18,000 ಮೊಬೈಲ್‌ಗಳಲ್ಲಿ ನಕಲಿ IMEI ಸಂಖ್ಯೆ

Posted By: Staff
18,000 ಮೊಬೈಲ್‌ಗಳಲ್ಲಿ ನಕಲಿ IMEI ಸಂಖ್ಯೆ

ನಕಲಿ ಗುರುತಿನ ಸಂಖ್ಯೆ ಹೊಂದಿರುವ 18,000 ಮೊಬೈಲ್‌ ಫೋನ್ ಗಳನ್ನು ಸರ್ಕಾರ ಗುರ್ತಿಸಿದೆ. ಪ್ರತಿಯೊಂದು ಮೊಬೈಲ್‌ ಹ್ಯಾಂಡ್‌ ಸೆಟ್‌ಗಳಿಗೂ ತನ್ನದೇ ಆದಂತಹ ಪ್ರತ್ಯೇಕವಾದ ಹದಿನೈದು ಸಂಖ್ಯೆಯನ್ನೊಳಗೊಂಡ ಇಂಟರ್‌ನ್ಯಾಷನಲ್‌ ಮೊಬೈಲ್‌ ಎಕ್ಯೂಪ್‌ಮೆಂಟ್‌ ಐಡೆಂಟಿಟಿ (IMEI) ಸಂಖ್ಯೆ ಹೊಂದಿರಬೇಕು. ಇದರಿಂದಾಗಿ ಭದ್ರತಾ ಹಾಗೂ ಕಾನೂನು ಸುವ್ಯವಸ್ಥೆ ಸಂಸ್ಥೆಗಳಿಗೆ ಬಳಕೆದಾರರ ಗುರುತನ್ನು ಪತ್ತೆಹಚ್ಚಲು ನೆರವಾಗುತ್ತದೆ.

ಅಂದಹಾಗೆ ಗ್ರೇ ಮಾರುಕಟ್ಟೆಯಲ್ಲಿ ಮಾರಾಟವಾಗುವ ಬಹುತೇಕ ಹ್ಯಾಂಡ್ಸೆಟ್‌ಗಳು ಇಂತಹ ಗುರುತಿನ ಸಂಖ್ಯೆ ಹೊಂದಿರುವುದಿಲ್ಲ. ಅದರಲ್ಲಿಯೂ ಭಾರತೀಯ ಮಾರುಕಟ್ಟೆಗೆ ಚೀನಾ ಹಾಗೂ ಥೈವಾನ್ ನಿಂದ ಇಂತಹ ಬಹುತೇಕ ಹ್ಯಾಂಡ್ ಸೆಟ್‌ಗಳು ಹರಿದು ಬರುತ್ತಿರುವುದು ಭದ್ರತೆ ನಿಟ್ಟಿನಲ್ಲಿ ಭಾರೀ ತಲೆ ನೋವಾಗಿ ಪರಿಣಮಿಸಿದೆ.

"ಸಧ್ಯದ ಪರಿಸ್ಥಿತಿಯಲ್ಲಿ ನಕಲಿ ಹಾಗೂ ಅಸಲೀ IMEI ಸಂಖ್ಯೆ ಹೊಂದಿರುವ ಹ್ಯಾಂಡ್‌ಸೆಟ್‌ಗಳನ್ನು ವಿಂಗಡಿಸುವುದು ಕಷ್ಟಕರವಾಗಿದೆ. ಆದರೆ ದೂರಸಂಪರ್ಕ ಇಲಾಕೆ ಸಮಸ್ಯೆ ಕುರಿತು ಪರಿಶೀಲನೆ ನಡೆಸುತಿದೆ" ಎಂದು ರಾಜ್ಯಸಭೆಯಲ್ಲಿ ಸಂವಹನ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಕಪಿಲ್ ಸಿಬಲ್‌ ಹೇಳಿದ್ದಾರೆ.

ನಕಲೀ ಗುರುತಿನ ಸಂಖ್ಯೆ ಹೋದಿರುವ ಮೊಬೈಲ್‌ ಹ್ಯಾಂಡ್‌ಸೆಟ್‌ಗಳನ್ನು ಮುಂದುವರಿಸ ಬಾರದೆಂದು ಡಾಟ್‌ 2009 ರ ಏಪ್ರಿಲ್.29 ರಂದು ಆದೇಶನೀಡಿದೆ. ಹಾಗೂ ವಾಣಿಜ್ಯ ಸಚಿವಾಲಯ ಈಗಾಗಲೇ IMEI ಸಂಖ್ಯೆ ಹೊಂದಿರದ ಮೊಬೈಲ್‌ ಹ್ಯಾಂಡ್‌ಸೆಟ್‌ಗಳ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದೆ.

ಇಷ್ಟೆಲ್ಲಾ ಕ್ರಮ ಕೈಗೊಂಡಿದ್ದರೂ ಸಹ ಇಂಡಿಯನ್‌ ಸೆಲ್ಲ್ಯುಲಾರ್‌ ಅಸೋಸಿಯೇಷನ್‌ ನ ಪ್ರಕಾರ ಚೀನಾದ ಹ್ಯಾಂಡ್‌ಸೆಟ್‌ಗಳ ಆಮದು 2007-08 ರಲ್ಲಿ 5.5 ದಶಲಕ್ಷ ಇದ್ದದ್ದು ಈಗ ಅದರ ನಾಲ್ಕರಷ್ಟು ಹೆಚ್ಚಾಗಿದೆ.ನಕಲೀ ಫೊನ್‌ಗಳ ವಿರುದ್ಧ ಕಠಿಣ ಕ್ರಮ ಜಾರಿಗೊಳಿಸುವಂತೆ ಕೈಗಾರಿಕಾ ಅಂಗವು ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿವೆ. ಆದರೆ ಸರಿಯಾದ IMEI ಸಂಖ್ಯೆ ಹೋದಿರದ ಮೊಬೈಲ್‌ ಹಾಂಡ್‌ಸೆಟ್‌ಗಳ ಮೇಲೆ ಸರ್ಕಾರ ವಿಧಿಸಿರುವ ನಿಶೇಧ ಕೇವಲ ಕಾಗದ ಪತ್ರಗಳಲ್ಲಿ ಇದ್ದಂತಿದೆ ಏಕೆಂದರೆ ಈಗಲೂ ಕೂಡ ಮಾರುಕಟ್ಟೆಯಲ್ಲಿ ಗುರುತಿನ ಸಂಖ್ಯೆ ಇಲ್ಲದೇ ಇರುವಂತಹ ಹ್ಯಾಂಡ್‌ಸೆಟ್‌ಗಳನ್ನು ಮಾರಾಟ ಮಾಡಲಾಗುತ್ತಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot