Subscribe to Gizbot

ಆಂಡ್ರಾಯ್ಡ್ ಓರಿಯೋ ಬೆಸ್ಟ್ ಅನ್ನುವುದಕ್ಕೆ ಇಲ್ಲಿದೆ ಕಾರಣಗಳು.!

Written By: Lekhaka

ಗೂಗಲ್ ತನ್ನ ಆಂಡ್ರಾಯ್ಡ್ ನಲ್ಲಿ ಬಳಕೆದಾರಿಗೆ ಹೊಸದನ್ನು ನೀಡಲು ಮುಂದಾಗುತ್ತಿದೆ. ಅದರಲ್ಲೂ ಕಿಟ್ ಕ್ಯಾಟ್ ನಂತರದಲ್ಲಿ ನವೀನ ಆಯ್ಕೆಗಳನ್ನು ಆಂಡ್ರಾಯ್ಡ್ ನಲ್ಲಿ ಅಳವಡಿಸಲು ಮುಂದಾಗಿದೆ. ಇದಕ್ಕಾಗಿಯೇ ಆಂಡ್ರಾಯ್ಡ್ ಹೆಚ್ಚಿನ ಜನರು ಬಳಸುವ ಓಎಸ್ ಎನ್ನಬಹುದು.

ಆಂಡ್ರಾಯ್ಡ್ ಓರಿಯೋ ಬೆಸ್ಟ್ ಅನ್ನುವುದಕ್ಕೆ ಇಲ್ಲಿದೆ ಕಾರಣಗಳು.!

ಸದ್ಯ ಆಗಸ್ಟ್ 24 ರಂದು ಬಿಡುಗಡೆಯಾಗಿರುವ ಆಂಡ್ರಾಯ್ಡ್ ಓರಿಯೋ, ಆಂಡ್ರಾಯ್ಡ್ ನ್ಯಾಗಾದ ಮುಂದುವರೆದ ಭಾಗವಾಗಿದೆ. ಇದರಲ್ಲೂ ಗೂಗಲ್ ಹಲವು ಹೊಸತುಗಳನ್ನು ನೀಡಲು ಮುಂದಾಗಿದೆ, ಇದರಲ್ಲಿ ಆಯ್ಕೆಗಳು ಆಂಡ್ರಾಯ್ಡ್ ಅಭಿಮಾನಿಗಳ ಮನಗೆದ್ದಿದೆ.

ಆಂಡ್ರಾಯ್ಡ್ ಓರಿಯೋವನ್ನು ಆಂಡ್ರಾಯ್ಡ್ ನ ಬೆಸ್ಟ್ ಎಂದು ಹೇಳಲು ಕೆಲವು ಅಂಶಗಳು ಕಾರಣವಾಗಿದೆ. ಕಂಪನಿಯೂ ಆಂಡ್ರಾಯ್ಡ್ ಓರಿಯೋ ಸ್ಮಾರ್ಟರ್, ಫಾಸ್ಟರ್ ಎಂದು ಹೇಳಿದೆಯಾದರು ಬಿಡುಗಡೆಯಾದ ನಂತರದಲ್ಲಿ ಮಾತ್ರವೇ ಇದರ ಬಗ್ಗೆ ಮಾಹಿತಿಯೂ ದೊರೆಯಲಿದೆ ಎನ್ನಲಾಗಿದೆ.

ಆಂಡ್ರಾಯ್ಡ್ ಓರಿಯೋ ಬೆಸ್ಟ್ ಅನ್ನುವುದಕ್ಕೆ ಇಲ್ಲಿದೆ ಕಾರಣಗಳು.!

ಆಂಡ್ರಾಯ್ಡ್ 'O’ ಶೀಘ್ರವೇ ನಿಮ್ಮ ಮೊಬೈಲ್ ಫೋನ್ ಗಳಲ್ಲಿ ಕಾಣಿಸಿಕೊಳ್ಳಲಿದ್ದು, ನೀವು ಇದನ್ನು ಬಳಕೆ ಮಾಡಿಕೊಳ್ಳಲು ಕೆಲವು ದಿನಗಳು ಕಾಯಬೇಕು. ಆಂಡ್ರಾಯ್ಡ್ ಓರಿಯೋ ಯಾಕಾಗಿ ಬೆಸ್ಟ್ ಎನ್ನುವುದನ್ನು ನಾವಿಲ್ಲಿ ತಿಳಿದಲಿದ್ದೇವೆ.

ಬ್ಯಾಕ್ ಗ್ರೌಂಡ್ ಆಪ್ ಕ್ಲಿಯರ್:

ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಹೆಚ್ಚಿನ RAM ಅನ್ನು ಬೇಡುತ್ತಿದ್ದದ್ದು ಹಿಂಭಾಗದಲ್ಲಿ ರನ್ ಆಗುವ ಆಪ್ ಗಳು. ಇದು ಹೆಚ್ಚಿನ ಬ್ಯಾಟರಿಯನ್ನು ಸಹ ಖಾಲಿ ಮಾಡುತ್ತಿತ್ತು. ಈ ಹಿನ್ನಲೆಯಲ್ಲಿ ನೂತನ ಆಂಡ್ರಾಯ್ಡ್ ನಲ್ಲಿ ಈ ಸಮಸ್ಯೆಯನ್ನು ನಿವಾರಿಸಲು ಆಂಡ್ರಾಯ್ಡ್ ಮುಂದಾಗಿದೆ.

ನಿಮ್ಮ ಕಂಪ್ಯೂಟರ್ ವೇಗ ಕಡಿಮೆಯಾಗಿದಯೇ? ಹಾಗಿದ್ದರೇ ಹೀಗೆ ಮಾಡಿ!

ಹೊಸ ಆಂಡ್ರಾಯ್ಡ್ ನಲ್ಲಿ ಬ್ಯಾಕ್ ಗ್ರೌಂಡ್ ನಲ್ಲಿ ಆಪ್ ಗಳು ತನ್ನಂತಾನೆ ಕ್ಲಿಯರ್ ಆಗಲಿದ್ದು, ಇದರಿಂದ ನಿಮ್ಮ ಫೋನಿನ ಬ್ಯಾಟರಿಯು ಉಳಿಯಲಿದೆ. ಫೋನ್ ಸಹ ವೇಗವಾಗಿ ಕಾರ್ಯನಿರ್ವಹಿಸಲಿದೆ.

ಆಂಡ್ರಾಯ್ಡ್ ಓರಿಯೋ ಬೆಸ್ಟ್ ಅನ್ನುವುದಕ್ಕೆ ಇಲ್ಲಿದೆ ಕಾರಣಗಳು.!

ಆಟೋ ಫಿಲ್:

ಗೂಗಲ್ ಸೇವೆಯಾದ ಕ್ರೋಮ್ ಮಾದರಿಯಲ್ಲಿ ಆಂಡ್ರಾಯ್ಡ್ ಓರಿಯೋ ಸಹ ಕಾರ್ಯನಿರ್ವಹಿಸಲಿದ್ದು, ನಿಮ್ಮ ಆನ್ ಲೈನ್ ಆಕೌಂಟ್ ಗಳನ್ನು ಇದು ನಿರ್ವಹಿಸಲಿದೆ. ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಗಳನ್ನು ಇದು ಸ್ಟೋರ್ ಮಾಡಿಟ್ಟುಕೊಳ್ಳಲಿದೆ. ಇದರಿಂದ ನೀವು ಪ್ರತಿ ಬಾರಿ ಪಾಸ್ ವರ್ಡ್ ನೆನಪಿಟ್ಟುಕೊಳ್ಳುವ ಅಗತ್ಯತೆ ಇರುವುದಿಲ್ಲ.

ಇದು ನಿಮಗೆ ಭಾರಿ ಸಹಾಯವನ್ನು ಮಾಡಲಿದ್ದು, ನಿಮ್ಮ ಸಮಯವನ್ನು ಉಳಿಸಲಿದೆ ಮತ್ತು ಪಾಸ್ ವರ್ಡ್ ಗಳನ್ನು ಸೆಕ್ಯೂರ್ ಆಗಿ ಇಡಲಿದ್ದು, ಇದರಿಂದ ನಿಮ್ಮ ಮಾಹಿತಿಗಳು ಲೀಕ್ ಆಗುವ ಸಾಧ್ಯತೆ ತೀರಾ ಕಡಿಮೆ ಇರಲಿದೆ.

Read more about:
English summary
There are over 50 changes in Android Oreo, but only a few are quickly noticeable.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot