17 ವರ್ಷದ ಬಾಲಕನಿಂದ ಕಂಪ್ಯೂಟರ್‌ ಹ್ಯಾಕ್: ಗ್ರೇಡ್‌ ಬದಲು

Written By:

ಹ್ಯಾಕಿಂಗ್‌ ಎಂಬುದು ಕಾನೂನು ಬಾಹಿರ ಎಂಬುದು ಕಂಪ್ಯೂಟರ್‌ ಬಳಸುವ ಮತ್ತು ಸ್ಮಾರ್ಟ್‌ಫೋನ್‌ ಬಳಸುವ ಬಹುಸಂಖ್ಯಾತರಿಗೆ ತಿಳಿದಿರುವ ವಿಷಯ. ಆದ್ರೆ ಈ ವಿಷಯ ತಿಳಿದು ಸಹ ಇಲ್ಲೊಬ್ಬ 17 ವರ್ಷದ ಹುಡುಗ ಅಪರಾಧವೆಸಗಿದ್ದಾನೆ. ವಿಶೇಷ ಏನಪ್ಪಾ ಅಂದ್ರೆ ಈ 17 ವರ್ಷದ ಬಾಲಕ ತನ್ನ ಶಾಲೆಯ ಶ್ರೇಣಿಯನ್ನು (Rank ) ಬದಲಿಸಲು ಸರ್ಕಾರಿ ಕಂಪ್ಯೂಟರ್‌ಅನ್ನೇ ಹ್ಯಾಕ್‌ ಮಾಡಿದ್ದಾನೆ. ಇವನು ಈಗಲೇ ಹೀಗೆ ಹ್ಯಾಕ್‌ ಮಾಡುತ್ತಾನೆ ಅಂದ್ರೆ ಇನ್ನು ಹಾಗೆ ಕಂಪ್ಯೂಟರ್‌ ಜ್ಞಾನ ಹೆಚ್ಚಿದಂತೆಲ್ಲಾ ಕಂಪ್ಯೂಟರ್‌ ಕ್ಷೇತ್ರದಲ್ಲಿ ಯಾವ ರೀತಿ ಮುಂದುವರೆಯುತ್ತಾನೆ ಎಂಬುದನ್ನು ಅಲೋಚಿಸಬೇಕಿದೆ. ಏನೇ ಇರಲಿ ಈ ಯುವಕನ ಬಗ್ಗೆ ನೀವು ಸ್ವಲ್ಪ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೈವಂಸಿ ಹನುಮಂತು

ಸೈವಂಸಿ ಹನುಮಂತು

ಸೈವಂಸಿ ಹನುಮಂತು

ತನ್ನ ಹಾಗೂ ಇತರೆ ಕೆಲವು ವಿದ್ಯಾರ್ಥಿಗಳ ತರಗತಿ ಶ್ರೇಣಿಯನ್ನು (ಗ್ರೇಡ್‌, Rank )ಅನ್ನು ಶಾಲೆಯ ಕಂಪ್ಯೂಟರ್‌ ಹ್ಯಾಕ್‌ ಮಾಡಿ ಬದಲಿಸಿ 17 ವರ್ಷದ ಸೈವಂಸಿ ಹನುಮಂತು ಎಂಬ ಹುಡುಗನು ಅಮೇರಿಕದ ನಾರ್ಥ್‌ ಕರೋಲಿನಾದಲ್ಲಿ ಬಂಧನಕ್ಕೆ ಒಳಗಾಗಿದ್ದಾನೆ.

ಅಕ್ಟೋಬರ್‌ 2015

ಅಕ್ಟೋಬರ್‌ 2015

ಅಕ್ಟೋಬರ್‌ 2015

ಕಂಪ್ಯೂಟರ್‌ ಹ್ಯಾಕಿಂಗ್‌ ಮಾಡಿದ ಘಟನೆ 2015 ರ ಅಕ್ಟೋಬರ್‌ನಲ್ಲಿ ಜರುಗಿದ್ದು, ಈ ಘಟನೆ ಬಗ್ಗೆ ಅಂದಿನಿಂದ ತನಿಖೆ ನಡೆಸಿ ಈ ಪ್ರಕರಣ ಈಗ ಬೆಳಕಿಗೆ ಬಂದು ಸೈವಂಸಿ ಹನುಮಂತುವನ್ನು ಬಂಧಿಸಲಾಗಿದೆ.

 4 ವರ್ಷ ಶಿಕ್ಷೆ

4 ವರ್ಷ ಶಿಕ್ಷೆ

4 ವರ್ಷ ಶಿಕ್ಷೆ

ಬಂಧನಕ್ಕೆ ಒಳಗಾದ ಹುಡುಗನು ಅಪರಾಧಿ ಎಂದು ಸಾಭೀತಾದಲ್ಲಿ ಆತನನ್ನು 4 ವರ್ಷ ಜೈಲಿಗೆ ಹಾಕಬಹುದು ಎನ್ನಲಾಗಿದೆ.

ಘೋರ ಅಪರಾಧ

ಘೋರ ಅಪರಾಧ

ಘೋರ ಅಪರಾಧ

ಸೈವಂಸಿ ಪೈಲಟ್‌ ಹಿಲ್‌ನಿಂದ ಮೊರಿಸ್‌ವಿಲ್ಲೆಗೆ ಬಂದಿದ್ದು, ಈತ ಸರ್ಕಾರಿ ಕಂಪ್ಯೂಟರ್‌ಗಳನ್ನು ಹ್ಯಾಕ್‌ ಮಾಡುವ ಮೂಲಕ ಘೋರ ಅಪರಾಧ ಮಾಡಿದ್ದಾನೆ.

ಅಪರಾಧವೇನು

ಅಪರಾಧವೇನು

ಅಪರಾಧವೇನು

ಪೊಲೀಸರು ತಿಳಿಸಿರುವ ಮಾಹಿತಿ ಪ್ರಕಾರ "2015 ರ ಅಕ್ಟೋಬರ್ 13 ರಂದು ಶಾಲೆಯ ಆಡಳಿತ ವಿಭಾಗ ' ಶಾಲೆಯ ಡೇಟಾ ಎಲ್ಲವೂ ಹ್ಯಾಕ್‌ ಆಗಿದ್ದು, ಕೆಲವು ವಿದ್ಯಾರ್ಥಿಗಳ ಗ್ರೇಡ್‌ (ಶ್ರೇಣಿ) ಬದಲಾಗಿದೆ'.

WRAL (ಸ್ಥಳೀಯ ದೂರದರ್ಶನ ಚಾನೆಲ್‌ )

WRAL (ಸ್ಥಳೀಯ ದೂರದರ್ಶನ ಚಾನೆಲ್‌ )

WRAL (ಸ್ಥಳೀಯ ದೂರದರ್ಶನ ಚಾನೆಲ್‌ )

ಶಾಲೆಯ ಆಡಳಿತ ವಿಭಾಗ ಈ ವರದಿ ನೀಡಿದ ದಿನ ಈ ಮಾಹಿತಿಯನ್ನು ಸ್ಥಳೀಯ ದೂರರ್ಶನ WRAL ವರದಿ ಮಾಡಿ, 90 ಶ್ರೇಣಿಗಳು ಬದಲಾಗಿದ್ದವು, ಹಾಗೂ ಹನುಮಂತು ಸಂಬಂಧ ಪಟ್ಟ ಅರ್ಧದಷ್ಟು ಶ್ರೇಣಿಗಳು ಸಹ ಬದಲಾಗಿವೆ ಎಂದು ವರದಿ ಮಾಡಿತ್ತು.

 ಪೊಲೀಸರ ತನಿಖೆ

ಪೊಲೀಸರ ತನಿಖೆ

ಪೊಲೀಸರ ತನಿಖೆ

ಹನುಮಂತು ಅಪರಾಧವೆಸಗಿರುವ ಬಗ್ಗೆ ಪೊಲೀಸರು ತನಿಖೆ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರು 'ಹನುಮಂತು ಗ್ರಂಥಾಲಯಕ್ಕೆ ನಿರಂತರವಾಗಿ 250 ಗಂಟೆಗಳ ಕಾಲ ಬಂದಿರುವುದು, ಶಿಕ್ಷಕರು ಹೆಚ್ಚಿನ ರೀತಿಯಲ್ಲಿ ಗಮನಿಸಿರುವುದು, ಹನುಮಂತು ಶಾಲೆಯ ನಂತರದ ಅವಧಿಯಲ್ಲೂ ಪ್ರೌಢಶಾಲೆಯ ವೇಳೆ ಲ್ಯಾಪ್‌ಟಾಪ್‌ನಲ್ಲಿ ಕೆಲಸ ನಿರ್ವಹಿಸುವುದು, ಹಾಗೂ ಸಿಸಿಟಿವಿಯಲ್ಲಿ ರೆಕಾರ್ಡ್‌ ಆದ ವೀಡಿಯೋ ತುಣುಕುಗಳ ಆಧಾರದಲ್ಲಿ ಈತನನ್ನು ಟ್ರೇಸ್‌ ಮಾಡಿದ್ದಾರೆ,

 ಹ್ಯಾಕ್‌ ಡೇಟಾಬೇಸ್‌

ಹ್ಯಾಕ್‌ ಡೇಟಾಬೇಸ್‌

ಹ್ಯಾಕ್‌ ಡೇಟಾಬೇಸ್‌

ವಾರಂಟ್‌ ಪ್ರಕಾರ, ಹ್ಯಾಕಿಂಗ್‌ ಘಟನೆ ತಿಳಿದು ಬಂದಿದ್ದು, ವಿದ್ಯಾರ್ಥಿಯ ಹಾಜರಾತಿ ಪರಿಶೀಲನೆಯಿಂದ ಮೂರು ಘಟನೆಗಳಲ್ಲಿ ಗ್ರೇಡ್ ಹ್ಯಾಕ್‌ ಆಗಿರುವ ಮಾಹಿತಿ ದೊರಕಿದೆ. ಅಲ್ಲದೇ 6 ವಿದ್ಯಾರ್ಥಿಗಳ ಶ್ರೇಣಿ ಬದಲಾಗಿದೆ. ಹನುಮಂತುವಿನ ಗ್ರೇಡ್‌ 67 ರಿಂದ 7 ಕ್ಕೆ ಬದಲಾಗಿದೆ.

ಶಾಲೆಯ ಕಂಪ್ಯೂಟರ್ ಐಪಿ ವಿಳಾಸ

ಶಾಲೆಯ ಕಂಪ್ಯೂಟರ್ ಐಪಿ ವಿಳಾಸ

ಶಾಲೆಯ ಕಂಪ್ಯೂಟರ್ ಐಪಿ ವಿಳಾಸ

ಶಾಲೆಯ ಕಂಪ್ಯೂಟರ್‌ಗಳನ್ನು ಅವುಗಳ ಐಪಿ ವಿಳಾಸದ ಮೂಲಕ ಹ್ಯಾಕ್‌ ಮಾಡಿ ಬದಲಾವಣೆ ಮಾಡಲಾಗಿದೆ. ಆದರೆ ಎಲ್ಲರೂ ತಿಳಿಯ ಬೇಕಾದ ವಿಷಯ ಹ್ಯಾಕಿಂಗ್‌ ಎಂಬುದು ಕಾನೂನು ಬಾಹಿರ ಚಟುವಟಿಕೆಯಾಗಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
17 Year boy Arrested for Hacking School Computers, changing grades. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot