ಯುವಕರ ಹಲ್ಲೆಗೆ ಒಳಗಾದ ಯುವತಿ ವಾಟ್ಸಾಪ್‌ನಲ್ಲಿ ಪ್ರಸಾರ

By Shwetha
|

ವಿಶ್ವವೇ ಮಹಿಳಾ ದಿನವನ್ನು ಆಚರಿಸಿದ ಬೆನ್ನಲ್ಲೇ 16 ವರ್ಷದ ಯುವತಿಯನ್ನು ಯುವಕರ ಗುಂಪೊಂದು ಥಳಿಸಿರುವ ಘಟನೆ ವಾಟ್ಸಾಪ್‌ನಲ್ಲಿ ಹರಿದಾಡಿ ಭಾರೀ ಗದ್ದಲವನ್ನು ಉಂಟುಮಾಡುತ್ತಿದೆ. ಆಲಿಘಡದಲ್ಲಿ ನಡೆದಿರುವ ಘಟನೆ ಕೇವಲ ಕ್ಷುಲ್ಲಕ ಕಾರಣಕ್ಕಾಗಿ ನಡೆದಿದ್ದು ಥಳಿಸಿದ ಯುವಕರ ಗುಂಪು ಇದೀಗ ಜೈಲು ಪಾಲಾಗಿದ್ದಾರೆ.

ಹುಡುಗಿಯು ಬೇರೆ ಗ್ರಾಮದ ಹುಡುಗನ ಬೈಕ್‌ನಲ್ಲಿ ಬಂದಿದ್ದು ಇದನ್ನು ಗಮನಿಸಿದ ಹುಡುಗಿಯು ಗ್ರಾಮದ ಹುಡುಗರು ಅಡ್ಡಗಟ್ಟಿ ಲಿಫ್ಟ್ ಪಡೆದುಕೊಂಟಿದ್ದಕ್ಕಾಗಿ ನಿಂದಿಸಿದ್ದಾರೆ ಮತ್ತು ಆಕೆಯು ಆ ಹುಡುಗನೊಂದಿಗೆ ಹೆಚ್ಚು ತಿರುಗಾಡುತ್ತಿದ್ದಾಳೆ ಎಂಬುದನ್ನೇ ದೊಡ್ಡದು ಮಾಡಿ ಆಕೆಯನ್ನು ಆರು ಜನರ ಗುಂಪು ಥಳಿಸಿದೆ ಎನ್ನಲಾಗಿದೆ.

ಯುವಕರ ಹಲ್ಲೆಗೆ ಒಳಗಾದ ಯುವತಿ ವಾಟ್ಸಾಪ್‌ನಲ್ಲಿ ಪ್ರಸಾರ

ಇನ್ನು ಘಟನೆಯ ಬಗ್ಗೆ ಹುಡುಗಿ ತನ್ನ ಮನೆಯಲ್ಲೂ ತಿಳಿಸಿರಲಿಲ್ಲ. ಕೊನೆಗೆ ವಿಷಯವನ್ನರಿತ ಆಕೆಯ ತಂದೆ ಮಗಳನ್ನು ಪೋಲೀಸ್ ಸ್ಟೇಶನ್‌ಗೆ ಕರೆದುಕೊಂಡು ಹೋಗಿ ಕಂಪ್ಲೇಟ್ ನೀಡಿದ್ದಾರೆ ಎನ್ನಲಾಗಿದೆ. ಯುವಕರ ಗುಂಪು ಹುಡುಗಿಯನ್ನು ಹೊಡೆಯುತ್ತಿರುವಾಗ ಒಬ್ಬ ವೀಡಿಯೊವನ್ನು ಸೆರೆಹಿಡಿದಿದ್ದಾನೆ ಎನ್ನಲಾಗಿದೆ.

Best Mobiles in India

English summary
While the world celebrated International Women's Day on March 8, a 16-year-old girl of Mansia Kala village approached policemen at the Sadabad police station in Hathras district, complaining that a group of boys brutally thrashed her and later shared a video of the violence and humiliation over WhatsApp.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X