15 ಕ್ಕೇ ಇಂಟರ್ನೆಟ್ ನಲ್ಲಿ ಸಾಧನೆ ಮಾಡಿದ ಕನ್ನಡಿಗ

By Varun
|
15 ಕ್ಕೇ ಇಂಟರ್ನೆಟ್ ನಲ್ಲಿ ಸಾಧನೆ ಮಾಡಿದ ಕನ್ನಡಿಗ

ಈಗಿನ ಹುಡುಗರಂತೂ ತುಂಬಾ ಫಾಸ್ಟ್ ಕಣ್ರೀ. ಹುಟ್ಟಿದೊಡನೆಯೇ ಮೌಸ್ ಹಿಡಿದುಕೊಂಡು ಹುಟ್ಟುತ್ತವೆ. ಮೈದಾನದಲ್ಲಿ ಆಡುವ ಆಟಗಳನ್ನೆಲ್ಲಾ ಕಂಪ್ಯೂಟರಿನಲ್ಲೇ ಆಡುತ್ತವೆ. ಶಾಲೆಯಲ್ಲಿ ಹೇಳಿಕೊಡುವುದನ್ನೆಲ್ಲಾ ಸಿಡಿ ಗಳ ಮೂಲಕವೇ ಕಲಿಯುತ್ತಾರೆ.

ಹಾಗಾಗಿ ಕಂಪ್ಯೂಟರ್ ಅನ್ನು ಉಪಯೋಗಿಸುವುದರಲ್ಲಿ ಅವರು ನಮಗಿಂತಾ ಫಾಸ್ಟ್ ಹಾಗು ಇಂಟರ್ನೆಟ್ ಕ್ಷೇತ್ರದಲ್ಲಿ ನಡೆಯುವ ಹೊಸ ಹೊಸ ಅಪ್ಡೇಟ್ ಗಳನ್ನು ತಿಳಿದುಕೊಳ್ಳುವವರೂ ಅವರೆ.

ಸಾಧನೆಯ ವಿಷಯಕ್ಕೆ ಬಂದರೆ ಐಟಿ ಕ್ಷೇತ್ರದಲ್ಲಿ ಈಗೀಗ ಬಹಳಷ್ಟು ಮಂದಿ ಯುವಕರೇ ಇದ್ದಾರೆ. ಅದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ವಿಶ್ವ ವಿಖ್ಯಾತ ಸಾಮಾಜಿಕ ಜಾಲ ತಾಣವಾದ ಫೇಸ್ ಬುಕ್ ನ ಸ್ಥಾಪಕ ಮಾರ್ಕ್ ಜುಕರ್ ಬರ್ಗ್. ಆತ ಫೇಸ್ ಬುಕ್ ಅನ್ನು ಶುರು ಮಾಡಿದಾಗ ಅವನಿಗೆ ಕೇವಲ 20 ವರ್ಷ!

ಈಗ ಆ ದಾಖಲೆಯನ್ನು ಕನ್ನಡದ ಹುಡುಗನೊಬ್ಬ ಮುರಿದಿದ್ದಾನೆ ಎಂದರೆ ನಂಬುತ್ತೀರಾ ? ಹೌದು. ಮಂಗಳೂರಿನ ಸೇಂಟ್ ಅಲೋಷಿಯಸ್ ನಲ್ಲಿ ಓದುತ್ತಿರುವ 10 ನೆ ಕ್ಲಾಸ್ ವಿದ್ಯಾರ್ಥಿ ಪೃಥ್ವಿರಾಜ್ ಎಂಬಾತನೇ ಆ ಹುಡುಗ. ಕೇವಲ 15 ವರ್ಷದವನಾದ ಪೃಥ್ವಿರಾಜ್ ಯೂಫ್ಲಿಕ್.ಕಾಂ ಎಂಬ ಸಾಮಾಜಿಕ ಜಾಲ ತಾಣವನ್ನು ಸೃಷ್ಟಿಸಿದ್ದು, ಬಿಡುಗಡೆಯಾದ 24 ಗಂಟೆಗಳಲ್ಲಿ 300 ಕ್ಕೂ ಹೆಚ್ಚು ಜನ ಖಾತೆ ತೆರೆದಿದ್ದಾರಂತೆ.

ಪ್ರಾರಂಭದಲ್ಲಿ ಸಂಗೀತಕ್ಕೆ ಸಂಬಂಧಿಸಿದ ವೆಬ್ಸೈಟ್ ಒಂದನ್ನು ಮಾಡಬೇಕೆಂಬ ಆಲೋಚನೆ ಇಟ್ಟುಕೊಂಡು ಶುರು ಮಾಡಿದ್ದ ಈತ ಕೊನೆಗೆ ಸಾಮಾಜಿಕ ಜಾಲ ತಾಣವನ್ನು ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದಾನೆ. ಚಾಟಿಂಗ್, ಬ್ಲಾಗಿಂಗ್ ಹಾಗು ಪ್ರಚಲಿತ ವಿದ್ಯಮಾನಗಳ ಬಗ್ಗೆ ಚರ್ಚಿಸಲು ವೇದಿಕೆಯೂ ಈ ಸಾಮಾಜಿಕ ಜಾಲತಾಣದಲ್ಲಿದ್ದು ಬೇರೆ ಸಾಮಾಜಿಕ ತಾಣಗಳ ಫೀಚರುಗಳೂ ಇವೆ.

ಕಡಿಮೆ ವಯಸ್ಸಿಗೆ ಈ ಸಾಧನೆ ಮಾಡಿದ ಪೃಥ್ವಿ ರಾಜ್ ಅಮಿನ್ ನಿಜಕ್ಕೂಕನ್ನಡಿಗರಿಗೆ ಹೆಮ್ಮೆತಂದಿದ್ದಾನೆ. ಇದೇ ರೀತಿಯ ಸಾಧನೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಮಾಡಲಿ ಎಂದು ಅವನಿಗೆ ಶುಭ ಹಾರೈಸೋಣ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X