ರಜಿನಿಯ 2.0 ಸಿನಿಮಾ ಬಿಡುಗಡೆ ಮಾಡದಂತೆ ಟೆಲಿಕಾಂ ಕಂಪೆನಿಗಳ ತಕರಾರು!!..ಏಕೆ ಗೊತ್ತಾ?

|

ವಿಶ್ವ ಸಿನಿಮಾ ಜಗತ್ತಿನಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟಿಹಾಕಿರುವ ಸೂಪರ್​ ಸ್ಟಾರ್ ರಜನಿಕಾಂತ್​ ಹಾಗೂ ಬಾಲಿವುಡ್​ ಸ್ಟಾರ್​ ಅಕ್ಷಯ್​ ಕುಮಾರ್​ ಅಭಿನಯದ 2.0 ಸಿನಿಮಾ ಬಿಡುಗಡೆಗೆ ಟೆಲಿಕಾಂ ಕಂಪೆನಿಗಳು ಅಡ್ಡಗಾಲು ಹಾಕಿವೆ. ಭರ್ಜರಿ 540 ಕೋಟಿ ರೂ. ಬಜೆಟ್​ನಲ್ಲಿ ಸಿದ್ಧವಾಗಿರುವ 2.0 ಸಿನಿಮಾ ಬಿಡುಗಡೆಗೆ ತಡೆ ಕೋರಿ ಸೆನ್ಸಾರ್​ ಮಂಡಳಿಯಲ್ಲಿ ಅರ್ಜಿ ಸಲ್ಲಿಕೆಯಾಗಿದೆ.

ಗುರುವಾರ ವಿಶ್ವದಾಧ್ಯಂತ ಸಿನಿ ರಸಿಕರನ್ನು ರಂಜಿಸಲು ಬರುತ್ತಿರುವ ರಜಿನಿಯ 2.0 ಸಿನಿಮಾ ಬಿಡುಗಡೆಗೆ ತಡೆ ಕೋರಿ ಟೆಲಿಕಾಂ ಟವರ್ ಕಂಪನಿಗಳು ಸೆನ್ಸಾರ್​ ಮಂಡಳಿ ಮೊರೆ ಹೋಗಿದ್ದು, ಯಾವುದೇ ಕಾರಣಕ್ಕೂ 2.0 ಸಿನಿಮಾ ಬಿಡುಗಡೆಗೆ ಅವಕಾಶ ನೀಡಬಾರದು. ಈಗ ನೀಡಲಾಗಿರುವ ಸೆನ್ಸಾರ್​ ಪ್ರಮಾಣಪತ್ರವನ್ನು ಕೂಡಲೇ ವಾಪಸ್​ ಪಡೆಯಬೇಕು ಎಂದು ಮನವಿ ಸಲ್ಲಿಸಿವೆ.

ರಜಿನಿಯ 2.0 ಸಿನಿಮಾ ಬಿಡುಗಡೆ ಮಾಡದಂತೆ ಟೆಲಿಕಾಂ ಕಂಪೆನಿಗಳ ತಕರಾರು!!
ರಜಿನಿಕಾಂತ್ ಅಭಿನಯದ 2.0 ಸಿನಿಮಾದಲ್ಲಿ 'ಮೊಬೈಲ್​ಗಳು ಹಾಗೂ ಸಿಗ್ನಲ್​ ಟವರ್​ನಿಂದ ವಿಕಿರಣಗಳು ಹೊರಹೊಮ್ಮಿ ಅದು ಮನುಷ್ಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ' ಎಂಬ ತಪ್ಪು ಸಂದೇಶ ರವಾನಿಸುತ್ತಿದೆ. ಹಾಗಾಗಿ, ಸಿನಿಮಾ ಬಿಡುಗಡೆಗೆ ಅವಕಾಶ ನೀಡಬಾರದು ಎಂದು 'ಸೆಲ್ಯುಲಾರ್​ ಆಪರೇಟರ್ಸ್​ ಅಸೋಸಿಯೇಷನ್​ ಆಫ್​ ಇಂಡಿಯಾ' ಸಂಸ್ಥೆ ಒತ್ತಾಯಿಸಿದೆ.

2.0 ಸಿನಿಮಾ ಬಿಡುಗಡೆಗೆ ತಡೆ ನೀಡುವುದು ಮಾತ್ರವಲ್ಲದೇ, ಹಾಗೆಯೇ ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾದ ಟ್ರೇಲರ್​ನ ಲಿಂಕ್​ಗಳನ್ನು ಅಂತರ್ಜಾಲದಿಂದ ತೆಗೆದುಹಾಕಬೇಕು ಎಂದು ಸೆಲ್ಯುಲಾರ್​ ಆಪರೇಟರ್ಸ್​ ಅಸೋಸಿಯೇಷನ್​ ಆಫ್​ ಇಂಡಿಯಾ (ಸಿಒಎಐ) ಮಹಾ ನಿರ್ದೇಶಕರಾದೆ ರಂಜನ್​ ಮಾಥಿವ್​ ಅವರು ಸೆನ್ಸಾರ್​ ಮಂಡಳಿಯನ್ನು ಒತ್ತಾಯಿಸಿದ್ದಾರೆ.

ರಜಿನಿಯ 2.0 ಸಿನಿಮಾ ಬಿಡುಗಡೆ ಮಾಡದಂತೆ ಟೆಲಿಕಾಂ ಕಂಪೆನಿಗಳ ತಕರಾರು!!

ಈಗಾಗಲೇ ಮೊಬೈಲ್​ ಟವರ್​ಗಳು ಹಾಗೂ ಮೊಬೈಲ್​ನಿಂದ ಹೊರಹೊಮ್ಮುವ ವಿಕಿರಣಗಳು ಪಕ್ಷಿಗಳಿಗೆ, ಮಕ್ಕಳಿಗೆ ಹಾಗು ಇನ್ನು ಕೆಲವು ಮಾನವ ಚಟುವಟಿಕೆಗಳಿಗೆ ಅಪಾಯಕಾರಿ ಎಂಬ ತಪ್ಪು ಕಲ್ಪನೆಯನ್ನು ಹೊಂದಲಾಗಿದೆ. 2.0 ಸಿನಿಮಾ ಕೂಡ ಅದನ್ನೇ ಪ್ರತಿಪಾದಿಸುತ್ತಿದೆ ಹಾಗಾಗಿ ನಾವು ಸೆನ್ಸಾರ್​ ಮಂಡಳಿ ಮೊರೆ ಹೋಗಿದ್ದೇವೆ ಎಂದು ಮಾಥಿವ್​ ಅವರು ತಿಳಿಸಿದ್ದಾರೆ.

Best Mobiles in India

English summary
The country's most expensive film at nearly Rs 540 crore, is receiving opposition from one of the most unexpected quarters.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X