ಬೆಂಗಳೂರು ಯುವಕನ ಈ ಸಾಧನೆಗೆ ನೀವು ಬೇಷ್‌ ಎನ್ನಲೇಬೇಕು?

|

ಇಂದಿನ ಟೆಕ್ನಾಲಜಿ ಪ್ರಪಂಚದಲ್ಲಿ ಹೊಸ ಮಾದರಿಯ ಆವಿಷ್ಕಾರಗಳಿಗೆನೂ ಕಡಿಮೆಯಿಲ್ಲ. ವಯಸ್ಸಿಗೂ ಮೀರಿದ ಆವಿಷ್ಕಾರಗಳನ್ನು ಇಂದಿನ ಯುವಜನತೆ ಸಾಧಿಸಿ ತೋರಿಸುತ್ತಿದ್ದಾರೆ. ಇದೀಗ ಬೆಂಗಳೂರಿನ 18ವರ್ಷದ ಯುವಕನೊಬ್ಬ ಭಾರತದ ಮೊದಲ AI- ಸೆನ್ಸಾರ್‌ ಆಧಾರಿತ ಬೈಸಿಕಲ್ ಕೌಂಟರ್ ಅನ್ನು ಅಭಿವೃದ್ಧಿಪಡಿಸಿದ್ದಾನೆ. ಇನ್ನು ಈ ಯುವಕನನ್ನು ನಿಹಾರ್ ಥಕ್ಕರ್ ಎಂದು ಗುರುತಿಸಲಾಗಿದ್ದು, ಸೈಕ್ಲಿಂಗ್‌ನಲ್ಲಿ ಸಾಕಷ್ಟು ಆಸಕ್ತಿ ಹೊಂದಿದ್ದಾನೆ ಎನ್ನಲಾಗಿದೆ.

ಬೈಸಿಕಲ್ ಕೌಂಟರ್

ಹೌದು, ಬೆಂಗಳೂರಿನ ನಿಹಾರ್‌ ಥಕ್ಕರ್‌ ಎಂಬ ಯುವಕ ಭಾರತದ ಮೊದಲ AI- ಸೆನ್ಸಾರ್‌ ಆಧಾರಿತ ಬೈಸಿಕಲ್ ಕೌಂಟರ್ ಪರಿಚಯಿಸಿದ್ದಾರೆ. ಈತ ಉತ್ಸಾಹಿ ಸೈಕ್ಲಿಸ್ಟ್‌ ಆಗಿದ್ದು ಈ ಹೊಸ ಕೌಂಟರ್‌ ಸೈಕ್ಲಿಂಗ್‌ ಅನ್ನು ಪ್ರೋತ್ಸಾಹಿಸಲು ಸಹಾಯ ಮಾಡಲಿದೆ. ಈ ಮೆಷಿನ್‌ ಲರ್ನಿಂಗ್‌ ಅಲ್ಗಾರಿದಮ್‌ ಬಳಸಿಕೊಂಡು ಹೆಚ್ಚು ಮೀಸಲಾದ ಸೈಕಲ್ ಲೇನ್‌ಗಳನ್ನು ನಿರ್ಮಿಸಲು ಇದರ ಡೇಟಾವನ್ನು ಬಳಸಬಹುದಾಗಿದೆ. ಇನ್ನುಳಿದಂತೆ ಈ ಹೊಸ ಟೆಕ್ನಾಲಜಿಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬೈಸಿಕಲ್

ಬೆಂಗಳೂರು ಮೂಲದ ಯುವಕ ಪರಿಚಯಿಸಿರುವ AI- ಸೆನ್ಸಾರ್‌ ಆಧಾರಿತ ಬೈಸಿಕಲ್ ಕೌಂಟರ್ ಭಾರತದ ಮೊದಲ AI- ಸೆನ್ಸಾರ್‌ ಆಧಾರಿತ ಬೈಸಿಕಲ್ ಕೌಂಟರ್ ಎನಿಸಿಕೊಂಡಿದೆ. ಈ ಬೈಸಿಕಲ್ ಕೌಂಟರ್ ಅನ್ನು ದೊಡ್ಡನೆಕುಂಡಿಯ ಹೊರ ವರ್ತುಲ ರಸ್ತೆಯ ಸೈಕಲ್ ಲೇನ್‌ನ ಪಕ್ಕದಲ್ಲಿ ಸ್ಥಾಪಿಸಲಾಗಿದೆ. ನೀವು ಕೂಡ ಈ ಪ್ರದೇಶದಲ್ಲಿದ್ದರೆ ಈ ಯುವಕ ಅಭಿವೃದ್ದಿ ಪಡಿಸಿರುವ AI- ಸೆನ್ಸಾರ್‌ ಆಧಾರಿತ ಬೈಸಿಕಲ್ ಕೌಂಟರ್ ಅನ್ನು ಪರಿಶೀಲಿಸಬಹುದು.

ಬೈಸಿಕಲ್

ಇನ್ನು ಈ ಲೈವ್ ಬೈಸಿಕಲ್ ಕೌಂಟರ್ ಅನ್ನು DULT ನೀಡಿದ ಧನಸಹಾಯದಿಂದ ಅಭಿವೃದ್ದಿಪಡಿಸಲಾಗಿದೆ. ಇದನ್ನು SuMA (ಸಸ್ಟೈನಬಲ್ ಮೊಬಿಲಿಟಿ ಅಕಾರ್ಡ್) ಯೋಜನೆಯ ಅಡಿಯಲ್ಲಿ ಸ್ಥಾಪಿಸಲಾಗಿದೆ. ಈ ಕೌಂಟರ್ ಬೈಸಿಕಲ್‌ಗಳು ಮತ್ತು ಇತರ ಎಲ್ಲಾ ರೀತಿಯ ವಾಹನಗಳ ನಡುವಿನ ವ್ಯತ್ಯಾಸವನ್ನು ತೋರಿಸುತ್ತದೆ. ಅಲ್ಲದೆ ಸೈಕಲ್ ಲೇನ್‌ ಮಾತ್ರವಲ್ಲದೆ , ಎರಡೂ ದಿಕ್ಕುಗಳಲ್ಲಿರುವ ಸರ್ವಿಸ್‌ ರೋಡ್‌ನಲ್ಲಿ ಸೈಕ್ಲಿಸ್ಟ್‌ಗಳನ್ನು ಮಾತ್ರ ಕೌಂಟ್‌ ಮಾಡಲಿದೆ. ಇದರಿಂದ ಎಷ್ಟು ಮಂದಿ ಸೈಕ್ಲಿಸ್ಟ್‌ಗಳಿದ್ದರೆ ಎಂದು ಕೌಂಟ್‌ ಮಾಡುತ್ತದೆ. ಇದಲ್ಲದೆ ಈ AI- ಸೆನ್ಸಾರ್‌ ಕೌಂಟರ್‌ ಹೆಚ್ಚಿನ ಬೆಂಗಳೂರಿಗರನ್ನು ನಗರದಾದ್ಯಂತ ಸೈಕಲ್‌ ಪ್ಯಾಡ್ಲಿಂಗ್ ಮಾಡಲು ಸಹ ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. ಬೆಂಗಳೂರಿಗರಿಗಾಗಿ ಬೆಂಗಳೂರಿನ ಯುವಕ ಮಾಡಿರುವ ಸಾಧನೆಗೆ ಶಹಬ್ಬಾಷ್‌ ಹೇಳಲೇಬೇಕು.

Best Mobiles in India

Read more about:
English summary
18 year old Bengaluru boy creates India's first AI-powered bicycle counter

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X