ಏಪ್ರಿಲ್ 3ನೇ ತಾರೀಖು 'ಮೊಬೈಲ್ ಇತಿಹಾಸ'ದ ಎಷ್ಟು ಮಹತ್ವದ ದಿನ ಗೊತ್ತಾ?

|

ಏಪ್ರಿಲ್ 3ನೇ ತಾರೀಖು ಈ ಮೊಬೈಲ್ ಪ್ರಪಂಚಕ್ಕೆ ಎಷ್ಟು ಮಹತ್ವದ ದಿನ ಎಂಬುದನ್ನು ನಾನು ನಿಮಗೆ ಹೇಳಲೇಬೇಕು. ಏಕೆಂದರೆ, ನಾವು ಇಂದು ಬಳಸುತ್ತಿರುವ ಮೊಬೈಲ್ ಮತ್ತು ಸ್ಮಾರ್ಟ್‌ ಫೋನ್‌ಗಳೆಲ್ಲವುಗಳ ಅಪ್ಪ 1973ರ ಏಪ್ರಿಲ್ 3ನೇ ತಾರೀಖು ಮಾತನಾಡುತ್ತಿದ್ದ. ಹೌದು, 1973ನೇ ವರ್ಷದ ಏಪ್ರಿಲ್ 3ನೇ ತಾರೀಖು ಅಮೆರಿಕದ ನ್ಯೂ ಯಾರ್ಕ್ ನಗರ ಬೀದಿಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಇಟ್ಟಿಗೆಯ ದೊಡ್ಡ ಸಾಧನವನ್ನು ತಮ್ಮ ಕಿವಿಗೆ ಹತ್ತಿರ ಮಾತನಾಡುತ್ತಿದ್ದರು.!

ಹೌದು, ನಾವು ಈಗ ಸ್ಮಾರ್ಟ್‌ಫೋನ್ ಕಾಲದಲ್ಲಿ ಇರಬಹುದು. ಆದರೆ, ಈ ಮೊಬೈಲ್ ಎಂಬ ಕಲ್ಪನೆಯೇ ಇಲ್ಲದ ಕಾಲದಲ್ಲಿ ಅಂದು ಮೊಬೈಲ್ ಪಿತಾಮಹನಾದ ಮಾರ್ಟಿನ್ ಕೂಪರ್ ನ್ಯೂ ಯಾರ್ಕ್ ನಗರ ಬೀದಿಯಲ್ಲಿ ನಿಂತು ಇಟ್ಟಿಗೆಯಂತಹ ದೊಡ್ಡ ಸಾಧನವನ್ನು ತಮ್ಮ ಕಿವಿಗೆ ಹತ್ತಿರ ಮಾತನಾಡುತ್ತಿದ್ದರು.ಮಾರ್ಟಿನ್ ಅವರ ಮಾತನ್ನು ಅದೇ ಸಮಯದಲ್ಲಿ ನ್ಯೂಜೆರ್ಸಿ ನಗರದಲ್ಲಿದ್ದ ಇನ್ನೊಬ್ಬ ವ್ಯಕ್ತಿ ಕೇಳುತ್ತಿದ್ದರು. ಅಂದರೆ, ಏಪ್ರಿಲ್ 3ನೇ ತಾರೀಖಿನಂದು ವಿಶ್ವದ ಮೊಟ್ಟಮೊದಲ ಕರೆ ಮಾಡಲಾಗಿತ್ತು.

ಏಪ್ರಿಲ್ 3ನೇ ತಾರೀಖು 'ಮೊಬೈಲ್ ಇತಿಹಾಸ'ದ ಎಷ್ಟು ಮಹತ್ವದ ದಿನ ಗೊತ್ತಾ?

ನಿಮಗೆ ಗೊತ್ತಾ?, ಅಂದು ವಿಶ್ವದ ಮೊಟ್ಟಮೊದಲ ಕರೆ ಮಾಡಿದ್ದ ಮಾರ್ಟಿನ್ ಬಳಸಿದ ಮೊಬೈಲ್ ಸುಮಾರು ಒಂದು ಕೇಜಿ ತೂಕವಿತ್ತು. ದೂರವಾಣಿ ಕರೆ ಮಾಡುವುದನ್ನು ಬಿಟ್ಟರೆ ಬೇರೆ ಯಾವ ಸೌಲಭ್ಯವೂ ಆ ಫೋನಿನಲ್ಲಿರಲಿಲ್ಲ. ಹತ್ತು ಗಂಟೆಗಳ ಕಾಲ ಚಾರ್ಜ್ ಮಾಡಿದರೆ ಅದನ್ನು ಅರ್ಧಗಂಟೆ ಕಾಲ ಬಳಸುವುದು ಸಾಧ್ಯವಾಗುತ್ತಿತ್ತು. ಇಂತಹ ಹಲವು ರೋಚಕ ಇತಿಹಾಸವನ್ನು 1973ರ ಏಪ್ರಿಲ್ 3ನೇ ತಾರೀಖು ಹೊಂದಿದೆ. ಇಂತಹ ಹಲವು ರೋಚಕತೆಗಳ ಬಗ್ಗೆ ಮುಂದಿನ ಸ್ಲೈಡರ್‌ಗಳಲ್ಲಿ ನೀವು ತಿಳಿಯಬಹುದಾಗಿದೆ.

1) ಜಗತ್ತಿನ ಮೊದಲ ಮೊಬೈಲ್ ಫೋನ್.

1) ಜಗತ್ತಿನ ಮೊದಲ ಮೊಬೈಲ್ ಫೋನ್.

ಜಗತ್ತಿನ ಮೊತ್ತಮೊದಲ ಬಾರಿಗೆ ವಾಣಿಜ್ಯಾತ್ಮಕವಾಗಿ ಮೊಬೈಲ್ ಫೋನುಗಳು ಮಾರಾಟವಾಗಿದ್ದು 1983ರಲ್ಲಿ. ಮೊಟೊರೊಲಾ DynaTAC 8000X ಅನ್ನು ಸಾರ್ವಜನಿಕರಿಗಾಗಿ ಬಿಡುಗಡೆ ಮಾಡಲಾಯಿತು. ಅಂದು ಬಿಡುಗಡೆಯಾದ ಫೋನ್ ಬೆಲೆ $3,955 . ಆದರೆ ಇಂದು ಸ್ಮಾರ್ಟ್ಫೋನ್ಗಳು 250 ರೂಪಾಯಿಗಳಿಗೂ ಸಿಗುತ್ತವೆ.

2) ಮೊದಲ ಮೊಬೈಲ್ ಕರೆ ಮಾಡಿದ್ದು

2) ಮೊದಲ ಮೊಬೈಲ್ ಕರೆ ಮಾಡಿದ್ದು

ಮೊದಲ ಮೊಬೈಲ್ ಕರೆ ಮಾಡಿದ್ದು ಮೋಟೊರೋಲಾ ಸಂಸ್ಥಾಪಕ ಮಾರ್ಟಿನ್ ಕೂಪರ್. ಮಾರ್ಟಿನ್ ನ್ಯೂಯಾರ್ಕ್ ಸಿಟಿಯ 53 ಮತ್ತು 54ನೇ ಬೀದಿ ನಡುವೆ 6 ಮುಖ್ಯ ವಿಶಾಲ ಬೀದಿಯಲ್ಲಿ 900MHz ಮುಖ್ಯ ಕೇಂದ್ರ ಹೊಂದಿದ್ದರು. ಏಪ್ರಿಲ್ 3, 1973 ರಲ್ಲಿ ಮೊಟೊರೊಲಾ ಮೊಬೈಲ್‌ನಿಂದ ಮೊದಲ ಕರೆಯನ್ನು ನ್ಯೂಜರ್ಸಿಯ ಬೆಲ್ ಲ್ಯಾಬ್‌ಗೆ ಕರೆ ಮಾಡಲಾಗಿತ್ತು.

3) 1.1 ಕೆಜಿ ತೂಕವಿತ್ತು

3) 1.1 ಕೆಜಿ ತೂಕವಿತ್ತು

ಮೊಟ್ಟ ಮೊದಲ 'ಮೊಟೊರೊಲಾ DynaTAC' ಫೋನ್ 23cm ಉದ್ದವಿತ್ತು. ಅತ್ಯಂತ ಅಚ್ಚರಿ ವಿಷಯ ಅಂದ್ರೆಮೊಬೈಲ್ 1.1 ಕೆಜಿ ತೂಕವಿತ್ತು. 1kg ತೂಕ ಹೊಂದಿದ್ದ ಈ ಮೊಬೈಲ್ ಸಂಪೂರ್ಣ ಚಾರ್ಜ್ ಹೊಂದಲು 10 ಗಂಟೆಗಳ ಸಮಯ ಬೇಕಿತ್ತು. ಆದರೆ ಬಳಕೆ ಆಗುತ್ತಿದ್ದದ್ದು ಮಾತ್ರ ಕೇವಲ 35 ನಿಮಿಷಗಳು.

4) ನೊಕಿಯಾ ವಿಶ್ವ ಸಾಮ್ರಾಟ್

4) ನೊಕಿಯಾ ವಿಶ್ವ ಸಾಮ್ರಾಟ್

ಸ್ಮಾರ್ಟ್‌ಫೋನ್ ಬರುವುದಕ್ಕೂ ಮುಂಚೆ ನೊಕಿಯಾ ಸಂಸ್ಥೆ ವಿಶ್ವದ ಮೊಬೈಲ್ ಸಾಮ್ರಾಟನಾಗಿತ್ತು. ನೊಕಿಯಾದ ಜನಪ್ರಿಯ 1100 ಮಾಡೆಲ್'ನ ಹ್ಯಾಂಡ್'ಸೆಟ್'ಗಳು ಬರೋಬ್ಬರಿ 25 ಕೋಟಿ ಸಂಖ್ಯೆಯಲ್ಲಿ ಮಾರಾಟ ಕಂಡಿವೆ. ಇದು ವಿಶ್ವದಲ್ಲಿ ಅತಿ ಹೆಚ್ಚು ಮಾರಾಟವಾಗಿರುವ ಎಲೆಕ್ಟ್ರಾನಿಕ್ ಸಾಧನವೆನಿಸಿದೆ.

5) ನೋಮೋಫೋಬಿಯಾ

5) ನೋಮೋಫೋಬಿಯಾ

ಮೊಬೈಲ್ ಫೋನ್ ಅನ್ನು ಬಿಟ್ಟಿರಲಾರದಷ್ಟು ಮಟ್ಟಿಗೆ ಅದರ ಮೇಲೆ ಜನರು ಅವಲಂಬಿತವಾಗುತ್ತಿದ್ದಾರೆ. ಈ ಮೊಬೈಲ್ ಆತಂಕವನ್ನು ವಿಜ್ಞಾನಿಗಳು ನೋಮೋಫೋಬಿಯಾ ಎಂದು ಕರೆಯುತ್ತಾರೆ. ನಮ್ಮಲ್ಲಿ ಈ ಫೋಬಿಯಾ ಇದೆಯಾ ಎಂದು ಪತ್ತೆಹಚ್ಚಲೆಂದೇ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್‌ಗಳು ಸಹ ಇವೆ.!

Most Read Articles
Best Mobiles in India

English summary
World's First Cellphone Call - April 3 1973 by Martin Cooper. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X