾಗುತ್ತದೆ. ಇಲ್ಲಿ ನಿಮ್ಮ ಸೇವಾದಾತ ಬ್ಯಾಂಕ್ ನೀಡುವ ಮೇಲ್‌ ನಿಮಗೆ ತಲುಪುವುದಕ್ಕಿಂತ ಮುಂಚೆಯೇ ಹ್ಯಾಕ್‌ ಮಾಡಿ ಖದೀಮರು ನೋಡಿ ನಿಮ್ಮ ಪಿನ್‌ ಮತ್ತು ಪಾಸ್‌ವರ್ಡ್‌ಗಳಂತಹ ಮಾಹಿತಿಯನ್ನು ಕದಿಯುತ್ತಾರೆ.

ಡಾಕ್ಯುಮೆಂಟ್‌ಗಳಿಂದ ಹೊಸ ಕಾರ್ಡ್‌

ಡಾಕ್ಯುಮೆಂಟ್‌ಗಳಿಂದ ಹೊಸ ಕಾರ್ಡ್‌

ನಿಮ್ಮ ಮಾಹಿತಿಯನ್ನು ಕದಿಯುವ ಕದೀಮರು ಹೊಸ ಕಾರ್ಡ್ ತಯಾರಿಸಿ ನಿಮ್ಮ ಹಣವನ್ನು ಕದಿಯುತ್ತಾರೆ. ಇಲ್ಲಿ ಖದೀಮರು ಬ್ಯಾಂಕ್‌ಗಳಿಗೆ ಕ್ರೆಡಿಟ್ ಕಾರ್ಡ್‌ಗೆ ಬಳಕೆದಾರರು ನೀಡಿದ ತಿರಸ್ಕರಿಸಿದ ಅಥವಾ ಕಳೆದ ಅರ್ಜಿಗಳಿಂದ ಮಾಹಿತಿ ಕದ್ದು ಅದನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಇಷ್ಟೆಲ್ಲಾ ರೀತಿಯಲ್ಲಿ ನಿಮ್ಮ ಮಾಹಿತಿ ಕದ್ದು, ನಿಮ್ಮ ಹಣವನ್ನು ಕದಿಯುತ್ತಾರೆ. ಅದಕ್ಕಾಗಿಯೇ ಕ್ಯಾಶ್‌ಲೆಸ್ ಇಂಡಿಯಾದಲ್ಲಿ ಕೇರ್‌ಲೆಸ್‌ ಇಂಡಿಯನ್ಸ್ ಆಗುವುದನ್ನು ಈ ಎಲ್ಲಾ ವಂಚನೆಗಳಿಂದ ತಪ್ಪಿಸಿಕೊಳ್ಳಿ.

Best Mobiles in India

English summary
15 ways criminals steal money from your Debit/Credit cards. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+